ಬೆಂಗಳೂರು ಕಿರುನಾಟಕೋತ್ಸವ-2022 ರ ಫಿನಾಲೆ…

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಬೆಂಗಳೂರು ಕಿರುನಾಟಕೋತ್ಸವ-2022 ಆಯೋಜಿಸಿದ್ದು, ರಂಗಕರ್ಮಿಗಳನ್ನು ಒಂದೆಡೆ ಸೇರಿಸಿ ಕಿರುನಾಟಕಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ, ಜೊತೆಗೆ ಕೋವಿಡ್‌ನಿಂದ ಬಳಲಿದ್ದಂತಹ ರಂಗಭೂಮಿ ಚಟುವಟಿಕೆಗಳಿಗೆ ಹೊಸಚೈತನ್ಯ ತುಂಬಿ ಪ್ರೇಕ್ಷಕರನ್ನು ಮತ್ತೆ ರಂಗಭೂಮಿಯೆಡೆಗೆ ಕರೆತರುವಲ್ಲಿ ಕಿರುನಾಟಕಗಳ ಪ್ರಯೋಗ ಹೆಚ್ಚು ಸಹಕಾರಿಯಾಗಲಿದೆ. 2021ರಲ್ಲಿ ಪ್ರಾರಂಭವಾದ ಬೆಂಗಳೂರು ಕಿರು ನಾಟಕೋತ್ಸವದ ಮೊದಲನೇ ಆವೃತ್ತಿ ರಂಗತಂಡಗಳ ಪಾಲ್ಗೊಳ್ಳುವಿಕೆ ಮತ್ತು ಅಪಾರ ಜನಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ನಡೆಯಿತು.

ಬೆಂಗಳೂರು ಕಿರುನಾಟಕೋತ್ಸವ 2022 ಮೊದಲನೇ ಹಂತದ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದು, ಅದರಲ್ಲಿ 6 ತಂಡಗಳು ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿವೆ. ಅಂತಿಮ ಹಂತದ ಸ್ಪರ್ಧೆ (ಫಿನಾಲೆ) 15 ಮೇ 2022 ರಂದು ಸಂಜೆ 6.30ಕ್ಕೆ ಬೆಂಗಳೂರಿನ ಹನುಮಂತನಗರದಲ್ಲಿರುವ ಪ್ರಭಾತ್ ಕೆ.ಎಚ್.ಕಲಾಸೌಧದಲ್ಲಿ ನಡೆಯಲಿದೆ. ಬೆಂಗಳೂರು ಕಿರುನಾಟಕೋತ್ಸವ 2022 ಶೀರ್ಷಿಕೆ ಪ್ರಾಯೋಜನೆಯನ್ನು ‘ಪೆಂಟಗಾನ್  ಸ್ಪೇಸ್’ ಸಂಸ್ಥೆ ವಹಿಸಿಕೊಂಡಿದೆ.

ಬೆಂಗಳೂರು ಕಿರುನಾಟಕೋತ್ಸವದಲ್ಲಿ ನೀಡಲಾಗುವ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಇನ್ನು ಮುಂದೆ, ರಾಷ್ಟ್ರಪ್ರಶಸ್ತಿ ವಿಜೇತ ಅಮೋಘ ನಟ, ರಂಗಕರ್ಮಿ ಸಂಚಾರಿ ವಿಜಯ್ ಗೌರವಾರ್ಥವಾಗಿ, ಅವರ ಹೆಸರಿನಲ್ಲಿ ನೀಡಲಾಗುವುದು.

ಬೆಂಗಳೂರು ಕಿರುನಾಟಕೋತ್ಸವ 2022 – ಪ್ರಶಸ್ತಿಗಳು

1. ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) – 10,000/- ರೂ. ನಗದು. 

2. ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) – 10,000/- ರೂ. ನಗದು.

3. ಅತ್ಯುತ್ತಮ ವಿನ್ಯಾಸ – 3,000/- ರೂ ನಗದು .

4. ಅತ್ಯುತ್ತಮ ನಿರ್ದೇಶನ.

5. ‘ಸಂಚಾರಿ ವಿಜಯ್’ ಗೌರವಾರ್ಥ – ಅತ್ಯುತ್ತಮ ನಟ . 

6. ಅತ್ಯುತ್ತಮ ನಟಿ.  

7. ಅತ್ಯುತ್ತಮ ಕಥೆ (ಸ್ವರಚಿತ).

8. ಅತ್ಯುತ್ತಮ ಭಿತ್ತಿಚಿತ್ರ ವಿನ್ಯಾಸ.

ಅಂತಿಮ ಹಂತದ ಸ್ಪರ್ಧೆಗೆ (ಫಿನಾಲೆ ) ಆಯ್ಕೆಯಾಗಿರುವ 6 ನಾಟಕಗಳು :

1. ನಾಟಕ  : ವಿದಗ್ಧೆ | ತಂಡ : ಬೆಂಗಳೂರು ಥಿಯೇಟರ್ ಎನ್ಸೆಂಬಲ್ | ರಚನೆ : ರೋಹಿತ್ ಮತ್ತು ಅಭಿಮನ್ಯು    ಭೂಪತಿ |  ನಿರ್ದೇಶನ : ಅಭಿಮನ್ಯು ಭೂಪತಿ

ಸಾರಾಂಶ : ಯುವಲೇಖಕನೊಬ್ಬನ ಹೆಂಡತಿ ಅವನ ಸಂವೇದನೆಯನ್ನು, ಮನಸ್ಸಿನ ಸೂಕ್ಷ್ಮತೆಯನ್ನು ಪ್ರಶ್ನಿಸುತ್ತಾಳೆ. ಮಾನಸಿಕವಾಗಿ ಹೆಂಡತಿಯಿಂದ ದೂರ ಉಳಿಯಲು ಅವನು ತನ್ನ ಪುಸ್ತಕಲೋಕದಲ್ಲಿ ಮುಳುಗುತ್ತಾನೆ. ಆದರೆ, ತಾನು ರಚಿಸಿದ ಕಥೆಯಲ್ಲಿನ ಪಾತ್ರಗಳೇ ಜೀವ ತಾಳಿ ತಮ್ಮ ವೇದನೆಗಳನ್ನು ತಿಳಿಸುತ್ತ ಅವನ ಸಂವೇದನೆಯನ್ನು ಪ್ರಶ್ನಿಸುತ್ತಾರೆ.

2. ನಾಟಕ  : ಸಹನ ಮೂರ್ತ |   ತಂಡ : ಪ್ರ ಕ ಸಂ   |  ರಚನೆ ಮತ್ತು ನಿರ್ದೇಶನ : ಪಿ ಡಿ ಸತೀಶ್ ಚಂದ್ರ

ಸಾರಾಂಶ : ನಾಟಕದ ಮುಖ್ಯವಸ್ತು ಇಬ್ಬರು ಅಪರಿಚಿತರು ಅಕಸ್ಮಾತಾಗಿ, ಔಪಚಾರಿಕವಾಗಿ, ಅಧಿಕೃತ ಕಾರ್ಯನಿಮಿತ್ತ ಸಂಧಿಸುವರು.  ಅವರ ನಡುವಿನ ಸಂಭದಗಳನ್ನು ಹೆಣೆಯುವ ಪ್ರಯತ್ನವನ್ನು ಈ ಕಿರುನಾಟಕ ಮಾಡುತ್ತದೆ.  ದಿನನಿತ್ಯ ಎದುರಾಗುವ ಸಂಭದಗಳಾದ ಡಾಕ್ಟರ್ ಮತ್ತು ಪೇಷಂಟ್ ಅಥವಾ ಯುವ ಪ್ರೇಮಿಗಳ ಪ್ರೀತಿ, ಮತ್ತು ಹಲವು ಉದಾಹರಣೆಗಳನ್ನು ನಿಮ್ಮ ಮುಂದೆ ತಂದಿಡುತ್ತದೆ.  ಯಾವ ಪರಿಯ ನಾಟಕ ಎಂದು ಪ್ರಶ್ನಿಸಿದರೆ ಇದನ್ನು ಒಂದು ರಾಮ್ಕಾಮ್ (ಪ್ರೀತಿ+ಹಾಸ್ಯ) ಎನ್ನಬಹುದಾಗಿದೆ. 

3. ನಾಟಕ : ನಗರ ಪೂಜೆ  |   ತಂಡ : ರಂಗ ಚಿರಂತನ   |     ರಚನೆ ಮತ್ತು ನಿರ್ದೇಶನ : ಡಾ . ಬೇಲೂರು ರಘುನಂದನ್

ಸಾರಾಂಶ : ಬದುಕು ಕಟ್ಟಿಕೊಳ್ಳುವ ಪರಿ ಒಂದಲ್ಲ. ನಮ್ಮ ಮನೆಗಳ ಕಸದಿಂದ ಹಿಡಿದು ಕೇರಿ ಕೇರಿಗಳ, ಊರೂರುಗಳ ರಸ್ತೆಗಳ ಕಸವನ್ನು ತೊಳೆದು ನಗರ ಸ್ವಚ್ಚ ಮಾಡುವ ಕಾಯಕವನ್ನೇ ಬದುಕಾಗಿ ಕಟ್ಟಿಕೊಂಡವರ ಕಥೆ ಇದು. ನಗರದಲ್ಲಿನ ವಿದ್ಯಾವಂತ ಜನರಲ್ಲಿ ಜಾಗೃತಿಯಿದ್ದರೂ ತೋರಿಸುವಂತಹ ನಿರ್ಲಕ್ಷತನ ಪೌರಕಾರ್ಮಿಕರ ಬದುಕ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ ಹಾಗೂ ಸರ್ಕಾರ ಮತ್ತು ತಂತ್ರಜ್ಞಾನವಿದ್ದರೂ ಸುಧಾರಣೆಗೊಳ್ಳದ ಅವರ ಜೀವನವನ್ನು ನಾಟಕ ತೆರೆದಿಡುತ್ತದೆ. ಕೋರೋಣ ಅಲೆಯ ಸಮಯದಲ್ಲಿ ಮಹಾನಗರವೇ ಸ್ತಬ್ಧವಾದರೂ ನಗರ ಗುಡಿಸುವ ರೈತರು ಸುಮ್ಮನಿರಲಿಲ್ಲ. ಅವರ ಪೊರಕೆಗಳೇ ನೇಗಿಲಾಗಿ ನಗರದ ರಸ್ತೆಗಳ ಉತ್ತಿದ್ದುಂಟು. ಆದರೆ ಅಕ್ಕಿ ಬೇಯದೆ ಇದ್ದದ್ದು ಮಾತ್ರ ಅವರ ಮನೆಗಳಲ್ಲಿ. ಹೀಗೆ ಪೌರಕಾರ್ಮಿಕರ ಸಹನೆ, ನೋವು, ಸಂಕಟಗಳನ್ನು ನಾಟಕ ತೆರೆದಿಡುತ್ತಾ ಸಾಗುತ್ತದೆ.

4. ನಾಟಕ : ಕ್ಷಮ  | ತಂಡ : ಕಲಾಕದಂಬ ಆರ್ಟ್ ಸೆಂಟರ್ |   ರಚನೆ ಮತ್ತು ನಿರ್ದೇಶನ : ತೇಜಸ್ ಗೌಡ

ಸಾರಾಂಶ : ಕ್ಷಮ ಎಂದರೆ ತಾಳ್ಮೆ, ಹೆಸರಿಗೆ ತಕ್ಕಂತೆ ಸಹನೆಯಿಂದ ಎಲ್ಲವನ್ನೂ ಸಹಿಸಿಕೊಂಡ, ತನ್ನ ಆಸೆ-ಕನಸುಗಳನ್ನು ತ್ಯಾಗ ಮಾಡಿದ ಕ್ಷಮ ತನ್ನ ಮಗಳ ಜೀವನ ಕೂಡ ಅದೇ ಹಾದಿಗೆ ಬಂದಾಗ ಏನು ಮಾಡುತ್ತಾಳೆ? ಇದು ಕೇವಲ ಕ್ಷಮಳ ಕಥೆಯಾಗಲಿ ಅಥವಾ ಒಂದು ಹೆಣ್ಣಿನ ಕಥೆಯಾಗಲಿ ಅಲ್ಲ. ಇದು ಜನರ ಜೀವನದಲ್ಲಿ, ಅವರು ಅವರಿಗೆ ಇಷ್ಟವಿಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ತಮ್ಮ ಖುಷಿಯನ್ನು ತ್ಯಾಗ ಮಾಡಿ ತಾಳ್ಮೆಯಿಂದ ಇರುತ್ತಾರೆ. ಈ ರೀತಿಯ ಸಹನೆ ಮತ್ತು ತಾಳ್ಮೆ ಎಲ್ಲಿಯ ವರೆಗೂ ಸರಿ ಎಂಬ ಪ್ರಶ್ನೆಯನ್ನು ಜನರಲ್ಲಿ ಮೂಡಿಸುವ ಒಂದು ಅನುಭವ.

5. ನಾಟಕ : ಸಾಕ್ಷಾತ್ಕಾರ | ತಂಡ : ಅಂತರಂಗ ಬಹಿರಂಗ |  ರಚನೆ ಮತ್ತು ನಿರ್ದೇಶನ : ಭೀಷ್ಮ ರಾಮಯ್ಯ

ಸಾರಾಂಶ :  ಸಹಾಯದ ಗುಣವನ್ನೇ ಜೀವವಾಗಿಸಿಕೊಂಡಿದ್ದ ದಂಪತಿಗಳು. ಕ್ರಮೇಣ ಬದಲಾದ ಸನ್ನಿವೇಶಗಳಿಗೆ ಒಳಗಾಗಿ, ಪತ್ನಿ ತನ್ನ ಸಹನೆಯ ಕಟ್ಟೆ ಕಳಚಿ, ಸಹಾಯದ ಗುಣವನ್ನು ತೊರೆಯುತ್ತಾಳೆ. ಈ ದಂಪತಿಗಳ ಮಗ ಮೊದಲಿನಿಂದಲೂ ಸಹಾಯದ ಗುಣವನ್ನು ನೋಡಿಕೊಂಡು ಬಂದಿದ್ದರಿಂದ, ಅವನಲ್ಲು ಈ ಗುಣ ಚಿಗುರೊಡೆದಿರುತ್ತದೆ. ಕಷ್ಟದಲ್ಲಿದ್ದ ಒಬ್ಬ ಬುದ್ದಿವಂತ ಹುಡುಗನ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ಮಾತುಕೊಟ್ಟು ಮನೆಯವರನ್ನು ಒಪ್ಪಿಸಲು ಬರುತ್ತಾನೆ. ಅಪ್ಪಾ ಮಗ ಇಬ್ಬರು ಸೇರಿಕೊಂಡು ಆಕೆಯನ್ನು ಒಪ್ಪಿಸುತ್ತಾರ? ಆಕೆ ತನ್ನ ತಪ್ಪನ್ನು ಸಾಕ್ಷಾತ್ಕಾರಿಸಿಕೊಳ್ಳುತ್ತಾಳ? ಬಡ ಹುಡುಗನ ವಿದ್ಯಾಭ್ಯಾಸ ಮುಂದುವರೆಯುತ್ತದ ? ಎಂಬ ಅಂಶಗಳ ಮೇಲೆ ಕಥೆ ನಡೆಯುತ್ತದೆ.

6. ನಾಟಕ : ಅನಾಹುತ  | ತಂಡ : ಮಣ್ಣು| ರಚನೆ  : ಸ್ಯಾಮ್ಯುಯೆಲ್ ಬೆಕೆಟ್ | ನಿರ್ದೇಶನ : ಸೂರ್ಯ ಸಾಥಿ

ಸಾರಾಂಶ : ಸಹನೆ ಮತ್ತು ಅಧಿಕಾರದ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿರುವುದರಿಂದ ‘ಅನಾಹುತ’ವು ಪ್ರಖ್ಯಾತ ಅಸಂಗತ ನಾಟಕಕಾರರಾದ ಸ್ಯಾಮ್ಯುಯೆಲ್ ಬೆಕೆಟ್ ಅವರ ಅತ್ಯಂತ ರಾಜಕೀಯ ನಾಟಕವೆಂದು ಪರಿಗಣಿಸಲ್ಪಟ್ಟಿದೆ. ನಿರ್ದೇಶಕನೊಬ್ಬ ಕೊನೆಯ ಟೆಕ್ನಿಕಲ್ ರನ್‌ನಲ್ಲಿ ತನ್ನ ನಟನ ವಸ್ತ್ರ, ಅಂಗಿಕ ಅಭಿವ್ಯಕ್ತಿ ಮತ್ತು ಬೆಳಕನ್ನು ತಿದ್ದುತ್ತಿದ್ದಾನೆ. ಶ್ರೇಣೀಕೃತ ವ್ಯವಸ್ಥೆಯೊಂದರಲ್ಲಿ ಯಾವುದೇ ವ್ಯಕ್ತಿ ಅಧಿಕಾರವನ್ನು ಎಲ್ಲಿಯ ವರೆಗು ಸಹಿಸಬಹುದು, ಯಾವ ಉದ್ದೇಶವನ್ನು ನೆರವೇರಿಸುವುದಕ್ಕೆ ಸಹಿಸಬಹುದು ಮತ್ತು ಸಹನೆಯನ್ನು ರೂಢಿಸಿಕೊಳ್ಳುವುದಕ್ಕೆ ಆತ ತೆರುವ ಬೆಲೆಯೇನು ಎಂಬುದು ನಾಟಕ ಎತ್ತುವ ಪ್ರಮುಖ ಪ್ರಶ್ನೆಗಳು. ಪ್ರಸ್ತುತ ಪ್ರಯೋಗವನ್ನು ಪ್ರತೀಕಾತ್ಮಕ ವಾಸ್ತವವಾದದ ನೆಲೆಯಲ್ಲಿ, ಎಂದರೆ ಸಿಂಬಾಲಿಕ್ ರಿಯಾಲಿಸಂನ ನೆಲೆಯಲ್ಲಿ ಕಟ್ಟಲಾಗಿದೆ‌.

ಬೆಂಗಳೂರು ಕಿರುನಾಟಕೋತ್ಸವದ ಅಂತಿಮ ಹಂತದ ಸ್ಪರ್ಧೆಗೆ ನಿಮ್ಮನ್ನು ಆಹ್ವಾನಿಸುತ್ತಾ ನಾಟಕೋತ್ಸವದ ಮಾಹಿತಿಯನ್ನು ನಿಮ್ಮ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

+91-9686869676 | +91-9902590303 | [email protected]

ಹನು ರಾಮಸಂಜೀವ – ನಾಟಕೋತ್ಸವದ ನಿರ್ದೇಶಕರು
ನಂದೀಶ್ ದೇವ್ – ನಾಟಕೋತ್ಸವದ ನಿರ್ದೇಶಕರು
ಮಂಜು ನಾರಾಯಣ್ – ತಾಂತ್ರಿಕ ನಿರ್ದೇಶಕರು

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: