ಪ್ರಜ್ಞಾ ಮತ್ತೀಹಳ್ಳಿ
ನನ್ನ ರೂಮು ಮೇಟು ಸ್ವಯಂಪ್ರಭಾ ಝಾ ಎಂಬ ಮೈಥಿಲಿ ಭಾಷೆಯ ಕವಯತ್ರಿ ಪಾಟನಾದಿಂದ ಬರಬೇಕಿತ್ತು ಆದರೆ ಬಂದಿರಲೇ ಇಲ್ಲ ಹೀಗಾಗಿ ನಾನು ಒಬ್ಬಳೇ ಇದ್ದೆ. ಬೇರೆ ಬೇರೆ ಭಾಷೆಯ ಒಟ್ಟು ಇಪ್ಪತ್ತೈದು ಕವಿಗಳು ನಾಲ್ಕು ಜನ ಬೆಂಗಾಲಿಗಳು ಸ್ಥಳೀಯರಾದ ಕಾರಣ ಉಳಿಯಲು ಬಂದಿರಲಿಲ್ಲ. ನಾವೆಲ್ಲರೂ ಪರಸ್ಪರ ಭೇಟಿ ಅಂತ ಆಗಿದ್ದು ಮೂರನೆ ದಿನ ಬೆಳಿಗ್ಗೆ ತಿಂಡಿ ಹೊತ್ತಿಗೆ. ಬೊಡೊ ಡೊಂಗ್ರಿ ಕಾಶ್ಮೀರಿ ಕೊಂಕಣಿ ಮಣಿಪುರಿ ಅಸ್ಸಾಮಿ ನೇಪಾಳಿ ಒರಿಯಾ ಸಂತಾಲಿ ಸಿಂಧಿ ಉದರ್ು ತೆಲುಗು ತಮಿಳು ಪಂಜಾಬಿ ರಾಜಸ್ತಾನಿ ಎಷ್ಟೆಲ್ಲ ಭಾಷೆಯವರು ಸೇರಿದ್ದರು ಆರು ಮಹಿಳೆಯರಿದ್ದರು
ನಮ್ಮಲ್ಲಿ ಸಣ್ಣ ವಯಸ್ಸಿನ ಹುಡುಗಿ ಅಂದರೆ ಇಂಗ್ಲೀಷ ಕವಿ ಗಾರ್ಗಿ ತಾಲಪತ್ರ ಅವಳು ಕೊಲ್ಕತ್ತೆ ನಿವಾಸಿ. ನನಗೆ ಒಳ್ಳೆ ಗೆಳತಿಯಾದಳು ಅವಳ ಗಂಡ ಬೆಂಗಾಲಿ ಕವಿಯಂತೆ. ಏನೋ ಹೆಸರು ಹೇಳಿದಳು. ಆತ ಬಂದಿರಲಿಲ್ಲ ಆದರೆ ಬಹಳ ಜನ ಬೆಂಗಾಲಿಗಳು ಅವನ ಬಗ್ಗೆ ಕೇಳುತ್ತಿದ್ದರು. ಬಹುಶ: ದೊಡ್ಡ ಕವಿಯೋ ಎನೋ. ಬೆಳಿಗ್ಗೆ 8.30ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಉದ್ಘಾಟನಾ ಸಮಾರಂಭ ಆ ವೇದಿಕೆ ಪೂರ ಮಲ್ಲಿಗೆ ಮೊಗ್ಗಿನ ಮಾಲೆಯಿಂದ ಅಲಂಕರಿಸಿದ್ದರು ನಮ್ಮ ಮೈಸೂರು ಮಲ್ಲಿಗೆಯನ್ನು ಮೀರಿಸುವಂತಿತ್ತು
ಅಗ್ರಹಾರ ಕ್ರಷ್ಣಮೂತರ್ಿ ಪತ್ನೀ ಸಮೇತರಾಗಿ ಬಂದಿದ್ದರು. ಅವರೇ ಉದ್ಘಾಟಕರು ಹೋಗಿ ಮಾತಾಡಿಸಿದೆ. ಅವರ ಹೆಂಡತಿಗೂ ಕನ್ನಡ ಮಾತು ಕೇಳಿ ಖುಷಿಯಾಯಿತು. ಅಲ್ಲಿಂದ ನಮ್ಮನ್ನು ಬಸ್ಸಿನಲ್ಲಿ ಹೊರಡಿಸಿದರು ಅದು ತುಂಬಾ ಸುಂದರವಾದ ಏಸಿ ಬಸ್ಸು ಇಡೀ ಬಸ್ಸನ್ನು ಮಲ್ಲಿಗೆ ಹಾರದಿಂದ ಅಲಂಕರಿಸಿದ್ದರು ನಮ್ಮ ಪ್ರಯಾಣ ಶಾಂತಿನಿಕೇತನಕ್ಕೆ ಗಾಗರ್ಿ ನನಗೆ ಬೆಂಗಾಲಿ ಸಾಹಿತ್ಯದ ಬಗ್ಗೆ ಜನಜೀವನದ ಬಗ್ಗೆ ಟಾಗೋರರ ಅಭಿರುಚಿಯ ಬಗ್ಗೆ ಹೇಳುತ್ತಲೇ ಇದ್ದಳು. ಮದ್ಯಾನ್ಹದ ಊಟಕ್ಕೆ ಶಾಂತಿನಿಕೇತನ ತಲುಪಿದೆವು. ನಮಗೆಲ್ಲ ಉಳಿಯಲು ರೂಮು ಕೊಡಲಾಯಿತು ನಾನು ಗಾಗರ್ಿ ಒಂದೇ ರೂಮು. ಹೊಟೆಲ್ ಹೆಸರು ಬಸುಂದರಾ ಬೆಂಗಾಲಿಗಳು ವ ಕ್ಕೆ ಬ ಎನ್ನುತ್ತಾರೆ. ಅಲ್ಲೇ ಊಟ. ಮಾಂಸಹಾರಿಗಳಿಗೆ ಖುಷಿಯೋ ಖುಷಿ ಬೆಂಗಾಲದಲ್ಲಿ ಮೀನು ತೀರಾ ಮಾಮೂಲು. ಅದು ಸಿಹಿನೀರ ಮೀನಂತೆ ಕರಾವಳಿಯವರಿಗೆ ಸೇರುವುದಿಲ್ಲವಂತೆ. ನನ್ನಂತಹ ಸಸ್ಯಹಾರಿಗಳು ಕೊಂಚ ಪರದಾಟ ಮಾಡಬೇಕಿತ್ತು.
ಊಟ ಆದ ಮೇಲೆ ರವೀಂದ್ರರ ಶಾಲೆ ವಾಸಿಸುತ್ತಿದ್ದ ಮನೆ ಅವರ ಆಫೀಸು ಎಲ್ಲಾ ತೋರಿಸಿದರು ಅವರೇ ಬಿಡಿಸಿದ ಚಿತ್ರಗಳು ಅವರ ಕೈ ಬರಹದ ಕವಿತೆಗಳು ಸಂಜೆಯ ತನಕ ಮಾವಿನ ತೋಟದ ತಾಜಾ ಗಾಳಿಯಲ್ಲಿ ತಿರುಗುತ್ತಾ ಎಲ್ಲಾ ನೋಡಿದೆವು. ಕೊನೆಯಲ್ಲಿ ಒಂದು ಕಾಡಿಗೆ ಹೋದೆವು. ಸೋನಾರ ಖತ್ ಅಂದರೆ ಬಂಗಾರದ ಎಲೆ ಅಂತ ನಸುಹಳದಿ ಬಣ್ಣದ ಎಲೆ ಉದುರಿಸುವ ಮರಗಳನ್ನು ಇಕ್ಕೆಲದಲ್ಲಿ ಬೆಳೆಸಿರುವ ಊದ್ದವಾದ ಮಣ್ಣಿನ ದಾರಿಯದು. ಕೆಂಪು ಮಣ್ಣಿನ ಮೇಲೆ ಬಂಗಾರದ ಎಲೆಯುದುರಿ ರಮ್ಯವಾಗಿ ಕಾಣತ್ತಿರುತ್ತದೆ. ಹಾಗೆ ಮುಂದೆ ಕಾಡೊಳಗೆ ದಾರಿಯೇ ಮಾಯವಾದಂತೆ. ಆ ನೆಲದ ಮೇಲೆ ನಿಂತಾಗ ಯಾಕೋ ಎಲ್ಲರನ್ನು ಬಿಟ್ಟು ಕಳೆದುಹೋಗಬೇಕು ಅನ್ನಿಸತೊಡಗಿತು. ನಮ್ಮ ಅಸ್ತಿತ್ವ ನಮಗೇ ಕಿರಿಕಿರಿಯಾಗುವಷ್ಟು ನಿಸರ್ಗ ರಮಣೀಯವಾಗಿತ್ತು.
ಅಲ್ಲಿಂದ ಅಮರಕುಟಿ ಅಂದರೆ ಕರಕುಶಲ ವಸ್ತುಗಳ ಮಾರಾಟ ಮಳಿಗೆಗೆ ಕರೆದೊಯ್ದರು ಅಲ್ಲಂತೂ ಏನು ನೋಡಿದರೂ ಕೊಳ್ಳಬೇಕು ಅನ್ನಿಸುತ್ತಿತ್ತು. ಅಲ್ಲಿನ ಕಸೂತಿ ಸೀರೆ ಕುಪ್ಪುಸದ ಬಟ್ಟೆ ಚೂಡಿದಾರದ ಬಟ್ಟೆ ನನಗೆ ಬೇರೆ ಎಲ್ಲೂ ಕಂಡಿಲ್ಲ. ತುಂಬಾ ಸುಂದರವಾದ ಕಸೂತಿ ಕೆಲಸ. ಬಗೆಬಗೆಯ ಬ್ಯಾಗುಗಳು ಪಸರ್ುಗಳು ಅವು ಬೇರೆ ಯಾವ ಊರಿಗೂ ಎಗ್ಜಿಬಿಷನಗೆ ಬರುವುದಿಲ್ಲ. ಸಂಘಟಕರು ಸಮಯವಾಯಿತು ಎಂದು ಎಷ್ಟು ಕೂಗಿಕೊಂಡರೂ ಯಾರೂ ಕೇಳದೇ ಖರೀದಿ ಮಾಡಿದ್ದೇ ಮಾಡಿದ್ದು. ಪ್ರೊಗ್ಯಾ ಎಂಬ ಕರೆ ಕೇಳಿ ಕೇಳಿ ನನಗೆ ನನ್ನ ಸ್ವಂತ ಹೆಸರೇ ಮರೆತ ಹಾಗೆ ಆಗಿತ್ತು.
ರಾತ್ರಿ ವಿಶ್ವ ಭಾರತಿ ಶಾಲೆಯವರು ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸಿದ್ದರು. ರವೀಂದ್ರ ಸಂಗೀತಕ್ಕೆ ನ್ರತ್ಯಗಳು. ಒಂದಕ್ಕಿಂತ ಒಂದು ವಿಶಿಷ್ಟವಾಗಿತ್ತು. ಕೆಂಪು ಅಂಚಿನ ಬಿಳಿ ಕಾಟನ್ ಸೀರೆ ಅಲ್ಲಿ ಬಹಳ ಸಾಂಪ್ರದಾಯಿಕ ಉಡುಗೆ. ಹಸಿರು ಅಂಚಿನ ಹಳದಿ ಸೀರೆಯನ್ನು ಬೊಸಂತ ಅಂದರೆ ವಸಂತ ರುತುವಿನ ಸಂಕೇತವಾಗಿ ಬಳಸುತ್ತಾರಂತೆ. ಶಾಂತಿನಿಕೇತನದಲ್ಲಿ ಆಗ ಬೊಸಂತ ಆಚರಣೆ (ಆಗ ನಮ್ಮಲ್ಲಿ ಮಳೆಗಾಲ ಅಂದರೆ ವಷರ್ಾಗಮನ) ಅಲ್ಲಿ ಬೇರೆ ಬೇರೆ ರಾಜ್ಯದ ಹುಡುಗರು ಕಲಿಯಲು ಇದ್ದಾರೆ. ಮಣಿಪುರಿ ರಾಜ್ಯದವರು ತಮ್ಮ ನ್ರತ್ಯಗಳನ್ನು ಮಾಡಿದರು. ಬೊಡೊ ನ್ರತ್ಯಗಳೂ ಚೆನ್ನಾಗಿದ್ದವು ಅದೊಂದು ಅಪರೂಪದ ಕಲಾಪ್ರದರ್ಶನ
ಮರುದಿನ ಬೆಳಿಗ್ಗೆ ರವೀಂದ್ರರ ಉಪಾಸನಾ ಮಂದಿರ ಅವರ ತಂದೆ ದೇವೇಂದ್ರನಾಥರ ಪ್ರಾರ್ಥನಾ ಮಂದಿರಗಳನ್ನು ನೋಡಿದೆವು. ಅವರು ಮಹಷರ್ಿಗಳಾಗಿದ್ದರಿಂದ ತಮ್ಮ ಧ್ಯಾನ ಸಾಧನೆಗಾಗಿ ತುಂಬಾ ಸುಂದರವಾದ ಕುಟೀರಗಳನ್ನು ನಿಮರ್ಿಸಿದ್ದಾರೆ. ನಂತರ ಮರಳಿ ಕೋಲ್ಕತ್ತೆಯಲ್ಲಿರುವ ರವೀಂದ್ರರು ಹುಟ್ಟಿ ಬೆಳೆದ ಜೊರೊಸೊಂಕೊ ಕಡೆಗೆ. ಅದು ಒಂದು ದೊಡ್ಡ ಅರಮನೆಯಂತಹ ಮಹಲು. ತುಂಬಾ ಹಳೆಯ ಕಾಲದ ವಾಡೆಯ ಹಾಗೆ ಇದೆ. ವಿಶಾಲ ಆವರಣದಲ್ಲಿ ಗಿಡ ಮರಗಳ ನಡುವೆ ಬಹುತೇಕ ಕಟ್ಟಿಗೆ ಉಪಯೋಗಿಸಿ ಕಟ್ಟಿರುವ ಮಹಲು.
ಬೆಂಗಾಲದ ಸಕರ್ಾರ ರವೀಂದ್ರರಿಗೆ ಬಹಳ ಗೌರವ ಕೊಡುವ ಕಾರಣ ಅವರ ಮನೆಗೆ ಸಕಲ ಸಕರ್ಾರಿ ಗೌರವ ಇದೆ. ಅವರು ಹುಟ್ಟಿದ ತೊಟ್ಟಿಲು ಮಲಗಿದ ಮಂಚ ಹಾಕುತ್ತಿದ್ದ ನಿಲುವಂಗಿಗಳಿಂದ ಹಿಡಿದು ಕುಚರ್ಿ ಮೇಜು ಲೇಖನಿ ಎಲ್ಲ ಎಲ್ಲವೂ ಇದೆ ಅವರೊಬ್ಬರಿಲ್ಲ ಅಷ್ಟೆ. ಆಳೆತ್ತರದ ಅವರ ಗೋಡೆ ಫೋಟೋಗಳು ಅವರೇ ಇದ್ದಾರೇನೋ ಅಂತ ಅನ್ನಿಸುವಂತಿವೆ. ಆ ದೊಡ್ಡ ಮನೆ ನೋಡಿದಷ್ಟೂ ಮುಗಿಯುವುದಿಲ್ಲ. ಕಟ್ಟಿಗೆಯ ಕಟಾಂಜನಗಳು ಸರಳು ಸರಳಾಗಿ ಬಿದ್ದ ನೆರಳು ತುಂಬಾ ಸುಂದರಿಯಾಗಿದ್ದ ರವೀಂದ್ರರಿಗೆ ತೀರಾ ಹತ್ತಿರದವಳಾಗಿದ್ದಳೆಂದು ಓದಿದ್ದ ಅವರ ಅತ್ತಿಗೆಯ ದೊಡ್ಡ ಫೋಟೋ ನೋಡಿದಾಗ ಏಸಿ ಅಳವಡಿಸಿದ ಆ ರೂಮಲ್ಲೂ ಏಕೋ ಉಸಿರು ಕಟ್ಟಿದ ಹಾಗೆ ಭಾಸವಾಯಿತು.
ನೂರಾರುವರ್ಷಗಳ ಹಿಂದೆ ನೊಬೆಲ್ ಸಿಗುವಷ್ಟು ಚೆಂದಗೆ ಬರೆಯುತ್ತ ಬದುಕಿದ ಕವಿಯ ಮನೆಯೊಳಗೆ ಸಾವಿರಾ ಮೈಲಿ ದೂರದ ಕನ್ನಡದ ಹೆಣ್ಣು ನಾನು ಓಡಾಡುವುದೆಂದರೆ ಯಾವ ಯಾವ ರುಣವಪ್ಪ ಇದು ಎನ್ನಿಸಿತು. ಬೆಂಗಾಲಿಗಳು ಆ ಮನೆಯನ್ನು ಟಾಕುರಬರಿ ಎನ್ನುತ್ತಾರೆ. ಬರಿ ಎಂದರೆ ನಿವಾಸ ಅಂತ ಕಂಪೌಂಡ ಹೊರಗೆ ಬಂದೆ. ಎರಡು ಕಟ್ಟಡದ ಆಚೆ ಒಂದು ಗ್ಯಾರೆಜಿನಂತಹ ಓಪನ್ ಜಾಗದಲ್ಲಿ ಒಂದಿಷ್ಟು ಹುಡುಗ ಹುಡುಗಿಯರು ಏನೋ ನಾಟಕದ ರಿಹರ್ಸಲ್ ಮಾಡುತ್ತಿದ್ದ ಹಾಗೆ ಕಾಣಿಸಿತು. ನನಗೆ ನಾಟಕ ಅಂದರೆ ಮುಗಿಯಿತು ಕಾಲು ಮುಂದೆ ಹೋಗುವುದಿಲ್ಲ. ಅದೇನು ಅಂತ ಹೋಗಿ ನೋಡಿದೆ. ಸಣ್ಣ ಪ್ರಾಯದ ತರುಣಿ ಅಭಿನಯಿಸುತ್ತಿದ್ದಳು. ಬಹಳ ಭಾವಾವೇಶದ ದ್ರಶ್ಯ ತನ್ನ ಮೇಲಾದ ದೌರ್ಜನ್ಯವನ್ನು ವಣರ್ಿಸುತ್ತ ಅದನ್ನು ಅಭಿನಯಿಸುವ ತಂತ್ರ ಉಪಯೋಗಿಸಿ ಪರಿಣಾಮಕಾರಿಯಾಗಿ ಮಾಡುತ್ತಿದ್ದಳು. ಕೆಲವು ಹುಡುಗರು ಅವಳಿಗೆ ಸಹನಟರಾಗಿ ಸಾಥ ಕೊಡುತ್ತಿದ್ದರು. ಗಡ್ಡಬಿಟ್ಟ ಜುಬ್ಬಾಧಾರಿ ಗಂಭೀರ ಮುಖದವ ಅಲ್ಲೇ ಕುಚರ್ಿ ಮೇಲೆ ಕೂತು ಮಾಕ್ರ್ಸ ಹಾಕುತ್ತಿದ್ದ. ಸುತ್ತ ಅನೇಕ ಹುಡುಗರು ನಿಂತಿದ್ದರು ಕೆಲವರು ಬದಿಗೆ ಸರಿದು ತಮ್ಮ ಪಾತ್ರದ ಪ್ರಾಕ್ಟೀಸು ಮಾಡುತ್ತಿದ್ದರು. ಒಬ್ಬನನ್ನು ಏನು ಅಂತ ಕೇಳಿದೆ.
ಅವರು ನಾಟಕ ಪದವಿಯ ಹುಡುಗರು. ಆಗ ನಡೆಯುತ್ತಿರುವುದು ಅವರ ಪ್ರಾಕ್ಟಿಕಲ್ ಎಗ್ಸಾಂ ಹಾಗಾಗಿ ಅವರೆಲ್ಲ ಟೆನ್ಷನ್ ದಲ್ಲಿ ಇದ್ದರು ನನಗೆ ಉತ್ತರಿಸುವ ಉತ್ಸಾಹ ಯಾರಿಗೂ ಇರಲಿಲ್ಲ. ನನಗಂತೂ ಅವರ ಭಾಷೆ ಬರದಿದ್ದರೂ ಅವರ ನಟನೆಯ ಸಾಮಥ್ರ್ಯ ಬಳಸುವ ತಂತ್ರಗಳು ಇವೆಲ್ಲ ಬಹಳ ಆಸಕ್ತಿದಾಯಕವಾಗಿ ತೋರಿದ ನಿಮಿತ್ತ ಅಲ್ಲೇ ನಿಂತುಬಿಟ್ಟೆ. ಬೇರೆ ಬೇರೆ ಎರಡು ತಂಡಗಳು ಅಭಿನಯಿಸದವು. ಅಷ್ಟರಲ್ಲಿ ನನ್ನ ಬಸ್ಸು ಹಾನರ್ು ಹಾಕತೊಡಗಿತು. ಓಡೋಡುತ್ತ ಹೋದೆ. ಅವರಿಗೆಲ್ಲ ಇವಳೆಲ್ಲಿ ಮಾಯವಾಗಿದ್ದಳಪ್ಪ ಅಂತ ಅಚ್ಚರಿ. ನಾನು ರವೀಂದ್ರರನ್ನು ಮರೆತು ನಾಟಕದಲ್ಲಿ ಮುಳುಗಿದ್ದೆ ಅಂದರೆ ಇವಳೆಂತ ಯಡವಟ್ಟು ಅನ್ನುವಂತೆ ನೋಡಿದರು.
ಅಬ್ಬಾಸ ಅಂತ ಉದರ್ು ಕಾದಂಬರಿಕಾರ ತೀರಾ ವಾಚಾಳಿ ಎಲ್ಲರನ್ನೂ ಟೀಕಿಸುತ್ತ ಬುದ್ದಿವಂತನ ಫೋಸು ಕೊಡುತ್ತಿದ್ದ. ವಿಮ್ಮಿ ಅಂತ ಸಿಂಧಿ ಕವಿ ಕೊಂಚ ವಯಸ್ಸಾದಾಕೆ ಅವರಿಬ್ಬರ ಕಲಹ ಕೇಳುತ್ತ ವಾಪಸ್ ಚೌದರಿ ಗೆಷ್ಟ ಹೌಸಿಗೆ ಬಂದೆವು ನಾವು ಶಾಂತಿನಿಕೇತನಕ್ಕೆ ಹೋಗುವಾಗ ನಮ್ಮ ರೂಮು ಖಾಲಿ ಮಾಡಿಸಿ ಲಗೇಜು ರಿಸೆಪ್ಷನ್ ನಲ್ಲಿ ಇರಿಸಿದ್ದರು. ಈಗ ಮತ್ತೆ ಬೇರೆ ರೂಮು ಕೊಟ್ಟರು. ಮೊದಲ ದಿನ ರೂಮು ಖಾಲಿ ಮಾಡಬೇಕು ಅಂತ ನನಗೆ ಗೊತ್ತಿರಲಿಲ್ಲ. ಹಾಗಾಗಿ ಬೆಳಿಗ್ಗೆ ಸ್ನಾನ ಮಾಡುವಾಗ ಟವೆಲು ಇತ್ಯಾದಿ ಕೆಲವು ಬಟ್ಟೆಗಳನ್ನು ತೊಳೆದು ಹಾಕಿದ್ದೆ. ಆಮೇಲೆ ಲಗೇಜು ತನ್ನಿ ಎಂದೊಡನೆ ಒದ್ದೆ ಬಟ್ಟೆ ಹೊತ್ತೊಯ್ಯಲು ಮುಜುಗರ. ಹೇಗೂ ಮರುದಿನ ಮತ್ತೆ ಬರುವುದಿದೆಯಲ್ಲ ಅಂತ ರೂಮು ಬಾಯ್ ಕರೆದು ಬಟ್ಟೆ ಇಲ್ಲೇ ಒಣಗಿಸಿ ಹೋಗುತ್ತೇನೆ ಎಂದೆ. ರೂಮಿನಲ್ಲಿ ಬೇಡ ಅದನ್ನು ಬೇರೆಯವರಿಗೆ ಕೊಡುತ್ತಾರೆ. ಬೇಕಾದರೆ ನಮ್ಮ ರೂಮಲ್ಲಿ ಒಣಗಿಸಿರಿ ಎಂದ ಸರಿ ಅಂತ ಅವನ ಹಿಂದೆ ಹೋದೆ.
ಓರಿಸ್ಸಾದ ಸಣ್ಣ ಪ್ರಾಯದ ಬಡ ಹುಡುಗರು ತೀರಾ ಇಕ್ಕಟ್ಟಾದ ರೂಮಲ್ಲಿ ಬಹಳಷ್ಟು ಜನವಿದ್ದರು ಅಲ್ಲೇ ಬಾಲ್ಕನಿಯಲ್ಲಿ ಕಟ್ಟಿದ ಸೆಣಬಿನ ಹಗ್ಗದ ಮೇಲೆ ಅವರೆಲ್ಲರ ಬಟ್ಟೆ ಪಕ್ಕ ನನ್ನ ಬಟ್ಟೆ ಒಣಗಿಸಿ ಬರುವಾಗ ಯಾಕೋ ನನ್ನ ಭಾರತ ತುಂಬಾ ಮಹಾನ್ ಅನ್ನಿಸಿತು. ಈಗ ರೂಮು ಸಿಕ್ಕ ಕೂಡಲೇ ಆ ರೂಂ ಬಾಯ್ ಹುಡುಕಿದೆ ಪಾಪ ನನ್ನನ್ನು ಕಂಡಿದ್ದೇ ಗರಿಗರಿ ಒಣಗಿದ ಮಡಿಸಿಟ್ಟ ಬಟ್ಟೆ ತಂದ. ಮದ್ಯಾಹ್ನ ಊಟ ಆದ ಕೂಡಲೇ ನಾವು ಅಕಾಡೆಮಿ ಆಫೀಸಿಗೆ ಹೋಗಬೇಕಿತ್ತು ಅಲ್ಲಿ ನಮ್ಮ ಕವಿಸಮ್ಮೇಳನ. ನಾವು ಬರೆದ ಕವಿತೆಗಳನ್ನು ಒಂದು ಸಲ ನಮ್ಮ ಭಾಷೆಯಲ್ಲಿ ಆಮೇಲೆ ಹಿಂದಿ ಅಥವಾ ಇಂಗ್ಲೀಷ ಅನುವಾದದಲ್ಲಿ ಓದಬೇಕಿತ್ತು. ಅನುವಾದಕ್ಕೆ ಸರಳವಾಗಬೇಕು ಅಂತ ನಾನು ನನ್ನ ಸರಳ ಕವಿತೆ ಆಯ್ದುಕೊಂಡಿದ್ದೆ. ಕವಿಗೋಷ್ಟಿಗಳಲ್ಲಿ ಓದುವಾಗ (ಅದೂ ಭಾಷೆ ಬರದಿದ್ದವರ ಎದುರು) ಲಯ ಪ್ರಧಾನವಾಗಿರುವ ಕವಿತೆಯನ್ನೇ ಆರಿಸಿದ್ದೆ.
ರಂಗಭೂಮಿಯ ಅಭಿನಯದ ಅನುಭವದಿಂದಾಗಿ ಒಂದು ಮಟ್ಟದ ನಾಟಕೀಯ ಆಂಗಿಕ ಅಭಿನಯದೊಂದಿಗೆ ಓದಿದೆ. ಅವರಿಗೆಲ್ಲ ಖುಷಿಯಾಯಿತು. ನಿನ್ನ ಭಾಷೆ ಕೇಳಲು ತುಂಬಾ ಚೆನ್ನಾಗಿದೆ. ವಿ ಲೈಕ್ಡ ಯುವರ್ ಲಾಂಗ್ವೇಜ ಎಂದರು. ಲಯಬದ್ದ ಶಬ್ದಗಳ ಜಾದೂ ಇದು ಅಂತ ತಿಳಿಯಿತು. ಆಸ್ಸಾಮಿ ಕವಿ ಪ್ರಾಂಜಲ್ ಶಮರ್ಾನ ಕವಿತೆ ಚೆನ್ನಾಗಿತ್ತು ಹಾಗೂ ಕಶ್ಮೀರಿ ಶಬನಮ್ ತಿಲಗಮಿಯ ಕವಿತೆ ಎದೆ ಕರಗುವಂತಿತ್ತು ಅನಿಲ ಸಪ್ಕಾಲನ ಮರಾಠಿ ಕವಿತೆಯೂ ಎಲ್ಲರ ಮನಮಿಡಿಯಿತು ಎಲ್ಲರ ಕವಿತೆ ಮುಗಿದ ಮೇಲೆ ಸಮೋಸಾ ಚಹಾ ವಿತರಣೆ ಗಾಗರ್ಿಯ ಅಮ್ಮ ಬಂದಿದ್ದರು ನನ್ನ ಮಗಳಿಗೆ ಒಳ್ಳೆ ಕಂಪನಿ ಕೊಟ್ಟೆಯಂತೆ ಥ್ಯಾಂಕ್ಸ ಎಂದರು ಏನು ಹೇಳಬೇಕೋ ತಿಳಿಯಲಿಲ್ಲ. ನಾನು ಜೀವನದಲ್ಲಿ ಮತ್ತೆಂದಾದರೂ ಅವರನ್ನೆಲ್ಲ ನೋಡುತ್ತೇನಾ ಕಂಡರೂ ಗುರುತಿಸುತ್ತೇನಾ ಗೊತ್ತಿಲ್ಲ ಒಟ್ಟಿನಲ್ಲಿ ಎಲ್ಲರೂ ಅಗಲಿದೆವು. ಒರಿಸ್ಸಾ ಗುಜರಾಥ ಇತ್ಯಾದಿ ಹತ್ತಿರದ ರಾಜ್ಯದವರು ಹೊರಟು ಬಿಟ್ಟರು ನಾವು ದೂರದವರು ಮರುದಿನ ಹೊರಡುವವರಿದ್ದೆವು.
ಇನ್ನೂ ಇದೆ..







‘ಟಾಕುರಬರಿ’ಯು ‘ಠಾಕೂರ್ ಬಾರಿ’ ಎಂದಾಗಬೇಕಾಗಿತ್ತಲ್ಲವೇ ? ‘ಬಟ್ಟರ ಕನ್ನಡ’ಕ್ಕೆ ನಾವಿನ್ನೂ ಒಗ್ಗಿಕೊಂಡಿಲ್ಲ 🙁
ಗುಜರಾತ್ ಬಂಗಾಳದಿಂದನೀವು ಬರೆದಂತೆ ಹತ್ತಿರವಿಲ್ಲ ಮಾರಾಯ್ರೇ. ದೂರ ಇದೆ. ಶಾಂತಿ ನಿಕೇತನ ಸೀರೆಗಳು
ಕರಕುಸಲ ವಸ್ತುಗಳು ಬೆಂಗಳೂರಿನಲ್ಲಿ ಸಿಗುತ್ತವೆ .ಚೆನ್ನಾಗಿ ಬರೆದಿದೀರಿ
.ನೀಹಾರಿಕಾ