ಸೂತ್ರಧಾರ ರಾಮಯ್ಯ
ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು.
ಹಸಿದ ಹೊಟ್ಟೆಗಳು – ಕೊಳೆಯುತ್ತಿರುವ ದಾಸ್ತಾನುಗಳು, ಬಚಾವಾದ ಗಣಿಗಳು – ಬಡವಾಗುತ್ತಿರುವ ಧಣಿಗಳು, ವಿಜ್ರುಂಭಿಸುವ ಜಾತಿಗಳು-ಖರೀದಿಯಾಗುತ್ತಿರುವ ಮತ ಗಳು, ಸೋತು ಮನೆ ಸೇರುವ ಲೀಡರ್ಸ್ ಗಳು – ಗೆದ್ದು ಹಾಳುತ್ತಿರುವ ಡೀಲರ್ಸ್ ಗಳು, ಐತಿಹಾಸ್ಯಕ ಭಿನ್ನ ಮತಗಳು – ಜನಸಾಮಾನ್ಯರ ಖಿನ್ನ ಮುಖಗಳು, ಬೆನ್ನಿರಿವ ಬ್ರೂಟಸನ ಚೂರಿಗಳು – ಮಾರ್ಕ್ ಆಂಟನಿ ಸ್ಪೀಚುಗಳು. ಫಿಲ್ಟರ್ ‘ಮರಳು’ ದಂಧೆ ಗಿಳಿದ ಟ್ರಾಕ್ಟರ್ ಗಳು – ಹೆಣ್ಣು ಭ್ರೂಣ ಹೊಸಕುವ ಲೇಡಿ ಡಾಕ್ಟರ್ ಗಳು, ಏರುತ್ತಿರುವ ಬೆಲೆಗಳು – ಬ್ರಹ್ಮಾಂಡ ಭ್ರಷ್ಟಾಚಾರಗಳು, ತಪ್ಪುದಾರಿಗೆ ಎಳೆಯುತ್ತಿರುವ ಮಾಹಿತಿಗಳು- ಮೌನಕ್ಕೆ ಶರಣಾದ ಸಾಹಿತಿಗಳು. ವರ್ಗ ಸಂಘರ್ಷಕ್ಕೆ ಗುರಿಯಾಗೋ ನಿಷ್ಠ ಅಧಿಕಾರಿಗಳು – ಇದ್ದಲ್ಲೇ ಬೇರುಬಿಟ್ಟ ಚಮಚಾದಿಕಾರಿಗಳು, ನೂರಾರು ಟೀವಿ ಚಾನಲ್ಲುಗಳು – ಮೂಢ ನಂಬಿಕೆ ಬಿತ್ತುವ ಜ್ಯೋತಿಷಿಗಳು. ಮಂಕು ಬೂಡಿಟ್ರ್ಯಾಪ್ಗಳು ಯಂತ್ರಗಳು ಮಂತ್ರಗಳು ಅತಂತ್ರಗಳು. ಬೇಕುಗಳು ‘ಬೇಡಿ’ಗಳು ಬಂಧನಗಳು. ಹಾಸ್ಯಗಳು ದಾಸ್ಯಗಳು. ಮಧ್ಯೆ ಮಧ್ಯೆ ಸ್ವಾತಂತ್ರ ದಿನಾಚರಣೆಗಳು. ‘one day ಮಾತರಂ’ ಗಳು. ದಿನಾಚರಣೆ ಮುಗಿಯಿತೋ ‘ಭೂಲೋ’ ಭಾರತ್ ಮಾತಾಕಿ ಘೋಷಣೆಗಳು. ಪ್ರಜಾಪ್ರಭುತ್ವಕ್ಕೆ- ಬೊಂಬು ಗಳು!
ಪರಮಾತ್ಮನ sumನಿಧಿ!
ನರಸಿಂಹರಾಜು: ಕೇಳಿದ್ಯೆನಪ್ಪಾ, ಗುಂಡಣ್ಣ ಹಾಲಿನ ವ್ಯಾಪಾರ ಬಿಟ್ಟು ವೈನ್ ಶಾಪ್ ಇಟ್ನಂತೆ?
ಬಾಲಕೃಷ್ಣ: ಹೌದೋ, ನನಗೂ ಸಿಕ್ಕಿದ್ದ. ವೈನಾಗಿ ನಡೀತಿದೆ ಬಿಜಿನೆಸ್ಸ್ ಅಂತ ಹೇಳ್ದ. ಅಲ್ಲಯ್ಯಾ, ಹಾಲ್ನಿಂದ ಆಲ್ಕೊಹಾಲ್ಗೆ ಇಳಿದು ಬಿಟ್ಯಲ್ಲ ಯಾಕೆ? ಅಂತ ಕೇಳಿದ್ದೆ ತಡ,” ಬಿಡಿ ಬಾಲಣ್ಣ ಯಾರು ಹೆಣಗಾಡ್ತಾರೆ ದನ ಕಟ್ಕೊಂಡು, ಇಲ್ಲಿ ಧನ ಲಕ್ಷ್ಮಿಯೆ ತಾಂಡವಾಡ್ವಾಗ.
ದಿನಾ ಮನೆಗೆ ಹೋಗಿ, ಹಾಲು ಅಳೆದು ಕೊಡಬೇಕಿತ್ತು. ಇಲ್ಲಿ ಗಿರಾಕಿಗಳೇ ನನ್ನ ಹುಡು ಕ್ಕೊಂಡ್ ಬಂದು ದುಡ್ಡು ಸುರೀ ತಾರೆ. ಹುಟ್ಟಿದಾರಭ್ಯ ಹಾಳು ಹಾಲು ವರ್ತನೆ ಲೆಕ್ಕ ಮಾಡಿಮಾಡಿ ಸಾಕಾಗೋಗಿತ್ತು. ಜೊತೆಗೆ ಕೊಸರು, ದುಡ್ಡು ಕೇಳಿದ್ರೆ ಚೌಕಾಸಿ. ಇಲ್ಲಿ ಹಂಗಿಲ್ಲ.ಒಂದೇ ದಿನ ಒಬ್ನೇ ಗಿರಾಕಿ ಪುನರಾವರ್ತನೆ ಆಗತಾನೆ. ಪರಮಾತ್ಮನ ಪ್ರಭಾವದಿಂದ ಗಿರಾಕಿಗಳ ಜತೆಗೆ ವ್ಯವಹಾರ ಸುಲಭ. ಮತ್ ವ್ಯಾಪಾರವೂ ದಿನಾ ಏರ್ತಲೆ ಇರ್ತದೆ.ಅತ್ತ ಹೊತ್ ಮುಳುಗ್ತೋ, ಇತ್ತ ಬಂದ್ ಮುಳುಗುದ್ರು ಅಂತಲೇ ತೀರ್ಥರೂಪುಗಳು” ಅಂತ ಅಂದ.ಲಿಕ್ವಿದೇತ್ ಆಗೋರ ಗೈರು ಹಾಜರಿಯೇ ಇಲ್ವಂತೆ! ನರಸಿಂಹರಾಜು: ಬರದೆ ಹ್ಯಾಗಿರ್ತಾರೆ, ಅಟ್ ದ ಯೆಂಡಾ ಫ್ ದ ಡೇ, ದುಡಿದುಡ್ನೆಲ್ಲ ಮತ್ ಬಂದ್ಸುರಿಬೇಕಲ್ಲ. ಪೀ-ಕಲೇಬೇಕು ಅನ್ನುತ್ತಂತೆ ‘ಬಾಟ್ಲಿ ಅಂಡ್ ಬಾಯಿ’ಯ ಎಕ್ಕನಾ ಮಿಕ್ಸ್.
ರುಜುವಾತು
ನೇಚರ್ನ ಸಿಗ್ನೇಚರ್ ಅದರ ಪ್ರತಿಯೊಂದು ರಚನೆಯಲ್ಲೂ ಅಡಗಿ ಇರುತ್ತದೆ. ಸೃಷ್ಟಿಯಲ್ಲಿ ‘ಹುರುಳಿ’ಲ್ಲದ ನಿರ್ಮಾಣವೇ ಇಲ್ಲ. ಟು ಸ್ಪಿಲ್ ದ ಬೀನ್ಸ್ ( ಗುಟ್ಟು ಏನಂದರೆ) ಹುರಳಿ ಕಾಯನ್ನೇ ನೋಡಿ: ಕಾಯಿಯ ಎರಡೂ ಬದಿಯಲ್ಲಿ ‘ ಜಿಪ್’ (ನಾರು) ಇರುತ್ತದಲ್ಲವೆ? ಕಾಳು ಬಲ್ಲಿತಂತೆ ಕಾಯಿಸಿಪ್ಪೆ ಒಡೆದು,ಕಾಳು ಚೆಲ್ಲಿಹೋಗದಂತೆ ಕಾಯಲು. ಅರ್ಥಾತ್ ನಾಟ್ ಟು ಸ್ಪಿಲ್ ದ ಬೀನ್ಸ್! ಹೇಗಿದೆ ಸೃಷ್ಟಿ ದೃಷ್ಟಿ?
end ಗುಟುಕು
ದೂ.ದ.ಕಲಾವಿದರು ಮುಖ್ಯಮಂತ್ರಿಗಳನ್ನು ಕಂಡು ಅಭಿನಂದಿಸಿದರು. -ಸುದ್ಧಿ
ಪ್ರತಿಕ್ರಿಯೆ: ಹಾಗೇ, ” ಹೀಗೆ ನಿಮ್ಮ ‘ಮಿತ್ರ ಮಂಡಲಿ’ಯವರು, ಭಿನ್ನ ಮತೇರ್ಜನಸ್ಯ ಪ್ರಹಸನಂ ನಿರಂತರ ಪ್ರದರ್ಶನಂ, ಬಹುದಾಪ್ಯೇಕ ಸಮಾರಾಧನಂ, ಅಂತ ನಮ್ಮ ಜೊತೆ ಪೈಪೋಟಿ ಮುಂದುವರಿಸಿದಲ್ಲಿ, ಜನಾ ನಮ್ಮನ್ನೇ ಮರೆತುಬಿಟ್ಟರೆ, ನಮ್ಮ ಗತಿಯೇನು?” ಅನ್ನೋ ಅಹವಾಲನ್ನೂ ನೀಡಿರಬಹುದು ಎಂದು ಹೇಳಲಾಗುತ್ತಿದೆಯಂತೆ.








hahaha too good!!
chennagideree baraha …))))
channagide… 🙂
ಹಿತಮಿತವಾಗಿದೆ 🙂