ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಳಿ ಬರುವೆಯ ಬಾಲ್ಯವೇ…

ರಾಸುಮ ಭಟ್

ಬಾಲ್ಯದ ನೆನಪು ಸದಾ ಚಿಮ್ಮುವ ಕಾರಂಜಿಯಂತೆ, ಎಂದಿಗೂ ಬರಿದಾಗದ ಅಕ್ಷಯ ಪಾತ್ರೆಯಂತೆ, ಮಳೆಗಾಲದ ಕಾಮನಬಿಲ್ಲಿನಂತೆ, ನಮಗೆ ಎಷ್ಟೇ ವಯಸ್ಸಾದರು ಕಣ್ಣ ಮುಂದೆ ಹಚ್ಚಹಸಿರಾಗಿರುತ್ತದೆ.ಬಾಲ್ಯವೆಂದರೆ ಹಾಗೆ ಮಕ್ಕಳ ಮನಸ್ಸು ಕಲ್ಮಶವಿಲ್ಲದ್ದು, ಮೇಲು – ಕೀಳು, ಜಾತಿ – ಕುಲ. ಬಡವ – ಶ್ರೀಮಂತ ಯಾವುದೇ ಬೇದಬಾವವಿಲ್ಲದೆ ಎಲ್ಲರೊಂದಿಗು ಕೊಡಿ ಬೆಳೆಯುತ್ತವೆ.

ಬಾಲ್ಯದಲ್ಲಿ ಗೆಳೆಯರೊಂದಿಗೆ ಅಟವಾಡುವಾಗ ಅವರು ತರುವ ತಿಂಡಿ-ತಿನುಸುಗಳನ್ನು ಹಂಚಿತಿನ್ನುವುದರಲ್ಲಿದ್ದ ಖುಷಿ ಎಂದಿಗು ಮತ್ತೆ ಸಿಗುವುದಿಲ್ಲ ಮತ್ತು ನಾನು ಯಾರೊದಿಂಗು ಸೇರಿದರು ಖಂಡಿಸದ ನನ್ನ ಅಜ್ಜಿ ಮತ್ತು ಮಾವಂದರಿದಾಗಿ ನನ್ನಲ್ಲಿ ಸಂಕುಚಿತ ಮನೋಭಾವಕ್ಕೆ ಜಾಗವಿಲ್ಲದೆ ಎಲ್ಲರೊಂದಿಗು ಸೇರಿ ಕೊಡಿ ಬಾಳುವುದನ್ನು ಹೇಳಿಕೊಟ್ಟ ನನ್ನ ಅಜ್ಜಿಯ ಬಗ್ಗೆ ಹೆಮ್ಮೆಯಿದೆ ಕಾರಣ ಅಕೆ ಅನಕ್ಷರಸ್ಥೆಯಾದರು ಅವಳಲ್ಲಿ ಜಾತಿಬೇದ, ಮೇಲು ಕೀಳು ಬಾವನೆಯಿರಲ್ಲಿಲ್ಲ.

ಬಾಲ್ಯದಲ್ಲಿ ಅಜ್ಜಿಯ ಮನೆಯಲ್ಲಿ ಕಳೆದ ಕಾಲ ನೆನದರೆ, ಮತ್ತೆ ಅ ದಿನಗಳು ಕಣ್ಣ ಮುಂದೆ ಮೂಡಿ ಬರುತ್ತವೆ. ಬೆಳ್ಳಿಗೆ ಎದ್ದು ಕಾಫಿ ಕುಡಿಯಲು ಹಟ ಮಾಡುತ್ತಿದ್ದು, ತುಂಬಾ ಕಾಫಿ ಸೇವನೆ ಮಗುವಾದ ನನ್ನ ಆರೋಗ್ಯಕ್ಕೆ ತೊಂದರೆಯೆಂದು, ಲೋಟದಲ್ಲಿ ಕಾಫಿಗೆ ನೀರು ಬೆರಸುತ್ತಿದ್ದ ನನ್ನ ಅಜ್ಜಿ, ಮನೆಗೆ ಬೇಕಾದ ದಿನಸಿ, ತರಕಾರಿಗಳನ್ನು ತರಲು ದೂರದ ಮಾರುಕಟ್ಟೆಗೆ ಹೋಗುತ್ತಾ, ಬರುವಾಗ ಬಿಸಿಲಿನಲ್ಲಿ ನನ್ನನು ಅರಾಮವಾಗಿ ಬರಲು ಬಿಟ್ಟು, ವಯಸ್ಸಾದ ನನ್ನ ಅಜ್ಜಿ ಯೆ ದಿನಸಿ ಚೀಲಗಳನ್ನು ಹೊತ್ತು ತರವುದು ನನ್ನ ಕಣ್ಣ ಮುಂದೆ ಬಂದಾಗ, ಆಕೆಯ ಕಷ್ಟ ನೆನದು ಕಣ್ಣು ರೋದಿಸುತ್ತದೆ.

ದುಂಡನೆಯ ಸೌಟಿನಲ್ಲಿ ರೊಟ್ಟಿ ತಟ್ಟಿಕೊಟ್ಟ ಅಜ್ಜಿ, ಅದನ್ನು ಮನೆಯ ಹೊಸಲಿನ ಮೇಲೆ ತಿನ್ನುತ್ತಾ ಇರಿವಾಗ, ಕಾಗೆ ಕಿತ್ತು ಕೂಂಡು ಹೋಗಿದ್ದು ಕನಸಿನಲ್ಲಿ ಕಂಡತೆ ಭಾಸವಾಗುತ್ತದೆ. ಬಾಲ್ಯದಲ್ಲಿ ಅಟವಾಡುವಾಗ ಅದ ಗಾಯಗಳಿಗೆ ಮುಲಾಮು ಹಚ್ಚಿದ, ಅಜ್ಜಿಯ ನಿಜವಾದ ಪ್ರೀತಿ ಬೇರೆಯಾರಿಂದಲು ದೊರೆಯುವುದು ಸದ್ಯಾವೆ.

ಜೊತೆಗೆ ಕುತು ಒಂದೇ ತಟ್ಟೆಯಲ್ಲಿ ಮಾವನೊಂದಿಗೆ ಉಟ ಮಾಡಿದ ಅನುಭವ, ಮಾವ ತೀರಿ ಹೋದರು ನನ್ನ ಕೊನೆಯ ತನಕ ಬಿಟ್ಟು ಹೋಗದು. ಕರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ, ಚಿಕ್ಕಮನ ಬಳಿ ಒದೆ ತಿಂದಿದ್ದು, ಒಮ್ಮೆ ರಾತ್ರಿಯಲ್ಲಿ ಕಬ್ಬನ್ನು ಕಡಿಯಲು ಹೋಗಿ ಕೈ ಬೆರಳನ್ನು ಕಡಿದುಕೊಂಡಾಗ, ನನ್ನನು ಎತ್ತಿಕೊಂಡು ಆಸ್ಪತ್ರೆ ಗೆ ಹೋಗುವಷ್ಟರಲ್ಲಿ ಚಿಕ್ಕಮನ ಸೀರೆ ಸಂಪೂರ್ಣ ಕೆಂಪಗಾಗಿದ್ದು  ನೆನದರೆ ಈಗಲೂ ಭಯವಾಗುತ್ತದೆ.

ಅಜ್ಜಿಯ ಕೊನೆ ದಿನಗಳಲ್ಲಿ ಬೇರೆ ಆಟವಾಡುವ ಮಕ್ಕಳನ್ನು ನೋಡಿ ನಾನೆಂದು ನನ್ನ ನೆನಪಲ್ಲಿ ಇದ್ದಿದ್ದು ಮತ್ತು ಕೊನೆಯ ಸಮಯದಲ್ಲಿ ನಾನು ಅವರ ಬಳಿ ಇಲ್ಲದಿದ್ದ ಕೊರಗು ನನ್ನ ಬದುಕಿನ ಕೊನೆಯವರೆಗು ಕಾಡುತ್ತದೆ.

 ಸಂಜೆಯಾದರೆ ಊರಿನ ಟೆಂಟುಗಳಲ್ಲಿ ಸಿನಿಮಾ ನೋಡಿದ್ದರ ಆನಂದದ ಮುಂದೆ, ಈಗಿನ ಮಾಲಿನಲ್ಲಿ ನೋಡುವ ಸಿನಿಮಾ ನಿರರ್ಥಕ. ನಮ್ಮ ಮನೆಯಲ್ಲಿ ಬಾಡಿಗೆ ಇದ್ದ  ಶಾಲೆಯ ಶಿಕ್ಷಕಿ, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಕಾಳಜಿ ವಹಿಸಿ ವಿದ್ಯೆ ಕಲಿಸಿದ್ದು ನನ್ನ ಭವಿಷ್ಯಕ್ಕೆ ತುಂಬಾ ಅನುಕೂಲವಾಯಿತು.

ಹಬ್ಬ ಹರಿದಿನಗಳಲ್ಲಿ ಎಲ್ಲಾ ಸಂಬಂಧಿಕರು, ಮಕ್ಕಳು  ಎಲ್ಲರೂ ಒಟ್ಟಿಗೆ ಸೇರಿದಾಗ ಆಗುವ ಆನಂದ ಈಗ ನೆನಪು ಮಾತ್ರ. ಬೇಸಿಗೆ ಬಂದರೆ ರಾತ್ರಿಯಲ್ಲಿ ಮನೆಯ ಹೊರಗಡೆ ಮಾವಂದಿರ ಜೊತೆಯಲ್ಲಿ ಚಂದ್ರನ ಬೆಳಕಿನಲ್ಲಿ ನಿದ್ರಿಸುವದರ ಮಜಾವೆ ಮಜಾ.

ಅಜ್ಜಿ ಮತ್ತು ಮಾವನ ನಿಧನದ ನಂತರ ತಂದೆಯ ಮನೆಗೆ ಬಂದ ನನಗೆ ಎಲ್ಲವು ಹೊಸದು, ಅಜ್ಜಿಯ ಮನೆಯಲ್ಲಿ ತೆಲಗು ಬಾಷೆ ಮಾತನಾಡುತ್ತಿದ್ದ ನನಗೆ ಕನ್ನಡ ಕಲಿಯುವುದು ಕಷ್ಟವಾಗಲ್ಲಿಲ್ಲ. ನನ್ನ ಅಜ್ಜಿಯಂತೆ ನನ್ನ ತಂದೆ ಕೊಡ ಓದದಿದ್ದರು, ಹೃದಯ ಶ್ರೀಮಂತಿಕೆ ಹೊಂದಿದ್ದ ನನ್ನ ತಂದೆಗು ಸಹ ಸಂಕುಚಿತ ಮನೋಭಾವವಿರಲ್ಲಿಲ್ಲ. 

ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣುತ್ತಿದ್ದ ನನ್ಮ ತಂದೆಯಿಂದ ಜಾತ್ಯಾತೀತ ತತ್ವಗಳನ್ನು ಮತ್ತು ಜಮೀನಿನಲ್ಲಿ ಕೆಲಸಕ್ಕೆ ಬರುತ್ತಿದ್ದ ಕೆಲಸದವರಿಗಿ ಕೆಲಸ ಮುಗಿಸಿ ಬೇಗ ಹೋಗಲು ಹೇಳುತ್ತಿದ್ದ ನನ್ನ  ತಂದೆಗೆ ಪಕ್ಕದ ಜಮೀನಿನವರು ಕೆಲಸದವರನ್ನು ಬೇಗ ಕಳುಹಿಸಿದ್ದಕೆ ಟೀಕಿಸುತ್ತಿದ್ದರು. ನನ್ನ ತಂದೆಯಿಂದಾಗಿ ಸಮಾನತೆಯ ಬಾವ ನನಲ್ಲಿ ಮೂಡಲು ನೆರವಾಯಿತು.

ಪ್ರಾಣಿಗಳೆಂದರೆ ಇಷ್ಡ ಪಡುವ ನನ್ನ ತಂದೆಯಿಂದ ಅಹಿಂಸೆ, ಅಃತಕರಣ, ಕರುಣೆ ಮುಂತಾದ ಮೌಲ್ಯ ಗಳು ನನ್ನ ಅರಿವಿಗೆ ಬರುವಂತಾಯಿತು. ನನ್ನ ಬಾಲ್ಯದಲ್ಲಿ ಸಂಧಿಸಿದ ಪ್ರತಿಯೊಬ್ನರಿಂದ ಒಂದೊಂದು ಪಾಠ ಕಲಿಯುವ ಅವಕಾಶ ದೊರತು ಓಬ್ಬ ಉತ್ತಮ ಪ್ರಜೆಯಾಗಲು ಈ ಎಲ್ಲಾ ಅಂಶಗಳು ನನ್ನ ನೆರವಿಗೆ ಬಂದಿವೆ.

ಬಾಲ್ಯದ ನೆನಪು ಮನಸ್ಸಿನಲ್ಲಿ ಮಲಗುವುದೇ ಇಲ್ಲ, ಅದು ಯಾವಾಗಲೂ ನನ್ನನು ಎಚ್ಚರಗೊಳಿಸುತ್ತಲೆ ಇರುತ್ತದೆ. ಬಾಲ್ಯವನ್ನು ನೆನದು ಅನಂದಿಸಲು ಮಾತ್ರ ಸಾಧ್ಯ. ಅದು ಮರಳಿ ಬರಲು ಸಾಧ್ಯವೆ. ದೇವರು ಎದುರಿಗೆ ಬಂದು ಏನು ಬೇಕು ಕೇಳು ಎಂದರೆ ನನ್ನ ಬಾಲ್ಯವನ್ನು ಮರುಕಳಿಸು ಎಂದೂ ಕೇಳಲುವ ಅಸೆ. ಮತ್ತೆ ಬಾ ಬಾಲ್ಯವೆ ನಿನಗಾಗಿ ಕಾದಿರಿವೆ.

‍ಲೇಖಕರು Admin

13 March, 2022

1 Comment

  1. T S SHRAVANA KUMARI

    ನೆನಪಿನ ಮೆರವಣಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading