ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 10

ಪಾಲ್ಕೆ ಪ್ರಶಸ್ತಿ ಬಗ್ಗೆ...
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಮೊದಲ ಬಾರಿಗೆ ಒಬ್ಬ ಟೆಕ್ನಿಶಿಯನ್ ಗೆ ಕೊಟ್ಟಿದ್ದಾರೆ. ಅದನ್ನು ಇಷ್ಟು ವರ್ಷದ ನಂತರ ಹೇಗೆ ನಿರ್ಧಾರ ಮಾಡಿದರು ಎಂಬುದು ನನಗೂ ಅಚ್ಚರಿ. ಇದ್ದಕ್ಕಿದ್ದಂತೆ ಒಂದು ದಿನ ಮಿನಿಸ್ಟ್ರಿ ಆಫ್ ಇನ್ಫರ್ಮೇಶನ್ ಮತ್ತು ಬ್ರಾಡ್ಕಾಸ್ಟ್ ದೆಹಲಿಯಿಂದ ಫೋನ್ ಬಂತು. ಆರ್ ಯು ವಿ.ಕೆ.ಮೂರ್ತಿ? ಅಂತ ಕೇಳಿದರು. “Are you same V.K.Murthy who photographed with Gurudutt?” ಹೌದು ಅಂತಂದೆ. ಏನಾಗಬೇಕು ಹೇಳಿ ಅಂದೆ? ಇಲ್ಲ, ನಮಗೇನೂ ಆಗಬೇಕಿಲ್ಲ, ನಿಮಗೇ ಒಂದು ವಿಷಯ ತಿಳಿಸಬೇಕಿತ್ತು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ನೀವು ಆಯ್ಕೆ ಆಗಿದ್ದೀರಿ, ಕಂಗ್ರಾಟ್ಸ್ ಅಂದರು. ನನಗೆ ನಂಬಲಿಕ್ಕೆ ಆಗಲಿಲ್ಲ, ಯಾರೋ ಫೂಲ್ ಮಾಡ್ತಿದ್ದಾರೆ ಅನಿಸಿ, ಏನು, ಏನು, ಇನ್ನೊಮ್ಮೆ ಹೇಳಿ ಅಂತ ಕನ್ಫರ್ಮ್ ಮಾಡಿಕೊಂಡೆ. ಇದಾದ ಕೆಲ ದಿನಗಳಲ್ಲೇ ಗುಲ್ಬರ್ಗಾ ವಿ.ವಿ.ಯವರು ಡಾಕ್ಟರೇಟ್ ಕೊಡಬೇಕೆಂದು ಮುಂದೆ ಬಂದರು.

(ಬಳಿಕ ನಮ್ಮ ಮಾತು ಅವರ ಪತ್ನಿ ಸಂಧ್ಯಾ ಅವರ ಬಗ್ಗೆ ಹೊರಳಿತು. ಅವರ ಬಗ್ಗೆ ಕೊಂಚ ಮಾತಾಡಿ ಅಂದ್ವಿ ಅದಕ್ಕೆ ಅವರು ಅಂದಿದ್ದು ಇಷ್ಟು…) best kind of woman any man can have…in all respects. She was highly educated woman, her father is much more famous than me, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಪ್ರೀತಿ ಮಾಡ್ತಾ ಇದ್ರು. ಯಾವತ್ತೂ ಒಂಚೂರೂ ಅಹಂಕಾರ ಮಾಡಿದವರಲ್ಲ. ಯಾರನ್ನೂ ತಾರತಮ್ಯದಿಂದ ನೋಡಿದವರಲ್ಲ…… ಹೀಗೆ ಹೇಳುತ್ತಾ ಮೂರ್ತಿ ಅವರು ತಮ್ಮ ಹಿಂದಿನ ಬದುಕಿನ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಕೆಲಕ್ಷಣ ಮೌನಕ್ಕೆ ಜಾರಿದರು…

(ಹಿಂದಿ ಚಿತ್ರರಂಗದ ಅದ್ಭುತ ಕ್ಷಣಗಳನ್ನು, ಸನ್ನಿವೇಶಗಳನ್ನು ಸೆರೆ ಹಿಡಿದ ವಿ.ಕೆ.ಮೂರ್ತಿ ಅವರೊಂದಿಗೆ ನಾವು ಕಳೆದ ಸುಮಾರು ಎರಡು ತಾಸು ನಿಜಕ್ಕೂ ಅನನ್ಯ ಕ್ಷಣಗಳು. ಯಾವ ಭಿಡೆಯೂ ಇಲ್ಲದೆ, ನಮ್ಮೊಂದಿಗೆ ಚಿಕ್ಕ ಮಗುವಿನಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರಿಗೆ ನಮ್ ಟೀಮ್ನಿಂದ ಧನ್ಯವಾದ ಸಲ್ಲಿಸಲೇಬೇಕು)

‍ಲೇಖಕರು avadhi

28 December, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading