ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಎಂ ಬಷೀರ್ ಬರೆದ ಕಥೆ ‘ಬಾಗಿಲು’

ಬಾಗಿಲು

ಬಿ ಎಂ ಬಷೀರ್

ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ.

ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’

‘‘ನಿನ್ನ ಮನೆಯ ಹೆಬ್ಬಾಗಿಲನ್ನು’’

ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ ಬಾಗಿಲು…’’

‘‘ಯಾರಿಗೆ ಹೆದರಿ ಈ ಬಾಗಿಲನ್ನು ತಯಾರಿಸಿದ್ದೀಯ?’’

‘‘ಕಳ್ಳಕಾಕರಿಗೆ ಹೆದರಿ…’’

‘‘ನೀನು ಯಾವಾಗ ಈ ಬಲಿಷ್ಟ ಬಾಗಿಲನ್ನು ತಯಾರಿಸಬೇಕೆಂದು ತೀರ್ಮಾಸಿದ್ದೆಯೋ ಆಗಲೇ ಕಳ್ಳ ನಿನ್ನ ಮನೆಯನ್ನು ಪ್ರವೇಶಿಸಿಯಾಗಿದೆ ಅವನನ್ನು ಮನೆಯೊಳಗಡೆ ಬಿಟ್ಟು ಬಾಗಿಲು ಭದ್ರ ಪಡಿಸಿ, ನೀನು ಹೊರಗೆ ಬಂದು ನಿಂತಿದ್ದೀಯ’’

ಎಂದವನೇ ಫಕೀರ ಮುಂದೆ ನಡೆದ.

 

 

‍ಲೇಖಕರು G

16 December, 2011

2 Comments

  1. kiran gajanur

    ನಿಮ್ಮ ಗುಜರಿ ಕಥೆಯ ನಂತರ ಮತೊಂದು ಒಳ್ಳೆಯ ಅನುಭೂತಿ ನಿಡಿದ್ದಿರಿ ಧನ್ಯ ವಾದಗಳು

  2. D.RAVIVARMA

    ಸರ್ ನಿಮ್ಮ ಕಥೆ ತುಂಬಾ ಚೆನ್ನಾಗಿದೆ,ಜೆನ್ ಕಥೆಗಳು ನೆನಪಿಗೆ ಬರುತ್ತಿವೆ ನಿಮ್ಮೊಳಗೊಬ್ಬ ಸುಫಿಯೋ ಅಥವಾ ಸಂತನೂ ಇದ್ದಾನೆ ಅಥವಾ ಅವರ ಪ್ರಭಾವ ನಿಮ್ಮ ಕಥೆಯಲ್ಲಿದೆ. ಶಾರ್ಟ್ ಅಂಡ್ ಸ್ವೀಟ್ ಹಾಗು ಮನುಸ್ಯನ ಗೊಂದಲಗಳ ಬಗ್ಗೆ ನಿಮ್ಮ ಕಥೆ ಮನಮುಟ್ಟುವಂತಿದೆ ಅಸ್ತೆ ಅಲ್ಲ ಅದು ನಮ್ಮೊಳಗಿನ ವಿಕಾರಗಳನ್ನು ಎತ್ತಿ ತೋರಿಸುವಂತಿದೆ ,ಅಭಿನಂದನೆಗಳು
    ರವಿ ವರ್ಮ ಹೊಸಪೇಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading