ಫೋನ್ ರಿಂಗನಿಸತೊಡಗಿತು.
ಫೋನ್ ಎತ್ತಿದೆ ‘‘ಹಲೋ…ಹೇಗಿದ್ದೀಯ?’’
ಯಾರು ಎಂದು ಕೇಳುವುದಕ್ಕೆ ಮೊದಲೇ ಆ ಕಡೆಯ ವ್ಯಕ್ತಿ ಮಾತನಾಡ ತೊಡಗಿದ.
‘‘ಇವತ್ತು ಆಸ್ಪತ್ರೆಗೆ ಅಡ್ಮಿಟ್ ಆಗ್ತಾ ಇದ್ದೇನೆ…ಹೆಚ್ಚೆಂದರೆ ಇನ್ನು ನಾಲ್ಕೈದು ದಿನ ಬದುಕಬಹುದು. ನಿನ್ನ ಜೊತೆಗೊಮ್ಮೆ ಕೊನೆಯ ಬಾರಿ ಮಾತಾಡೋಣ ಅನ್ನಿಸಿ ಫೋನ್ ಮಾಡಿದೆ. ಮುಖ್ಯವಾಗಿ ನಿನಗೆ ಅವತ್ತು ಮಾಡಿದ ದ್ರೋಹಕ್ಕೆ ಕ್ಷಮೆ ಕೇಳಬೇಕಾಗಿದೆ. ಹೇಳು…ನನ್ನನ್ನು ಕ್ಷಮಿಸಿದ್ದೀಯ…?’’
‘ರಾಂಗ್ ನಂಬರ್’ ಎಂದು ಹೇಳಿ ಫೋನ್ ಇಡುವುದಕ್ಕೆ ಮನಸ್ಸು ಬರುತ್ತಿಲ್ಲ. ಆ ಕಡೆಯ ವ್ಯಕ್ತಿ ಉತ್ತರಕ್ಕಾಗಿ ಕಾಯುತ್ತಿದ್ದಾನೆ.
‘‘ಕ್ಷಮಿಸಿದ್ದೇನೆ. ಎಲ್ಲವನ್ನೂ ಕ್ಷಮಿಸಿದ್ದೇನೆ.’’ ಎಂದು ಅರೆ ಕ್ಷಣ ಕಣ್ಮುಚ್ಚಿದೆ.
ಆ ಕಡೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಧ್ವನಿ. ಫೋನ್ ಕಟ್ಟಾಯಿತು.




0 Comments