ಕನ್ನಡದ ಮನಸ್ಸುಗಳನ್ನು ಸದಾ ಜೀವಂತವಾಗಿಟ್ಟ, ರಾಜ್ಯ ರಾಜಕೀಯಕ್ಕೆ ಚಾಟಿ ಏಟು ನೀಡುತ್ತಲೇ ಬಂದಿರುವ ಪಿ ಮಹಮ್ಮದ್ ಅವರಿಗೆ ಈ ಸಾಲಿನ ಮುದ್ದುಶ್ರೀ ಗೌರವ ಪ್ರಶಸ್ತಿ ಘೋಷಿಸಲಾಗಿದೆ. ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ ತನ್ನ ವಾರ್ಷಿಕ ಉತ್ಸವದ ಅಂಗವಾಗಿ ಐವರು ಗಣ್ಯರಿಗೆ ಗೌರವ ಪ್ರಶಸ್ತಿಯನ್ನು ನೀಡುತ್ತದೆ.
ಈ ಬಾರಿ ಮಹಮ್ಮದ್ ಅಲ್ಲದೆ ಸಮಾಜ ಸೇವೆ ಗಾಗಿ ಜಿ ಎಸ್ ಜಯದೇವ್, ಸುಗಮ ಸಂಗೀತ ಕ್ಷೇತ್ರದಿಂದ ಕೆ ಎಸ್ ಸುರೇಖ, ರಂಗಭೂಮಿ ಸಾಧನೆಗಾಗಿ ಎಚ್ ಸಿ ಜಯದೇವ್, ಜಾನಪದ ಕಥನ ಕಾವ್ಯಕ್ಕಾಗಿ ಕಂಚಿನ ಕಂಠದ ಕಾರಯ್ಯ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಹಂಸಲೇಖ ಹಾಗೂ ಮನು ಬಳಿಗಾರ್ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ೨೦ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಟಿ ಎಸ್ ನಾಗಾಭರಣ ಅಭಿನಯದ, ಆರ್ ನಾಗೇಶ್ ನಿರ್ದೇಶನದ ‘ತಬರನ ಕಥೆ’ ನಾಟಕ ಪ್ರದರ್ಶನವಿದೆ. ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ‘ಬೆನಕ’ ತಂದ ಅಭಿನಯಿಸಲಿದೆ.
ಮಹಮ್ಮದ್ ಗೆ ಮುದ್ದುಶ್ರೀ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





Arey wah, he deserves more : )