ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ
ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ
ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ
ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ
ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ
ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ
ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು
ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸ ಬೇಕಿತ್ತು
ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ
ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ
_______________________________
ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.
Loading...
shiva
on 10 March, 2010 at 10:07 AM
ಈಗ ವಿಜಯ ಕರ್ನಾಟಕವೇ ಟೈಮ್ಸಾಫಿಂಡಿಯಾದಂತೆ ಆಗಿದೆಯಲ್ಲ.
ಇನ್ಯಾಕೆ ಮತ್ತೆ ಈ ಕನ್ನಡ TOI?
ಶ್ರದ್ಧಾಂಜಲಿಗಳು.
Loading...
ಕವಿಸ್ವರ ಶಿಕಾರಿಪುರ
on 10 March, 2010 at 3:27 PM
ಮೊದಲ ಅನುವಾದಿತ ಕನ್ನಡ ಪತ್ರಿಕೆ ಅಂತ್ಯಗೊಂಡಿದೆ… ಅಂತೂ ಕನ್ನಡಿಗ ಸ್ವಂತಿಕೆಯನ್ನು ಮೆರೆದು ಎಂಜಲನ್ನು ಎಸೆದಿದ್ದಾನೆ… ಹಿಂದೆಯೇ ಅನಂತಮೂರ್ತಿ ಹೇಳಿದ್ರು, ಈಗ ನಿಜವಾಗಿದೆ…
ಹೃತ್ಪೂರ್ವಕ ಶ್ರದ್ಧಾಂಜಲಿ ಅರ್ಪಿಸೋಣ್!
ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ
ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ
ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ
ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ
ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ
ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ
ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು
ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸ ಬೇಕಿತ್ತು
ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ
ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ
_______________________________
ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.
ಈಗ ವಿಜಯ ಕರ್ನಾಟಕವೇ ಟೈಮ್ಸಾಫಿಂಡಿಯಾದಂತೆ ಆಗಿದೆಯಲ್ಲ.
ಇನ್ಯಾಕೆ ಮತ್ತೆ ಈ ಕನ್ನಡ TOI?
ಶ್ರದ್ಧಾಂಜಲಿಗಳು.
ಮೊದಲ ಅನುವಾದಿತ ಕನ್ನಡ ಪತ್ರಿಕೆ ಅಂತ್ಯಗೊಂಡಿದೆ… ಅಂತೂ ಕನ್ನಡಿಗ ಸ್ವಂತಿಕೆಯನ್ನು ಮೆರೆದು ಎಂಜಲನ್ನು ಎಸೆದಿದ್ದಾನೆ… ಹಿಂದೆಯೇ ಅನಂತಮೂರ್ತಿ ಹೇಳಿದ್ರು, ಈಗ ನಿಜವಾಗಿದೆ…
“ದಿ ಟೈಮ್ಸ್ ಆಫ್ ಇಂಡಿಯಾ(ಕನ್ನಡ)”
ದಿ = ದಿವಂಗತ.