ಇವರು ಪಂಚ್ ಎಕ್ಸ್ಪರ್ಟ್. ಇವರ ಪಂಚ್ ಅಂತಿಂತಹ ಹೊಡೆತಗಳನ್ನಲ್ಲ, ಸರಿಯಾಗಿ ತಡಕಿ ನೋಡಿಕೊಳ್ಳುವಂತಹ ಹೊಡೆತಗಳನ್ನೇ ಕೊಟ್ಟಿದೆ. ಅದೇ ‘ಪ್ರಕಾಶ್ ಶೆಟ್ಟಿ ಪಂಚ್’. ಇವರು ರೇಖೆಗಳ ಮೂಲಕ ನೀಡುವ ಪಂಚ್ ಹಲವು ದಶಕಗಳಿಂದ ಒಂದು ಬಗೆಯ ಎಚ್ಚರವನ್ನು ಮೂಡಿಸುತ್ತಾ ಬಂದಿದೆ.
ಪ್ರಕಾಶ್ ಶೆಟ್ಟಿ ಒಂದಾನೊಂದು ಕಾಲದಲ್ಲಿ ಬರುತ್ತಿದ್ದ ‘ಸಂತೋಷ’ ಎಂಬ ಕಡಲ ತಡಿಯ ಮಾಸಿಕದಿಂದ ಪತ್ರಿಕೋದ್ಯಮ ಕಂಡವರು. ನಂತರ ಬೆಂಗಳೂರು ಸಹವಾಸ. ಟೈಮ್ಸ್ ಆಫ್ ಡೆಕ್ಕನ್ ಎಂಬ ಅಲ್ಪ ಆಯಸ್ಸಿನ ಇಂಗ್ಲಿಶ್ ದೈನಿಕದಲ್ಲಿದ್ದು ಮತ್ತೆ ಕಡಲ ತಡಿಗೆ ‘ಮುಂಗಾರು’ ಕಟ್ಟಲು ಹೋದರು. ಆ ನಂತರ ನೆರೆಯ ಕೇರಳಕ್ಕೆ-‘ದಿ ವೀಕ್’ ನಲ್ಲಿ ಇವರು ಬರೆದ ಚಿತ್ರಗಳು ದೇಶದ ಗಮನ ಸೆಳೆದವು.
ಹೋಟೆಲ್ ನಲ್ಲಿ ಕುಳಿತು ಊಟ ಮಾಡುವವರ ಚಿತ್ರ ಬರೆದು ಅವರಲ್ಲಿ ಒಂದು ಬೆರಗು ಹುಟ್ಟಿಸುವಲ್ಲಿ ಇವರು ಎಕ್ಸ್ಪರ್ಟ್. ಇದನ್ನೇ ಸೈಡ್ ಉದ್ಯೋಗವಾಗಿಯೂ ಮಾಡಿಕೊಂಡರು. ಸ್ಟಾರ್ ಹೋಟೆಲ್ ಗಳು ಇವರನ್ನು ಕೈ ಬೀಸಿ ಕರೆದವು. ಯಾವುದೇ ಪಾರ್ಟಿಗಳಲ್ಲೂ ನಗೆಯ ಅಲೆ ಉಕ್ಕುವಂತೆ ಮಾಡಬಲ್ಲರು. ಫ್ಯಾಮಿಲಿ ಫೋಟೋ ಎಂಬ ಕಲ್ಪನೆಯನ್ನೇ ಬದಲಿಸಿ ಫ್ಯಾಮಿಲಿ ಕ್ಯಾರಿಕೇಚರ್ ರೂಢಿ ಮಾಡಿಸಿದರು. ಮಾಲ್ ಗಳಲ್ಲಿ ನಿಂತು ಕಣ್ಣು ಮುಚ್ಚಿ ತೆಗೆಯುವುದರೊಳಗೆ ಚಿತ್ರ ಬರೆದು ಹೆಸರಾದರು. ಅದಕ್ಕೆ ‘ರುಂಡ ತಗೊಂಡ್ರೆ ಮುಂಡ ಫ್ರೀ’ ಎಂಬ ಆಕರ್ಷಕ ಸ್ಲೋಗನ್ ನೀಡಿದರು.
ದಿಸ್ ಈಸ್ ಪ್ರಕಾಶ್ ಶೆಟ್ಟಿ. ಈಗ ಈಟಿವಿಯಲ್ಲಿ ಇವರ ಕಾರ್ಟೂನ್ ಗಳು ಹೆಸರು ಮಾಡುತ್ತಿವೆ. ಇದರಿಂದ ಇವರಿಗೂ ಕಿಕ್ ಸಿಕ್ಕಿದೆ. ಇದರ ಸಂತೋಷಕ್ಕಾಗಿ ನಮಗೂ ಕಿಕ್ ನೀಡಲು ಬ್ಲಾಗ್ ಆರಂಬಿಸಿದ್ದಾರೆ. ಅವರಿಗೆ ಯಶಸ್ಸು ತಂದು ಕೊಟ್ಟ ‘ಪ್ರಕಾಶ್ ಶೆಟ್ಟಿ ಪಂಚ್’ ಎಂದೇ ಹೆಸರಿಟ್ಟಿದ್ದಾರೆ. ಪಂಚ್ ಬೇಕಾ ಅಲ್ಲಿಗೆ ಭೇಟಿ ಕೊಡಿ. ಪರಚಬೇಕ- ಇಲ್ಲಿಗೆ ಮೈಲ್ ಮಾಡಿ-prakashetty@gmail.com ಆರ್ಡರ್ ಕೊಡಬೇಕಾ ಇಲ್ಲಿಗೆ ಫೋನ್ ಮಾಡಿ: 94495 00294, 080-28606030






Aishvarya is more beautiful on life, and smart woman. I am proud that we are same age and both are beautiful. She is moviestar, i am а surgeon star:)