ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಸುರೇಶ್‌ಗೆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಸಿಕ್ಕ ಪುಸ್ತಕ

ಬಿ ಸುರೇಶ್

ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳು ಅದ್ಭುತ ಕಣ್ರೀ…!
ಮೊನ್ನೆ ಭಾನುವಾರ ಜಯನಗರದ ಕಾಲುದಾರಿಯಲ್ಲಿ ಇಂತಹ ಪುಸ್ತಕದ ಅಂಗಡಿಯಲ್ಲಿ ಕಣ್ಣಾಡಿಸಿದೆ. ನಾನು ಅತಿಯಾಗಿ ಮೆಚ್ಚುವ ಕತೆಗಾರ ಸಾಮರ್ಸೆಟ್ ಮಾಮ್ ಅವರ ನಾಟಕಗಳ ಸಂಕಲನ ಸಿಕ್ಕಿತು. ಆತನ ಕತೆ ಕಾದಂಬರಿ ಓದಿದ್ದವನಿಗೆ ಈಗ ನಾಟಕಗಳ ಓದಿನ ಪಯಣ.

ಆ ಪುಸ್ತಕದ ಮೊದಲ ಪುಟದಲ್ಲಿ ಸಹ Douglas woodall ಎಂಬ ವ್ಯಕ್ತಿಯು ೧೯೬೯ರಲ್ಲಿ ಲಂಡನ್ನಿನಲ್ಲಿ ಕೊಂಡದ್ದು ಎಂದು ಬರೆದುಕೊಂಡಿದ್ದಾರೆ. ಲಂಡನ್ನಿನಿಂದ ಬೆಂಗಳೂರು ಜಯನಗರ ಮುಟ್ಟುವ ಹೊತ್ತಿಗೆ ಅದೆಷ್ಟು ಕೈ ಬದಲಾಯಿಸಿದೆಯೋ ಈ ಪುಸ್ತಕ…

***

ಹೀಗೆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ನಿಮಗೆ ಸಿಕ್ಕ ಅಮೂಲ್ಯ ಪುಸ್ತಕಗಳ ಬಗ್ಗೆ ನಮಗೆ ಬರೆದು ಕಳಿಸಿ

 

‍ಲೇಖಕರು G

13 May, 2015

2 Comments

  1. Palahalli Vishwanath

    ಹಳೆಯ ಪುಸ್ತಕಗಳ ವಾಸನೆಯೇ ನನ್ನನ್ನು ನಗರಗಳ ಗಲ್ಲಿಗಳತ್ತ ಕೊ೦ಡೊಯ್ಯುತ್ತದೆ. ಬಹಳ ಹಿ೦ದೆ ಬಳೇ ಪೇಟೆಯಲ್ಲಿ ಹಳೆಯ ಪುಸ್ತಕಗಳಿಗೆ ಹುಡುಕಾಡುತ್ತಿದ್ದೆ. ಅನ೦ತರ ಮು೦ಬಯಿಯಲ್ಲಿ ಫ್ಲೊರಾ ಫೌ೦ಟನ್, ಮಾಟು೦ಗಾ, ಗಿರ್ಗಾವ್ ಇತ್ಯಾದಿ ಜಾಗಗಳು . ಸುರೇಶ್ ರವರು ಹೇಳಿದ೦ತೆ ಪುಸ್ತಕ ಕೊ೦ಡ ನ೦ತರ ಅದು ಯಾರದ್ದಾಗಿತ್ತು, ಅವರು ಎಲ್ಲಿನವರು, ಹೇಗೆ ಅಲ್ಲಿ೦ದ ಇಲ್ಲಿಗೆ ಬ೦ದಿತು ಎ೦ಬ ಪ್ರಶ್ನೆಗಳು ಏಳುತ್ತವೆ. ಹಾಗೆಯೇ ನನ್ನ ವಾಪಸ್ಸು ಬರದ ಪುಸ್ತಕಗಳೂ ಮಾರಾಟವಾದಾಗ ಕೊಳ್ಳುವ ವ್ಯಕ್ತಿ (ನನ್ನದೇ ಅಭಿರುಚಿಗಳುಳ್ಳ ಆ ವ್ಯಕ್ತಿ ಯಾರೋ?) ನನ್ನ ಸಹಿಯನ್ನು ನೋಡಿ ಕುತೂಹಲ ವ್ಯಕ್ತಪಡಿಸಿರಬಹುದು !

  2. chethan

    adhbutha ghalige gurugale… haleya paleyulukeyondu sumaaru 46 varshagalindha nimmanne hudukuttha horatantide……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading