ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಬರೆದ ಕಥೆ: ಮೊಬೈಲು

ಬಿ ಎಂ ಬಷೀರ್

 

ಭಯ

ಒಬ್ಬ ಭಯೋತ್ಪಾದಕ.

ಆತ್ಮಹತ್ಯೆಗೆ ಸಿದ್ಧನಾಗುತ್ತಿದ್ದ.

ಮೈ ತುಂಬಾ ಬಾಂಬುಗಳು.

ಅವನ ಮಕ್ಕದಲ್ಲೇ ಪುಟಾಣಿ ಮಗುವೊಂದು ಆಡುತ್ತಿತ್ತು.

ಮಗು ಇದ್ದಕ್ಕಿದ್ದಂತೆಯೇ ಅವನತ್ತ ನೋಡಿತು.

ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು.

ಆತ ಭಯದಿಂದ ಸಣ್ಣಗೆ ನಡುಗಿ ಬಿಟ್ಟ.

ಮೊಬೈಲು

ಮನೆಗೆ ತಂದ ಮೊಬೈಲನ್ನು ಹೆಂಡತಿ ಮಕ್ಕಳಿಗೆ ಪರಿಚಯಿಸುತ್ತಿದ್ದ

‘‘ಇದನ್ನು ಮೊಬೈಲು ಎಂದು ಕರೆಯುತ್ತಾರೆ. ಎಷ್ಟು ದೂರವಿದ್ದವರೊಂದಿಗೂ ಇದರಲ್ಲಿ ಮಾತನಾಡಬಹುದು…ಪ್ರಪಂಚದ ಎಲ್ಲೇ ಇದ್ದರೂ ಅವರೊಂದಿಗೆ ಮಾತನಾಡಬಹುದು’’ ಮಗ ಮೂಲೆಯಲ್ಲಿ ಕುಳಿತಿದ್ದ ತಾಯಿಗೆ ಕೂಗಿ ಹೇಳಿದ.

‘‘ಇನ್ನಾದರೂ ನನ್ನೊಟ್ಟಿಗೆ ಸರಿಯಾಗಿ ಮಾತನಾಡಬಹುದಲ್ಲ ಮಗ’’ ತಾಯಿ ಸಂಭ್ರಮದಿಂದ ಕೇಳಿದಳು.

ಮಗ ತಲೆತಗ್ಗಿಸಿದ.

 

 

‍ಲೇಖಕರು G

29 December, 2011

3 Comments

  1. Murthy

    Very Touching !!!

  2. A P BHAT

    ಅದೃಶ್ಯ ವ್ಯಕ್ಯ್ಹಿಗಳ ಮೊಬೈಲ್ ಸಲ್ಲಾಪದಲ್ಲಿ ಕಳೆದು ಹೋದವೇ ಮಾತುಗಳು ? ಮೊಬೈಲ್ ಕಥೆ ವಾಸ್ತವ .

  3. Santoshkumar

    heart touching!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading