ಪುಟ್ಟ ಹೊನ್ನೇಗೌಡ
ನನ್ನ ಸ್ನೇಹಿತ ಸತೀಶನ ಬಹುದಿನಗಳ ಆಸೆ ಕಲ್ಪನ ಅವರ ಸಮಾಧಿ ನೋಡುವುದಾಗಿತ್ತು , ಕಸ್ತೂರಿ ವಾಹಿನಿಯ ಯಾವುದೊ ಒಂದು ಕಾರ್ಯಕ್ರಮದಲ್ಲಿ ಸಮಾಧಿಯನ್ನು ತೋರಿಸಿದಾಗ ಅವರಿಗೆ ಕರೆ ಮಾಡಿ ಸರಿಯಾದ ವಿಳಾಸ ಪತ್ತೆ ಮಾಡಿ ನನ್ನನ್ನು ಹೋಗೋಣ ಎಂದು ಹೇಳಿದರು.
ಕನಕಪುರ ರಸ್ತೆ,ಅಲ್ಲಿ ಗುಬ್ಬಲಾಳ ಗೇಟ್ ,ವಿಶ್ವನಾಥ ಎಸ್ಟೇಟ್ ಇಸ್ಟೇ ನಮಗೆ ಗೊತ್ತಿದ್ದ ವಿಳಾಸ !
ಇಬ್ಬರೂ ಬೈಕ್ ಹತ್ತಿ ಕನಕಪುರ ರಸ್ತೆ ಕಡೆಗೆ ಹೊರೆಟೆವು ರಾಜ್ ಸಮಾದಿಯಿಂದ !
ವರ್ತುಲ ರಸ್ತೆ ಇಂದ ಕನಕಪುರ ರಸ್ತೆಗೆ ಬಲಕ್ಕೆ ತಿರುಗಿದಾಗ, ಎಡಬಾಗದಲ್ಲಿ ಎರಡು ಮಾಂಸದಂಗಡಿಗಳು ಇವೆ ,ಅದರೊಲ್ಲೊಬ್ಬ ಮೋರಿಯ ಕೆಲಸಕ್ಕೆ ಎಂದು ಹಾಕಿದ್ದ , ಒಂದೇ ಕೈಲಿ ಎತ್ತುಕೊಳ್ಳಬಹುದಾದ ಒಂದು ಕಲ್ಲನ್ನು ಎತ್ತಿ ಇನ್ನೊಬ್ಬ ಮಾಂಸದಂಗಡಿ ಅವನ ತಲೆಗೆ ರಪ್ ಅಂತ ಒಡೆದ ,, ನಾವು ಆಶರ್ಯದಿಂದ, ಏನು ರಕ್ತ ನೆ ಬರ್ಲಿಲ್ವಲ್ಲ ಅಂತ ನೋಡಿದೆವು .. ಇಬ್ಬರ ಜಗಳ ಹಾಗೆ ಮುಂದುವರೆದಿತ್ತು .. ನಾವು ರಕ್ತ ಬರುವವರೆಗೂ ಕಾಯದೆ ಮುಂದೆ ಹೋದೆವು .
ದಾರಿಯುದ್ದಕ್ಕು ಗುಬ್ಬಲಾಳ ಗೇಟ್ ಯಾವುದು ಎಂದು ಎಲ್ಲರನ್ನು ಕೇಳಿಕೊಂಡು ಹೊರಟೆವು, ಕೋಣನಕುಂಟೆ ಕ್ರಾಸ್ ಇಂದ
1 ಕಿ ,ಮಿ ಆದಮೇಲೆ ಸಿಗುವುದೇ ಗುಬ್ಬಲಾಳ ಗೇಟ್ .

ಗುಬ್ಬಲಾಳ ಗೇಟ್ ನ ಒಂದು ಅಂಗಡಿಯಲ್ಲಿ ನನ್ನ ಸ್ನೇಹಿತರು ವಿಶ್ವನಾಥ ಎಸ್ಟೇಟ್ ಗೆ ಹ್ಯಾಗೆ ಹೋಗೋದು ಅಂತ ಕೇಳಿದರೆ ‘ಗೊತ್ತಿಲ್ಲ’, ‘ಬಲಕ್ಕೆ ತಿರುಗಿ ಹೋಗಿ ಯಾವುದೊ ಒಂದು ಎಸ್ಟೇಟ್ ಇದೆ’ಎಂದರಂತೆ .
ಬಲಕ್ಕೆ ತಿರುಗಿ ಕೊಂಚ ದೂರ ಸಾಗಿದಾಗ, ದಾರಿಯಲ್ಲಿ 70 ದಾಟಿದ ಒಬ್ಬ ತಾತಪ್ಪ ನಡೆದುಕೊಂಡು ಹೋಗುತ್ತಿದ್ದರು, ಅವರನ್ನು ವಿಶ್ವನಾಥ ಎಸ್ಟೇಟ್ಗೆ ಹ್ಯಾಗೆ ಹೋಗ್ಬೇಕು ಅಂತ ಕೇಳಿದೆವು ಅವರು ‘ಕಲ್ಪನ ಎಸ್ಟೇಟ್’ ಅಂತ ಕೇಳಿದರು , ಹೌದೆಂದೆವು.
ಅವರು ಕಲ್ಪನ ಅವರನ್ನು ಸುಡಲು ಸಹಾಯ ಮಾಡಿದರಂತೆ ಅದೇ ಎಸ್ಟೇಟ್ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರಂತೆ.
ಕೊನೆಗೂ ವಿಶ್ವನಾಥ ಎಸ್ಟೇಟ್ ತಲುಪಿದೆವು , ಆದರೆ ಗೇಟ್ ಗೆ ಬೀಗ ಜಡಿದಿತ್ತು , ಇನ್ನೊಂದು ಗೆಟ್ ಇದೆ ಆ ಕಡೆ ಅಂತ ನೋಡಿ ಅಂತ ಕಾರ್ ತೊಳೆಯುತ್ತಿದ್ದ ಒಬ್ಬ ಯುವಕ ಹೇಳಿದ . ಆ ಗೇಟ್ ಗೂ ಬೀಗ ಬಿದ್ದಿತ್ತು , ಬಟ್ಟೆ ಒಣಗಿ ಹಾಕಿರುವುದು ನೋಡಿ ಯಾರದ್ರು ಇರ್ಬೋದು ಅಂತ ಕೂಗಿ ಕೂಗಿ ಕರೆದೆವು ಯಾರು ಬರಲಿಲ್ಲ , ಕೊನೆಗೆ ಬಂದಿದ್ದು ದಾರಿಯಲ್ಲಿ ಒಂದು ಬೈಕ್ , ಅವರನ್ನು ಕೇಳಿದೆವು ಕಲ್ಪನ ಅವರ ಸಮಾಧಿ ನೋಡಲು ಬಂದಿರುವೆವು ಎಂದು.
ಅವರು ಇದಲ್ಲ ಇನ್ನೊಂದು ಗೇಟ್ ಅಂತ ಹೇಳಿ ನಮ್ಮನ್ನು ಕರೆದುಕೊಂಡು ಹೋಗಿ ಆ ಗೇಟ್ ಬಳಿ ಬಿಟ್ಟರು.

ನಮ್ಮ ಪುಣ್ಯಕ್ಕೆ ಆ ಗೇಟ್ ಬೀಗ ಹಾಕಿರಲಿಲ್ಲ, ಒಳಗೆ ಹೋದೆವು . ಒಬ್ಬ ಹೆಂಗಸು ಆ ಎಸ್ಟೇಟ್ ನ ನೋಡಿಕೊಳ್ಳೋರು , ಏನ್ ಬೇಕು ಎಂದು ವಿನಯವಾಗಿಯೇ ಕೇಳಿದರು. ಕಲ್ಪನ ಸಮಾದಿ ಎಂದಾಗ , ಅಲ್ಲೇ ತುಳುಸಿ ಕಟ್ಟೆ ಇದ್ಯಲ್ಲ ಅದೇ ಎಂದರು , ಅದು ನೋಡಲು ಯಾರದೋ ಸಮಾಧಿ ಥರವೇ ಇತ್ತು ಆದರೆ ನನ್ನ ಸ್ನೇಹಿತ ಕಸ್ತೂರಿ ವಾಹಿನಿಯಲ್ಲಿ ನೋಡಿದ್ದೇ ಬೇರೆ ತರ ಇತ್ತಂತೆ. ಆಯಮ್ಮನನ್ನು ಇದಲ್ಲವಲ್ಲ ನೀವು ಎಸ್ಟ್ ದಿನ ಆಯಿತು ಇಲ್ಲಿಗೆ ಬಂದು ಎಂದು ವಿಚಾರಿಸಿದಾಗ ಎರಡು ವಾರ ಎಂದರು, ಸರಿ ಪಕ್ಕದ ಎಸ್ಟೇಟ್(ಎರಡು ಕಡೆ ಗೇಟ್ ಬೀಗ ಹಾಕಿದ್ದ) ಯಾರದ್ದು ಎಂದು ಕೇಳಿದೆವು, ಅದು ವಿಶ್ವನಾಥ ಅವರದ್ದೇ ಆದರೆ ಈಗ ಮಾರಿದ್ದಾರೆ ಎಂದರು.
ಹಾಗದ್ರೆ ಪಕ್ಕದ ಎಸ್ಟೇಟ್ ಗೇಟ್ ಹಾರಿ ಹುಡ್ಕೋಣ ಅಂತ ಮಾತಾಡಿದಾಗ ಆ ಹೆಂಗಸು ಗೇಟ್ ಹಾರ್ಬ್ಯಾಡಿ ಈ ಕಡೆ ಇಂದ ಕಾಪೌಂಡ್ ಹಾರಿ ಎಂದು ಸಲಹೆ ನೀಡಿದರು , ನಾವು ಕಾಪೌಂಡ್ ಹಾರಿ ಆ ಎಸ್ಟೇಟ್ ನಲ್ಲಿ ಸುಮಾರು 20 ನಿಮಿಷ ಹುಡುಕಿದೆವು, ಒಂದು ಎಕರೆ ಯಷ್ಟು ಇತ್ತು ಆ ಎಸ್ಟೇಟ್ , ವಾರಾಂತ್ಯ ಪಾರ್ಟಿ ಮಾಡಲು ಉಪಯೋಗಿಸುವಂತೆ ಇತ್ತು.
ಬೇಸರದಿಂದ ಮತ್ತೆ ಕಾಪೌಂಡ್ ಹಾರಿ ಅದೇ ಎಸ್ಟೇಟ್ ಗೆ ಮರಳಿ ಅಲ್ಲು ಎಲ್ಲ ಕಡೆ ಹುಡುಕಲು ನಿರ್ದರಿಸಿದೆವು.
ನಾವು ಬಂದ ಗೇಟ್ ನ ಬಲ ಬಾಗದಲ್ಲಿ ಒಂದು ಕಿರಿದಾದ ಟಾರ್ ರಸ್ತೆ ಇತ್ತು ಅದರಲ್ಲೇ ನೇರವಾಗಿ ನಡೆದುಕೊಂಡು ಹೋದೆವು ಅದರ ಕೊನೆಗೆ ಒಂದು ಮನೆ, ಅದರ ಹಿಂಬಾಗಕ್ಕೆ ಬಂದೆವು ನನ್ನ ಸ್ನೇಹಿತ ಅಲ್ಲಿಗೆ ಹೋದವರೇ ಇದೇ ಇದೇ ಎಂದು ಕುಷಿಪಟ್ಟರು , ಕೊನೆಗೂ ಸಿಕ್ಕಿತಲ್ಲ ಬಂದದಕ್ಕೂ ಸಾರ್ಥಕವಾಯಿತಲ್ಲ ಎಂದು ಸಂತೋಷವಾಯಿತು . ಫೋಟೋ ಸೆಶನ್ ಶುರುವಾಹಿತು ತುಂಬಾ ಫೋಟೋಸ್ ತೆಗೆದೆವು.
ಸಮಾದಿ ಪಕ್ಕದ ಕಾಪೌಂಡ್ ಗೆ ಅಂಟಿಕೊಂಡಂತೆ ಒಂದು ಮನೆ ಇತ್ತು . ಅದರಿಂದ ಒಂದು ದ್ವನಿ ಕೇಳಿತು , ‘ಸಮಾದಿ ಮೇಲೆ ಸಲ್ಪ ನೀರಾಕಿ ಫೋಟೋ ತಕ್ಕೊಳಿ ಚೆನ್ನಾಗಿ ಬರುತ್ತೆ’ , ನಾವು ಪರವಾಗಿಲ್ಲ ಸರ್ ಎಂದೆವು , ನಮ್ಮ ಸ್ನೇಹಿತ ಯಾರು ಕಲ್ಪನ ಅವರ ಸಮಾದಿ ನೋಡಲು ಬರಲ್ವ ಎಂದು ಕೇಳಿದಾಗ , ‘ವಿಶ್ವನಾಥ ಅವರು ಆಗಾಗ ಬಂದು ನಮಸ್ಕಾರ ಹಾಕೊಂಡು ಹೋಗ್ತಾರೆ ‘ಎಂದು ಹೇಳಿದರು .
ಸಮಾದಿ ಆರು ಉದ್ದ, ಮೂರು ಅಗಲ, ಎರಡು ಎತ್ತರವಿದೆ ಮೇಲ್ಗಡೆ ಕಪ್ಪು ಮಾರ್ಬಲ್ ನಿಂದ ಕೂಡಿದೆ ಅದರ ಮೇಲೆ “ಮಿನುಗು ತಾರೆ ಇಲ್ಲಿ ಮಲಗಿದ್ದಾರೆ ” ಎಂಬ ಬರಹವಿದೆ







ಥ್ಯಾಂಕ್ಸ ಕಣ್ರಿ , ಪುಟ್ಟ ಹೊನ್ನೇಗೌಡರೇ…..ಕಲ್ಪನಾ ಅವರನ್ನ ನೆನಪಿಸಿದ್ದಕ್ಕೆ …..ಬರಹ ಸಹ ಆತ್ಮೀಯವಾಗಿದೆ.
ಧನ್ಯವಾದಗಳು ನಾಗರಾಜ್ ಅವರೇ 🙂
ಅವರನ್ನ ಹೂತು ಹಾಕಿದ್ದಾರ?!! ಸುಟ್ಟು ಬೂದಿ ಮಾಡಿದ್ದಾರೆ ಅಂತ ಅಂದುಕೊಂಡಿದ್ದೆ.
ಅವರನ್ನು ಸುಟ್ಟಿದ್ದು ಎಂದು ಆ ತಾತಪ್ಪ ಹೇಳಿದರು ..
ಮತ್ತೊಮ್ಮೆ ಬೇರೆಯವರಿಂದ ಅದರ ಬಗ್ಗೆ ತಿಳಿದುಕೊಳ್ಳ ಬೇಕಿದೆ
ಪುಟ್ಟ ಹೊನ್ನೇಗೌಡರೆ ಇವತ್ತು ನಾನು ಮತ್ತು ನನ್ನ ಸ್ನೇಹಿತ ಇಬ್ಬರು ಸೇರಿ ಮಿನುಗುತಾರೆ ಕಲ್ಪನಾ ಅವರ ಸಮಾಧಿಯನ್ನು ನೋಡಲು ಹೋಗಿದ್ದೆವು ಅದು ದೊಡ್ಡ ಎಸ್ಟೇಟ್ ಅದಕ್ಕೆ ಮೂರು ಗೇಟುಗಳು ಇದೆ ಒಳಗಡೆ ಯಾರು ಇರಲಿಲ್ಲ ಕೂಗಿದರು ಯಾರು ಬರಲಿಲ್ಲ ಹಾಗೆ ಮತ್ತೆ ವಾಪಸ್ಸು ಬರೋವಾಗ ಒಂದು ಅಂಗಡಿ ಸಿಕ್ಕಿತು ಆ ಅಂಗಡಿಯವನಿಗೆ ವಿಚಾರಿಸಿದಾಗ ಒಂದು ಸತ್ಯ ನಮಗೆ ಗೊತ್ತಾಗಿದ್ದು ಅದೇನೆಂದರೆ ನಾವು ವಿಚಾರಿಸಿದ ಅಂಗಡಿಯ ವ್ಯಕ್ತಿಯೇ ಕಲ್ಪನಾ ಅವರ ಚಿತೆಗೆ ನಾನೆ ಅಗ್ನಿ ಸ್ಪರ್ಶ ಮಾಡಿದ್ದು ಅಂತ ಹೇಳಿದರು ಆ ಸಮಯದಲ್ಲಿ ಕೆಲ ಚಿತ್ರನಟರು ಹಾಗೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಬಂದಿದ್ದರು ಅಂತ ಹೇಳಿದರು
ಅವರನ್ನ ಹೂತು ಹಾಕಿದ್ದಾರ?
What about this lines ?
ದಾರಿಯಲ್ಲಿ 70 ದಾಟಿದ ಒಬ್ಬ ತಾತಪ್ಪ ನಡೆದುಕೊಂಡು ಹೋಗುತ್ತಿದ್ದರು, ಅವರನ್ನು ವಿಶ್ವನಾಥ ಎಸ್ಟೇಟ್ಗೆ ಹ್ಯಾಗೆ ಹೋಗ್ಬೇಕು ಅಂತ ಕೇಳಿದೆವು ಅವರು ‘ಕಲ್ಪನ ಎಸ್ಟೇಟ್’ ಅಂತ ಕೇಳಿದರು , ಹೌದೆಂದೆವು.
ಅವರು ಕಲ್ಪನ ಅವರನ್ನು ಸುಡಲು ಸಹಾಯ ಮಾಡಿದರಂತೆ ಅದೇ ಎಸ್ಟೇಟ್ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರಂತೆ
….
ಅವರ ಅಂತ್ಯಸಂಸ್ಕಾರ ಬೇರೆಡೆ ಎಲ್ಲೋ ನಡೆದದ್ದು, ನೋತರದಲ್ಲಿ ವಿಶ್ವನಾಥ್ ರವರು ಅದನ್ನು ಸ್ಥಳಾಂತರಿಸಿದ್ದು, ಎಂದು ಎಲ್ಲೋ ಕೇಳಿದ ನೆನಪು.
vishwantha yaru
Kalpana Andre gejje poojene nenpagatte
ಅಧ್ಬುತ ನಟನೆ ಅಂದರೆ ಅದು ಮಿನುಗುತಾರೆ ಕಲ್ಪನ ಶರಪಂಜರದ ಕಲ್ಪನ ಮತ್ತೆ ಹುಟ್ಟಿ ಬರಲಿ….ಬಬಿತ
ಅದ್ಭುತ ನಟಿ ಮಿನುಗುತಾರೆ ಕಲ್ಪನಾರ ಬಾಳಲ್ಲಿ ಅದೆಷ್ಟು ತಿರುವುಗಳು.ಅಂಥ ಮೇರುನಟಿಯ ಬಾಳು ದುರಂತದಲ್ಲಿ ಅಂತ್ಯವಾಗಿದೊಂದು ದೊಡ್ಡ ದುರಂತ.ವಿಶ್ವನಾಥರವರು ಆಗಾಗ ಸಮಾಧಿಗೆ ಬಂದು ನಮಸ್ಕರಿಸಿ ಹೋಗುತ್ತಾರೆಂದು ತಿಳಿದು ಮನಸ್ಸಿಗೆ ಸಮಾಧಾನವೆನಿಸಿತು