( ಮಂಜುನಾರಾಯಣ್. ಕೆ.ಎಲ್ )
ದಟ್ಟ
ಕಾಡಿನಕ್ಕಿ
ಪುಟ್ಟ
ನಗರಕ್ಕೆ
ದೂಡಲ್ಪಟ್ಟು
ಬಂಗಾರದ
ಪಂಜರದಿ
ರಕ್ಷಣೆ ನೀಡಿ
ಸರಪಳಿಗಳ ಬಿಗಿದು
ಸಿಂಗರಿಸಲಾಯಿತು
ಹಾರಾಟಕ್ಕಾಗಿ
ಹೋರಾಡಿದ
ಹಕ್ಕಿಗೆ
ಸೂತ್ರೀಕರಿಸಿದಂತೆ
ಹಾರಾಡುವ
ಸ್ವಾತಂತ್ರ್ಯ
ಲಭಿಸಿದೆ
ಮಾಂಸ ತಿನ್ನುವ
ಕಾಡಿನಕ್ಕಿಗೆ
ಹಾಲು-ಅವಲಕ್ಕಿಯ
ಶ್ರೇಷ್ಟತೆಯ
ಶಿಕ್ಷಣ ನೀಡಿ
ಯಾರದೋ
ಕನಸು ಕಾಣುವಷ್ಟು
ಪರಕೀಯವಾಗಿದೆ
ಹಕ್ಕಿಯ
ರೆಕ್ಕೆಯ
ಪ್ರತಿಗರಿಯೂ
ಪ್ರತ್ಯೇಕತೆಯ
ಬಯಸಿ
ರೆಕ್ಕೆ
ಮುರಿದು
ಹಕ್ಕಿ
ಬಳಲಿ
ಪಕ್ಷಿಯೊಳಗಣ
ಪ್ರಾಣ ಪಕ್ಷಿಯು
ರೆಕ್ಕೆ ಬಿಚ್ಚಿದೆ
ಆದರೂ
ಹಾರಬಹುದೆಂಬ
ಭಯದಿ
ಪಂಜರ – ಸರಪಳಿಗಳ
ರಕ್ಷಣೆ
ಭದ್ರಪಡಿಸಿ
ಸ್ವಾತಂತ್ರೋತ್ಸವವನ್ನು
ಘೋಷಿಸಲಾಗಿದೆ
ಹಕ್ಕಿಯ
ಈ ಸ್ಥಿತಿಗೆ
ಅಳುವವರೇ
ಇಲ್ಲವಾಗಿದ್ದು
ಇಲ್ಲಿ
ಅಳುವುದನ್ನೂ
ನಿಷೇಧಿಸಲಾಗಿದೆ.








ಪ್ರಾಥಮಿಕ ಶಾಲೆಯಲ್ಲಿ ಓದಿದ “ನಾನು ಪಂಜರದ ಪಕ್ಷಿ” ನೆನಪಾಯಿತು