ಬೆಂಗಳೂರಿನಲ್ಲಿ ನಾಳೆಯಿಂದ ಬೊಂಬೆ ಹಬ್ಬ…

ಗಣಪತಿ ಅಗ್ನಿಹೋತ್ರಿ

ನಮ್ಮನಡುವಿನ ಅನೇಕ ಕಲಾಪ್ರಕಾರಗಳು ಅಳಿವಿನಂಚಿನಲ್ಲಿವೆ. ಅವು ಉಳಿಯಬೇಕೆಂದರೆ ಅವುಗಳಿಗೆ ವೇದಿಕೆ ಒದಗಿಸಬೇಕಿದೆ. ಜೊತೆಗೆ ಇಂದಿನ ತಲೆಮಾರಿಗೆ ಪರಿಚಯಿಸಬೇಕಿದೆ. ಅರಿವು ಮೂಡಿಸಬೇಕಿದೆ. ಮುಂದಿನ ತಲೆಮಾರಿನ ಜವಾಬ್ದಾರಿ ಏನೆನ್ನುವುದನ್ನು ಹೇಳಬೇಕಿದೆ.

ಈ ಎಲ್ಲಾ ಪ್ರಯತ್ನಗಳು ಭಾಷಣದಲ್ಲಷ್ಟೇ ಆದರೆ ಸಾಲದು. ಪ್ರಾಯೋಗಿಕ ಪ್ರಯತ್ನಗಳು ನಡೆಯಬೇಕು. ಆರ್ಥಿಕ ನೆರವು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಂತಹದ್ದೊಂದು ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಫಲ ನಾಳೆ ಮಾರ್ಚ್‌ 12ರಿಂದ 18ರ ವರೆಗೆ ಅನಾವರಣ ಆಗಲಿದೆ. Taking responsibility for yourself first, you can then take responsibility for who and what you are” ಎನ್ನುವ ನುಡಿಗೆ ಹತ್ತಿರವೆನ್ನಿಸುವ ಪ್ರಯತ್ನ ಇದಾಗಿದೆ. ಭಾರತೀಯ ವಿದ್ಯಾಭವನದ ಮಹತ್ವ ಕಾರ್ಯಗಳಲ್ಲಿ ಇದು ಒಂದಾಗಲಿದೆ.

ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಮಾರ್ಚ್ 12, ನಾಳೆಯಿಂದ ಬೊಂಬೆಹಬ್ಬ ‘ನವರಸ’ ಆರಂಭಗೊಳ್ಳಲಿದೆ. ಮಾರ್ಚ್ 18ರ ತನಕ ನಡೆಯಲಿದೆ. ಪ್ರತಿದಿನವೂ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಮನಸ್ಸಿಗೆ ಆನಂದ ಉಂಟುಮಾಡುವ, ನೆಮ್ಮದಿ ಕೊಡುವ, ಮನರಂಜನೆ ನೀಡುವ ಪ್ರದರ್ಶನಗಳನ್ನು ಕಲಾವಿದರು ನೀಡಲಿದ್ದಾರೆ. ಬೊಂಬೆಗಳ ಭಾವಾಭಿವ್ಯಕ್ತಿಯಲ್ಲಿ ‘ನವರಸ’ ಅಭಿವ್ಯಕ್ತಗೊಳ್ಳಲಿದೆ.

ಬೊಂಬೆಗಳ ಪ್ರದರ್ಶನ, ಬೊಂಬೆ ಅಂಚೆ ಚೀಟಿಗಳ ಪ್ರದರ್ಶನ, ಪುಸ್ತಕಗಳ ಪ್ರದರ್ಶನ ಇರಲಿದೆ. ಜೊತೆಗೆ ಕಲಾ ಶಿಬಿರ!

ಕಲಾ ಶಿಬಿರ / Art Camp:

ಇದೇ ವೇಳೆ ನವರಸಗಳು ಪ್ರತಿಬಿಂಬಿಸುವ ಕಲಾಕೃತಿಗಳು ರಚನೆಗೊಳ್ಳಲಿವೆ. ನಾಡಿನ 13 ಮಂದಿ ಕಲಾವಿದರು ಕಲಾಕೃತಿಗಳನ್ನು ರಚಿಸಲಿದ್ದಾರೆ. ಭಿನ್ನ ಶೈಲಿಯಲ್ಲಿ ಕಲಾಕೃತಿಗಳು ಮೂಡಿಬರಲಿವೆ. ಕಲಾಕ್ಷೇತ್ರದ ನುರಿತ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ:

ಭಾನುವಾರ ಬೆಳಗ್ಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೊಂಬೆಗಳ ಉತ್ಸವಕ್ಕೆ ಖ್ಯಾತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಚಾಲನೆ ನೀಡಲಿದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಶೃತಿ ಖುರಾನ ಅವರು ಕಲಾ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಪುಸ್ತಕ ಮತ್ತು ಅಂಚೆ ಚೀಟಿ ಪ್ರದರ್ಶನವನ್ನು ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ಧಾರೇಶ್ವರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ವಿದ್ಯಾಭವನದ ಅಧ್ಯಕ್ಷರಾದ ಕೆ.ಜಿ.ರಾಘವನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಉಳಿದಂತೆ ಕಾರ್ಯಕ್ರಮದ ಎಲ್ಲಾ ವಿವರಗಳು ಇಲ್ಲಿವೆ. ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ. ನಿಮ್ಮೆಲ್ಲರ ಸಹಕಾರ ಇರಲಿ.

‍ಲೇಖಕರು avadhi

March 11, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: