ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆಗಳಲ್ಲಿ ಮದುಮಗಳು: ಒಂದೆರಡು ಆಕ್ಷೇಪಣೆಗಳು…

ಬಾ ಹುಲಿಕಲ್ ನೆತ್ತಿಗೆ-15 -ಪ್ರೊ. ಶಿವರಾಮಯ್ಯ ಜೊತೆಗೆ ನಾನಿಲ್ಲಿ ಇನ್ನೊಂದು ಮಾತನ್ನು ಹೇಳಬೇಕಾಗಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಒಂದು ಪುರಾತನ ಥಿಯೇಟರ್ (1935)ನಲ್ಲಿ ತಿಛಿಞಜಜ ತಿಣಛಿ ಎಂಬ ಫೋಕ್ ನಾಟಕವನ್ನು ನೋಡುವ ಅವಕಾಶಸಿಕ್ಕಿತು. ಆ ನಾಟಕದ ವಿಶೇಷವೆಂದರೆ, ಸಮಾಜ ಯಾವ ಮಾಟಗಾತಿಯನ್ನು ತಿರಸ್ಕರಿಸಿ ದೂರ ಇಡುತ್ತದೋ ಅದೇ ಮಾಟಮಂತ್ರ ವೈದ್ಯ ಬಲ್ಲ ಹೆಂಗಸು ಅಂತಃಕರಣವುಳ್ಳವಳಾಗಿದ್ದು, ಅಂಗವಿಕಲರಿಗೆ ಪುನಃ ಚೇತನದಾಯಿಯಾಗಿರುತ್ತಾಳೆ; ಸಮಾಜ ಯಾರನ್ನು ಒಳ್ಳೆಯ ಹೆಂಗಸು ಎಂದು ನಂಬಿರುತ್ತದೋ ಅಂಥ ಹೆಂಗಸು ಸಮಾಜ ಬಾಹಿರ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಕಡೆಯಲ್ಲಿ ನಿಜವಾಗಿಯೂ ತಿಛಿಞಜಜ ತಿಣಛಿ ಎಂಬುದನ್ನು ಮಾಮರ್ಿಕವಾಗಿ ಆ ನಾಟಕ ಚಿತ್ರಿಸುತ್ತದೆ, ಸಂಗೀತ ಪ್ರಧಾನವಾದ ಆ ನಾಟಕದ ಇನ್ನೊಂದು ವಿಶೇಷವೆಂದರೆ, ಪಾತ್ರಧಾರಿಗಳು ತಾವೇ ಹಾಡುಗಳನ್ನು ಹಾಡುತ್ತಿದ್ದುದು. ತಿರುಗಾಟದಲ್ಲಿದ್ದ ಈ ನಾಟಕ ಆಗ ಸ್ಯಾನ್ಫ್ರಾನ್ಸಿಸ್ಕೋ ನಗರಕ್ಕೆ ಬಂದಿತ್ತು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಮತ್ತೂ ಹೇಳಬೇಕಾದ ವಿಚಾರವೆಂದರೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ರಂಗಭೂಮಿ ಥಿಯೇಟರ್ ಬಗ್ಗೆ. ರಿಮೋಟ್ ಕಂಟ್ರೋಲ್ ಮೂಲಕ ಟ್ರ್ಯಾಲಿಗಳನ್ನು ಚಲನೆಗೊಳಿಸುತ್ತ, ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ, ಅಕ್ಕಪಕ್ಕ ಹಿಂದೆ ಮುಂದೆ ಕ್ಷಣಾರ್ಧದಲ್ಲಿ ಸಂಬಂಧಪಟ್ಟ ಮಾಯಾದೃಶ್ಯಗಳನ್ನು ತೆರೆಯುತ್ತಿದ್ದುದು. ಮಳೆ ಚಳಿಗಾಳಿ, ಋತುಮಾನಗಳ ವೈಪರೀತ್ಯ ಪ್ರವಾಹ ಇತ್ಯಾದಿ ಪ್ರಾಕೃತಿಕ ವಿಕೋಪ-ಪ್ರಕೋಪಗಳನ್ನು, ಮಾನವ ಇಲ್ಲಿ ಉಳಿಯಲು ಕಟ್ಟುವ ನಾಗರಿಕ ಪ್ರಯತ್ನಗಳನ್ನು ರಂಗದ ಮೇಲೆ ನೋಡುವಂತಿತ್ತು. ಈ ನಾಟಕವನ್ನು ನೋಡುತ್ತಿದ್ದ ನನಗೆ ನಮ್ಮ ರಂಗಭೂಮಿ ಸ್ಥಿತಿಯೆ ನೆನಪಾಗುತ್ತಿತ್ತು. ಮದುಮಗಳು ನಾಟಕಕ್ಕೆ ದ್ವಾರಕನಾಥ ಅಂಥವರು ಸುರಿಸುವ ಬೆವರು-ಪರಿಶ್ರಮ ಕಾಡುತ್ತಿತ್ತು. ದೇವರು-ದಿಂಡರು ಎಂದು ಕೋಟಿಗಟ್ಟಲೆ ದೇವಾಲಯಗಳಿಗೆ ಹಣ ತೆಗೆದಿಡುವ ನಮ್ಮ ಸಕರ್ಾರಗಳಿಗೆ ಸಾಂಸ್ಕೃತಿಕ ಒಳನೋಟಗಳಿದ್ದ ಪಕ್ಷದಲ್ಲಿ ನಮ್ಮಲ್ಲೂ ಇಂಥ ಒಂದು ರಂಗಭೂಮಿಯ ನಿಮರ್ಾಣ ಆಗುತ್ತದೆಯಲ್ಲವೆ? ಆಗ ಮದುಮಗಳು ನಾಟಕದಂತಹ ನಾಟಕದ ವಿವಿಧ ಊರುಕೇರಿಗಳನ್ನು ಪ್ರೇಕ್ಷಕ, ಅಲ್ಲಿಗಿಲ್ಲಿಗೆ ಎದ್ದು ಓಡಾಡದೆ, ಕುಳಿತಲ್ಲೇ ನೋಡಬಹುದಲ್ಲ ಎಂಬ ಅಪೇಕ್ಷೆ. ಒಂದೆರಡು ಆಕ್ಷೇಪಣೆಗಳು ಪ್ರೊ.ಕೆ.ಮರುಳಸಿದ್ಧಪ್ಪನವರ ಅಭಿಪ್ರಾಯದಂತೆ, ಮದುಮಗಳು ನಾಟಕದಲ್ಲಿನ ಮತಾಂತರ ಹಾಗೂ ಸಾಲ ವಸೂಲಿ ಮಾಡುವ ಪಾತ್ರಗಳು ಅಂದಿನ ಸಾಮಾಜಿಕ ಸಂದರ್ಭಕ್ಕೆ ಉಚಿತವಾಗಿದ್ದರೂ ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ಕೂಡ ಹಾಗೆ ಅತಿರಂಜಿವಾಗಿ ನಿರೂಪಿಸುವುದು ನ್ಯಾಯಯುತವಾಗುವುದಿಲ್ಲ ಎಂದದ್ದು ಗಮನಿಸತಕ್ಕ ಪ್ರತಿಕ್ರಿಯೆಯೇ ಸರಿ. ಈಗಾಗಲೇ ಹೇಳಿದಂತೆ ಪ್ರೊ. ಕಿ.ರಂ.ನಾ. ಎತ್ತಿದ ಆಕ್ಷೇಪಣೆ ‘ಕುವೆಂಪು ಅವರವೆ ಅಷ್ಟೊಂದು ಪದ್ಯಗಳಿರುವಾಗ ‘ಮದುಮಗಳು ರಂಗರೂಪಕ್ಕೆ ಹೊಸದಾಗಿ ಪದ್ಯಗಳನ್ನು ಬರೆದದ್ದು ಸರಿಯೇ? ಎಂಬುದು. ಇನ್ನು ಕೆಲವು ಪದ್ಯಗಳನ್ನು ಅನ್ವೇಷಣೆ ಮಾಡಬಹುದಿತ್ತು. ಆದರೆ ಕಾಲಬದ್ಧ ಒತ್ತಡ ಇದ್ದುದರಿಂದ ಕುವೆಂಪು ಪದ್ಯ ಸಂಗ್ರಹವನ್ನು ಹುಡುಕುವ ವ್ಯವಧಾನ ಆಗ ಇರಲಿಲ್ಲ. ಆದರೂ ಪ್ರೊ.ಕೆ.ವಿ. ನಾರಾಯಣ ಅವರು ಹೇಳಿರುವಂತೆ, ಪ್ರಸ್ತುತ ಕೆವೈಎನ್ ರಚನೆಗಳು ಕಾದಂಬರಿಯ ಆ ನಿಗೂಢ ಲೋಕಕ್ಕೆ ಯಾನ ಹೋಗಿಬರಲು ಸಹಕಾರಿಯಾಗಿವೆ ಎಂಬ ಮಾತನ್ನಿಲ್ಲಿ ಸ್ಮರಿಸಬಹುದು. ಡಾ.ರಹಮತ್ ತರೀಕೆರೆಯವರ ಒಂದು ಮಾತು ಮಾತ್ರ ಯಾಕೋ ಅಸ್ಟಷ್ಟವಾಗಿರುವಂತೆ ಕಂಡುಬರುತ್ತದೆ. ಜಾನಪದವನ್ನು ಒಂದು ಬಗೆಯಲ್ಲಿ ನಿರಾಕರಿಸಿದ ಕುವೆಂಪು ಅವರ ಕಾದಂಬರಿ ಕುರಿತ ನಾಟಕಕ್ಕೆ ಜಾನಪದ ಪರಂಪರೆಯಿಂದ ಈ ನಿರೂಪಕ ಪಾತ್ರ (ಅಜರ್ುನ ಜೋಗಿಗಳು, ಸುಡುಗಾಡು ಸಿದ್ಧರು, ಹೆಳವರು ಇತ್ಯಾದಿ)ಗಳನ್ನು ಅಳವಡಿಸಿರುವುದು ಒಂದು ವಿಶೇಷ. (ಸಂಸ. ಮದುಮಗಳು ವಿಶೇಷಾಂಕ. ಸಂಪುಟ-2 ಸಂ. 10 ಮೇ-2010) ಈ ವಾಕ್ಯದಲ್ಲಿ ‘ಕುವೆಂಪು ಅವರ ಕಾದಂಬರಿ ಕುರಿತ ನಾಟಕಕ್ಕೆ ಜಾನಪದ ಪರಂಪರೆಯಿಂದ ಈ ನಿರೂಪಕ ಪಾತ್ರಗಳನ್ನು ಅಳವಡಿಸಿರುವುದು ಒಂದು ವಿಶೇಷ’ ಎಂಬ ಉತ್ತರ ಭಾಗವು ಸರಿಯೇ ಮತ್ತು ಮದುಮಗಳು ಕಾದಂಬರಿ ಹಾಗೆ ಜಾನಪದ ಪರಂಪರೆಯನ್ನು ಮೈಗೂಡಿಸಿಕೊಂಡಿರುವುದರಿಂದಲೇ ಅದು ಸಾಧ್ಯವಾಯಿತು ಕೂಡ. ಇಲ್ಲವಾಗಿದ್ದರೆ ತೇಪೆ ಹಾಕಿದಂತಾಗುತ್ತಿತ್ತಲ್ಲವೆ? ಅಂದ ಮೇಲೆ ಕುವೆಂಪು ಜಾನಪದವನ್ನು ನಿರಾಕರಿಸಿದ್ದು ಹೇಗೆ? ಹಾಗಾದರೆ ಮತ್ತೆರಡು ಪ್ರಶ್ನೆಗಳು ಹುಟ್ಟುತ್ತವೆ. ಮೊದಲಿಗೆ ಜಾನಪದ ಎಂದರೇನು? ಕುವೆಂಪು ಜಾನಪದವನ್ನು ಗ್ರಹಿಸಿದ್ದು ಅಥವಾ ಅದನ್ನು ನಿರಾಕರಸಿದ್ದು ಹೇಗೆ? ಹಾಗಾಗಿ ಕುವೆಂಪು ಸಾಹಿತ್ಯವನ್ನು ಕೇವಲ ಶಿಷ್ಟ ಸಾಹಿತ್ಯವೆಂದು ಮಾತ್ರ ಗ್ರಹಿಸಬೇಕೆ? ಇತ್ಯಾದಿ ಪ್ರಶ್ನೆಗಳು ಎದುರಾಗುತ್ತವೆ. ಈಗ ಜಾನಪದ ಎಂದರೇನು? ಮತ್ತು ಅದನ್ನು ಕುವೆಂಪು ಗ್ರಹಿಸಿದ ಬಗೆ ಹೇಗೆ ಎಂಬುದನ್ನು ಅವರ ಮಾತುಗಳ ಉಲ್ಲೇಖದಿಂದಲೇ ನೋಡಬಹುದು: ಜಾನಪದ ಸಾಹಿತ್ಯ ಇದೆಯಲ್ಲಾ ಅದು ನಿಜವಾಗಿಯೂ ನಮ್ಮ ದೇಶ ಯಾವ ಮತ ಮೌಢ್ಯವನ್ನೆಲ್ಲಾ ಪ್ರಚಾರ ಮಾಡಿತೋ ಆ ಮೌಢ್ಯವನ್ನೆಲ್ಲ ಸಂಗ್ರಹಿಸಿದೆ. ಜಾನಪದ ಸಾಹಿತ್ಯ ಸಂಗ್ರಹ ಮಾಡುವ ನೀವು ಸಂಗ್ರಹ ಮಾಡಿ. ಅದನ್ನೊಂದು ಸಂಗ್ರಹ ಕಲೆ ಅಂತ ಹೇಳಿ. ಆದರೆ ಈ ಜನ ಯಾವ ಮೌಢ್ಯ ಹಾಗೂ ಅವಿಚಾರಕ್ಕೆ ವಶವಾಗಿ ಈ ಬಗೆಯ ಜೀವನವನ್ನು ನಡೆಸಿದರು ಎಂಬುದನ್ನು ಮಾತ್ರ ನೀವು ಹೇಳದೆ ಬಿಡಬೇಡಿ. ಜನಪದ ಸಾಹಿತ್ಯದಲ್ಲಿ ತಾಯಿ-ಮಗ, ತಾಯಿ-ಮಗಳು, ಗಂಡ-ಹೆಂಡತಿ ಇವರ ಸಂಬಂಧವನ್ನು ಕುರಿತ ವಿಷಯಗಳು ಸಾಹಿತ್ಯವಾಗಿ, ಕಲೆಯಾಗಿ ಚೆನ್ನಾಗಿರಬಹುದು. ಆದರೆ ಅವುಗಳಲ್ಲಿರುವುದೆಲ್ಲ ನಿಜ ಎಂದು ತಿಳಿಕೊಬೇಡಿ. ಮತ-ಮೌಢ್ಯ-ಮೂಢನಂಬಿಕೆ_ಇವುಗಳನ್ನು ಹೇಳೋದು ಎಷ್ಟೇ ಸುಂದರವಾಗಿದ್ದರೂ, ಅದನ್ನು ಸಾಹಿತ್ಯ ಕಲೆ ಅಂತ ಮೆಚ್ಚಿದರೂ ಬದುಕಿಗೆ ವಿರೋಧವಾಗುವಂತ ಅಂಶಗಳನ್ನು ಸ್ವಾಗತಿಸಲೇಬಾರದು (ಉದಯವಾಣಿ. ದೀಪಾವಳಿ ಸಂಚಿಕೆ. ಡಿಸೆಂಬರ್ 25.1983)]]>

‍ಲೇಖಕರು G

7 January, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading