ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಕನ್ನಡಕ್ಕೆ ‘ಓಲ್ಗಾ’

ಕಾಲೇಜು, ಕ್ಲಾಸು, ಪ್ರ್ಯಾಕ್ಟಿಕಲ್ಸ್, ಪರೀಕ್ಷೆ ಇದೆಲ್ಲರ ನಡುವೆ ಪುಸ್ತಕ ಹೊರ ತರುವುದು ತುಂಬಾ ತಡವಾಯ್ತು. ಇದು ನನ್ನ ಮೂರನೆಯ ಅನುವಾದಿತ ಕೃತಿ. ‘ಪಲ್ಲವ ಪ್ರಕಾಶನ’ದಿಂದ ಪ್ರಕಟಗೊಳ್ಳುತ್ತಿದೆ.

ರಾಮಯಣದ ಅಲಕ್ಷಿತ ಸ್ತ್ರೀಪಾತ್ರಗಳ ಅಸ್ಮಿತೆಯನ್ನು ಸೀತೆಯ ಮುಖೇನ ಕಟ್ಟಿಕೊಡುವ ಈ ತೆಲುಗು ಕೃತಿಗೆ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಸಂದಿದೆ.

ಓಲ್ಗಾ ಅವರ ಕ್ರಾಂತಿಕಾರಿ ಬರಹಗಳು ಈಗಾಗಲೇ ಕನ್ನಡಿಗರಿಗೆ ಪರಿಚಿತ. ರಾಮಾಯಣವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸುವ ಈ ಕೃತಿಯ ಅನುವಾದವನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತೀರಿ ಎಂದುಕೊಂಡಿರುವೆ.

180 ಪುಟಗಳ ಈ ಕೃತಿ ಇಷ್ಟರಲ್ಲೇ ಲಭ್ಯವಾಗಲಿದೆ.

-ಅಜಯ್ ವರ್ಮಾ ಅಲ್ಲೂರಿ

‍ಲೇಖಕರು avadhi

20 May, 2019

2 Comments

  1. Vasundhara k m

    ಓದುವ ಕಾತರಗಳೊಂದಿಗೆ…

  2. ಅಜಯ್ ವರ್ಮಾ ಅಲ್ಲೂರಿ

    ಈ ಸಂಕಲನದೊಳಗಿನ ಕೆಲ ಕತೆಗಳನ್ನು ಪ್ರಕಟಿಸಿ ಸಹೃದಯ ಓದುಗರಿಗೆ ತಲುಪಿಸಿದ ಅವಧಿ ತಂಡಕ್ಕೆ, ಜಿ.ಎನ್.ಮೋಹನ್ ಸರ್ ಅವರಿಗೆ ಮನದಾಳದ ನೆನಕೆಗಳು.

    ನಿಮ್ಮ ಸಹಕಾರ ಮರೆಯುವಂತಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading