ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಯಾಂಡ್ ಸ್ಟಾಂಡ್ ನಲ್ಲಿ ‘ಪ್ರಕೃತಿ’

ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಸದಾ ‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ…’ ಗುಂಪಿಗೆ ಸೇರಿದವರು. ಹಾಗಾಗಿಯೇ ಪ್ರಕೃತಿ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಐ ಟಿ,  ಕಾರ್ಪೊರೇಟ್ ಸಂಸ್ಥೆಗಳ ಕಿವಿಗೆ  ಕನ್ನಡದ ಕವಿತೆಗಳನ್ನು ಹಾಕುವ ಉತ್ಸಾಹದಲ್ಲಿದ್ದಾರೆ.

ಇದೂ ಅಲ್ಲದೆ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನಲ್ಲಿ ಪ್ರತೀ ವಾರ ಸುಗಮ ಸಂಗೀತದ ಹಬ್ಬ ನಡೆಸುತ್ತಾರೆ. ಇದು ಹಬ್ಬ -ಯಾಕೆಂದರೆ ತಾವೇ ಒದ್ದಾಡಿ ಹಣ ಹಾಕಿ ಪೊಲೀಸರ ಹತ್ತಿರ ಪರದಾಡಿ ಲೈಸೆನ್ಸ್ ತಂದು ಗೀತೆಗಳು ಜನರಿಗೆ ತಲುಪುವಂತೆ ಮಾಡುತ್ತಾರೆ. ಅಂದ ಮಾತ್ರಕ್ಕೆ ಸುಮ್ಮನೆ ಯಾರನ್ನೋ ಕರೆಸಿ ನಾಮಕಾವಸ್ತೆ ಕಾರ್ಯಕ್ರಮ ಮಾಡುವುದಿಲ್ಲ. ಜನ ಕೇಳಬೇಕು ಎಂದು ಬಯಸುವ ಗಾಯಕರೇ ಅಲ್ಲಿರುತ್ತಾರೆ.

ಇಲ್ಲಿನ ಫೋಟೋಗಳೇ ಆ ಕಾರ್ಯಕ್ರಮದ ಅಭಿರುಚಿಗೆ ಸಾಕ್ಷಿ. ನಿಮ್ಮ ಬಳಿಗೂ ಈ ಕಾರ್ಯಕ್ರಮ ಬರಬೇಕಾದರೆ ಅಥವಾ ನೀವು ಬ್ಯಾಂಡ್ ಸ್ಟಾಂಡ್ ನತ್ತ ಹೋಗಬೇಕಾದರೆ ಈ ಫೋನ್ ನಂಬರ್ ಬಳಸಿ- 99453 68083

ಅಂದ ಹಾಗೆ ಈವಾರ ಅರ್ಚನಾ ಉಡುಪ  ಹಳೆಯ ಚಿತ್ರ ಗೀತೆಗಳಿಗೆ ದನಿ ನೀಡುತ್ತಾರೆ (೧೯ ರಂದು)
೨೬ ರಂದು ಬೇಂದ್ರೆ ಮೀಟ್ಸ್ ಕೈಲಾಸಂ ಪಲ್ಲವಿ ಮತ್ತು ರವಿ ಮೂರೂರ್ ಅವರಿಂದ, ನವೆಂಬರ್ ಎರಡರಂದು ಸಿ ಅಶ್ವಥ್ ಮೈಸೂರು ಮಲ್ಲಿಗೆಗೆ,  ೯ ರಂದು ದಿವ್ಯಾ ರಾಘವನ್ ಶಿಶು ಗೀತೆಗಳಿಗೆ, ೧೬ ರಂದು ಸುಪ್ರಿಯಾ ಆಚಾರ್ಯ ಭಾವ ಗೀತೆಗಳಿಗೆ, ೨೩ ರಂದು ಪುತ್ತೂರು ನರಸಿಂಹ ನಾಯಕ್ ದಾಸರ ಪದಗಳಿಗೆ ದನಿಯಾಗುತ್ತಾರೆ.

‍ಲೇಖಕರು avadhi

18 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading