ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಮ್ಮೆ ಕದಡಿದ ನೀರಾ-ರಾಡಿಯಾ ಜ(ಜಾ)ಲವ!

-ಸೂತ್ರಧಾರ ರಾಮಯ್ಯ

ಉತ್ತರಾಭಾದ್ರ: ಓಹೋಹೋ ಐದು ವರುಷಕೊಮ್ಮೆ ಕೈಮುಗಿದು ಮತ್ತೆ ಬರುವೆವೂ… WOO ಎಕ್ಸಲೆಂಟ್! ಈಗೊಂದು ಸಣ್ಣ BRAYಕ್.ನೀವು ಕೇಳ್ತಾ ಇದ್ದೀರಿ ಎಫ್ ಎಂ ೮೪೦ ಬೈಟೂ, ರಾಡಿಯಾ ಮಿರ್ಚಿ; ಸಖತ್ ಫ್ಯಾಟ್ ಮಗ. ನಾನು ಉತ್ತರಭಾದ್ರ ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು, ನಮ್ಮ ನೆಚ್ಚಿನ ಡಾ: ಪುಡಾರಿ ಪುಂಡಲೀಕ ಅವರೊಂದಿಗೆ. “ಆದ್ರೂ ಅದೆಷ್ಟು ಓಪನ್ ಆಗಿ ಡಿಕ್ಲೇರ್ ಮಾಡ್ತೀರಾ ಸಾರ್ ಸತ್ಯ ಸಂಗತೀನಾ? ಪು.ಪುನ್: ಸತ್ಯವೇ ನಮ್ಮ ವೇ. ಗಾಂಧಿ ಅನ್ನೋ ಪುಣ್ಯ ಕೋಟಿ (ಕೋಟಿಯ) ಮಕ್ಕಳು ನಾವು ಅಂತಾ (ಸ್ವಗತ :ಇನ್ ಕಮ್ ಟ್ಯಾಕ್ಸ್ ರೇಡ್ಗಳೇ ಹೇಳ್ತವೆ) ದೇಶದ ಜನಗಳಿಗೆ ಗೊತ್ತಿದೆ. ಇನ್ತಹ ತಹ ತಹ ಪಿತ್ತಾವರಣದಲ್ಲಿ, ಕ್ಷಮಿಸಿ..ವಾತಾವರಣದಲ್ಲಿ ಲಕ್ಷಗಳನ್ನು ಇಟ್ಟುಕೊಂಡು ರಾಜಕಾರಣ ಮಾಡೋ ಕಾಲ ಹೋಯ್ತು! ರಾಜಕಾರಣಕ್ಕೆ ಬಂದ ಹೊಸದರಲ್ಲಿ ಗಾಂಧಿ ಹೇಳಿದ ಮೂರೂ ಇಟ್ಟುಕೊಂಡು ದೊಡ್ದವರಾಗಿದ್ದೆವು. ಈಗ ಆ ಮೂರೂ ಬಿಟ್ಟವರಷ್ಟೇ ದೊಡ್ಡವರಾಗೋದು ಐ ಮೀನ್ ‘ಕೆಟ್ಟದ್ದನ್ನು ನೋಡೇ ,ಆಡೇ, ಕೇಳೆ ‘. ಆದರೂ, ಎಲ್ಲಾ ಡಿಕ್ಲೇರ್ ಮಾಡ್ತೀವಿ ಅಂದ ಮಾತ್ರಕ್ಕೆ ನಮ್ಮ ಆಸ್ತಿ ಪಾಸ್ತಿ ವಿವರನೆಲ್ಲ ನೀಡಬೇಕು ಅಂತಾರಲ್ಲ, ಆಯುಕ್ತರು? ಲೋಕದ ಡೊಂಕ ತಿದ್ದಲಿ, ನಮ್ಮ ತಕರಾರಿಲ್ಲಾ. ಆದ್ರೆ, ನಮ್ಮ ಮೂಲಕವೇ ಬಂದು ನಮ್ಮ ಮೂಲಕ್ಕೂ ಹಾಕೋದೆ ಗುದ್ದಲಿ! ಲೋಕದ ಯುಕ್ತಾ ಯುಕ್ತತೆಯಿಂದ ನಾವು ಮುಕ್ತರನ್ನೋದನ್ನು ಬಾಯಿ ಬಿಟ್ಟು ಡಿಕ್ಲೇರ್ ಮಾಡಬೇಕಾಗಿದೆ. ಎಂಥಾ ಬ್ಯಾಸರ ನೋಡ್ರಿ ಸರಾ! ಉ.ಭಾ: ಛೆ,ಛೆ ಇಲ್ ಬಿಡ್ರೀ. ಋಷಿ ಮೂಲ, ನದಿ ಮೂಲ, ಪುಡಾರಿ ಪ್ರಾಪರ್ಟಿ ಮೂಲ ಕೇಳಬಾರದು ಬಿಡ್ರೀ. ಯಾಕಂದ್ರೆ ಅವೆಲ್ಲಾ ಒಂಥರಾ ‘ನೋನ್ ಸೋರ್ಸ್ ಆಫ್ ಇನ್ ಕಮ್’. ಜಗತ್ತಿಗೇ ಗೊತ್ತಿರೋ ಸಂಗತಿ. ಸ್ವಗತ: ಸಾರ್ವಜನಿಕ ಸೋರ್ಸ್ ಗಳಿಂದ ಸೋರಿಸ್ ಕೊಂಡಿದ್ದು ಅಂತಾ . ಪು.ಪುನ್: ಹಹ್ಹಹ್ಹ..,ಅವರು ಕೇಳಿದ್ರೂ ಎಲ್ಲವನ್ನು ನಾವೆಲ್ಲಿ ಡಿಕ್ಲೇರ್ ಮಾಡ್ತೀವ್ ಬಿಡ್ರೀ. ಇರಲಿ ಹಾಕ್ರಲ್ಲ ಮುಂದಿನ ಗೀತೇನಾ. ಉ.ಭಾ: ಪ್ರಿಯ ಶ್ರೋತೃಗಳೇ ,ಇದೀಗ ನೀವು ಕೇಳಲಿರುವ ಗೀತೆ ಕನ್ಯಾ- ಕುಮಾರಿಯಿಂದ ದೆಹಲಿವರೆಗೆ ಧುಮ ಧುಮ ಧೂಮ್ ಮಚಾಯಿಸಿರುವ ‘ರಾಮ್ ಔರ್ ಸ್ಕ್ಯಾಮ್’ ಚಿತ್ರದ್ದು. ಕೇಳಬೇಕಂತೆ ಹಾಸನದ ಹತಾಶ್, ಬಿಡದೀ ಮಾಯೆಣ್ಣ, ಕಾನ್ ಕಾನ್ ಹಳ್ಳಿ ಶಿವಪುತ್ರ, ಸೋಲೂರ ವಿಜಯಕುಮಾರ್ ಮತ್ತವರ ಸೋದರಿಯರಾದ ವಿಶಾಲಾಕ್ಷಿ, ಕಮಲಾಕ್ಷಿ, ರಕ್ತಾಕ್ಷಿ. ಗೀತೆಯನ್ನು ಹಾಡಿದ್ದಾರೆ, ಹಾಡ್ತಾನೆ ಇದ್ದಾರೆ ಶ್ರೀಕಂಠ ಶೋಷಣ್. A ರಾಜಕತೆಯ ತುಂಬಿ ತುಳುಕಿತೇಕೆ ದೇಶದಿ ಈ ಸ್ಕ್ಯಾಮು ನ್ಯಾಯವೇ? ಆದರ್ಶ ಈ ದೇಶ ಎಂದೂ ಲೋಕ ನಮ್ಬಿದೇ. ಎರಾಜಕತೆಯೇ ಬೇಲಿ ಎದ್ದು ಹೊಲವ ಮೇಯೆ ನ್ಯಾಯವೆಲ್ಲಿದೆ? ಕಾಯೋ ಮಂತ್ರಿ ತೋಳನಾಗೆ ಎಲ್ಲಿ ರಕ್ಷಣೆ. ಭ್ರಷ್ಟರೆಡೆಯಲಿ ನಮಗಿಲ್ಲ ಭದ್ರತೆ; ನಾಯಕರೆ ಮೂರು ಬಿಟ್ಟರೆ, ..ಈ ಸ್ಕ್ಯಾಮು ನ್ಯಾಯವೇ? Aರಾಜಕತೆಯೇ ಉ.ಭಾ: ಮಾನ್ಯ ಪುಂಡಲೀಕ ಅವರೆ,ಇದೀಗ ದೇಶದಲ್ಲಿ ನಡೆದಿರೋ ಹಗರಣಗಳ ಬಗ್ಗೆ ನಿಮ್ಮ ಅನಿಸಿಕೆ ಏನು? ಪು.ಪುನ್: (ನಿಡಿದಾದ ಉಸಿರು ಬಿಟ್ಟು) ವೆರಿ ವೆರಿ ಅನ್ ಫಾರ್ಚೂನ್ ಏಟ್! (ಸ್ವಗತ:ಶ್ರಮವಹಿಸಿ ಹೊಡೆದ ಸಂಪತ್ತನ್ನೆಲ್ಲಾ ವಾಪಸ್ ಕಕ್ಕಬೇಕಾಗಿರೋದು) ಅಲ್ಲಾ, ದಾಖಲೆಗಳ ಸಮೇತ ರೆಡ್ ಹ್ಯಾಂಡ್ ಡೆಡ್ ಆಗಿ ಸಿಕ್ಕಿ ಹಾಕಿ ಕೊಳ್ಳೋದು. ಮತ್ತೆಮಾರೋದು ಛೆ. ರಾಜಕಾರಿಣಿಗಳ ಕುಲಕ್ಕೇ ಅವಮಾನ. ತಲೆ ಇರೋದೇ ದಂಡ!ಅಕ್ಕ ಪಕ್ಕ, ಹಿಂದೆ ಮುಂದೆ. ಊಪರ್ ನೀಚೆ ಮೊಬೈಲ್ ಹಿಡಕೊಂಡು, ಹಿಡನ್ ಕ್ಯಾಮರಾ ಹಿಡಕೊಂಡು, ಪೆನ್ನು ಪ್ಯಾಡು ಮೈಕ್ ಹಿಡಕೊಂಡು ಹೆಜ್ಜೆ ಹೆಜ್ಜ್ಜೆಗೂ ವಿಶ್ವ ಮಿತ್ರರ ಶಿಷ್ಯರೇ ವಿಜ್ರುಮ್ಭಿಸಿರುವಾಗ, ಹೋಗಿ ಹೋಗಿ ನಗಾರಿಗೇ ಮುತ್ತು ಕೊಟ್ರೆ, ಅವರು ಲೋಕಕ್ಕೆ ತಿಳಿಸದೇ ಇರ್ತಾರಾ? ಒಟ್ಟಾ ಕಾಲ ಕೆಟ್ಟು ಹೋಯ್ತು ಬಿಡ್ರಿ! ಉ.ಭಾ: ಅಂದರೆ ನಿಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ ಅಂತಾನಾ? ಪು.ಪುನ್: ಇದ್ರೂ ಸ್ವಲ್ಪು ಸ್ಟ್ಯಾಂಡರ್ಡ್ ಮೆಂಟೈನ್ ಮಾಡಿದ್ವಿ. ಆದ್ರೆ ಆ ಸ್ಟ್ಯಾಂಡರ್ಡ್ ಈಗ ‘ಡಬಲ್’ ಆಗಿಬಿಟ್ಟಿದೆ ನೋಡಿ. ಮುಖ್ಯವಾಗಿ ಜನರ ಹತ್ತಿರವೇ ಇದ್ದು ಅತಿ ವಿನಯದಿಂದ ಇರತ್ತಿದ್ದಿವಿ, ಒಂದೀಟು ಶೋ ಷಲಿಸ್ಮ್ ಇದ್ರುನುವೆ. ಆದರೆ ವಿರೋಧ ಪಕ್ಷದವರ ಜೊತೆ ಒಳಗೊಳಗೇ ಒಂಥರಾ ಅಂದರ್ ಆಈಮೀನ್ ‘ಅಂಡರ್ಸ್ಟ್ಯಾಂಡಿಂಗ್’ ಇರ್ತಿತ್ತು. ಒಂದು ಪಕ್ಷ- ಕುರ್ಚಿಯಿಂದ ಕೆಳಗೆ ಹೋಗಿ ನಿಂತರೂ, ಈ ಇನ್ಕಮ್ ಬೆನ್ಸಿ ಫ್ಯಾಕ್ಟರ್ ನಿಂದ ಅಥ್ವಾ ಆಳುವ ಪಕ್ಷದ ಹಾಳ್ವಿಕೆಯಿಂದ ಪರ್ಯಾಯವೆನ್ಬಂತೆ ಪೀಠ ವಿರೋಧ ಪಕ್ಷಕ್ಕೆ ಬಂದುಬಿಡ್ತ್ಹಿತ್ತು . ಆದರೆ ಈಗ ಈ ‘ಇನ್ವೆಸ್ಟ್ಮೆಂಟ್’ ಕಲ್ಪನೆ ಬಂದೇ ಬಂತು ; ಇನ್ ಕಮ್ ಬೆನ್ಸಿ ಫ್ಯಾಕ್ಟರ್ ಅತಿಯಾಗಿ ಚುನಾವಣೆಯಲ್ಲಿ ಎಲ್ಲಿ ಚಲಾವಣೆ ಆಗಿ ಮತ್ತೆ ಅಧಿಕಾರ ಕನಸಾದೀತೋ ಅನ್ನೋ ಆತಂಕ ವಿರೋಧಿಗಳಿಗೆ ಹೆಚ್ಹಾದಿದ್ದೆ; ಹಳೆ ಕಾಲದ ಅಂದರ್ ‘ಸ್ಟ್ಯಾಂಡ್’ ಮುರಿದು ಬಿದ್ದು, ಒಬ್ಬರಿ ಗೊಬ್ಬರು ಹಗರಣಗಳ್ನ ಬಯಲುಮಾಡ್ತಾ, ಹಗೆ ರಣಗಳನ್ನ ಹೂಡ್ತಾ ಇರೋದು. ನಾವು ಹೀಗೆಲ್ಲಾ ಬುಡಕ್ಕೆ ಕೊಡಲಿ ಹಾಕಿ, ಜನ ಜೀ- ವನಕ್ಕೆ ಧಕ್ಕೆ ತರ್ತಾ ಇರ್ಲಿಲ್ಲಾ, ಮರದ ತೊಗಟೆಗೆ ಸೀಮಿತ. ಏನ್ರಿ ಈಗಿನ ನಾಯೆಕ್ಕರು; ಗೊಮಾಳೆ ಹರಿಯೋದನ್ನು ಲೆಕ್ಕಿಸದೆ ಊರುಗಳ ಗೋಮಾಳಗಳನ್ನೂ ನುಂಗ್ತಾ ಇದ್ದಾರೆ! ಏನು ವಿಚಿತ್ರಾ ಅಂತೀನಿ ? ಸರಿ. ಮುಂದಿನ ಚಿತ್ರ ಗೀತ ಯಾವ್ದು. ಯಾರು ಕೇಳ್ಯಾರಾ ಒಂದೀಟ್ ಒದರ್ ಬಿಡ್ರಲ್ಲಾ. ಉ.ಭಾ: ಮುಂದಿನದು ಇನ್ನೂ ಮುಂದಕ್ಕಾ. NTR ನೆಕ್ಸ್ಟ್ ಟೈಮ್ ರಾಜ ಕಾರಣಿಗಳೇ.  ]]>

‍ಲೇಖಕರು G

22 December, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading