ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳಿಗಾಗಿ ಹೊಸ ಪುಸ್ತಕ: ನಮ್ಮ ಪುಟ್ಟ ಬೇಟೆಗಾರ!

ಪ್ರಥಮ್ ಬುಕ್ಸ್

ನಮ್ಮ ಪುಟ್ಟ ಬೇಟೆಗಾರ ಮೊದಲ ಸಲ ಮನೆಯಿಂದ ಹೊರಗೆ ಹೋಗಿದ್ದಾನೆ ದಾರಿ ಬಿಡಿ! ದಾರಿ ಬಿಡಿ! ಅಯ್ಯೋ ನಾವೆಲ್ಲಿ ಅದರ ದಾರಿಗೆ ಅಡ್ಡಲಾಗಿ ಕೂತಿದ್ದೇವೆ ಎಂದು ಅಕ್ಕ-ಪಕ್ಕ ನೋಡುತ್ತೀದ್ದೀರ? ಅಲ್ಲ, ಅಲ್ಲ, ಹಾಗಲ್ಲ, ಬೇಟೆಗಾರ ಮೊದಲ ಸಲ ಹೊರಗೆ ಹೋಗಿದ್ದಕ್ಕೆ ಸ್ವಲ್ಪ ಗಾಬರಿಯಾಗಿದ್ದಾನೆ. ನಿಮ್ಮಲ್ಲಿಗೆ ಬಂದರೆ ಸರಿ ದಾರಿ ತೋರಿಸಿ ನಮ್ಮಲ್ಲಿಗೆ ಕಳುಹಿಸಿ ಕೊಡಿ!

ಅಯ್ಯೋ ಏನೂ ತಿಳಿತಿಲ್ಲ. ಏನಿದು ಅಂತೀರ? ತಾಳಿ ಒಂದು ನಿಮಿಷ. ಒಂದು ಪುಟಾಣಿ ಬೆಕ್ಕು ಮನೆಯಿಂದ ಹೊರಗೆ ಬಂದಿದೆ. ಮೂರ್ತಿ ಚಿಕ್ಕದಾದರೂ, ಕೀರ್ತಿ ಕಡಿಮೆ ಅಂತ ಭಾವಿಸಬೇಡಿ! ಒಣಗಿದ ಎಲೆಯನ್ನು ಪುಡಿ ಪುಡಿ ಮಾಡಿ ಬಿಸಾಡಲು, ನಿಮಗೆ ಬರತ್ತಾ? ಇಲ್ಲ ಅಲ್ವ! ಒಬ್ಬರೆ ಇರಲು ಬೇಸರ ಅಂತ ನೀವು ಜೊತೆಗೆ ಹುಡುಕುತ್ತೀರ ಅಲ್ವ… ನಮ್ಮ ಧೀರ ಹಾಗೆಲ್ಲ ಮಾಡುವವನಲ್ಲ. ಯಾಕೆ ಅಂತೀರ? ಬನ್ನಿ, ಇಲ್ಲಿ ಅವನನ್ನು ಭೇಟಿ ಮಾಡಿಸುತ್ತೇನೆ.

ಅವನ ಧೈರ್ಯದ ಮುಂದೆ ನಿಮ್ಮ ಧೈರ್ಯಕ್ಕೆ ಬೆಲೆಯೆ ಇಲ್ಲ ಅನಿಸಿದರೆ ಕ್ಷಮೆ ಇರಲಿ. ಯಾಕೆ ಹೇಳಿ? ಅವನು ನಿಮ್ಮ ಪುಟ್ಟ ಬೇಟೆಗಾರನೂ ಹೌದು!

 

‍ಲೇಖಕರು avadhi

4 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading