ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆತ್ತಲೆ.. ಬೆತ್ತಲೆ..

ಚಳವಳಿಗಳ ಒಡನಾಡಿ ಸನತ್ ಕುಮಾರ್ ಬೆಳಗಲಿ.

ಅವರ ನೂತನ ಕೃತಿ ಇದೀಗ ಬಿಡುಗಡೆಗೊಂಡಿದೆ. ಅದರ ಒಂದು ಭಾಗ ಇಲ್ಲಿದೆ .

ಮಡೆಸ್ನಾನ ನಡೆದಾಗ ತಾವು ಕಂಡ ಅಂತಹದ್ದೇ ಇನ್ನೆರಡು ಅಸಹ್ಯ ಆಚರಣೆಗಳ ಬಗ್ಗೆ ಅವರು ಬರೆದಿದ್ದಾರೆ

ನೆನಪಿನ ಸುರಳಿಯನ್ನು ಬಿಚ್ಚಿದ ಮಡೆಸ್ನಾನ

sanath kumar belagali

ಸನತ್ ಕುಮಾರ್ ಬೆಳಗಲಿ 

ಕುಕ್ಕೆ ಸುಬ್ರಹ್ಮಣ್ಯದ ಮಡೆ ಮಡೆಸ್ನಾನದ ಬಗ್ಗೆ ನಾಡಿನಲ್ಲಿ ಎದ್ದಿರುವ ಪ್ರತಿಭಟನೆಯ ಅಲೆಯನ್ನು ನೋಡಿದಾಗ, ನನಗೆ ನಾಲ್ಕು ದಶಕಗಳ ಹಿಂದೆ ನಡೆದ ಎರಡು ಘಟನೆಗಳು ನೆನಪಿಗೆ ಬಂದವು. ಒಂದರಲ್ಲಿ ಸ್ವತಃ ನಾನೇ ತೊಡಗಿಸಿಕೊಂಡಿದ್ದೆ. ಇನ್ನೊಂದನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೆ. ಇವೆರಡು ಘಟನೆಗಳಲ್ಲಿ ಅಂದಿನ ರಾಜ್ಯ ಸಕರ್ಾರಗಳು ಮನುಷ್ಯ ವಿರೋಧಿ ಕಂದಾಚಾರದ ವಿರುದ್ಧ ದೃಢವಾದ ಕಾನೂನು ಕ್ರಮವನ್ನು ಕೈಗೊಂಡಿದ್ದವು. ಆದರೆ ಇಂತಹ ಅಂಧಶ್ರದ್ಧೆಗಳನ್ನು ಹಾಗೂ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ರಕ್ಷಿಸಿ ಮುಂದುವರೆಸಿಕೊಂಡು ಸೈದ್ಧಾಂತಿಕ ಹಿನ್ನೆಲೆ ಹೊಂದಿರುವ ಬಿಜೆಪಿಯಂತಹ ಪಕ್ಷ ಈಗ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದರಿಂದ ಸಂವಿಧಾನಬದ್ಧ ಆಡಳಿತವನ್ನಾಗಲಿ, ಕಟ್ಟುನಿಟ್ಟಿನ ಕಾನೂನಿನ ಕ್ರಮವನ್ನಾಗಲಿ ನಿರೀಕ್ಷಿಸಲು ಆಗುವುದಿಲ್ಲ.

ladai book13ನಾನು ಹೇಳಿದ ಎರಡು ಘಟನೆಗಳ ಪೈಕಿ ಮೊದಲನೆಯದ್ದು 70ರ ದಶಕದಲ್ಲಿ ಉತ್ತರ ಕನರ್ಾಟಕದಲ್ಲಿ ಆಚರಣೆಯಲ್ಲಿದ್ದ ಓಕುಳಿ ಎಂಬ ಕೆಟ್ಟ ಸಂಪ್ರದಾಯ. ಮಾಚರ್್ನಿಂದ ಜೂನ್ ತಿಂಗಳ ಕಾಲಾವಧಿಯಲ್ಲಿ ಆ ಭಾಗದ ಬಹುತೇಕ ಹಳ್ಳಿಗಳಲ್ಲಿ ಓಕುಳಿ ನಡೆಯುತಿತ್ತು. ಆ ದಿವಸ ನೀರಿನ ಹೊಂಡ ಅಗೆದು, ಅದಕ್ಕೆ ನೀರು ತುಂಬುತ್ತಾರೆ. ಸಾಯಂಕಾಲ ಓಕುಳಿ ಉತ್ಸವ ಆರಂಭವಾಗುತಿತ್ತು. ದಲಿತ ಸಮುದಾಯದ ಹರೆಯದ ಹೆಣ್ಣುಮಕ್ಕಳನ್ನು ಬೀದಿ ಮೇಲೆ ನಿಲ್ಲಿಸಿ, ಊರಿನ ಮೇಲುಜಾತಿಯ ಗಂಡಸರು ಅವರಿಗೆ ನೀರನ್ನು ಎರೆಚುತ್ತಿದ್ದರು. ಬಿರುಸಿನಿಂದ ಬರುವ ನೀರಿನ ಹೊಡೆತವನ್ನು ತಪ್ಪಿಸಿಕೊಳ್ಳಲು ಆ ದಲಿತ ಯುವತಿಯರು ಬೀದಿಯುದ್ದಕ್ಕೂ ಒದ್ದೆ ಸೀರೆಯನ್ನುಟ್ಟುಕೊಂಡು ಓಡಾಡುತ್ತಿದ್ದರು. ಹೆಂಡ ಕುಡಿದು ಉನ್ಮತ್ತರಾದ ಮೇಲುಜಾತಿ ಗಂಡಸರು ಅವರನ್ನು ಬೆನ್ನು ಹತ್ತಿ, ಹೊಲಸುರಾಡಿ ನೀರಿನಿಂದ ಅಭಿಷೇಕ ಮಾಡಿಸುತ್ತಿದ್ದರು.

ಚಳಿಯಲ್ಲಿ ಗಡಗಡ ನಡುಗುತ್ತ ಓಡಾಡುವ ಮಹಿಳೆಯರನ್ನು ಸಾರಾಯಿ ಕುಡಿದು ಬೆನ್ನಟ್ಟಿ ಹೋಗುವ ಗಂಡಸರು, ಕಾಲು ಜಾರಿ ರಾಡಿಯಲ್ಲಿ ಉಳ್ಳಾಡುವ ಹೆಂಗಸರನ್ನು ಕಂಡು ಕೇಕೆ ಹಾಕುತ್ತಿದ್ದರು. ಯುವತಿಯರ ಅಂಗಾಂಗಗಳನ್ನು ಕಂಡು ಲೇವಡಿ ಮಾಡುತ್ತಿದ್ದರು. ಈ ಓಕುಳಿ ಸಂಜೆ 4 ರಿಂದ ರಾತ್ರಿ 7 ಗಂಟೆಯವರೆಗೆ ನಡೆಯುತಿತ್ತು. ಊರಲ್ಲಿ ಮೇಲುಜಾತಿಯ ಮಹಿಳೆಯರು ಕೂಡ ತಮ್ಮ ಸೋದರಿಯರಿಗೆ ಆಗುತ್ತಿದ್ದ ಅವಮಾನವನ್ನು ಕಂಡು “ಎಂಜಾಯ್” ಮಾಡುತ್ತಿದ್ದರೆಂದರೆ ಜಾತಿಗ್ರಸ್ಥ ಮನಸ್ಸುಗಳು ಎಷ್ಟು ಅಮಾನವೀಯವಾಗಿ ಇರುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು.

ನನ್ನ ಊರಾದ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಈ ಓಕುಳಿ ಪ್ರತಿ ವರ್ಷ ನಡೆಯುತಿತ್ತು. ಅದು 1975ನೇ ಇಸವಿ. ಆಗ
ಉಪರಾಷ್ಟ್ರಪತಿಯಾಗಿದ್ದ ಬಸಪ್ಪ ದಾನಪ್ಪ ಜತ್ತಿ ನಮ್ಮೂರಿನವರು. ಇಂತಹ ಊರಿನಲ್ಲಿ ಓಕುಳಿಯ ಈ ಹೇಯ ದೃಶ್ಯವನ್ನು ನಾನು ಕಣ್ಣಾರೆ ಕಂಡೆ. ಆಗ ನನ್ನ ವಯಸ್ಸು 21. ಎಡಪಂಥೀಯ ವಿಚಾರಗಳು ಅದೇ ತಾನೇ ಮೆದುಳನ್ನು ತಟ್ಟಿದ್ದರಿಂದ ಈ ದೃಶ್ಯ ನೋಡಿ, “ಎಂಜಾಯ್” ಮಾಡಲು ಮನಸ್ಸಾಗಲಿಲ್ಲ. ತುಂಬ ಸಂಕಟಪಟ್ಟುಕೊಂಡೆ. ಆಗ ದಲಿತ ಸಂಘರ್ಷ ಸಮಿತಿ ಕೂಡ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಹೀಗಾಗಿ ಇಂತಹ ಅನ್ಯಾಯಗಳಿಗೆ ಪ್ರತಿಭಟನೆ ಎಂಬುದೇ ಇರುತ್ತಿರಲಿಲ್ಲ.

ಈ ಓಕುಳಿ ನಡೆದ ಮರುದಿನ ನನ್ನ ಮನಸ್ಸು ತಡೆಯಲಾಗಲಿಲ್ಲ. ಎಲ್ಲ ಪತ್ರಿಕೆಗಳಿಗೂ ಕಾಗದ ಬರೆದೆ.ಆಗ ಕೊರಿಯರ್ ವ್ಯವಸ್ಥೆ ಇರಲಿಲ್ಲ. ಆದರೆ ಅಂಚೆಕಚೇರಿಯಲ್ಲಿ ಸಿಗುವ ಅಂತದರ್ೇಶೀಯ ಪತ್ರದಲ್ಲಿ ಈ ಬಗ್ಗೆ ಬರೆದು ಕಳುಹಿಸಿದೆ. ಅದು ಪ್ರಕಟವಾಗುತ್ತದೆ ಎಂಬ ನಂಬಿಕೆಯೂ ನನಗಿರಲಿಲ್ಲ. ಆದರೆ ಪತ್ರದ ಮೂಲಕವಾದರೂ ಪ್ರತಿಭಟಿಸಿದೆ ಎಂಬ ನೈತಿಕ ನೆಮ್ಮದಿ ಮಾತ್ರವಿತ್ತು. ಒಂದು ವಾರದ ತನಕ ಪತ್ರಿಕೆಗಳನ್ನು ನೋಡುತ್ತಲೇ ಇದ್ದೆ. ಆಗ ನಮ್ಮೂರಿಗೆ ಬರುತ್ತಿದ್ದ ಏಕಮಾತ್ರ ಕನ್ನಡ ಪತ್ರಿಕೆ “ಸಂಯುಕ್ತ ಕನರ್ಾಟಕ”. ಸಂಜೆ 7 ಗಂಟೆಗೆ ಬಸ್ ಮೂಲಕ ಬಂದು ಕೈಗೆ ಸೇರುತಿತ್ತು.

ಸಮಾಜವಾದಿ ಚಳವಳಿಯಿಂದ ಬಂದ ಖಾದ್ರಿ ಶಾಮಣ್ಣ ಆಗ ಸಂಯುಕ್ತ ಕನರ್ಾಟಕದ ಸಂಪಾದಕರಾಗಿದ್ದರು. ಎಸ್.ವಿ.ಜಯಶೀಲರಾವ್ ಸಹಾಯಕ ಸಂಪಾದಕರು. ಕೆ.ಜನಾರ್ದನ ಎಂಬ ಪ್ರಗತಿಪರ ಒಲವಿನ ಸ್ಥಾನಿಕ ಸಂಪಾದಕರು ಇದ್ದರು. ಓದುಗರ ವಿಭಾಗಕ್ಕೆಂದು ನಾನು ಕಳುಹಿಸಿದ ಪತ್ರ ಆಕಸ್ಮಿಕವಾಗಿ ಖಾದ್ರಿಯವರಿಗೆ ಸಿಕ್ಕಿದೆ. ಅವರು ತಕ್ಷಣ ಜಯಶೀಲರಾವ್ ಅವರನ್ನು ಕರೆದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಲು ಹೇಳಿದರು. 1975 ಜೂನ್ 19ರ ಸಂಚಿಕೆಯಲ್ಲಿ “ಷಂಡ ಸಮಾಜದಲ್ಲಿ ದುಶ್ಯಾಸನರ ಕೇಕೆ” ಎಂಬ ತಲೆಬರಹದಡಿಯಲ್ಲಿ ನನ್ನ ಪತ್ರ ಪ್ರಕಟವಾಯಿತು. ಸಂಯುಕ್ತ ಕನರ್ಾಟಕದ ಆವರೆಗಿನ ಇತಿಹಾಸದಲ್ಲಿ ಓದುಗರ ಪತ್ರವೊಂದು ಮುಖಪುಟದಲ್ಲಿ ಪ್ರಕಟವಾಗಿದ್ದು ಅದೇ ಮೊದಲು.

Yellamma worshippers travel by bullock cart to the Yellamma Temple in Saundatti, India, on the first day of the Yellamma Jatre (festival).  The Yellamma Jatre is an annual gathering of half a million Yellamma pilgrims who converge on the temple to worship the deity, Yellamma.  Amongst the rituals traditionally performed to appease Yellamma, young girls are dedicated as Devadasi or "temple servants".  These young girls are married to the deity and must spend their lives serving the deity which includes catering to the sexual needs of men in the community.  They may not marry a mortal and often end up working in brothels in India's urban centers. While the dedication ceremonies used to be performed in public at the Jatre and included parading the young girls naked through the crowds or covered in "neem" leaves, due to the Devadasi Prohibition Act, they are now performed in secret.

1975ರಲ್ಲಿ ದೇವರಾಜ ಅರಸು ಕನರ್ಾಟಕದ ಮುಖ್ಯಮಂತ್ರಿಯಾಗಿದ್ದರು. ಬಸವಲಿಂಗಪ್ಪ, ಕೆ.ಎಚ್.ರಂಗನಾಥ, ಎಂ.ವೈ.ಘೋರ್ಪಡೆ, ವೀರಪ್ಪ ಮೊಯಿಲಿ ಮುಂತಾದವರು ಸಚಿವ ಸಂಪುಟದಲ್ಲಿದ್ದರು. ಮೇಲುಜಾತಿ, ಮೇಲುವರ್ಗಗಳ ಯಜಮಾನಿಕೆ ವಿರುದ್ಧ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಒಂದುಗೂಡಿಸಿ ಕನರ್ಾಟಕದ ರಾಜಕೀಯಕ್ಕೆ ಹೊಸ ದಿಕ್ಕನ್ನು ನೀಡಿದ ಅರಸರು ಸಂಯುಕ್ತಕನರ್ಾಟಕದಲ್ಲಿ ಪ್ರಕಟವಾದ ನನ್ನ ಪತ್ರವನ್ನು ನೋಡಿ ತಕ್ಷಣ ಓಕುಳಿಯನ್ನು ನಿಷೇಧಿಸುವ ಆದೇಶ ಹೊರಡಿಸಿದರು. ಎಲ್ಲೆಲ್ಲಿ ಓಕುಳಿ ನಡೆಯುತ್ತದೆ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ದೇವರಾಜ ಅರಸು ಸಕರ್ಾರವೇನೋ ಓಕುಳಿಯನ್ನು ನಿಷೇಧಿಸಿತು. ಆದರೆ ಸಾವಳಗಿಯಲ್ಲಿ ಸಂಪ್ರದಾಯವಾದಿಗಳಿಂದ ನನಗೆ ಕಿರಿಕಿರಿ ಆರಂಭವಾಯಿತು. “ಇದನ್ನೆಲ್ಲ ಯಾಕೆ ಬರೆದೆ? ಪೇಪರ್ಗೆ ಯಾಕೆ ಕಳುಹಿಸಿದೆ? ಓಕುಳಿ ನಿಲ್ಲಿಸಿದರೆ ಮಳೆಯಾಗವುದಿಲ್ಲ. ಬರಗಾಲ ಬರುತ್ತದೆ” ಎಂದು ನಮ್ಮೂರಿನ ಪುಡಾರಿಗಳು ನನಗೆ ಹಿಂಸೆ ನೀಡತೊಡಗಿದರು. ಇಂತಹ ಮಾತುಗಳು ನಮ್ಮ ಸಂಬಂಧಿಗಳಿಂದಲೂ ಕೇಳಿ ಬಂದವು. ಆದರೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿದ ನಮ್ಮ ಮನೆಯಲ್ಲಿ ಯಾರೂ ಅದನ್ನು ತಪ್ಪೆಂದು ಹೇಳಲಿಲ್ಲ. ಆದರೆ ಮುಂದಿನ ವರ್ಷ ಮಳೆಯಾಗುವುದಿಲ್ಲ ಎಂದು ಜನರು ಕಿರಿಕಿರಿ ಮಾಡತೊಡಗಿದಾಗ ರೋಸಿ ಹೋದ ನಾನು, “ಮಳೆಯಾಗದಿದ್ದರೆ ಓಕುಳಿ ಮುಂದುವರೆಸೋಣ. ಆದರೆ ಅದರಲ್ಲಿ ಒಂದು ಸಣ್ಣ ಬದಲಾವಣೆ ಮಾಡೋಣ. ದಲಿತ ಹೆಣ್ಣುಮಕ್ಕಳ ಬದಲಾಗಿದೆ ನಮ್ಮ ಹೆಣ್ಣುಮಕ್ಕಳನ್ನು ಓಕುಳಿಗೆ ನಿಲ್ಲಿಸೋಣ” ಎಂದು ಕೋಪದಿಂದ ಹೇಳಿ ಎದ್ದು ಬಂದೆ.

ಆ ಚಿಕ್ಕವಯಸ್ಸಿನಲ್ಲಿ ಏಕಾಕಿಯಾಗಿ ಊರಿನವರನ್ನು ಎದುರು ಹಾಕಿಕೊಳ್ಳುವ ಧೈರ್ಯ ನನಗೆ ಬಂದಿದ್ದು ಎಡಪಂಥೀಯ ವೈಚಾರಿಕ ದೃಷ್ಟಿಕೋನದಿಂದ. ಯಾವಾಗ ನಾನು ತಿರುಗಿ ನಿಂತೇನೋ, ಆಗ ಹಿರಿಯರು ತಣ್ಣಗಾದರು. ಮರುವರ್ಷದಿಂದ ಸಾವಳಗಿಯಲ್ಲಿ ಮಾತ್ರವಲ್ಲ ಉತ್ತರ ಕನರ್ಾಟಕದ ಎಲ್ಲ ಜಿಲ್ಲೆಗಳಲ್ಲಿ ಓಕುಳಿ ನಿಷೇಧಿಸಲ್ಪಟ್ಟಿತ್ತು. ಕೆಲವಡೆ ಪೊಲೀಸರ ಕಣ್ಣುತಪ್ಪಿಸಿ, ಓಕುಳಿ ನಡೆದರೂ ದಲಿತ ಮಹಿಳೆಯರನ್ನು ಅವಮಾನಿಸುವ ಪದ್ಧತಿ ನಿಂತುಹೋಯಿತು.

ನನ್ನ ನೆನಪಿಗೆ ನಡೆದ ಇನ್ನೊಂದು ಘಟನೆ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯ ಬೆತ್ತಲೆ ಸೇವೆ. ಇದು 80ರ ದಶಕದಲ್ಲಿ ನಡೆದ ಘಟನೆ ಹರಕೆ ತೀರಿಸಲು ಹಿಂದುಳಿದ ವರ್ಗದ ಹೆಣ್ಣುಮಕ್ಕಳು ಬೆತ್ತಲೆಯಾಗಿ ಚಂದ್ರಗುತ್ತಿ ದೇವಾಲಯಕ್ಕೆ ಬರುತ್ತಿದ್ದರು. ಆಗ ಇದನ್ನು ತಡೆಯಲು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಬಿ.ಕೃಷ್ಣಪ್ಪ ಪ್ರತಿಭಟನೆಯೊಂದನ್ನು ಸಂಘಟಿಸಿದರು. ರಾಮಕೃಷ್ಣ ಹೆಗಡೆಯವರು ಆಗ ರಾಜ್ಯದ ಮುಖ್ಯಮಂತ್ರಿ. ಅವರ ಸಕರ್ಾರವೇನೋ ಬೆತ್ತಲೆಪೂಜೆ ನಿಷೇಧಿಸಿತು. ಆದರೆ ಅಂಧಶ್ರದ್ಧೆಯ ನಶೆಯೇರಿದ್ದ ಭಕ್ತರು ಚಂದ್ರೆಗುತ್ತಿಗೆ ಬರುವುದನ್ನು ನಿಲ್ಲಿಸಲಿಲ್ಲ.

ಡಿಎಸ್ಎಸ್ ಗೆಳೆಯರು ಪ್ರತಿಭಟನೆಗೆ ಮುಂದಾದಾಗ, ಕೃಷ್ಣಪ್ಪ ಅವರನ್ನು ಕೊಲೆ ಮಾಡುವ ಯತ್ನವೂ ನಡೆಯಿತು. ಘೋಷಣೆ ಹಾಕುತ್ತಿದ್ದ ಕಾರ್ಯಕರ್ತರನ್ನು ಮತ್ತೇರಿದ ಗೂಂಡಾಗಳು ಅಟ್ಟಾಡಿಸಿ ಹೊಡೆದರು. ಆಗ ಅಲ್ಲಿ ವಿಶೇಷ ತಹಶೀಲ್ದಾರ್ ಆಗಿದ್ದ ವಿಚಾರವಾದಿ ರುದ್ರಪ್ಪ ಹನಗವಾಡಿ ಇಂದಿಗೂ ಬೀಭತ್ಸ ಘಟನೆಗಳನ್ನು ನೆನಪಿಸಿಕೊಂಡು ಮಾತಾಡುತ್ತಿರುತ್ತಾರೆ.

bettale seve2ಸುಬ್ರಹ್ಮಣ್ಯ ಮಡೆ ಸ್ನಾನದ ವರದಿ ಓದಿದಾಗ, ಅರಸು ಮತ್ತು ಹೆಗಡೆ ಕಾಲದಲ್ಲಿ ಮುಂದೆ ಹೋಗಿದ್ದ ಕನರ್ಾಟಕ ಮತ್ತೆ ಮನುವಾದದ ಕತ್ತಲೆಯುಗಕ್ಕೆ ವಾಪಸು ಹೊರಟಿದೆಯಲ್ಲ ಎಂದು ವೇದನೆಯಾಯಿತು. 1975ರಲ್ಲಿ ಕಾಂಗ್ರೆಸ್ಗೆ ಸೇರಿದ ದೇವರಾಜ ಅರಸು, 1983ರಲ್ಲಿ ಜನತಾ ದಳಕ್ಕೆ ಸೇರಿದ ರಾಮಕೃಷ್ಣ ಹೆಗಡೆ ರಾಜ್ಯದ ಅಧಿಕಾರಸೂತ್ರ ಹಿಡಿದಿದ್ದರು. ಅವೆರಡು ಪಕ್ಷಗಳು ಸಂವಿಧಾನದಲ್ಲಿ ನಂಬಿಕೆ ಹೊಂದಿದ್ದರಿಂದ ಓಕುಳಿ ಮತ್ತು ಬೆತ್ತಲೆ ಸೇವೆಯಂತಹ ಕೆಟ್ಟ ಸಂಪ್ರದಾಯವನ್ನು ನಿಷೇಧಿಸಿದವು.

ಆದರೆ ಈಗ ರಾಜ್ಯದ ಅಧಿಕಾರ ಹಿಡಿದಿರುವ ಬಿಜೆಪಿ. ಈ ಪಕ್ಷದ ನಾಯಕಿಯಾಗಿದ್ದ ರಾಜಮಾತಾ ವಿಜಯರಾಜೇ ಸಿಂಧಿಯಾ ಸತಿ ಸಹಗಮನ ಪದ್ಧತಿಯನ್ನೇ ಬೆಂಬಲಿಸಿದವರು. ಸಂಘಪರಿವಾರದ ಅನೇಕ ನಾಯಕರು ಬಹಿರಂಗವಾಗಿ ಹೇಳದಿದ್ದರೂ ಅದು ಹಿಂದೂ ಸಂಪ್ರದಾಯದ ಭಾಗ ಎಂದು ಒಪ್ಪಿಕೊಂಡವರು. ಹಿಂದೂರಾಷ್ಟ್ರ ನಿಮರ್ಾಣವಾದಾಗ ಈ ಕರಾಳ ಸಂಪ್ರದಾಯವನ್ನು ಮುಂದುವರೆಸುವ ಹಿಡನ್ ಅಜೆಂಡಾ ಹೊಂದಿದವರು. ಇಂತಹ ಪರಿವಾರಕ್ಕೆ ಸೇರಿದ ಮುಜರಾಯಿ ಮಂತ್ರಿ ಡಾ. ವಿ.ಎಸ್.ಆಚಾರ್ಯ ಅವರು ಮಡೆ ಸ್ನಾನ ಜನರ ನಂಬಿಕೆ ಪ್ರಶ್ನೆ. ಜನರ ಧಾಮರ್ಿಕ ಸಂಪ್ರದಾಯ-ಆಚರಣೆ-ನಂಬಿಕೆಗಳಿಗೆ ಕಾನೂನಿನ ಹೆಸರಿನಲ್ಲಿ ಅಡ್ಡಿ ಬರಬೇಡಿ ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರು ಎಂದಿನಂತೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಸಕರ್ಾರವೇ ತಮ್ಮ ಬೆಂಬಲಕ್ಕಿದೆ ಎಂದು ಕೊಬ್ಬಿದ ಕುಕ್ಕೆ ಸುಬ್ರಹ್ಮಣ್ಯದ ಪುರೋಹಿತಶಾಹಿ ಗೂಂಡಾಗಳು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಶಿವರಾಂ ಅವರ ಮೇಲೆ ಹಲ್ಲೆ ಮಾಡಿ, ಥಳಿಸಿದ್ದಾರೆ. ಆದರೂ ಆಚಾರ್ಯರು, “ಅನಾದಿಯಿಂದ ನಡೆದು ಬಂದ ಆಚರಣೆಯನ್ನು ಏಕಾಏಕಿ ನಿಲ್ಲಿಸುವುದು ಸರಿಯಲ್ಲ. ಅಷ್ಠಮಂಗಲ ಪ್ರಶ್ನೆಯಲ್ಲಿ ಕೇಳಿ ನಂತ ನಿರ್ಧರಿಸೋಣ” ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಈ ಆಚಾರ್ಯರು ಸಕರ್ಾರದ ಹಿರಿಯ ಮಂತ್ರಿಗಳು. ಸಂವಿಧಾನದಲ್ಲಿ ನಿಷ್ಠೆ ಹೊಂದಿರುವುದಾಗಿ ಪ್ರಮಾಣ ಸ್ವೀಕರಿಸಿ, ಅಧಿಕಾರಕ್ಕೆ ಬಂದಿದ್ದಾರೆ. ಆದರೂ ಅಷ್ಠಮಂಗಲದ ಪ್ರಶ್ನೆ ಕೇಳಿ ತೀಮರ್ಾನಿಸುವುದಾಗಿ ಹೇಳುವಷ್ಟು ಅವಿವೇಕತನವನ್ನು ತೋರಿಸಿದ್ದಾರೆ. ಇನ್ನೂ ಮಂತ್ರಿಯಾಗಿರಲು ಅವರು ಅರ್ಹರಲ್ಲ. ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ ಉಡುಪಿ ಮಠದಲ್ಲಿ ದಬರ್ೆ ಕಟ್ಟಿಕೊಂಡು ಸೇವೆ ಮಾಡಲು ಹೋಗುವುದು ಕ್ಷೇಮ. ಮಾಧ್ಯಮಗಳಲ್ಲಿರುವ ಕೆಲ ಮನುವಾದಿಗಳು ಬ್ರಾಹ್ಮಣರು ಮತ್ತು ದಲಿತರು ಉಂಡ ಎಲೆ ಮೇಲೆ ಉರುಳಾಡಿ, ಮಡೆಸ್ನಾನ ಮಾಡುತ್ತಾರೆಂದು ಸುಳ್ಳು ಕತೆ ಕಟ್ಟಿ ಈ ಕಂದಾಚಾರವನ್ನು ಸಮಥರ್ಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಸಕರ್ಾರ ಹೋಗುವವರೆಗೆ ಇಂತಹ ಅವಿವೇಕಗಳಿಗೆ ಕೊನೆ ಎಂಬುದಿಲ್ಲ. ಬಹುಶಃ ಶ್ರೀರಾಮುಲು ವಿಜಯದ ನಂತರ ಆ ಕಾಲವೂ ಸನ್ನಿಹಿತವಾದಂತೆ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಕರ್ಾರವನ್ನೇ ನಂಬಿಕೊಂಡೇ ಕುಳಿತರೇ ಆಗದು. ದಲಿತ-ಪ್ರಗತಿಪರ ಸಂಘಟನೆಗಳು ಒಂದುಗೂಡಿ ಇಂತಹ ಅವಿವೇಕಿಗಳಿಗೆ ಕಿವಿ ಹಿಂಡಿ ಮಾತ್ರವಲ್ಲ, ಒದ್ದು ಬುದ್ಧಿ ಹೇಳಲು ಮುಂದಾಗಬೇಕಾಗಿದೆ.

‍ಲೇಖಕರು Admin

3 June, 2016

2 Comments

  1. Sangeeta Kalmane

    ಕಂದಾಚಾರ ಪ್ರತಿಭಟಿಸುವ ನಿಮ್ಮ ನಡೆ ಮೆಚ್ಚಲೇ ಬೇಕು.

  2. Vihi wadawadagi

    Sir nanu chikkavaniddaga kuda nam ooralli okuli naditaa ittu adre eega dalita gandumakkalannu adaralli todagisi khushi padtare okuli sampoorna nillabeku.Sir nimmannu Neenasam shibiradalli bheti aaguva avakaasha sikkittu dhanyavadagalu sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading