ನಮ್ಮ ಇಡೀ ಟೀಮಿನವರು ಯಾಕೊ ಯದ್ವಾ ತದ್ವಾ ಖುಷಿಯಲ್ಲಿದ್ದಾರೆ.
ಅಬ್ಬ!!! ಅಂದುಕೊಂಡ ಹಾಗೆ ಕೆಲಸಗಳು ಆದಾಗ ಆಗುವ ಖುಷಿ, ನೆಮ್ಮದಿಯನ್ನು ಅನುಭವಿಸಿಯೆ ತಿಳಿಯಬೇಕೇನೊ… ನಾನು ನಮ್ಮ ತಂಡ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಕುರಿತು ರೂಪಿಸಿರುವ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರ ಡಿ.ವಿ.ಡಿ ರೂಪದಲ್ಲಿ ಹೊರಬರಲು ದಿನಗಣನೆ ಆರಂಭವಾಗಿದೆ. ಡಿ.ವಿ.ಡಿಯ ಹೊದಿಕೆಯ ವಿನ್ಯಾಸಗಳಿವು.
ಇಷ್ಟು ಸುಂದರವಾದ ವಿನ್ಯಾಸ ಮಾಡಿಕೊಟ್ಟ ಸ್ನೇಹಿತ ಮಹೇಶ್ ಎಣ್ಮೂರನಿಗೆ ಸಾವಿರ ಧನ್ಯವಾದಗಳು. ಹಾ ಅಂದ ಹಾಗೆ ಸುಚಿತ್ರ Film ಸೊಸೈಟಿಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಪ್ರದರ್ಶನವೊಂದನ್ನು ಮಾಡುವ ಸಾಧ್ಯತೆಗಳಿವೆ. ದಿನಾಂಕ ಸದ್ಯದಲ್ಲೇ ತಿಳಿಸುತ್ತೇವೆ. ನಮ್ಮ ಇಡೀ ಟೀಮಿನವರು ಯಾಕೊ ಯದ್ವಾ ತದ್ವಾ ಖುಷಿಯಲ್ಲಿದ್ದಾರೆ.








0 Comments