-ಸೂತ್ರಧಾರ ರಾಮಯ್ಯ
“ನೀವು ಎಷ್ಟಾದರೂ ಬೈರಪ್ಪಾ; ನಮಗೆ ಬ್ಯಾಸರಿಲ್ಲ. ಜನರ ಸೇವೆಯಿಂದ ‘ದೂರ ಸರಿದರೂ’ ಚಿಂತಿಲ್ಲಾ, ಅಧಿಕಾರ ಒಂದಿದ್ದರೆ ಸಾಕು ನಮಗಾ” ಅನ್ನೋ ಮನೋಭಾವದ ರಾಜಕಾರಣಿಗಳು ಇದ್ದಾಗ, ದಿನನಿತ್ಯವೂ ಹೈ ಡ್ರಾಮ, ಕಪಟನಾಟಕ,ದೊಂಬರಾಟ,ಆಪರೇಶನ್ ಸರ್ಕಸ್ ಗಳು ಇರುವಂತದೆ.
ಒಟ್ಟಾರೆ ಪ್ರಜಾಮತ ವನ್ನು ಕಡೆಗಣಿಸಿ ಅಲ್ಪಮತ-ಬಹುಮತಗಳ ‘ಜೂಟ್ ‘ ಆಟದಲ್ಲಿ ‘ಗೆದ್ದವರು’ ತಾವೇ ಅಂತ ಒಂದೊಂದು ದಿನ ಒಂದೊಂದು ಪಕ್ಷದವರು v -ಕಾರದಲ್ಲಿ ಬೆರಳೆತ್ತಿ ತೋರುವುದು ನಗೆಪಾಟಲಿಗೆ ಗುರಿಯಾದರೂ,ರಾಜ್ಯಧಿಕಾರದ ರೊಟ್ಟಿ ಜಾರಿ ಭಂಡ-ವಾಳಶಾಹಿಗಳ ತುಪ್ಪದ ಬಟ್ಟಲಿಗೆ ಬಿದ್ದಿದ್ದು, ಮನೆಯೊಡೆಯ ಮನೆಯೊಳಗೆ
ಇದ್ದಾನೋ ಇಲ್ಲವೋ ಎಂಬಂತ ಸನ್ನಿವೇಶವನ್ನು ಸೃಷ್ಟಿಸಿವೆ. ಅಧಿಕಾರವಿಲ್ಲದೆ ಇರುವ ತಾಳ್ಮೆ ಉ’ಭಯ’ ಪಕ್ಷಗಳಿಗೂ ಇದ್ದಂತಿಲ್ಲ.ರಂಗೋಲಿ ಕೆಳಗೆ ತೂರುವ ಅಸಹಜ ಅಧಿಕಾರ ಗ್ರ -ಹಣ.
ಭಿನ್ನ ಮತವೆಂಬ ಇಲಿಯನ್ನು ಮರಿ ಇದ್ದಾಗಲೇ ನಿವಾರಿಸಿಕೊಳ್ಳುವುದು ಬಿಟ್ಟು, ಅದು ಹೆಗ್ಗಣವಾದನಂತರ ಪಾಷಾಣ ನೀಡಿ, ರಾಜ್ಯಕ್ಕೆಲ್ಲಾ ದುರ್ವಾಸನೆ ಹಬ್ಬಿಸಿ, ನಮ್ಮ ಹಿರಿಯ ಗಣತಂತ್ರವನ್ನು ಉಳಿಸುವ ಕಸರತ್ತು
ಬಹುತೇಕ ಸ್ವಯಂ ಕೃತ ಅಪರಾಧವೇ.
‘ಬಹುಮತ ಇಲ್ಲ’ ಎಂಬ ದೂರನ್ನು ದಿಲ್ಲಿಗೊಯ್ದು, ಇನ್ನೇನು ಕುರ್ಚಿ ಸೋನಿಯ ರ್ ಅನ್ನುತ್ತಿರುವಾಗಲೇ, ‘ಬಹು’ ಮತ್ ಅಂದದ್ದು, ವಿಶ್ವಾಸವನ್ನು ಮರಳಿ ಪಡೆಯಲು ರಾಜ್ಯಪಾಲರು ಭಾರದ ಮನಸ್ಸಿನಿಂದ ಹಸಿರು ಧ್ವಜ ತೋರಿದ್ದು, ‘ನೂರಾರು’ ಅಪನಂಬಿಕೆಗಳನ್ನು ಒಡಲಲ್ಲಿ ತುಂಬಿಕೊಂಡು ಗೆದ್ದೆನೆಂದು ಆಡಳಿತ ಪಕ್ಷ ಬೀಗುತ್ತ ಆಯಾರಾಂ ಗಯಾರಾಂ ಗಳೆನ್ನುವ ಮಣ್ಣು ಕುಂಡೆಗಳನ್ನು ನಂಬಿಕೊಂಡು ನಿರಿಗಿಳಿದಿರುವುದು ನೋಡಿದರೆ ಅಂಕದ ಪರದೆ ಜಾರಿಲ್ಲ ,ಇನ್ನೂ ಸಾಕಷ್ಟು ದೃಶ್ಯಗಳಿವೆ ಇದು ‘ರಂಗ ನಿರಂತರ’ ಎಂಬ ಸಂದೇಶವನ್ನು ಜನರಿಗೆ ಮುಟ್ತಿಸುತ್ತಿವೆ. ಒಟ್ಟಾರೆ ದೇಶದ ಜನರೆಲ್ಲರ ಬಾಯಲ್ಲೂ ಕರನಾಟಕ ಮಾತೇ!
]]>
ಮನೆ ಒಡೆಯರ ಸ್ಥಾನದಲ್ಲಿ 'ಮನಿ ' ಒಡೆಯರು!…
ನಿಮಗೆ ಇವೂ ಇಷ್ಟವಾಗಬಹುದು…





0 Comments