ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನುಷ್ಯರು ಇಷ್ಟೊಂದು ಕ್ರೂರಿಗಳಾಗಲು ಸಾಧ್ಯವೇ?

ವಷ೯ದ ಸತತ ಓದು, ಅಧ್ಯಯನ, ಮಾಹಿತಿ ಸಂಗ್ರಹ, ಬರವಣಿಗೆಯ ನಂತರ ನಾಝಿ ನರಮೇಧ ಪುಸ್ತಕ ಪ್ರಕಟಣೆಗಾಗಿ ಸಿದ್ದವಾಯಿತು.

ಮೊದಲ ಓದಿಗೆಂದು ಕೃತಿಯ ಕರಡನ್ನು ಆಪ್ತಸ್ನೆಹಿತೆ ಹಾಗೂ ಸಂವೇದನಶೀಲ ಬರಹಗಾತಿ೯ಯೊಬ್ಬರಿಗೆ ಕೊಟ್ಟೆ.

ಮರುದಿನವೇ ಅವರ ಫೋನ್ ಬಂತು : – ನಾನು ಇಡೀ ರಾತ್ರಿ ಮಲಗಲಿಲ್ಲ, ಮನುಷ್ಯರು ಇಷ್ಟೊಂದು ಕ್ರೂರಿಗಳಾಗಲು ಸಾಧ್ಯವೇ ಎಂದೆನಿಸಿತು. ಒಂದೆರಡು ಅಧ್ಯಾಯಗಳ ಓದಿನಲ್ಲಿಯೇ ಹೊಟ್ಟೆ ತೊಳೆಸಿದಂತೆ ಭಾಸವಾಗತೊಡಗಿತು. ಇನ್ನು ಮುಂದಿನದ್ದನ್ನು ಓದುವುದು ಸಾಧ್ಯವಿಲ್ಲ ಎಂದೆನಿಸಿ ಪ್ರತಿಯನ್ನು ಮುಚ್ಚಿ ಬದಿಗಿಟ್ಟೆ. ಆದರೆ ನಿದ್ರೆ ಬರಲಿಲ್ಲ. ಏನೋ ಅಸಮಾಧಾನ, ಕಸಿವಿಸಿ. ಮುಂದೆ ಏನಾಗುತ್ತದೆ? ಎಂಬ ಕುತೂಹಲ ಮತ್ತೆ ಪುಸ್ತಕ ತೆರೆಯುವಂತೆ ಮಾಡಿತು.

“ನಿರಂತರ ಓದಿನಿಂದಾಗಿ ಬೆಳಗಾಗುವುದರಲ್ಲಿ ಕೊನೆಯ ಅಧ್ಯಾಯಗಳಲ್ಲಿ ಆಸ್ಕರ್ ಸಿಂಡ್ಲರ್ ಸಿಕ್ಕ. ಪುಣ್ಯಾತ್ಮ ಆತ. ಜ್ಯೂಗಳು ಇನ್ನೂ ಈ ಭೂಮಿಯ ಮೇಲೆ ಇರುವುದಕ್ಕೆ ಕಾರಣನಾದವನು. ಹಿಟ್ಲರ್ ನಂಥವರ ಸಂತತಿ ಅಳಿಯಲಿ, ಸಿಂಡ್ಲರ್ಸ್ ನಂಥವರ ಸಂತತಿ ಬೆಳೆಯಲಿ ಎಂದು ಒಂದೇ ಉಸಿರಲ್ಲಿ ಹೇಳಿದರು ಹಾಗೂ ಕೊನೆಗೆ ಇಂದಿನ ಆತಂಕಕಾರಿ ದಿನಮಾನಗಳ ಕೊನೆ ಹೇಗಾಗಲಿದೆ ? ಎಂಬ ಪ್ರಶ್ನೆಯಿಡುತ್ತ “ಹಿಂಸೆಯಿಂದ ಏನೂ ಸಾಧಿಸಲಿಕ್ಕೆ ಆಗದು” ಎಂಬುದನ್ನು ನಿಮ್ಮ ಈ ಪುಸ್ತಕ ಪ್ರಖರವಾಗಿ ನಿರೂಪಿಸುತ್ತದೆ” ಎಂದರು.

ಬೆಂಗಳೂರಿನ ಅಂಕಿತ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಗೆ ಸುಪ್ರಸಿದ್ಧ ಕಲಾಕಾರ ರಘು ಅಪಾರ ಮುಖಪುಟ ಬರೆದಿದ್ದಾರೆ.

ಆತ್ಮಿಯರೆ,
ನಾಝಿ ನರಮೇಧ ಕೃತಿಯು ಇದೇ ಭಾನುವಾರ ೧೯/೦೩ ರಂದು ಮುಂಜಾನೆ ೧೦.೩೦ ಕ್ಕೆ ಬೆಂಗಳೂರಿನ ವಾಡಿಯಾ ಭವನದಲ್ಲಿ ಡಾ. ಎಚ್. ಎಸ್. ವೆಂಕಟೇಶಮೂತಿ೯, ಜೋಗಿ ಹಾಗೂ ಇತರೆ ಗಣ್ಯರ ಉಪಸ್ಥಿತಿಯಲ್ಲಿ ಲೋಕಾಪ೯ಣೆಗೊಳ್ಳಲಿದೆ.

ಸಾಧ್ಯವಾಗುವ ಎಲ್ಲ ಸಹೃದಯರೂ ಹಾಗೂ ಅಂದು ಬೆಂಗಳೂರಿನಲ್ಲಿ ಇರುವ ಆತ್ಮೀಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿ…

ಇಂತಿ ನಿಮ್ಮ
ಗಿರೀಶ ಜಾಕಾಪುರೆ
೯೮೬೦೮೩೮೬೦೫

‍ಲೇಖಕರು avadhi

16 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading