ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆತ್ತಲೆ ದೇಹ ದುಡಿಮೆಗೆ ನಿಂತಿದೆ

– ಶಿ.ಜು.ಪಾಶ

ಒಂದು ಕಡೆ ಏಕ್ತಾ ಕಪೂರಳ ‘ದ ಡರ್ಟಿ ಪಿಕ್ಚರ್’ ದೇಶದ ತುಂಬಾ ಅಗತ್ಯಕ್ಕೂ ಮೀರಿ ಸುದ್ದಿಮಾಡತೊಡಗಿದೆ. ಮತ್ತೊಂದು ಕಡೆ ಪಕ್ಕದ ಪಾಕಿಸ್ತಾನದಲ್ಲಿ ವೀಣಾ ಮಲ್ಲಿಕ್ ತನ್ನ ಬೆತ್ತಲೆ ದೇಹದಿಂದಾಗಿ ಸುದ್ದಿಯಾಗಿದ್ದಾಳೆ. ಎಲ್ಲರ ಕಣ್ಣೂ ಕೆಂಪಾಗು ವಂತೆ ಎಫ್ಎಚ್ಎಂ ಎಂಬ ಭಾರತದ ಪತ್ರಿಕೆಯೊಂದರ ಮುಖಪುಟದಲ್ಲಿ ತನ್ನ ನಗ್ನದೇಹವನ್ನು ಹಾಕಿಸಿಕೊಂಡಿದ್ದಾಳೆ. ಅಷ್ಟೇ ಆಗಿದ್ದರೆ ಪಾಕಿಸ್ತಾನಿಯರಿಗೆ ತಲೆ ನೋವಾಗುತ್ತಿರಲಿಲ್ಲವೇನೋ? ತನ್ನ ನಗ್ನದೇಹದ ಎಡಭುಜದ ಮೇಲೆ ಐಎಸ್ಐ ಮಾರ್ಕನ್ನು ಕೆತ್ತಿಸಿಕೊಂಡಿದ್ದಾಳೆ. ಸಮಸ್ಯೆಯಾಗಿರುವುದು ಅಲ್ಲಿಯೇ. ಇದರಿಂದ ಇಡೀ ಪಾಕಿಸ್ತಾನ ಬೆವೆತುಹೋಗಿದೆ.

ಪಾಕಿಸ್ತಾನದ ಉರ್ದು ಸಿನಿಮಾಗಳ ಮಟ್ಟಿಗೆ ವೀಣಾಮಲ್ಲಿಕ್ ದೊಡ್ಡಹೆಸರು. ಅಲ್ಲಿ ಆಕೆ ಕುಂತರೂ ಸುದ್ದಿ, ನಿಂತರೂ ಸುದ್ದಿ. ಸುಮಾರು 10ವರ್ಷಗಳ ಹಿಂದೆ ಈಕೆ ಪಾಕಿಸ್ತಾನದ ಸಣ್ಣ ಮತ್ತು ದೊಡ್ಡಪರದೆಯಲ್ಲಿ ಕಾಣಿಸಿಕೊಂಡವಳು. ಅಲ್ಲಿನ ನ್ಯೂಸ್ ಚಾನಲ್ಗಳಲ್ಲಿ ಕೆಲಸಮಾಡಿದವಳು. ಓರ್ವ ನಟಿ, ಮಾಡೆಲ್ ಹಾಗೂ ಹಾಸ್ಯಕಲಾವಿದೆ. ಹುಟ್ಟಿದ್ದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ. ಈಕೆಯ ಅಪ್ಪ ಅಲಿ ಮಲ್ಲಿಕ್ ಅದೇ ಪಾಕಿಸ್ತಾನದ ಸೈನ್ಯದಲ್ಲಿ ಓರ್ವ ಯೋಧ. ಹಾಲಿ ವೀಣಾಮಲ್ಲಿಕ್ ವಿಶ್ವ ಆರೋಗ್ಯ ಸಂಸ್ಥೆಯ ಪಾಕಿಸ್ತಾನದ ಪ್ರತಿನಿಧಿ ಬೇರೆ.

ವೀಣಾಮಲ್ಲಿಕ್ ಳ ಅಡ್ವೆಂಚರ್ ಗಳು ಕೆಲವೊಮ್ಮೆ ಪಾಕಿಸ್ತಾನಕ್ಕೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿವೆ. ಮತ್ತೆ ಕೆಲವೊಮ್ಮೆ ಇಡೀ ಜಗತ್ತಿನ ತುಂಬಾ ಮುಜುಗರಕ್ಕೂ ಒಳಪಡಿಸಿವೆ. ಸುಮಾರು 70ಮಿಲಿಯನ್ ರೂಪಾಯಿಗಳ ಖರ್ಚಿನಲ್ಲಿ ಈಕೆ ಯದೊಂದು ವಿಶೇಷ ಸಿನಿಮಾ ಬಂದಿತ್ತು. ಇಂಡೋ-ಪಾಕ್ ವೆನ್ಚರ್ ಫಿಲ್ಮ್ ಎಂದೇ ಅದನ್ನು ಈಗಲೂ ಕರೆಯಲಾಗುತ್ತದೆ. ಅದು ಪಂಜಾಬಿ ಭಾಷೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸೌಹಾರ್ದತೆಗೆ ಸಾಕ್ಷಿ ಎಂಬಂತೆ ನಿರ್ಮಿಸಲಾಗಿತ್ತು. ಅದರ ಹೆಸರು ‘ಪಿಂಡ್ ದಿ ಕುರಿ’ ಎಂದು. ಈ ಸಿನಿಮಾ ಬಂದಿದ್ದು 2003ರಲ್ಲಿ. ಆದರೆ, ದೊಡ್ಡ ಹಿಟ್ ಆಗಲಿಲ್ಲ. ಹಾಕಿದ ದುಡ್ಡು ಕೂಡ ವಾಪಸ್ಸು ಬರಲಿಲ್ಲ. ಈ ಸಿನಿಮಾಕ್ಕಿಂತ ಮುಂಚೆ ಒಂದು ಒಳ್ಳೆಯ ಕಮರ್ಷಿಯಲ್ ಹಿಟ್ ಸಿನಿಮಾ ನೀಡಿದ್ದಳು ವೀಣಾಮಲ್ಲಿಕ್. ಅದು 2000ನೇ ಇಸವಿಯಲ್ಲಿ. ಪಾಕಿಸ್ತಾನದಲ್ಲಿ ಬಿಡುಗಡೆಯಾದ ಉರ್ದು ಚಿತ್ರ ‘ತೇರೆ ಪ್ಯಾರ್ ಮೇ.’

ಹೀಗೆ, ದೊಡ್ಡ ಪರದೆ, ಸಣ್ಣ ಪರದೆ ಎಂದೆಲ್ಲಾ ಸಾಕಷ್ಟು ಕೆಲಸಮಾಡಿದ ವೀಣಾಮಲ್ಲಿಕ್ ಭಾರತದಲ್ಲಿ ಆಯೋಜನೆಗೊಳ್ಳುತ್ತಿರುವ ಕಲರ್ ಟಿವಿಯ ಬಿಗ್ ಬಾಸ್ -4ರಲ್ಲಿ ಕಾಣಿಸಿಕೊಂಡಿದ್ದಳು. ಇನ್ನೇನು ಫೈನಲ್ ಗೆ  ತಲುಪಬೇಕು ಎನ್ನುವಾಗ ಸ್ಪರ್ಧೆಯಿಂದ ಹೊರಕ್ಕೆ ಬಿದ್ದಿದ್ದಳು. ಅದಕ್ಕಿಂತ ಮುಂಚೆ ಈಕೆಗೆ ರೆಡ್ ಕಾರ್ಪೆಟ್ ಸಿಕ್ಕಿದ್ದು ಲಕ್ಸ್ ಸ್ಟೈಲ್ ಅವಾರ್ಡ್ ಗೆದ್ದಾಗ. ಕ್ರಿಕೆಟ್ ಜಗತ್ತಿಗೂ ಕೂಡ ವೀಣಾಮಲ್ಲಿಕ್ ಗೊತ್ತಿದ್ದಾಳೆ. ತಾನು ಪ್ರೀತಿಸುತ್ತಿದ್ದ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಆಸೀಫ್ ನ ವಿರುದ್ಧವೇ ಈಕೆ ಮ್ಯಾಚ್ ಫಿಕ್ಸಿಂಗ್ ನ ಬಿರುಗಾಳಿ ಎಬ್ಬಿಸಿದ್ದಳು. ತನ್ನ ಮಾಜಿ ಪ್ರೇಮಿಯ ವಿರುದ್ಧವೇ ಹೀಗೆ ಬಹಿರಂಗವಾಗಿ ಹೇಳಿಕೊಂಡು ಜಗತ್ತಿನ ಗಮನ ಸೆಳೆದಿದ್ದಳು.

ಪಾಕಿಸ್ತಾನದಲ್ಲಿ ವೀಣಾಮಲ್ಲಿಕ್ ಎಂದರೆ ಈಗ ಪ್ರೀತಿಸುವವರೆಷ್ಟು ಜನರಿದ್ದಾರೋ ಅಷ್ಟೇ ಜನ ದ್ವೇಷಿಸುವವರು ಹುಟ್ಟಿಕೊಂಡಿದ್ದಾರೆ. ಭಾರತ ಮೂಲದ ಎಫ್ಎಚ್ಎಂ ಮ್ಯಾಗಝೀ ನ್ ನ ಡಿಸೆಂಬರ್ ಸಂಚಿಕೆಯಲ್ಲಿ ಬೇರೊಬ್ಬರ ಚಳಿಬಿಡಿಸುವ ತನ್ನದೇ ನಗ್ನದೇಹದ ಚಿತ್ರ ಪ್ರಕಟಿಸಿಕೊಂಡಿದ್ದಾಳೆ. ಭಾರತದ ವಿರುದ್ಧ ಕೆಲಸಮಾಡುವ ಉಗ್ರರಿಗೆ ಪಾಕಿಸ್ತಾನದ ಐಎಸ್ಐ  ಸ್ಪೈ ಏಜೆನ್ಸಿಯ ಮಾತುಗಳು ಆಗಾಗ ಭಾರತದಲ್ಲಿ ಕೇಳುತ್ತಿರುತ್ತೇವೆ. ಅಂತಹ ಐಎಸ್ಐ ಏಜೆನ್ಸಿಯ ಮಾರ್ಕ ನ್ನು ತನ್ನ ಬೆತ್ತಲೆ ದೇಹದ ಎಡ ಭುಜದ ಮೇಲೆ ಅಚ್ಚೆ ಹಾಕಿಸಿ ಕೊಂಡು ಫೋಸ್ ನೀಡಿ ರುವ ವೀಣಾ ಮಲ್ಲಿಕ್ ಈಗ ಪಾಕಿಸ್ತಾನದ ಕೆಂಗಣ್ಣುಗಳಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ತಾನು ನಗ್ನದೇಹದ ಚಿತ್ರ ತೆಗೆಯಲು ಬಿಟ್ಟಿಲ್ಲ. ಅದು ತನ್ನದಲ್ಲ ಎಂಬಂತೆ ಮಾತನಾಡತೊಡಗಿದ್ದಾಳೆ.

ಅದೇಕೆ ಹೀಗೆ ಬೆತ್ತಲಾಗಬೇಕೋ? ಆನಂತರ ಹೀಗೇಕೆ ನುಣುಚಿಕೊಳ್ಳಬೇಕೋ? ಇದು ಕೇವಲ ಪಾಕಿಸ್ತಾನದ ಕಥೆ ಮಾತ್ರ ಅಲ್ಲ. ಬಾರತದಲ್ಲಿ ಕೂಡ ಒಬ್ಬಳಿದ್ದಾಳೆ. ಆಕೆಗೆ ತನ್ನ ಬೆತ್ತಲೆ ದೇಹ ಮಾಡಿಕೊಂಡು ಸುದ್ದಿಯಾಗುವ ಚಟ. ಆಕೆಯ ಹೆಸರು ಪೂನಂ ಪಾಂಡೆ. ಭಾರತ ವಿಶ್ವಕಪ್ ಗೆದ್ದರೆ ಸಾರ್ವಜನಿಕವಾಗಿ ಬೆತ್ತಲಾಗುವ ಮಾತನಾಡಿದ್ದಳು ಈಕೆ. ಆನಂತರ ರಾತ್ರೋ ರಾತ್ರಿ ಸುದ್ದಿಯಾಗಿಬಿಟ್ಟಳು. ಅದಾದ ಮೇಲೆ ಅಲ್ಲಲ್ಲಿ ತನ್ನ ಅರೆಬರೆ ನಗ್ನದೇಹದ ಚಿತ್ರಗಳನ್ನು ವೆಬ್ ಸೈಟ್ ಗಳಲ್ಲಿ ಹಾಕಿಕೊಳ್ಳುತ್ತಿರುತ್ತಾಳೆ. ಈಗ ನಡೆಯುತ್ತಿರುವ ಬಿಗ್ ಬಾಸ್  -5 ಟಿವಿ ಶೋನಲ್ಲಿ 2ಕೋಟಿ ಕೊಟ್ರೂ ಬೆತ್ತಲಾಗಲ್ಲ ಎಂದು ಹೇಳಿಕೊಂಡು ಸುದ್ದಿಯಾಗಲು ಪ್ರಯತ್ನಿಸಿ ದ್ದಳು. ಅಯ್ಯೋ ನಿನಗ್ಯಾರು ಕರೆದರು? ಎಂದು ಬಿಗ್ ಬಾಸ್ ನ ಆಯೋಜಕರು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಇನ್ಯಾವತ್ತೂ  ಬಿಗ್ ಬಾಸ್  ಈಕೆಯನ್ನು ಕರೆಯಲು ಸಾಧ್ಯವೇ ಇಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ತುಂಬುಉಡುಗೆಯ ಕಲಾವಿದೆ ವಿದ್ಯಾಬಾಲನ್ ಕೂಡ ಡಿಸೆಂಬರ್ ನಲ್ಲಿ ಮೈಚಳಿಬಿಟ್ಟು ಡರ್ಟಿ ಪಿಕ್ಚರ್ ನಲ್ಲಿ ನಟಿಸಿ ದ್ದಾಳೆ. ಈಗಾಗಲೇ ಈ ಸಿನಿಮಾ ಕಣ್ತುಂಬಿಕೊಂಡವರೆಲ್ಲ ರೋಮಾಂಚನದಲ್ಲಿ ಮುಳುಗಿದ್ದಾರೆ. ಅರೆಬೆತ್ತಲಾಗಿ ನಟಿಸುತ್ತಿದ್ದ ಸಿಲ್ಕ್ ಸ್ಮಿತಾ ಕೊನೆಗೆ ಆತ್ಮಹತ್ಯೆಮಾಡಿಕೊಂಡಿದ್ದಳು. ಅದೇ ಪಾತ್ರ ವಿದ್ಯಾಬಾಲನ್ ಮಾಡಿದ್ದಾಳೆ. ಇವರಿಗೆಲ್ಲಾ ತಮ್ಮ ದೇಹದ ಮೇಲಿನ ಬಂಡವಾಳ ಗೊತ್ತು. ನಗ್ನದೇಹಗಳೇ ಈಗ ಪಿಶಾಚಿಗಳಂತೆ ಎಲ್ಲೆಲ್ಲೂ ಕಂಡುಬರುತ್ತಿವೆ. ನಗ್ನತೆಯೆಂಬುದು ಈಗ ಸಾರ್ವಜನಿ ಕವಾಗಿಬಿಟ್ಟಿದೆ. ದೇಹವೇ ದುಡಿಯುತ್ತಿದೆ. ಮನಸ್ಸು ಮತ್ತು ಹೃದಯ ಸಾಯುತ್ತಿವೆ.

‍ಲೇಖಕರು G

14 December, 2011

8 Comments

  1. D.RAVIVARMA

    ನಿಮ್ಮ ಲೇಖನ ವಾಸ್ತವದ ಸಾಮಾಜಿಕ ಚಿತ್ರಣವನ್ನು ಮನಮುಟ್ಟುವಂತೆ ,ಹಾಗೆಯೇ ,ಒಂದಿಸ್ತು ಗಮ್ಬೀರವಾದ ಆಲೋಚನೆಯತ್ತ ನಮ್ಮನ್ನು ಕೊಂಡ್ಯುತ್ತದೆ ” ನಗ್ನತೆ ಎಂಬುದು ಈಗ ಸರ್ವಜನಿಕವಾಗಿಬಿಟ್ಟಿದೆ ದೇಹವೇ ದುಡಿಯುತ್ತದೆ ,ಮನಸ್ಸು ಮತ್ತು ಹೃದಯ ಸಾಯುತ್ತಿವೆ ” ಎಂಥ ಅದ್ಬುತ ಆಲೋಚನೆ, ದಾಸರ ಮಾತು ನೆನಪಿಗೆ ಬರುತ್ತಿದೆ,ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ,ಬಂದು ಹೋಗುವ ನಡುವೆ ಬರೀ ಕತ್ತಲೆ , , ಈ ನಗ್ನತೆ ಎನ್ನುವುದು, ಇಂದಿನ ಬೆಳವಣಿಗೆಯಲ್ಲ , ಇಂದ್ರನ ಅಸ್ತನದಲ್ಲಿ ಇದ್ದ ರಂಬೆ ಉರ್ವಸಿ,ಮೇನಕ, ಅವರು ಕೂಡ ತಮ್ಮ ನತ್ಯ್ಗಳಲ್ಲಿ ನಗ್ನತೆ ಪ್ರದರ್ಸಿಸುತ್ತಿದ್ದರು,ಬಟ್ ಅಲ್ಲಿ ಅದಕ್ಕೊಂದು ಚೌಕಟ್ಟು ಇತ್ತು,ಹಾಗು ಅಸದು ಎಲ್ಲೇ ಮೀರುತ್ತಿರಲಿಲ್ಲ,,ನನಗೆ ಇದು ಒಂದು ಮಾನಸಿಕ ಅವಸ್ತೆ ಏನೋ ಅನಿಸುತ್ತಿದೆ, ಇನ್ದೊಮ್ಮೆ ಪ್ರೊತಿಮ ಬೇಡಿ ಗೋವಾ ದಲ್ಲಿ “nude ವಾಕ್” ಮಾಡಿದ್ದೂ,ಅಗತ್ಯ್ವಿದಿದ್ದರು,ಸಿನೆಮಾಗಳಲ್ಲಿ, ನಟಿಯರ ನ್ನು, ನಗ್ನರನ್ನಗಿಸಿ,ದುಡ್ಡು ಮಾಡುತ್ತಿರುವ cine producers , ಕಾಮಪ್ರೋಚದಕ,ಲೇಖನ, ಚಿತ್ರ,ಗಳನ್ನೂ ಪ್ರಕಟಿಸಿ ದುಡ್ಡು ಮಾಡುತ್ತಿರುವ ಸಂಪಾದಕರು , ಈಗೀಗಂತೂ ಇಂಟರ್ನೆಟ್ ನಲ್ಲಿ ಆ ನಗ್ನತೆಯಿಂದೆ ಜೋತುಬಿದ್ದಿರುವ ಯುವಜನಾಂಗ, ನಾವೆಲ್ಲಾ ಎಲ್ಲಿ ಲ್ಯಾಂಡ್ ಆಗುತ್ತಿದ್ದೇವೆ , ಇದರ ಹಿಂದಿನ ಕಾರಣಗಳೇನು, ನಮ್ಮ ಸಮಾಜ ಬಹು ದೊಡ್ಡ ಧಾರ್ಮಿಕ ಸಮಜವೆಂದು ಬಡಾಯಿ ಕೊಳ್ಳುತ್ತಿರುವ ಈ ನೆಲದಲ್ಲಿ ಹೀಗೇಕೆ , ಇದು ಮುಂದಿನ ದಿನಗಳಲ್ಲಿ ,ತರಬಹುದಾದ ಸಮಸ್ಯೆಗಳೇನು, ಆಲೋಚಿಸಬೇಕಾಗಿದೆ, ಅಲ್ಲವೇ, ಬೆಕ್ಕಿಗೆ ಘಂಟೆ ಕಟ್ಟುವ ವರು ಯಾರು,…….
    ರವಿ ವರ್ಮ ,ಹೊಸಪೇಟೆ.

    • Rankusa

      @ D.RAVIVARMA:

      “ಇಂದ್ರನ ಅಸ್ತನದಲ್ಲಿ ಇದ್ದ ರಂಬೆ ಉರ್ವಸಿ,ಮೇನಕ, ಅವರು ಕೂಡ ತಮ್ಮ ನತ್ಯ್ಗಳಲ್ಲಿ ನಗ್ನತೆ ಪ್ರದರ್ಸಿಸುತ್ತಿದ್ದರು,ಬಟ್ ಅಲ್ಲಿ ಅದಕ್ಕೊಂದು ಚೌಕಟ್ಟು ಇತ್ತು,ಹಾಗು ಅಸದು ಎಲ್ಲೇ ಮೀರುತ್ತಿರಲಿಲ್ಲ…..” <——— this is more hilarious than some points in the article itself! ಅಂದಹಾಗೆ ರವಿವರ್ಮರೆ, ತಾವುಗಳು ಅದೆಷ್ಟು ಬಾರಿ "ಇಂದ್ರನ ಅಸ್ತನಕ್ಕೆ ಭೆತಿಯಿತ್ತು ರಂಬೆ ಉರ್ವಸಿ,ಮೇನಕ, ತಿಲೊತಮೆಯರ ಎಲ್ಲೇ ಮಿರದ, ಚೌಕಟ್ಟಿನೊಲಗಿರುವ, ನಗ್ನಪುರ್ಣ ನೃತ್ಯವಾನ್ನು ಅಸ್ವಾದಿಸಿರುವಿರೆಂದು ತಿಳೀಸಿದರೆ, ಮರ್ತ್ಯಲೊಕವೆಂಬ ನರಾಕದ green card ಹೊಂದಿರುವ ನವುಗಳು ಮುಂದೆಂದಾದರೂ ಚಿತ್ರಗುಪ್ತನ Tally software error ನಿಂದಾಗಿ ಸುರಲೋಕಕ್ಕೆ promote ಅಗುವ ಸಂಧರ್ಭವೋದಗಿದರೆ ನೀವು ತಿಲಿಸಿದೊಪಾದಿಯಲ್ಲಿಯೇ ಆ ಸುರಸುಂದರ ಸುರಬಾಲೆಯರ "ಎಲ್ಲೆಮೀರದ ಚೌಕಟ್ಟಿನೊಳಗಿರುವ ನಗ್ನತಾಪ್ರದರ್ಶನ"(???) ವನು ಅಸ್ವಾದಿಸುವೆವು! let's also know how much money we need to deposit with ಜಯ-ವಿಜಯರು in advance to get those 3D glasses that enhance the viewing experience! 🙂

      "ನನಗೆ ಇದು ಒಂದು ಮಾನಸಿಕ ಅವಸ್ತೆ ಏನೋ ಅನಿಸುತ್ತಿದೆ,…." <——— the saying is "happiness is a state of mind," but not nudity. ವಿಪರ್ಯಾಸವೇನೆಂದರೆ ಈ ಮಾತನ್ನು ತಾವುಗಳೇ ಹೇಳಿರುವುದು, ಹಾಗೂ ತಾವುಗಳೇ ಮರೆತಿರುವುದು. ಇಲ್ಲಿರೋ link ನಲ್ಲಿರುವ ನಿಮ್ಮದೇ comment ಓದಿ. "ನೀವು ಹೇಳಿದ ಹಾಗೆ ಸಂತಸ ಎನ್ನುವುದು ಮಾನಸಿಕ ಸ್ಥಿತಿ ಅಸ್ಟೆ."(http://avadhimag.online/?p=41924). ಬಹುಶಃ ತಾವು "ಅಸ್ವಸ್ಥತೆ" ಎಂದು ಹೇಳಲು ಬಯಸಿದ್ರಿ ಅಂತ ಅನ್ಸುತ್ತೆ, ಇರಲಿ. ಬಹುಶಃ ಹೇಳಿದ್ದನ್ನು ಮರೆಯುವುದು ನಿಮ್ಮ problem ಆದರೆ, ಕೇವಲ ಬೇಡದ್ದನ್ನು ನೆನಪಿಟ್ಟುಕೊಳ್ಳುವುದು ನನ್ನ ಅಸ್ವಸ್ಥತೆ ಇರಬಹುದೇನೋ ಅಲ್ವಾ!? 🙂 ಅಲ್ಲಾ ಅದೇನು article ನ ಓದಿ ಅರ್ಥ ಮಾಡ್ಕೊಂಡು comment ಮಾಡ್ತಿರೋ ಅಥವಾ time pass ಗೆ ನಂದೂ ಒಂದ್ signature ಇರಲಿ ಅಂತ ಮಾಡ್ತಿರೋ ಗೊತ್ತಾಗಲ್ಲಪ್ಪ. ನೀವು ಹೀಗೆ 'ಭಲೆ ಭಲೆ' ಅಂತ comment ಮಾಡೋದು, ಅವರು 'ಆನೆ ನಡೆದಿದ್ದೇ ದಾರಿ, ನಾನು ಬರೆದಿದ್ದೇ ಕಾವ್ಯ' ಅಂದ್ಕೊಂಡು ಇಷ್ಟಾಬಂದಂಗೆ ಬರಕೊಂಡು ಹೋಗೋದು, ನಾವು ಅಂತಾದ್ನ ಓದ್ಕೊಂಡು time waste ಮಾಡ್ಕೊಳೋದು—-ಇದು ಯಾವಾಗ ನಿಲ್ಲುತ್ತೋ ಏನೋಪ್ಪ? "ಹಾಗಿದ್ರೆ ಮೊದ್ಲು ಓದೋದ್ ನಿಲ್ಸೋ ಮಗನೇ" ಅಂತೀರಾ? … ಅದೂ ಒಂಥರಾ ಸರೀನೆ ಬಿಡಿ…

      • D.RAVIVARMA

        ಪ್ರಿಯ rankusa ಅವರೇ ನನ್ನ ಪ್ರತಿಕ್ರಿಯೆ ಓದಿದ್ದಕ್ಕೆ ಮೊದಲು ಧನ್ಯವಾದಗಳು . ನೀವು ವ್ಯಂಗವಾಗಿ ನಾನು ಸ್ವರ್ಗಕ್ಕೆ ಯಾವಾಗ ಹೋಗಿದ್ದೆ ಎಂದು ಕಿಚಾಇಸಿದ್ದೀರಿ , ಗುರುವೇ ನಾನು ಪೌರಾಣಿಕ ಸಿನೆಮಾಗಳಲ್ಲಿ ನೋಡಿದನ್ನು ಆ movement ge, relate ಮಾಡಿ ಬರೆದೆ, ಹಾಗಂತ ಇಡೀ ಲೇಖನ ಇಸ್ತವಾಯ್ತು ಅಂತಾ ಅಲ್ಲ, ಬಟ್ ಆ ಸಮಸ್ಯೆ ಇರುವುದಂತೂ ಸತ್ಯ ,ಇದು ಎಲ್ಲೆಮೀರಿ ನಮ್ಮ ಮುಂದಿನ ಜನಾಂಗದ ಸಾಮಾಜಿಕ ಬದುಕನ್ನು ಎತ್ತ ಕೊಂದ್ಯ್ಯುತ್ತದೆ ಎನ್ನುವ ಆತಂಕ ,ನಿಮ್ಮ ಹಾಗೆ ಗಂಬೀರ ವಿಮರ್ಶಕ ನಾನಲ್ಲ ,ಏನೋ ಓದಿದಮೇಲೆ ಆ ತಕ್ಷಣ ನನಗನಿಸಿದ್ದನ್ನು ನನ್ನ ತೊದಲು ಬಾಷೆಯಲ್ಲಿ ಬರೆಯುತ್ತಿದ್ದೇನೆ. ಅದು ಹೀಗೆ ಓದುಗರಿಗೆ iritate ಆಗುತ್ತದೆ ಅನ್ನುವುದಾದರೆ ಪ್ರತಿಕ್ರಿಯೆ ಬರೆಯುವುದನ್ನು ನಿಲ್ಲಿಸಿ ಮೂಕ ಓದುಗನಾಗಿಬಿದುತ್ತೇನೆ. ವಂದನೆಗಳು.
        ರವಿ ವರ್ಮ ಹೊಸಪೇಟೆ.

  2. Subramanya Hegde

    vidya balan rannu ivarigella holisiruvudu sari enisuttilla. ‘Dirty Picture’ na dialogue gaLu arthavagiddare ee reeti maatugalu baruttiralillaveno. mattu lekhanadalli hosatenu kanuttilla. gottiruva vishayagala sangrahadantide. kshamisi

    • Rankusa

      @ Subramanya Hegde: your comments make sense. and when you think you’ve created something that makes sense, then don’t be apologetic until it proves to be wrong. and please use either the kannada or english scripts to write in the respective languages. its quite difficult to read the transliterated stuff. thanks!

  3. Chandra

    tumba chennagide…

  4. Rankusa

    “ಹಾಸ್ಯಾಸ್ಪದ!”—– that’s the very first word that flashed across my mind after going through the article…sadly.

    first of all, it is not clear what the author is really hurt about — is it about posing nude? or posing nude by a paki model? posing nude by a paki model with a bold ISI tattoo on her body? or is it about the shameful state of pakistan as one of its models posed nude? …anomaly, anomaly, and more anomaly.

    i don’t think the problem is not really with posing nude. for we’ve already got enough Indian names on that list (not just one ಪೀಪಿ a.k.a. Poonam Pandey). to say- Protima Bedi, Madhu Sapre/Milind Soman, Mamta Kulkarni, and Lakshmi Menon. if the question is about posing nude by a paki model, then the answer would be : “It is none of our business to bother about.” if the worry is all about the ISI mark, then it is good to understand that all abbreviations DO NOT stand for Inter-Services Intelligence, which happens to be pak’s intelligence agency. it could also be the abbreviation of our erstwhile “Indian Standards Institute,” whose job was to make an Indian consumer believe that the product he/she is using has been “Tested OK” (thoroughly!)- adding a bit of humor. it deals a lot with something called ‘point of view,’ i.e. how we see things. doesn’t it? and well, no Indian will ever be bothered even to think about the last question.

    fun apart, if the essence of the article is to destroy borders and see everything on a humanitarian basis; and if the concern is about ‘nudity,’ then nudity, eroticism, and sex have been an integral part of our own very culture. heard of Khajuraho and Kamasutra?? well, when these things became taboos is another story; let’s not get in there.

    “ವಿದ್ಯಾಬಾಲನ್ ಕೂಡ ಡಿಸೆಂಬರ್ ನಲ್ಲಿ ಮೈಚಳಿಬಿಟ್ಟು ಡರ್ಟಿ ಪಿಕ್ಚರ್ ನಲ್ಲಿ ನಟಿಸಿ ದ್ದಾಳೆ….. … ಅರೆಬೆತ್ತಲಾಗಿ ನಟಿಸುತ್ತಿದ್ದ ಸಿಲ್ಕ್ ಸ್ಮಿತಾ ಕೊನೆಗೆ ಆತ್ಮಹತ್ಯೆಮಾಡಿಕೊಂಡಿದ್ದಳು….” i’m sorry but i did have the loudest laugh of my life when i read these lines. i guess you’ve watched a movie after a long gap of 20-30 years. of late, which actress is not showing (or made to show) some skin dude?? and the tone is in such a way that whoever exposes, will end up committing suicide (!?) huh.

    “ನಗ್ನದೇಹಗಳೇ ಈಗ ಪಿಶಾಚಿಗಳಂತೆ ಎಲ್ಲೆಲ್ಲೂ ಕಂಡುಬರುತ್ತಿವೆ…” question yourself honestly, how many times have your eyes not rolled up and down the picture of the ‘ಪಿಶಾಚಿ’ posted here? (you can’t deny, coz it is the male instinct!) in that case, “ನಾನು ಹೇಳುವುದನ್ನು ಮಾಡು, ನಾನು ಮಾಡುವುದನ್ನು ಮಾಡಬೇಡ” ಎಂಬ hypocrisy ಏಕೆ? ಅದ್ಯಾರ್ದೋ ಬಾಯಲ್ಲಿ ಭಗವದ್ಗೀತೆ ಕೇಳ್ದಂಗೆ ಆಯ್ತಪ್ಪ.

    “ದೇಹವೇ ದುಡಿಯುತ್ತಿದೆ. ಮನಸ್ಸು ಮತ್ತು ಹೃದಯ ಸಾಯುತ್ತಿವೆ…” this opens up a brilliant logical proposition.

    1. heart is a part of the body, and therefore, it represents the body itself on a smaller scale. if it is to be viewed in the “emotional” dimension, even then it needs a ‘body’ to express its emotions.
    2. even if the mind works (as it always does), it also needs the help of the body to do the things that it wants to achieve (psychokinesis is yet a far off dream)
    3. therefore, it is ultimately ‘the body’ which has to work to get the things done, and it is the body that becomes ‘the most’ important aspect among the three. in that case, what is the harm in making use of one’s body to survive??

    “ನಗ್ನತೆಯೆಂಬುದು ಈಗ ಸಾರ್ವಜನಿ ಕವಾಗಿಬಿಟ್ಟಿದೆ”….. agreed. but have you ever thought about “WHY” it has become such a forceful phenomenon these days? well, which normal human being would like to expose deliberately? besides gaining publicity, there might be a million other reasons behind one posing nude. you, me, and anyone here–all of us like to survive, all of us want to experience the best things in life, don’t we? and in this cut-throat competitive era, struggle for existence has become much more difficult. in that case, may be, posing nude was that model’s way of using her body to survive and get the things that her mind craves for, who knows?? a financier will see it as a high-risk, high-return investment, and a philocalist will invariably think- “how many are blessed with a body like that!?”

    take it on a lighter note. i know i’m wrong at many places 😉

    regs,
    -R

  5. shama, nandibetta

    ದೇಹವೇ ದುಡಿಯುತ್ತಿದೆ. ಮನಸ್ಸು ಮತ್ತು ಹೃದಯ ಸಾಯುತ್ತಿವೆ…. beautiful lines sir… liked it..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading