ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಸ್ತಾನ್ ಅವರನ್ನು ಸಂದರ್ಶಿಸುವ ಕ‌ನಸು ಹಾಗೆಯೇ ಉಳಿದು ಹೋಯಿತು..

ಮಂಜುನಾಥ್ ಲತಾ

‘ಮಸ್ತಾನ್’ ಇನ್ನಿಲ್ಲವೆಂಬ ಸುದ್ದಿ ಕೇಳಿ ಇನ್ನಿಲ್ಲದಷ್ಟು ದುಃಖವಾಯಿತು. ಎಂಬತ್ತು-ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಚಾರ ವಿನ್ಯಾಸಕರಾಗಿ ಮಿಂಚಿದವರು ಮಸ್ತಾನ್. ನಾನು ಎಂಟನೇ ಇಯತ್ತೆಯಲ್ಲಿರುವಾಗಲೇ ‘ರಣಧೀರ’ ಸಿನಿಮಾದ ಪೋಸ್ಟರ್ ವಿನ್ಯಾಸ ನೋಡಿ ಆಕರ್ಷಿತನಾಗಿದ್ದೆ. ಅಂದಿನ ರವಿಚಂದ್ರನ್ ಅವರ ಬಹುತೇಕ ಸಿನಿಮಾಗಳಿಗೆ ಪೋಸ್ಟರ್ ವಿನ್ಯಾಸ ಮಾಡಿದವರು ಈ ಮಸ್ತಾನ್.

‘ಶಾಂತಿ ಕ್ರಾಂತಿ’ಗೆ ಮಾಡಿದ ಅವರ black and white design ಈಗಲೂ ನನ್ನ favoriteಗಳಲ್ಲೊಂದು. ‘ಡಿಜಿಟಲ್ ವಿನ್ಯಾಸ’ಗಳು ಇಲ್ಲದಿದ್ದ ಕಾಲಘಟ್ಟದಲ್ಲಿ ತಮ್ಮ ಕೈಬರಹದ ಶೀರ್ಷಿಕೆಗಳಿಂದಲೇ ಪ್ರಸಿದ್ಧಿಗೆ ಬಂದವರು ಮಸ್ತಾನ್. ನನ್ನ ತಿಳಿವಳಿಕೆ ಮಟ್ಟಿಗೆ ‘ರಾಮಾಚಾರಿ’ ಸಿನಿಮಾದ ಶೀರ್ಷಿಕೆಯ ಮೂಲಕ ಹೊಸ ‘ಟೈಟಲ್ ಟ್ರೆಂಡ್’ ಸೃಷ್ಟಿಸಿದವರು. ‘ನನ್ನ ತಂಗಿ’ ಸಿನಿಮಾಕ್ಕೆ ಅವರು ಮಾಡಿದ ದೇವರಾಜ್ ಅವರ portrait ಹಾಗೂ ‘ನಗರದಲ್ಲಿನಾಯಕರು’, ‘ಕಾದಂಬರಿ’ ಎಂಬ ಸಿನಿಮಾಗಳ ಪೋಸ್ಟರ್ ವಿನ್ಯಾಸ ಈಗಲೂ ನನ್ನ ಕಣ್ಣಿನ ಮುಂದೆ ಇದ್ದಂತಿವೆ.

ನಾನು ನನ್ನ ಕಲೆ-ಕೈಬರಹಗಳನ್ನು ತಿದ್ದಿಕೊಂಡಿದ್ದು, ಬೆಳೆದದ್ದು ಮಸ್ತಾನ್ ಪೋಸ್ಟರ್ ಕಲೆ ನೋಡಿಕೊಂಡೇ. ಕಲಾವಿದರಾದ ಗಂಗಾಧರ್ ನಂತರ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಮಸ್ತಾನ್ ಅವರದು ಬಹುದೊಡ್ಡ ಹೆಸರು. ‘ಡಿಜಿಟಲ್ ಯುಗ’ ಶುರುವಾದ ಮೇಲೆ ಮಸ್ತಾನ್ ಮೂಲೆಗುಂಪಾದರು. ನಾನು ಹೈಸ್ಕೂಲಿನಲ್ಲಿದ್ದಾಗ ಸಿನಿಮಾ ಪೋಸ್ಟರ್ ಗಳಲ್ಲಿ ಅವರ ಹೆಸರನ್ನು ‘ಮಾಸ್ಟರ್’ ಎಂದುಕೊಂಡಿದ್ದೆ; ಎಸ್ಸೆಸ್ಸೆಲ್ಸಿ ಮುಗಿಯುವ ಹೊತ್ತಿಗೆ ಅವರು ‘ ಮಸ್ತಾನ್’ ಎಂದು ಗೊತ್ತಾಯಿತು.

ಮುಂದೆ ನಾನು ಪತ್ರಿಕೋದ್ಯಮದ ‘ಈಜು’ ಮುಗಿಸಾದ ಮೇಲೆ ಅವರದ್ದೊಂದು ಸಂದರ್ಶನ ಮಾಡಬೇಕೆಂದುಕೊಂಡಿದ್ದೆ; ಅದು ಕೈಗೂಡಲೇ ಇಲ್ಲ. ಅವರ ನಿಧನಾನಂತರ ಅವರದ್ದೇ signature ನನ್ನ ಕೈಬರಹದಲ್ಲಿ…

‍ಲೇಖಕರು Avadhi

21 April, 2021

1 Comment

  1. Jayasrinivasa Rao

    Touching tribute to Mastan … I remember seeing that signature on film posters while I was living in Shimoga … sad that the digital craze pushed him into a corner…May his soul rest in peace…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading