ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು.
ಮೇಷ್ಟ್ರು ಹೇಳಿದರು ‘‘ನೀನು ಪಾಸು’’
ಹುಡುಗ ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ.
ದಾರಿಯಲ್ಲಿ ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು… ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ತಲೆ ಕುಣಿಸುತ್ತಿದ್ದ ಹೂವಿನ ಗಿಡ ಕೇಳಿತು ‘‘ಈ ಹೂವಿನ ಹೆಸರು ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.
ಅಲ್ಲೇ ಬಿದ್ದಿದ್ದ ಸೈಕಲ್ ಕೇಳಿತು ‘‘ನನ್ನನ್ನು ನೀನು ತುಳಿಯ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಮುಂದೆ ನದಿಯೊಂದು ಎದುರಾಯಿತು. ಕೇಳಿತು ‘‘ನನ್ನನ್ನು ನೀನು ಈಜಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ. ತೂಗಾಡುತ್ತಿದ್ದ ಮಾವಿನ ಗೊಂಚಲು ಕೇಳಿತು ‘‘ನನ್ನನ್ನು ನೀನು ಉದುರಿಸಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಎದುರಾದ ಬೆಟ್ಟ ಕೇಳಿತು ‘‘ನನ್ನನ್ನು ನೀನು ಏರ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಬದುಕು ಹೇಳಿತು ‘‘ಹಾಗಾದರೆ ನೀನು ಫೇಲು’’





ಚಿಕ್ಕ ಚೊಕ್ಕ ಕತೆ
ಹುಡುಗ ನಿಧಾನಕ್ಕೆ ರಜೆಯಲ್ಲಿ ಎಲ್ಲಾ ಕಲಿತಾನು ಬಿಡಿ. ಯಾಕೆ ಗಡಿಬಿಡಿ 🙂
short & sweet story still meaningful.