ಸಾಯುತ್ತಾರೆಂದು ಕುಡಿಯದೇ
ಇರುತ್ತಾರೆಯೇ ಪಾಪಿ.
ಕಾಪಿ ಕುಡಿದವರೂ ಸಾಯ್ತಾರೆ
ಮದ್ಯಕ್ಕಿರಲಿ ಮಾಫಿ.
ಅಮೃತ ಕುಡಿದು ಅಮರರಾಗುವ
ದುರಾಶೆಯಿಲ್ಲ ನಮಗೆ
`ಮದ್ಯ’ಮ ವರ್ಗದವರು ನಾವು
ಗಡಂಗೇ ಗುಡಿಯೆಮಗೆ
-ಜೋಗಿ
ಇರುತ್ತಾರೆಯೇ ಪಾಪಿ.
ಕಾಪಿ ಕುಡಿದವರೂ ಸಾಯ್ತಾರೆ
ಮದ್ಯಕ್ಕಿರಲಿ ಮಾಫಿ.
ಅಮೃತ ಕುಡಿದು ಅಮರರಾಗುವ
ದುರಾಶೆಯಿಲ್ಲ ನಮಗೆ
`ಮದ್ಯ’ಮ ವರ್ಗದವರು ನಾವು
ಗಡಂಗೇ ಗುಡಿಯೆಮಗೆ
-ಜೋಗಿ
nilgiri | shetty.girija@gmail.com |
ನಿಮ್ಮ ಜೀವ ನಮ್ಮ ಸಂಪತ್ತು
ಕುಡಿದು ತಂದಿಟ್ಟುಕೊಳ್ಳಬೇಡಿ ಆಪತ್ತು
ಬರಬೇಡಿ ಸ್ವಂತ ಕಾರಲ್ಲಿ ಬಾರಿಗೆ
ಫೋನ್ ಮಾಡಿ 0800 ನಂಬರಿಗೆ
ಬಾರಿನದೇ ಕಾರಿದೆ ಬಾಡಿಗೆಗೆ
ವಾಪಸ್ಸು ಬಿಡುತ್ತೇವೆ ನಿಮ್ಮ ಮನೆಬಾಗಿಲಿಗೆ ![]()
ಶ್ರೀ ಹರ್ಷ | sreeharsha.bg@gmail.com |
ಬಾರು ಬಾರಿಗೂ
ಭೇಟಿ ನೀಡುವರು, ಪ್ರತೀ ಬಾರಿಗೂ
ನಿರೀಕ್ಷಿಸುತಾಮೃತ.
ಅವರಿಗೇನ್ಗೊತ್ತು, ಶೀಘ್ರದಲ್ಲಾಗುವರವರು ಮೃತ!!!
Raghavendra Joshi | joshi@vijayavittala.com |
ಮದ್ಯಸಾರ ಮದ್ಯಸಾರ
ನಿನ್ನೀ ಮಹಿಮೆ ಅಪಾರ
ಅದ್ಹೇಗೆ ಹಚ್ಚಿಬಿಟ್ಟೆ ಕಿಚ್ಚು
ನೋಡೀಗ ಜೋಗಿರಾಜರ ಕಾಳ್ಗಿಚ್ಚು!
for Jogi’s counter uvaachaa…..







ಓಹ್ಹೋ!! ಇಂಥದ್ದು ತುಂಬ ಓದಿದ್ದೀವ್ರೀ… ಕಳಪೆ ಪ್ರಾಸದ ಚುಟುಕುಗಳು ಯಾಕೆ ಹೇಳಿ? ಪೋಸ್ಟಿಂಗಿಗೆ ಏನೂ ಸಿಕ್ಕಿಲ್ಲವಾ?!
ಜೋಗಿಯವರೇ- ನೀವೂನೂ!!
ಬಾರಿ ಬಾರಿಗೂ ಬಾರಿಗೆ ಹೋದರೆ
ಬೀರು ದ್ಯಾವರ ನೈವೇದ್ಯ
with due respect and apologies to Avani
’ಅವನಿ’ಗೇನು ಗೊತ್ತು ಇದರ ಕಿಮ್ಮತ್ತು
ಮುತ್ತಿಗಿಂತ ’ಮತ್ತು’ಗಮ್ಮತ್ತು
to Jogi and others…let the ‘knock-out’ challenge continue.
GHA-ಗುಂಡು ಹಾಕದ ಅಸಾಮಿ-
ಕತ್ತೆ ಮುಂದೆ ಇಟ್ಟು ನೋಡಿ
ವಿಸ್ಕಿ ಮತ್ತು ನೀರು
ಕತ್ತೆ ವಿಸ್ಕಿ ಮುಟ್ಟೋದಿಲ್ಲ
ಕುಡೀತದೆ ನೀರು
GHA- ಗುಂಡು ಹಾಕುವ ಅಸಾಮಿ-
ಹೇಳಿ ಕೇಳಿ ಕತ್ತೆ ಅದು
ವಿಸ್ಕಿ ರುಚಿ ಗೊತ್ತಿಲ್ಲ
ನೀರಾ ಬಿಟ್ಟು ನೀರು ಕುಡಿಯೋಕೆ
ನಾ ಕತ್ತೆ ಅಲ್ಲವಲ್ಲ
ಹಾಗೆ ನೋಡಿದರೆ ನಯನಿ…
ಅನ್ನುತ್ತಾಳೆ ಈ ಅವನಿ-
ನಾನೂ ನೀನೂ ಸೇರಿ ಒಂದು ಪ್ರಾಸವಾದೇವು
ಜೋಡಿಸಿಬಿಟ್ರೆ ಕೇಳೋರ ಕಿವಿಗೆ ತ್ರಾಸವಾದೇವು!
ಮತ್ತು ಮುತ್ತು ಗಮ್ಮತ್ತಂತ ಪದ್ಯ ಆಗೋ ಹಾಗಿದ್ರೆ
ಆಕಳಿಸೀತು ಪದ್ಯ, ಇನ್ನು ತೂಕಡಿಕೆ ನಿದ್ರೆ !!
ಮದ್ಯಸಾರಸ ನೆವ ಎಲ್ಲೆಲ್ಲೋ ಹೋದಂತಿದೆ. ಆ ಕ್ಷಣದ ಪ್ರತಿಕ್ರಿಯೆಗೆ ಕ್ಷಮೆಯಿರಲಿ, ನಯನಿ.
hey Avani, all in the game da. no problem, 🙂
naynee
ಅಯ್ಯೋ ’ಕುಡಿ’ಯದ ’ಮಡಿ’ಗಳ
ಕಾರುಭಾರೇ!
’ಬಾರು’ ಏನು ’ಕಾರೇ’-
ದಡ ಸೇರಿದ ಮೇಲೆ ಡ್ರೈವರ್ … ಅನ್ನಲಿಕ್ಕೆ!
’ಬಾರು’ ಸೀ ಶೋರು
ಹಿಂದಿಕ್ಕಿದ ತೆರೆಗಳು ಮರಳಿ
ಬರುವುದು ಷೂರು!
ಇರಲಿ ನಿಮಗೆ ನಿಮ್ಮ
ತಕರಾರು
’ಮಧ್ಯ’ವಿದ್ದಲೆಲ್ಲಾ
ನಮ್ಮೂರು.