ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಂಗ್ ಮಿಂಗ್ ಕರಡಿಯ ಟೊಂಯ್ ಕೂದಲು…

ಪ್ರಥಮ್ ಬುಕ್ಸ್

ಚಿತ್ರಗಳು: ವಿಷ್ಣು ಎಂ.ನಾಯರ್

ತುಂಟತನ ಮನುಷ್ಯರ ಮಕ್ಕಳಿಗಷ್ಟೆ ಸೀಮಿತವೆ? ಪ್ರಾಣಿಗಳ ಮಕ್ಕಳೂ ತುಂಟತನ ಮಾಡಬಹುದಲ್ಲವೆ? ಕರಡಿ ಮರಿಗಳು ತುಂಟತನ ಮಾಡಿದರೆ ಹೇಗಿರುತ್ತದೆ?

ಈ ಮಿಂಗ್ ಮಿಂಗ್ ಎಂಬ ಕರಡಿ ಮರಿ ಒಂದು ದಿನ ಬೆಳಗ್ಗೆ ಎದ್ದು ನೋಡಿದರೆ ತಲೆಯ ಮೇಲೆ ಒಂದು ಕೂದಲು ಟೊಂಯ್ ಎಂದು ನೆಟ್ಟಗೆ ನಿಂತಿದೆ. ಅದಕ್ಕೆ ಏನು ಮಾಡಬೇಕೋ ತೋಚುತ್ತಿಲ್ಲ.

ಎಲ್ಲರ ಮನೆಯಂತೆ ಅದರ ಮನೆಯಲ್ಲಿ ಕೂಡ ಅದು ಮಾಡು ಎನ್ನುವವರೆ. ಅಪ್ಪ-ಅಮ್ಮ, ಅಣ್ಣ-ಅಕ್ಕ, ದೊಡ್ಡಪ್ಪ-ಚಿಕ್ಕಪ್ಪ ಎಲ್ಲರೂ ಒಂದೊಂದು ಸಲಹೆ ಕೊಡುವವರೆ. ಎಲ್ಲರ ಮಾತು ಕೇಳಿ ತಲೆ ಚಿಟ್ಟು ಹಿಡಿದು ಮಲಗುವ ಕರಡಿ ಮರಿಯ ಕೂದಲು ಮತ್ತೊಂದು ಬೆಳಗ್ಗೆ ಎದ್ದು ನೋಡುತ್ತಲೇ ಮೊದಲಿನಂತಾಗಿ ಬಿಟ್ಟಿರುತ್ತದೆ.

ಕೂದಲೊಂದು ನೆಟ್ಟಗೆ ನಿಂತಿದ್ದಕ್ಕೆ ಕರಡಿ ಮರಿಗೆ ಇಡೀ ದಿನ ಯಾರೆಲ್ಲ ಏನೆಲ್ಲ ಹೇಳಿದರು. ಕರಡಿಗಳೆಲ್ಲ ಕೂದಲ ಆರೈಕೆ ನಡೆಸಿದವು ಎನ್ನುವುದು ನಿಮಗೂ ಗೊತ್ತಾಗಬೇಕೆ?
ಇಲ್ಲಿ ಕ್ಲಿಕ್ ಮಾಡಿ

‍ಲೇಖಕರು avadhi

14 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading