ರಮೇಶ್ ಹಿರೆಜಂಬೂರ್ ತಮ್ಮ ಮೊದಲ ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಎಲ್ಲಾ ಮೊದಲುಗಳಿಗೆ ಇರುವ ಸಂಭ್ರಮ ಅವರಲ್ಲೂ ಇದೆ. ಮಲೆನಾಡಿನ ಅಂಗಳದಲ್ಲಿ ಬೆಳೆದ ರಮೇಶ್ ತಮ್ಮ ಕಥೆಗಳನ್ನು ಎಲ್ಲಿಂದ ಹೆಕ್ಕಿಕೊಂಡು ಬಂದಿದ್ದಾರೆ ಎಂಬುದು ಗುಟ್ಟೇನಲ್ಲ. ಆ ಮಲೆನಾಡಿಗೆ ಅಂತಹ ಶಕ್ತಿಯಿದೆ.
ಸದಾ ಲವಲವಿಕೆಯ ಈ ಹುಡುಗನ ಕಥೆ ಹೇಗಿದೆ ಎಂಬುದು ಗೊತ್ತಿಲ್ಲ. ಆದರೆ ಆತನಲ್ಲಿರುವ ವಿಶ್ವಾಸ, ಸದಾ ಪಾದರಸದಂತೆ ಓಡಾಡುವುದನ್ನು ನೋಡುವಾಗ ಈತನ ಕಥೆಗಳೂ ಹಾಗೆ ಇರಲಿ ಎಂದು ಮನಸ್ಸು ಆಶಿಸುತ್ತದೆ
ನಾಳೆ (8 ರಂದು ಬೆಳಗ್ಗೆ 10-30 ಕ್ಕೆ) ಕನ್ನಡ ಭವನದ ನಯನದಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾಮಚಂದ್ರಪ್ಪ ಹಾಗೂ ಬಂಜಗೆರೆ ಜಯಪ್ರಕಾಶ್ ಸಮ್ಮುಖದಲ್ಲಿ ಬಿಡುಗಡೆ.






Coverpage is nice
🙂
malathi S
abhinandanegalu..
cover page tumbaa “chanda” ide….