ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಮಿಯ ಮೋಹ ಮತ್ತು ವ್ಯಾಮೋಹ..

ಜಿ.ಪಿ.ಬಸವರಾಜು

ಚಿನ್ನವನ್ನು ಬಿಟ್ಟರೆ ಮನುಷ್ಯನನ್ನು ಗಾಢವಾಗಿ ಸೆಳೆದದ್ದು ಭೂಮಿಯೇ. ಜಗತ್ತಿನ ಬಹುಪಾಲು ಯುದ್ಧಗಳು ನಡೆದಿರುವುದು ಈ ಭೂಮಿಗಾಗಿಯೇ. ಪುರಾಣ, ಚರಿತ್ರೆಗಳಲ್ಲಿನ ಸಾವಿರಾರು ಪುಟಗಳು ಹೇಳುವುದು ಭೂಮಿಯನ್ನು ಗೆದ್ದವರ ಕಥೆಗಳನ್ನೇ. ಭೂಮಿ-ಮನುಷ್ಯನ ಸಂಬಂಧ ಬಹಳ ನಿಕಟವಾದದ್ದು; ಗಾಢವಾದದ್ದು. ಜೀವ ಚೈತನ್ಯವನ್ನು ಹೊಮ್ಮಿಸುವ ಅಪಾರ ಶಕ್ತಿಯನ್ನು ತನ್ನ ಒಡಲಲ್ಲಿರಿಸಿಕೊಂಡಿರುವ ಭೂಮಿ ಒಂದು ಚಿರಂತನವಾದ, ಅಕ್ಷಯವಾದ ಸಂಪತ್ತೆಂಬ ನಂಬಿಕೆಯು ಮನುಷ್ಯನಲ್ಲಿದೆ. ಈ ಕಾರಣದಿಂದಾಗಿಯೇ ಭೂಮಿಯ ಮೇಲಿನ ಮನುಷ್ಯನ ಮೋಹ ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಿದೆ.ಪ್ರಕೃತಿಯ ಜೊತೆ ಒಂದಾಗಿ ಬದುಕಿರುವ ಗುಡ್ಡಗಾಡು ಜನರಲ್ಲಿ, ಆದಿವಾಸಿ ಬುಡಕಟ್ಟುಗಳಲ್ಲಿ, ಅಲೆಮಾರಿ ಜನಾಂಗಗಳಲ್ಲಿ ಈ ಮೋಹ ಅಷ್ಟಾಗಿ ಇರುವಂತೆ ಕಾಣುವುದಿಲ್ಲ. ಭೂಮಿಯನ್ನು ಅವರು ಒಂದು ದೈವದಂತೆ ಪೂಜಿಸಿದರೂ, ಅದನ್ನು ಆಸ್ತಿಯಾಗಿ ಪರಿಭಾವಿಸುವ ಕಲ್ಪನೆ ಅವರಲ್ಲಿಲ್ಲ.

ಭೂಮಿಯ ಸಂಪತ್ತು ಎಲ್ಲರಿಗೂ ಸೇರಿದ್ದು, ಆದರೆ ಅದರ ಮೇಲಿನ ಒಡೆತನ ಯಾರಿಗೂ ಇಲ್ಲ ಎನ್ನುವ ಉದಾತ್ತ ತತ್ವವನ್ನು ಈ ಜನ ಸಮುದಾಯಗಳನ್ನು ನಂಬಿಕೊಂಡು, ರೂಢಿಸಿಕೊಂಡು ಬಂದಿವೆ. ಗಡ್ಡೆ ಗೆಣಸುಗಳನ್ನು, ಹಣ್ಣು ಹಂಪಲುಗಳನ್ನು ಬಳಸಿಕೊಂಡರೂ ಭೂಮಿಯ ಅಸ್ತಿತ್ವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಬದುಕುವ ಕಲೆಯನ್ನು ಈ ಆದಿಮ ಜನಾಂಗಗಳು ಕರಗತ ಮಾಡಿಕೊಂಡಿವೆ. ನಾಗರಿಕತೆ ಬೆಳೆದಂತೆಲ್ಲ ಈ ಕಲೆ ಕಣ್ಮರೆಯಾಯಿತು; ತತ್ವ ಗಾಳಿಯ ಪಾಲಾಯಿತು. ಭೂಮಿಯ ಮೇಲಿನ ಮನುಷ್ಯನ ದಬ್ಬಾಳಿಕೆ ಹೆಚ್ಚಾಯಿತು.ಈಗ ಭೂಮಿಯ ಮೇಲೆ ಬದುಕುವ ಮನುಷ್ಯನ ಸ್ವಾರ್ಥ ಯಾವ ಪರಾಕಾಷ್ಠೆಯನ್ನು ತಲುಪಿದೆ ಎಂದರೆ ಈ ಭೂಮಿ ತನಗೆ ಮಾತ್ರ ಸೇರಿದ್ದು; ಬೇರೆ ಯಾವ ಜೀವಿಗಳಿಗೂ ಭೂಮಿಯ ಮೇಲೆ ಹಕ್ಕಿಲ್ಲ ಎನ್ನುವ ಸ್ವಯಂ ಘೋಷಿತ ನಿಲುವಿಗೆ ಮನುಷ್ಯ ಬಂದು ತಲುಪಿದ್ದಾನೆ.ಕೃಷಿಗೆ ಅಂಟಿಕೊಂಡ ಮನುಷ್ಯನ ಭೂಮಿ ವ್ಯಾಮೋಹವನ್ನು ಅರ್ಥಮಾಡಿಕೊಳ್ಳಬಹುದು. ಉತ್ತಿ ಬಿತ್ತಿ ಗೊಬ್ಬರ ಕೊಟ್ಟು ಫಸಲು ತೆಗೆಯುವ, ಭೂಮಿಯ ಕಸುವನ್ನು ಪ್ರತಿ ಮುಂಗಾರಿಗೂ ಹೆಚ್ಚಿಸಲು ನೋಡುವ ಈ ಮನುಷ್ಯ ಭೂಮಿಯನ್ನು ಆಸ್ತಿಯಾಗಿ ಪರಿಭಾವಿಸಿದರೂ, ಭೂಮಿಯನ್ನು ರಕ್ಷಿಸಿಕೊಂಡು, ತಲೆಮಾರಿನಿಂದ ತಲೆಮಾರಿಗೆ ಈ ಆಸ್ತಿಯನ್ನು ಕೊಟ್ಟುಕೊಂಡು ಬಂದ ಕೀತರ್ಿ ಈ ಮನುಷ್ಯನಿಗೇ ಸಲ್ಲಬೇಕು. ಇವನು ಭೂಮಿಯನ್ನು ಬಳಸಿರುವುದು, ಅದರ ಸತ್ವವನ್ನು, ಫಲವನ್ನು ಪಡೆದಿರುವುದು ನಿಜವಾದರೂ, ಭೂಮಿಯ ಒಟ್ಟಂದಕ್ಕೆ ಪೆಟ್ಟುಕೊಟ್ಟವನಲ್ಲ ಇವನು. ಭೂಮಿಯನ್ನು ಅಗೆದಗೆದು, ಕೊರಕಲು ಮಾಡಿ, ಅದರ ಸತ್ವವನ್ನು ಬರಿದು ಮಾಡಿ ಅದನ್ನು ವಿಕಾರಗೊಳಿಸುವ ಕ್ರಿಯೆಗೆ ಇವನು ಎಂದೂ ತೊಡಗುವುದಿಲ್ಲ.  ಹೀಗಾಗಿಯೇ ಇವನ ಭೂಮಿ ಮೋಹ ಅಪಾಯಕಾರಿಯಾದದ್ದಲ್ಲ. ಆದರೆ ಭೂಮಿಯನ್ನು ತನ್ನೆರಡೂ ಕೈಗಳಿಂದ ಬಾಚಿಕೊಳ್ಳಲು, ನುಂಗಿ ನೊಣೆಯಲು ನೋಡಿದ ಇನ್ನೊಬ್ಬ ಮನುಷ್ಯನ ವ್ಯಾಮೋಹ ಇಡಿ ಜೀವಕುಲಕ್ಕೆ ಹೇಗೆ ಮಾರಕ ಎಂಬುದನ್ನು ತೋರಿಸಿಕೊಡುವ ಸಾವಿರಾರು ಪ್ರಕರಣಗಳು ಇವತ್ತು ನಮ್ಮ ಕಣ್ಮುಂದೆಯೇ ನಡೆಯುತ್ತಿವೆ.

ರೆಡ್ಡಿಗಳ ಗಣಿಗಾರಿಕೆ ಈ ಮಾದರಿಯ ಪ್ರಕರಣ; ಇತ್ತೀಚಿನ ಯಡೆಯೂರಪ್ಪ, ಕುಮಾರಸ್ವಾಮಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇತ್ಯಾದಿಯಾಗಿ ಹಲವರನ್ನು ಆವರಿಸಿರುವ ಭೂ ಕಬಳಿಕೆ ಪ್ರಕರಣಗಳು ಕೂಡಾ ಇದೇ ಮಾದರಿಯ ಪ್ರಕರಣಗಳು.ಕೊರಿಯಾಕ್ಕೆ ನಮ್ಮ ಭೂಮಿ ಬೇಕು. ಚೀನಾಕ್ಕೆ ನಮ್ಮ ಕಬ್ಬಿಣ ಬೇಕು. ಜರ್ಮನಿ-ಜಪಾನ್ ಕಾಖರ್ಾನೆಗಳು ತಲೆ ಎತ್ತಿ ನಿಲ್ಲುವುದಕ್ಕೆ ನಮ್ಮ ನೆಲವೇ ಬೇಕು. ಇಲ್ಲಿನ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಜಲ ಸಂಪತ್ತು, ಪ್ರಕೃತಿ ಸಂಪತ್ತು, ಪ್ರಾಣಿ ಸಂಪತ್ತು ಎಲ್ಲ ಸಂಪತ್ತುಗಳೂ ಜಗತ್ತಿನ ಹಲವು ರಾಷ್ಟ್ರಗಳಿಗೆ ಬೇಕಾಗಿವೆ. ಆದರೆ ನಮಗೇನು ಬೇಕು? ನೈಸ್ ರಸ್ತೆಗಳು, ಚತುಪ್ಪಥ ರಸ್ತೆಗಳು, ಮೆಟ್ರೋ ರೈಲುಗಳು, ಜಗತ್ತಿನಲ್ಲಿರುವ ಎಲ್ಲ ಮಾದರಿಯ ಕಾರುಗಳು, ಎಲ್ಲವನ್ನೂ ಕೇಂದ್ರೀಕರಿಸಿಕೊಂಡು ಕೊಳೆಗೇರಿಗಳನ್ನು ಹೆಚ್ಚಿಸಿಕೊಂಡು ದಿನದಿಂದ ದಿನಕ್ಕೆ ಪ್ರಮಾಣಮೀರಿ ಹಿಗ್ಗುತ್ತಿರುವ ನಗರಗಳು, ಪಂಚಾತಾರಾ ಹೋಟೆಲುಗಳು, ಯಾರ ಅಂಕೆಗೂ ಸಿಕ್ಕದೆ ಹೆಚ್ಚುತ್ತಲೇ ಹೋಗುತ್ತಿರುವ ಜನಸಂಖ್ಯೆ ಇತ್ಯಾದಿ ಎಲ್ಲವೂ ನಮಗೆ ಬೇಕು. ಭೂಮಿಯ ಕಲ್ಪನೆ, ಅದರ ಸ್ವರೂಪ, ಮಿತಿಗಳ ಬಗ್ಗೆ ಚಿಂತಿಸುವುದಕ್ಕೆ ನಮ್ಮ ಆಡಳಿತಗಾರರಿಗೆ ಪುರುಸೊತ್ತೇ ಇಲ್ಲ. ಹೀಗೆಲ್ಲ ಚಿಂತಿಸುತ್ತ ಕುಳಿತರೆ ತಮ್ಮ ಆಡಳಿತಾವಧಿ ಮುಗಿದೇ ಹೋಗಿಬಿಡುತ್ತದೆ ಎನ್ನುವ ಧಾವಂತ ಅವರಿಗೆ. ಹೀಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳೂ ನಮ್ಮ ವಿವಿಧ ಸಂಪತ್ತಿನ ಮೇಲೆ ಮುಗೆಬಿದ್ದಿವೆ. ನಮ್ಮ ನಗರಗಳನ್ನು ಅತ್ಯಾಧುನಿಕಗೊಳಿಸಲು ಮುಂದಾಗಿವೆ. ಬಿಲಿಯನ್ಗಟ್ಟಲೆ ಸಾಲ ಕೊಡಲು ಮುಂದಾಗಿವೆ. ಸಾಲದ ಜೊತೆಗೆ ಕಮೀಷನ್ ರೂಪದಲ್ಲಿಯೂ ಹಣದ ಹೊಳೆ ನಮ್ಮಲ್ಲಿ ಹರಿಯುತ್ತಿದೆ. ಈ ಹಣ ಎನ್ನುವುದು ಸಿಕ್ಕಿದವರ ಸೀರುಂಡೆಯಾಗಿದೆ. ಈ ಹಣವನ್ನು ಬಾಚಿಕೊಳ್ಳಲು ಮುಂದಾಗಿರುವ ನಮ್ಮ ರಾಜಕಾರಣ ತನಗೆ ಅನುಕೂಲಕರವಾದ ಕಾನೂನುಗಳನ್ನು ರೂಪಿಸಿಕೊಳ್ಳುತ್ತಿದೆ. ಕಾನೂನುಗಳನ್ನು ಧಿಕ್ಕರಿಸಿಯೂ ತನ್ನ ಜೇಬು ತುಂಬಿಕೊಳ್ಳುವುದು ಹೇಗೆಂಬುದನ್ನೂ ಚಿಂತಿಸುತ್ತಿದೆ.

ಹೀಗಾಗಿಯೇ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ಕೊಡುವ ಪ್ರಯತ್ನ ಭಾರತದ ಬಹುಪಾಲು ರಾಜ್ಯಗಳಲ್ಲಿ ನಡೆಯುತ್ತಲೇ ಇದೆ. ಅಲ್ಲಲ್ಲಿ ರೈತರು ಪ್ರತಿರೋಧವನ್ನು ಒಡ್ಡುತ್ತಾರೆ. ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಅವರು ದೊಡ್ಡ ಹೋರಾಟಗಳನ್ನೇ ಮಾಡುವ ವಿಲಕ್ಷಣ ಪರಿಸ್ಥಿತಿ ನಮ್ಮ ಪ್ರಜಾಪ್ರಭುತ್ವದಲ್ಲಿ ಮೇಲಿಂದ ಮೇಲೆ ಉದ್ಭವವಾಗುತ್ತಿದೆ. ಇದೆಂಥ ವ್ಯಂಗ್ಯ!ಕೃಷಿಯನ್ನು ನಮ್ಮ ಸಕರ್ಾರಗಳು ಯಾವ ಸ್ಥಿತಿಯಲ್ಲಿಟ್ಟಿವೆ ಎಂದರೆ ಯಾವೊಬ್ಬ ರೈತನೂ ಕೃಷಿಯನ್ನು ನಂಬಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ಸ್ವಾತಂತ್ರ್ಯಾನಂತರದ ಈ ಆರು ದಶಕಗಳಲ್ಲಿ ನಿಮರ್ಾಣವಾಗಿದೆ. ಇವತ್ತಿಗೂ ರೈತರ ಆತ್ಮಹತ್ಯೆ ಎನ್ನುವುದು ಸಕರ್ಾರದ ಪಾಲಿಗೆ ಪರಿಹಾರವನ್ನು ನೀಡುವ ಕಾರ್ಯಕ್ರಮವೇ ಆಗಿದೆ. ಇಂಥ ಅತ್ಯಂತ ದಾರುಣ ಸನ್ನಿವೇಶದಲ್ಲಿಯೂ ತನ್ನ ಭೂಮಿಯ ಬಗೆಗೆ ರೈತರು, ಗ್ರಾಮೀಣ ಜನತೆ ತೋರುವ ಪ್ರೀತಿ ನಿಷ್ಠಗಳು ಬಹಳ ದೊಡ್ಡವಾಗಿ ಕಾಣುತ್ತಿವೆ.ಕೃಷಿಯನ್ನು ನಂಬಿ ಬದುಕು ತೂಗಿಸಲಾಗದೆ, ಆಗಾಗ ಗುಳೆ ಹೋದರೂ ಮತ್ತೆ ಬಂದು ತಮ್ಮ ಭೂಮಿಗೆ ಅಂಟಿಕೊಳ್ಳುವುದು, ಲಕ್ಷಾಂತರ ರೂಪಾಯಿ ವರಮಾನ ದೊರೆಯದಿದ್ದರೂ, ನಗುನಗುತ್ತಲೇ ಹಸಿರಿನ ಜೊತೆ ಹೆಜ್ಜೆ ಹಾಕುವುದು ನಮ್ಮ ರೈತರ ಭೂಮಿ ಪ್ರೀತಿಯನ್ನು, ಜಗತ್ತನ್ನೇ ಸಲಹುವ ಮಾತೃ ಹೃದಯವನ್ನು ತೆರೆದು ತೋರಿಸುತ್ತದೆ.ಸಕರ್ಾರಗಳು ಕೈಗಾರಿಕೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ಕೃಷಿಗೂ ನೀಡಿದರೆ, ಇಲ್ಲಿ ಕೃಷಿ ಮತ್ತೆ ತಲೆ ಎತ್ತಬಹುದು. ರೈತರ ಆತ್ಮವಿಶ್ವಾಸವನ್ನು ಚಿಗುರಬಹುದು. ನಗರಗಳತ್ತ ಮುಖಮಾಡಿರುವ ನಮ್ಮೆಲ್ಲ ಯೋಜನೆಗಳು ಹಳ್ಳಿಗಳತ್ತ ತಿರುಗುವುದು ಸಾಧ್ಯವಾದರೆ ಮಾತ್ರ ಹಳ್ಳಿಗಳು ಉಳಿಯುತ್ತವೆ; ಕೃಷಿ ಉಳಿಯುತ್ತದೆ; ಭೂಮಿಯೂ ಉಳಿಯುತ್ತದೆ. ಇಲ್ಲವಾದರೆ ರಿಯಲ್ ಎಸ್ಟೇಟ್ ಧಂದೆಕೋರರು, ಭೂಕಬಳಿಕೆಯ ರಾಜಕಾರಣಿಗಳು, ಅವರ ಜೊತೆ ಶಾಮೀಲಾದ ಅಧಿಕಾರಿಗಳು, ಕೊಳೆಗೇರಿಗಳಾಗುತ್ತಿರುವ ನಗರಗಳು ಮಾತ್ರ ಉಳಿದು ನಮ್ಮ ಕೃಷಿ ಭೂಮಿ ಹೇಳ ಹೆಸರಿಲ್ಲದಂತಾಗುತ್ತದೆ.ಈ ಅಪಾಯವನ್ನು ಯಾರು ಗುರುತಿಸಬೇಕು?

‍ಲೇಖಕರು avadhi

17 August, 2011

8 Comments

  1. vasant kaje

    ಬಸವರಾಜು ಅವರೇ,
    ನೀವು ಬರೆದಿರುವುದು ಸತ್ಯ. ಚೆನ್ನಾಗಿ ಬರೆದಿದ್ದೀರಿ.
    ವಂದನೆಗಳು,
    ವಸಂತ್ ಕಜೆ.

  2. MAMATHARANI

    NIMMA BRHA TUBA CHANNGIDE BOMI BGEGIN NIMMA VYKYN ºÀÐÔó ½¤ÐÌÐ ¸ ³Ðԁ½ ÊЁ³ÙÖÓÈÐÀÑÂÔ³ÐÔ . ¾°ÐÖÁÔ ½–ف¦ÐÔ ºÀÐÔó ÀÐô‘Ðô¹Ð ³Ðԁ¾°Ð ›Ð¹Ðî—•Ù. ºÀÐÔó † ½¤ÐÌБÙÜ ¹Ð¹Ðî •°Ð¹ÐôÀѕЖÐÎÐÔ, ¹Ð¹Ð–ÐÖ ƒºÊÐÔ³Ðê•Ù ¹ÑÀÙÃö ¦Ð¦Ñ‘Ù ÊÐ÷¤Ð´–ÐÎÑ— ½•ÐÔ‘ÐÔ´•ÙìÀÙ Š•ÐÔ.

    …´
    ÀÐÔÀÐԳФѱÒ
    ƒ¤ÐËÓ‘Ù¤Ù
    A

  3. ಸಿ ಪಿ ನಾಗರಾಜ

    ಶ್ರೀ ಜಿ ಪಿ ಬಸವರಾಜು ಅವರಿಗೆ ,
    ನಿಮ್ಮ ಬರಹವನ್ನು ಓದಿ , ನಿಮ್ಮನ್ನು ಕಂಡು ಒಡನಾಡಿದಷ್ಟು ಸಂತೋಷವಾಯಿತು . ಬಕಾಸುರನ ಹೊಟ್ಟೆಯ ಹಸಿವಿಗಿಂತಲೂ ಸಾವಿರ ಪಟ್ಟು ಹೆಚ್ಚು ಹಸಿದಿರುವ ಸಾಮಾಜಿಕ ಲೂಟಿಕೋರರಿಗೆ ” ಭೂಮಿಯನ್ನು ಅಗೆದಗೆದು, ಕೊರಕಲು ಮಾಡಿ, ಅದರ ಸತ್ವವನ್ನು ಬರಿದು ಮಾಡಿ ಅದನ್ನು ವಿಕಾರಗೊಳಿಸುವ ಕ್ರಿಯೆ ” ನಾಡಿನ ಅಭಿವೃದ್ಧಿಯ ಸಂಕೇತವಾಗಿದೆ . ಇಂತಹ ಮಹಾನ್ ದೇಶಪ್ರೇಮಿಗಳಿಗೆ ನಿಮ್ಮ ಬರಹದಲ್ಲಿನ ವಿಚಾರಗಳು ನಾಡಿನ ಸರ್ವತೋಮುಖ ಅಭಿವೃದ್ಧಿಯನ್ನು ಸಹಿಸಲಾರದವರ ಪ್ರಲಾಪದಂತೆ ತೋಚುತ್ತವೆ .
    ” ಉತ್ತಿ ಬಿತ್ತಿ ಗೊಬ್ಬರ ಕೊಟ್ಟು ಫಸಲು ತೆಗೆಯುವ, ಭೂಮಿಯ ಕಸುವನ್ನು ಪ್ರತಿ ಮುಂಗಾರಿಗೂ ಹೆಚ್ಚಿಸಲು ನೋಡುವ ಈ ಮನುಷ್ಯ ಭೂಮಿಯನ್ನು ಆಸ್ತಿಯಾಗಿ ಪರಿಭಾವಿಸಿದರೂ, ಭೂಮಿಯನ್ನು ರಕ್ಷಿಸಿಕೊಂಡು, ತಲೆಮಾರಿನಿಂದ ತಲೆಮಾರಿಗೆ ಈ ಆಸ್ತಿಯನ್ನು ಕೊಟ್ಟುಕೊಂಡು ಬಂದ ಕೀರ್ತಿ ಈ ಮನುಷ್ಯನಿಗೇ ಸಲ್ಲಬೇಕು. ಇವನು ಭೂಮಿಯನ್ನು ಬಳಸಿರುವುದು, ಅದರ ಸತ್ವವನ್ನು, ಫಲವನ್ನು ಪಡೆದಿರುವುದು ನಿಜವಾದರೂ, ಭೂಮಿಯ ಒಟ್ಟಂದಕ್ಕೆ ಪೆಟ್ಟುಕೊಟ್ಟವನಲ್ಲ ಇವನು.” – ನಿಮ್ಮ ಈ ಮಾತುಗಳು ರೈತನ ವ್ಯಕ್ತಿತ್ವದ ಮಹತ್ವವನ್ನು ಓದುಗರಾದ ನಮಗೆ ತುಂಬಾ ಚೆನ್ನಾಗಿ ಮನದಟ್ಟು ಮಾಡಿಕೊಡುತ್ತವೆ .

  4. prasadraxidi

    ಬಸವರಾಜು ಅವರೆ
    ಇನ್ನೊಂದು ಕುತೂಹಲದ ವಿಶಯವೆಂದರೆ, ಇತ್ತೀಚೆಗೆ, ೧೯೬೦ ರಲ್ಲಿ ನಮ್ಮಪ್ಪ ಬರೆದಿಟ್ಟ ಡೈರಿಯೊಂದು ದೊರಕಿತು. ಅದರಲ್ಲಿ ಅಂದಿನ ಕೂಲಿಯಾಳುಗಳ ಸಂಬಳ, ಬಸ್ ಚಾರ್ಜು, ಒಂದು ಎಕ್ರೆ ಭೂಮಿಯ ಬೆಲೆ , ಚಿನ್ನ್ದದ ರೇಟು ಇತ್ಯಾದಿಗಳೆಲ್ಲ ಇದ್ದವು. ಅಂದಿನ ಬೆಲೆಗೆ ಹೋಲಿಸಿ ಇಂದಿನವರೆಗೆ ಆದ ಏರಿಕೆಯನ್ನು (ಅಪ್ರಿಸಿಯೇಷನ್) ನೋಡಿದರೆ, (ಇಂದಿನ ಚಿನ್ನದ ವಿಪರೀತ ಬೆಲೆಯಲ್ಲೂ ಕೂಡಾ) ಭೂಮಿಯ ಬೆಲೆಯೇ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಏರಿರುವುದನ್ನು ಗಮನಿಸಬಹುದು ಅದರಿಂದಲೇ ಈ ಭೂ ಕಬಳಿಕೆದಾರರು ಮುಗಿಬಿದ್ದಿರುವುದು. ಮತ್ತು ಅದರಿಂದಾಗಿ ಭೂಮಿಯ ಬೆಲೆ ಮತ್ತಷ್ಟು ಏರುತ್ತಿರುವುದು.

  5. prasadraxidi

    ಬಸವರಾಜು ಅವರೆ
    ಇನ್ನೊಂದು ಕುತೂಹಲದ ವಿಶಯವೆಂದರೆ, ಇತ್ತೀಚೆಗೆ, ೧೯೬೦ ರಲ್ಲಿ ನಮ್ಮಪ್ಪ ಬರೆದಿಟ್ಟ ಡೈರಿಯೊಂದು ದೊರಕಿತು. ಅದರಲ್ಲಿ ಅಂದಿನ ಕೂಲಿಯಾಳುಗಳ ಸಂಬಳ, ಬಸ್ ಚಾರ್ಜು, ಒಂದು ಎಕ್ರೆ ಭೂಮಿಯ ಬೆಲೆ , ಚಿನ್ನ್ದದ ರೇಟು ಇತ್ಯಾದಿಗಳೆಲ್ಲ ಇದ್ದವು. ಅಂದಿನ ಬೆಲೆಗೆ ಹೋಲಿಸಿ ಇಂದಿನವರೆಗೆ ಆದ ಏರಿಕೆಯನ್ನು (ಅಪ್ರಿಸಿಯೇಷನ್) ನೋಡಿದರೆ, (ಇಂದಿನ ಚಿನ್ನದ ವಿಪರೀತ ಬೆಲೆಯಲ್ಲೂ ಕೂಡಾ) ಭೂಮಿಯ ಬೆಲೆಯೇ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಏರಿರುವುದನ್ನು ಗಮನಿಸಬಹುದು ಅದರಿಂದಲೇ ಈ ಭೂ ಕಬಳಿಕೆದಾರರು ಮುಗಿಬಿದ್ದಿರುವುದು. ಮತ್ತು ಅದರಿಂದಾಗಿ ಭೂಮಿಯ ಬೆಲೆ ಮತ್ತಷ್ಟು ಏರುತ್ತಿರುವುದು………

  6. ಎಚ್. ಸುಂದರ ರಾವ್

    ಲೇಖನ ಸಮಸ್ಯೆಯನ್ನು ಹೇಳುತ್ತಿದೆ. ಪರಿಹಾರ ಏನು? “ಈ ಅಪಾಯವನ್ನು ಯಾರು ಗುರುತಿಸಬೇಕು?” ಎಂದು ಲೇಖನ ಮುಗಿಸುತ್ತೀರಿ. ನಿಜವಾಗಿ ಲೇಖನ ಅಲ್ಲಿಗೆ ಅರ್ಧ ಮುಗಿಯಿತು. ಮುಂದಿನ ಅರ್ಧದಲ್ಲಿ ಅದಕ್ಕೆ ಪರಿಹಾರ ಏನೆಂಬುದನ್ನೂ ಚರ್ಚಿಸಬೇಕು ಅಲ್ಲವೆ? ಯಾರೆಂದರೆ ನಾವೇ. ಇಂಥ ಲೇಖನ ಬರೆಯುವ, ಓದುವ, ಈ ಸಮಸ್ಯೆಯಿಂದ ತೊಂದರೆಗೊಳಗಾಗುವ ನಾವೇ ಗುರುತಿಸಬೇಕು. ಸಮಸ್ಯೆಯ ಪರಿಹಾರ ಹೇಗೆ ಎಂಬುದನ್ನು ಚರ್ಚಿಸಬೇಕು, ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಸಮಸ್ಯೆ ಯಾರಿಂದಲೇ ಉಂಟಾಗಿರಲಿ, ಅದರಿಂದ ನಮಗೆ ತೊಂದರೆಯಾದರೆ, ಪರಿಹಾರಕ್ಕಾಗಿ ನಾವೇ ಪ್ರಯತ್ನಿಸಬೇಕು. ಬೇರೆ ಮಾರ್ಗ ನನಗೆ ಕಾಣುವುದಿಲ್ಲ.

  7. D.RAVIVARMA

    SIR LEKHANA TUMBA ARTHA PURNAVAGIDE, HENNU HONNU MATTU MANNU BAHUSHAHA IDI JAGATTINA HORATAGALU IDARA SUTTALE NADEDIVE,NADEYUTTIVE NAGARIKARANAGONDIRUVA NAGARAGALU SAMSKRUTHI,SAMSKARA JEEVANTIKE KALEDUKONDA MARUBHUMIYANTE KANUTTAVE,ADARE HALLIYA BADUKU KANISTA SAVALATTUGALIDE.VILAVILANE ODDADUTTIDE DARARU HELUVAHAGE ILLIRALARE ADARE ALLIGE HOGALARE KALAVE NAMMELLA PRASNEGE UTTARAKODUTTENO KADUNODONA NAMASKARA D,RAVI VARMA HOSPET

  8. M.S.Rudreswaraswamy

    alemaari baduku oMdu nelege niMtu
    naagarikate beLeyuttiddaMte,
    nannadu, tannadu ennuva bEli haaki
    suttella gODe kaTtikoMda
    manushya annuva praaNi.

    Idu allege nillalilla; horage taanu
    duDiyuttEne, oLage avaLirali.
    bhUmi mattu heNNu iruvudE
    taanu anubhavisuvudakkaagi
    ennuva aalOchane beLedu
    garigeduruttiddaMte, elladU nannadu,
    nanagaagi aMdukoMDa.
    yuddha maaDuttalE iddaane
    nemmadi kaLedukoMDarU baralilla buddhi
    shuruvaada yuddha nillallilla, nilluva lakshNagaLilla.

    Idu eallrigU sEriddu ennuva buddhi
    yaavattu baruttO gottilla.
    vinaashakke kai haakiddaane. tanna guMDi
    taane tODikoLLuttiddaane.

    vichaarapUrNa lEKana bareda taNNaneya
    manassina shree ji.pi. basavaraaju avarige
    nanna kruta~JnategaLu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading