
ಬಿ ಎನ್ ನಂದಿನಿ
ರೀ ಪ್ರೀತಂ..
ಈ ಲವ್ ಅನ್ನೋ ಒನ್ ವೇ ರೋಡಲ್ಲಿ ಎದ್ವಾ ತದ್ವಾ ಸ್ಪೀಡ್ನಲ್ಲಿ ಓಡ್ಕೊಂಡ್ ಹೋಗಿ ಡೆಡ್ ಎಂಡ್ ಸಿಕ್ಕಿ ಮೂಗ್ ಜಜ್ಕೊಂಡು ಲೈಫ್ ಟೈಮ್ ಉಸ್ರಾಡ್ದಾಗ್ಲೆಲ್ಲ ಮತ್ತೆ ಮತ್ತೆ ನಿಮ್ನ ನೆನ್ಸ್ಕೊಂಡು ಮತ್ತೆ ಮತ್ತೆ ಲವ್ ಆಗಿ ಆ ಲವ್ವು ನೋವಿಗ್ ತಿರ್ಗಿ ತಲೇಲಿ ಉಳ್ದಿರೋ ಎರ್ಡೇ ಎರ್ಡ್ ನಟ್ಟು ಬೋಲ್ಟು ಕೂಡ ಬಿದ್ದ್ ಹೋಗಿ ಹುಚ್ಚಾಸ್ಪತ್ರೆಲಿ ಸೀಟ್ ಸಿಗ್ದೆ ಬಿಗ್ ಬಾಸ್ ಮನೆಗ್ ಹೋಗಿ ಹುಚ್ಚ ವೆಂಕಟ್ ತಂಗಿ ಅನ್ಸ್ಕೊಂಡು ಟಿವಿ ಚಾನೆಲ್ ನವ್ರ್ನ ಉದ್ದಾರ ಮಾಡಕ್ ನಿಮ್ಮಪ್ರಾಣೆ ಇಷ್ಟ ಇಲ್ಲಾ ರೀ.
ಬಿಟ್ಕೊಟ್ ಬಿಟ್ಟೇ ರೀ ಬಿಟ್ಕೊಟ್ ಬಿಟ್ಟೇ.. ರೀ
ಪ್ರೀತಂ ನಂಗೊತ್ತು ನೀವ್ ಬೈನಾಕುಲರು ಹಿಡ್ಕೊಂಡ್ ಬೀದ್ ಬೀದಿ ಸುತ್ತಿದ್ರು ನಿಮ್ಗ್ ನನ್ ಥರ ಹುಡುಗಿ ಸಿಕ್ಕಲ್ಲ ರೀ… ಆದ್ರೂ ಬಿಟ್ಕೊಟ್ಬಟೆ ರೀ. ನಿಮ್ ಅಪ್ಪ ಅಮ್ಮ ನೋಡೋ ಹುಡುಗೀನೆ ಮದ್ವೆ ಆಗಿ ಗುಜ್ರಿ ಅಂಗ್ಡೀನೂ ನಾಚ್ಕೊಳೋ ಲೆವೆಲ್ ಗೆ ಸಂಸಾರ ಮಾಡಿ ಒಳ್ಳೇ ಗಂಡ್ ಮುತ್ತೈದೆ ಅನ್ಸ್ಕೊಳ್ರೀ….. ಇನ್ಯಾವತ್ತು ನಿಮ್ ಸ್ಕ್ರ್ಯಾಪ್ ಮೂತಿನ ನಂಗ್ ತೋರ್ಸ್ಬೇಡ್ರಿ..





0 Comments