-ದೀಪಿಕಾ ಬಾಬು
ಶಿಶಿರ ಋತುವಿನೊಲವು
ನನ್ನೂರಿನ ಫೋಲಿಚಂದಿರ
ನಿನ್ನೂರಲ್ಲು
ಕಾಣಸಿಕ್ಕುತ್ತಾನೆ!
ಬಾ ಮೆಲ್ಲನೆ ಹೊರಬಂದು
ಅಂಗಳದಲ್ಲಿ ನಲಿದಾಡಿ
ತುಂಟತನದಲ್ಲಿ ಓಡುವ
ಕಳ್ಳಚಂದ್ರನಲ್ಲೊಮ್ಮೆ ಇಣುಕು
ದೀರ್ಘಾದೃಷ್ಟಿ ಆಯಿಸೊಮ್ಮೆ ಇತ್ತ
ಮೆಲ್ಲನೆ ಪಿಸುನುಡಿಯುತ್ತಾ
ಬೆಳ್ಳಂಬೆಳಕಿನ ಭಿತ್ತಿಯಲಿ
ಮನಸೂರೆ ಗೊಳಿಸಿ
ನಿನ್ನೊಳಗೆ ನೀ ತಾಕಿ
ಕಳುವಾಗು
ಮಾಗಿಯೊಂದಿಷ್ಟು ಮಾಗಲಿ
ರೆಪ್ಪೆ ಕಂಪಿಸುತ್ತಾ
ರೆಕ್ಕೆ ಬಡಿದು
ಪತಂಗ ಹಾರಾಡುವ ಸಮಯ
ಎದೆಯ ಲಬ್-ಡಬ್ ಸ್ವರದಾಳಿಗೆ
ಮೈನವಿರಾಗಿ ಬೇವರಿನುಡಿಯಲಿ
ಒಲವಿನ ಹೊನಲಿನಲಿ
ಮಿಯ್ದಾಡುತಿರಲು
ಬೆಳದಿಂಗಳ ಪೂರ್ಣಧ್ಯಾನ
ಕತ್ತಲುಣಿಸುವ ಸೃಷ್ಟಿ ಸೊಬಗಿಗೆ
ಮಿದುಮೆತ್ತಿಕೊಂಡಿಹ
ಜೀವರಾಶಿಗೆ
ಅಧರದಧರದ ಜೇನ ರುಚಿಯು
ಸವಿಯದುಬ್ಬರ ದುಂಬಿಗೆ
ಇದೋ ತುಂಗೆಯ ನಿನಾದವು
ಹಗುರೆದೆಯ ಭಾರ ಭಾವನಾದ
ಮಿಟುಕುತಿಹುದು ಜೀವಸ್ವರವು
ಕಣ್ಣ ಬೆರಗಿಗೆ ಜಾರೋ ಸೆರಗು
ನಗ್ನಗೊಂಡ ಬೆಳಕಿನಿರುಳು
ಹಾದುಹೋಗಲಿ ಗರ್ಭಕಿಂಡಿಯ
ತುಸು ಬೇಯಲೀಗ
ಸುಖದ ಸೊಬಗು
ನೊರೆದ ಚೆಲುವಿಗೆ
ಹೊಳೆವ ಕಿರಣವು
ಹಿಮಚಳಿಯ ಬಗೆಗೆ ನಡುಗಿಹೆ
ನನ್ನೊಳಗೆ ಬೆರೆತಿಹ
ನಿನ್ನೊಲವ ಪರಿಯಲಿ
ಮೋಹ ತಣಿಯಲಿ ಇರುಳಲಿ
ಬರುಡಾಗಿ ನಲುಗಲಿ
ಪ್ರೇಮಾಗ್ನೀಯು!!






0 Comments