ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ .
ರಹಮತ್ ತರೀಕೆರೆ ಅವರ ‘ಕತ್ತಿಯಂಚಿನ ದಾರಿ’ ಈ ಗೌರವಕ್ಕೆ ಪಾತ್ರವಾಗಿದೆ.
ಈ ಪುಸ್ತಕಕ್ಕೆ ರಹಮತ್ ಬರೆದ ಮಾತು ಇಲ್ಲಿದೆ...
ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು; ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ.
ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ. ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ.
ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ……
-ರಹಮತ್ ತರೀಕೆರೆ
]]>





Hearty Congratulations sir!
Rahamatravarige Abhinandanegalu.
ರಹಮತ್ ಸರ್ ಗೆ ಸಿಕ್ಕ ಈ ಗೌರವ ಕನ್ನಡಿಗರಿಗೆ ತುಂಬಾ ಖುಷಿ ತಂದಿದೆ..
abhinandanegalu. .nudi ranganathan
Hearty Congratulations. This is an award for genuine social and humane commitment coupled with literary excellence.
ಅಭಿನಂದನೆಗಳು ಸರ್ .
ಅಕ್ಷತಾ .ಕೆ
its great!! Congrats…!!
Congratulations
ರಹಮತ್ ತರೀಕೆರೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕೃತಿಯನ್ನು ಪ್ರಕಟಿಸಿದ ಅಭಿನವದ ರವಿಕುಮಾರ್ ರವರಿಗೂ ಅಭಿನಂದನೆಗಳು.
ವಸುಧೇಂದ್ರ
Sir,
Hearty congratulations to Rahamat sir
rahamath sir ge abhinandanegalu…
Rahamath avarige abhinandanegaLu
-naasO
kannadigaru hemmeyinda matte matte nenepisikollabahudada
barahagaara rahamat. avarige abhinandanegalu. saahityavannu
adara charcheyannu avara haage ella dikkege tirugisidavaru kadime.
ಸಾಂಸ್ಕೃತಿಕ ಚಿಂತನೆಗೆ ನಮ್ಮಂಥ ಕಿರಿಯ ತಲೆಮಾರಿನವರನ್ನೆಲ್ಲ ಹಚ್ಚಿದ ರಹಮತ್ ತರೀಕೆರೆಯವರಿಗೆ ಇದು ಅರ್ಹ ಗೌರವವೇ. ತರೀಕೆರೆಯವರು ಇನ್ನೂ ಹೆಚ್ಚು ಸಾಧಿಸುವಂತಾಗಲಿ. ಶುಭಾಷಯಗಳು ಸರ್
ಗೆಳೆಯ ರಹಮತ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿದೆ. ಅದಕ್ಕೆ ಸಂತೋಷ ಪಟ್ಟ ಅವನ ಸಾವಿರಾರು ಗೆಳೆಯರಲ್ಲಿ ನಾನು ಒಬ್ಬ. ಸುದ್ದಿ ತಿಳಿಯುತ್ತಿದ್ದಂತೆ ದೂರವಾಣಿಯಲ್ಲಿ ಸಂಪರ್ಕಿಸಲು ದಿನವಿಡೀ ಪ್ರಯತ್ನಿಸಿದೆ. ಆದರೆ ವಿಫಲನಾದೆ. ಏನೋ ಬರೆಯುತ್ತಿರಬಹುದು ಅಂದುಕೊಂಡೆ. ರಹಮತ್ ನನ್ನು ಕಳೆದ ಸುಮಾರು ೩೦ ವರ್ಷಗಳಿಂದ ನಾನು ಬಲ್ಲೆ. ಶಿವಮೊಗ್ಗದಲ್ಲಿ ಇದ್ದ ಅವನ ಮನೆಗೆ ಹೋಗಿದ್ದೆ, ಕನ್ನಡ ವಿವಿಗೆ ಆತ ಬರುವಂತಾಗಲು ಶ್ರಮಿಸಿದವರಲ್ಲಿ ನಾನು ಒಬ್ಬ. ಆತನ ಜೊತೆ ಕನ್ನಡ ವಿವಿಯಲ್ಲಿ ಕಳೆದ ಒಳ್ಳೆಯ ದಿನಗಳು ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಮಧ್ಯಾಹ್ನದ ಬುತ್ತಿ ಊಟದಿಂದ ಆರಂಭವಾಗಿ ಪ್ರತಿಭಟನೆಯ ಸೂಚನೆಯಾಗಿ ಕಾರಿಗೆ ಅಡ್ಡ ಮಲಗುವ ವರೆಗೆ ನಾವು ಜೊತೆಯಾಗಿದ್ದೆವು. ಉತ್ತರ ಕರ್ನಾಟಕದಾದ್ಯಂತ ನಾನು ಮತ್ತು ಆತ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಆತನ ಮಗಳನ್ನು ನಾನು ‘ಸೊಸೆ ಮುದ್ದು’ ಅಂತಲೇ ಈಗಲೂ ಕರೆ ಯುವುದು. ಕಾರಣಾಂತರಗಳಿಂದ ಮುಂದೆ ನಾನು ದೆಹಲಿ ಸೇರಿದೆ. ಈ ಗೆಳೆಯ ಹಂಪಿಯಲ್ಲಿಯೇ ಉಳಿದು, ಕನ್ನಡದ ಮಣ್ಣಲ್ಲಿ ಆಳವಾಗಿ ತಳ ಊರಿ ಇದೀಗ ಎತ್ತರಕ್ಕೆ ಬೆಳೆದು ನಿಂತಿದ್ದಾನೆ. ಆತನ ಬೆಳವಣಿಗೆಯ ಎಲ್ಲ ಹಂತಗಳನ್ನು ಹತ್ತಿರದಿಂದ ನೋಡಿದ ನನಗೆ ಈಗ ಈ ಪ್ರಶಸ್ತಿಯ ಸುದ್ದಿ ಕೇಳಿ ಅಚ್ಚರಿಯಗಲಿಲ್ಲ, ನಾನದನ್ನು ನಿರೀಕ್ಷಿಸಿದ್ದೆ, ನಿರೀಕ್ಷೆ ಹುಸಿಯಾಗದ್ದಕ್ಕೆ ಸಹಜವಾಗಿ ಸಂತೋಷವಾಗಿದೆ.
ರಹಮತ್ ನ ಸಾಹಿತ್ಯದ ಬದ್ಧತೆ ವಿಶೇಷವಾದುದು. ಆತ ಸಾಹಿತ್ಯದ ಅನನ್ಯತೆಯನ್ನು ಮರೆಯುವುದಿಲ್ಲ, ಹಾಗೆಯೇ ಅದರ ಸಾಮಾಜಿಕ ಪ್ರಸ್ತುತತೆ ಮತ್ತು ಆವರಣವನ್ನು ಕೂಡಾ ಮರೆಯುವುದಿಲ್ಲ. ಹೀಗಾಗಿ ಆತನ ವಿಮರ್ಶೆಗೆ ಒಂದು ಬಗೆಯ ಲವಲವಿಕೆ ಪ್ರಾಪ್ತಿಸಿದೆ ಈ ಲವಲವಿಕೆಗೆ ಕನ್ನಡ ಸಂಸ್ಕೃತಿಯ ಹಲವು ಆಯಾಮಗಳನ್ನು ಜೋಡಿಸಬಲ್ಲ ಕ್ಷೇತ್ರ ಕಾರ್ಯದ ಶ್ರಮವು ಸೇರಿಕೊಂಡದ್ದರಿಂದ ರಹಮತ್ ಬರೆವಣಿಗೆಯು ಬಹಳ ವೇಗವಾಗಿ ಇತರರ ಬರೆಹಗಳಿಂದ ಬೇರೆಯಾಗುತ್ತಾ ಹೋಯಿತು. ಹೋರಾಟ, ಅಧ್ಯಯನ , ಕ್ಷೇತ್ರಕಾರ್ಯ ಮತ್ತು ಬರವಣಿಗೆಗಳನ್ನು ರಹಮತ್ ನ ಹಾಗೇ ಸಮದೂಗಿಸಿಕೊನ್ಡು ಹೋಗುತ್ತಿರುವವರು ಕನ್ನಡದಲ್ಲಿ ವಿರಳ.
ರಹಮತ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ , ಐಯ್ ಕೆ ಬೊಳುವಾರು , ಫಕೀರ್ ಮಹಮದ್ ಕಟ್ಪಾಡಿ, ಸಬಿಹಾ ಮೊದಲಾದ ಅನೇಕರು ಕಾರಣಾಂತರಗಳಿಂದ ನನಗೆ ಬಹಳ ಅಪ್ತರಾದವರು. ಹಿಂದೂ ಕೋಮುವಾದಿಗಳು ಹೇಳುವ ಮಾತುಗಳ ಹಿಂದಿನ ಹುಂಬ ತನಗಳನ್ನು ತಮ್ಮ ಬದುಕಿನ ರೀತಿಯಿಂದಲೇ ಬಯಲುಗೊಳಿಸುವ ಇವರೆಲ್ಲ ನಮ್ಮ ಕಾಲದ ಅತಿ ದೊಡ್ಡ ಶಕ್ತಿಗಳು.
ರಹಮತ್ ಗೆಳೆಯನಿಗೆ ಅಭಿನಂದನೆಗಳು, ಭಾನುವಿಗೂ ಸಹಾ..
ಆಯಾ ಕಾಲಘಟ್ಟದ ಸಾಹಿತ್ತ್ಯಿಕ ಒಳನೋಟಗಳನ್ನು ತಿಳಿಸುವುದರ ಜೊತೆಗೆ ಹೊಸ ತಲೆಮಾರಿಗೂ ಸದಾ ಸ್ಪಂದಿಸುತ್ತಾ ಮಾರ್ಗದರ್ಶಿಸುವ ರಹಮತ್ ತರೀಕೆರೆ ಸರ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿದ್ದಕ್ಕೆ ಬಾಳಾ ಖುಷಿ ಆಯ್ತು.
– ಗವಿಸಿದ್ಧ ಹೊಸಮನಿ
ನನ್ನ ಮೊದಲ ರಹಮತ್ ಭೇಟಿಯಲ್ಲಿ (ಇದೇ ಪುರುಷೋತ್ತಮ ಬಿಳಿಮಲೆಯವರು ಹಂಪಿಯಲ್ಲಿ ಪರಿಚಯಿಸಿದ್ದು) ಅವರ ಬುತ್ತಿಯೂಟದ ಟೊಮೆಟೋ ‘ಪುಳಿಚಾರ್’ ಆದ ನನ್ನ ಪಾಲಿಗೆ ಒದಗಿದ್ದು ನಾನು ಮರೆತಿಲ್ಲ. ಇಂಥ ಒಬ್ಬೊಬ್ಬರು ದೊಡ್ಡ ಹೆಸರಿನ ಪ್ರಶಸ್ತಿಗಳಿಗೆ ಪಾತ್ರರಾಗಿ ನಮ್ಮ ಸಿನಿಕತೆಯನ್ನು ದೂರ ಮಾಡುವುದರಿಂದಲೇ ಬದುಕು ಸಹನೀಯವಾಗಿದೆ. ಅಭಿನಂದನೆಗಳು.
ಅಶೋಕವರ್ಧನ
Sir, Hrutpoorvaka abhinandanegalu.
jaati mattu pradeshada jadatva daati yuva barahagararannu preetisida
rahamat sir avarige naadina ella yuva barahagaarara paravaagi abhinandanegalu.
ತಮ್ಮದೇ ನಿಲುವುಗಳಿಗೆ ಬದ್ದರಾಗಿ ಬರೆಯುತ್ತಿರುವ ರಹಮತ್ ತರಿಕೇರಿ ಸರ್ ಅವರಿಗೆ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿರುವುದು ಖುಷಿಯ ವಿಷಯ. ಹೊಸ ತಲೆಮಾರಿಗೆ ವಿಮಶರ್ಾ ಸಾಹಿತ್ಯ ಮತ್ತು ಪ್ರವಾಸ ಕಥನಗಳ ಮೂಲಕ ವಿಶಿಷ್ಠ ಕೊಡುಗೆ ನೀಡಿದ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ದಿನಾಂಕ : 23.12.2010 ಬಸವರಾಜ ಹಳ್ಳಿ, ಹಸಮಕಲ್
sir, sahity lokadalli nannantha anekarige dooradindale aatmaviswas tumbiddeeri. nimage prashasti bandaddu keli nanage bandashtu santoshavaayitu. aadare deshkaalkke nimma pratikriye odi onchooru besaravaagittu. eega adella mukhyavalla. naanu odi kaliyabekad estella
chintaneyannu barediddeeri. nimage abhinandanegalu.