‘ಬಿಗ್ಬಾಸ್’ನ ಎರಡನೆ ಅವತರಣಿಕೆ ನಿಧಾನವಾಗಿ ರಂಗನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೊದಲನೆ ಅವ ತರಣಿಕೆಯಲ್ಲಿದ್ದು ತನ್ನ ನಟನಾಕೌಶಲ್ಯ ಸನ್ನಿವೇಶವನ್ನು ಉತ್ತಮಪಡಿಸುವ ಕಲೆಗಾರಿಕೆಯಿಂದ ಆಕರ್ಷಣೀಯಗೊಳಿಸುತ್ತಿದ್ದ ಅರುಣ್ಸಾಗರ್ರಂಥ ಕಲಾವಿದರು ಎರಡನೇ ಭಾಗದಲ್ಲಿ ಇಲ್ಲದ ಕಾರಣ ಇದೂ ಮೇಲೇರಲು ಆಗದೆ ಒದ್ದಾಡುತ್ತಿತ್ತು. ತಮ್ಮ ನಿರೂಪಣೆಯ ಚಾತುರ್ಯದಿಂದ ಅನೇಕ ಕಾರ್ಯಕ್ರಮಗಳನ್ನು ಚಂದಗೊಳಿಸಿದ ಸೃಜನ್ ಲೋಕೇಶ್ ಹಾಗೂ ಅಕುಲ್ ಬಾಲಾಜಿಯಿದ್ದರೂ, ಸೃಜನ್ ಅಷ್ಟಾಗಿ ಪ್ರಕಾಶಿಸದೆ ಇದ್ದು ಅಕುಲ್ ಬಾಲಾಜಿಯ ಅತಿರೇಕದ ಆಟಗಳು ಎರಡನೇ ಅವರಣಿಕೆಯನ್ನು ಸಪ್ಪೆಯಾಗಿಸಿತ್ತು. ಇದಕ್ಕಾಗಿಯೆ ಏನೋ ಸಂಭಾಷಣಾ ಚತುರ ನಿರ್ದೇಶಕ ಗುರುಪ್ರಸಾದ್ ಮತ್ತು ಹಾಸ್ಯನಟ ಬುಲೆಟ್ ಪ್ರಕಾಶ್ರ ಪ್ರವೇಶವಾಗಿ ಬುಲೆಟ್ ಪ್ರಕಾಶ್ ಬಂದ ವೇಗದಲ್ಲಿಯೇ ಹಿಂತಿರುಗಿದ್ದಾರೆ.
ಸೆಲೆಬ್ರೆಟಿಗಳನ್ನು ಹಾಗೂ ವಿವಾದಕ್ಕೀಡಾದ ವ್ಯಕ್ತಿಗಳನ್ನು ತಮ್ಮ ಕುಟುಂಬ ಹಾಗೂ ಕೆಲಸದಿಂದ ಬೇರ್ಪಡಿಸಿ ಒಂದೆಡೆ ಇರಿಸಿ ಅವರ ರಾಗ ದ್ವೇಷಗಳನ್ನು ಜನರಿಗೆ ಪರಿಚಯಿಸುತ್ತಾ ಹೋಗುವ ‘ಬಿಗ್ಬಾಸ್’ ಈ ಬಾರಿ ಜೀವನದ ವಿವಿಧ ರಂಗದಲ್ಲಿರುವ ವ್ಯಕ್ತಿಗಳನ್ನರಿಸದೆ ಕೇವಲ ಚಿತ್ರರಂಗ ದೂರದರ್ಶನ ಹಾಗೂ ಎಫ್ಎಂ ರೇಡಿಯೋ ಜಾಕಿಗಳನ್ನು ಒಳಗೊಂಡಿದ್ದೂ ಎಲ್ಲರದ್ದೂ ಅಭಿನಯವೆನಿಸತೊಡಗಿ ಸಹಜವರ್ತನೆ ಆಗೊಮ್ಮೆ ಹೀಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತಿದೆ.

ಬರಿ ಕಲಾವಿದರು ತುಂಬಿರುವುದು ಅದರ ಗುಣವಾಗಿರುವಂತೆ ದೋಷವೂ ಆಗಿದೆ. ಜನಪ್ರಿಯ ಉದ್ಯಮಿ, ರಾಜಕಾರಣಿ, ಕ್ರೀಡಾಪಟು, ಸಾಧಕರು ಮುಂತಾಗಿ ಜೀವನದ ವಿವಿಧಕ್ಷೇತ್ರದ ಜನರಿದ್ದರೆ ವಿಷಯ ವೈವಿಧ್ಯತೆಯ ಕಾರಣದಿಂದಾಗಿ ‘ಬಿಗ್ಬಾಸ್’ನ ಆಕರ್ಷಣೆ ಹೆಚ್ಚಾಗಿಸುವ ಸಾಧ್ಯತೆಯಿತ್ತು.
ಇದೆಲ್ಲದರ ನಡುವೆ ಕಳವಳಕ್ಕೀಡುಮಾಡುವ ಅಂಶವೆಂದರೆ ‘ಬಿಗ್ಬಾಸ್’ನೊಳಗಿರುವ ಕಲಾವಿದರ ಕನ್ನಡ ಬಳಕೆ. ಶೀಷರ್ಿಕೆಯೆ ‘ಬಿಗ್ಬಾಸ್’ ಆಗಿದ್ದು ಟ್ಯಾಗಾಲೈನ್ ‘ಹೌದು ಸ್ವಾಮಿ ಮತ್ತು ತಮಾಷೆನೆ ಅಲ್ಲಾ’ ಕನ್ನಡದಾಗಿದೆ. ಅಂತೆಯೇ ಇಲ್ಲಿ ಇಂಗ್ಲೀಷ್ ಪ್ರದಾನವಾಗಿದ್ದು ಕನ್ನಡ ಹಿಂದೆ ಸರಿದಿದೆ. ಇನ್ನೂ ಅಲ್ಲಿರುವ ಕಲಾವಿದರೂ ಕನ್ನಡ ಚಲನಚಿತ್ರ, ದೂರದರ್ಶನದ ಕಲಾವಿದರಾಗಿದ್ದರೂ ಕಾರ್ಯಕ್ರಮವನ್ನು ಸಂಪೂರ್ಣ ಆಂಗ್ಲಮಯವಾಗಿಸಿದ್ದಾರೆ. ಇದರಿಂದಾಗಿ ಗ್ರಾಮೀಣಭಾಗದಲ್ಲಿ ವೀಕ್ಷಕರ ಸಂಖ್ಯೆ ಇದರೆಡೆಗೆ ಆಕರ್ಷಣೆ ಕಳೆದುಕೊಳ್ಳುತ್ತಿದ್ದಾರೆ.
‘ಬಿಗ್ಬಾಸ್’ ಆಗಾಗ್ಗೆ ಕನ್ನಡವನ್ನೆ ಬಳಸಬೇಕೆಂದು ಆದೇಶ ನೀಡಿ ಎಚ್ಚರಿಸಿದ್ದರೂ ಅದನ್ನು ಯಾರೂ ಲೆಕ್ಕಕಿಟ್ಟಿಲ್ಲ. ಇನ್ನೂ ಅಲ್ಲಿದ್ದ ಕೊಡಗಿನ ಬೆಡಗಿಯಾದ ಹಷರ್ಿಕಾ ಪೂಣ್ಣಚ್ಚ, ಶ್ವೇತ ಚಂಗಪ್ಪ, ದೀಪಿಕಾ ಕಾಮಯ್ಯ ಮತ್ತು ನೀತೂರವರ ಕನ್ನಡವಂತೂ ಕರ್ಣಕಠೋರವಾಗಿದೆ. ಸಂತೋಷನಂತೂ ಕನ್ನಡವನ್ನು ಬಳಸಲು ತಡಕಾಡುತ್ತಿದ್ದಾನೆ. ಈತನಷ್ಟಲ್ಲದಿದ್ದರೂ ಉಳಿದವರ ಕನ್ನಡವೂ ಅಷ್ಟಕಷ್ಟೆ. ಇನ್ನೂ ಕನ್ನಡ ಬಳಸಿ ಎಂದ ವ್ಯರ್ಥಲಾಪ ಮಾಡುತ್ತಿರುವ ‘ಬಿಗ್ಬಾಸೆ’ ‘confession room’ ಗೆ ಬರುವಂತೆ ತಿಳಿಸುವುದು. ಕೃತಕವಾಗಿ ಮಾತನಾಡುವ ಕನ್ನಡವೂ ಗ್ರಾಂಥಿಕವಾಗಿದೆ.
ಇಂದು ಬಹುತೇಕ ಕನ್ನಡ ಛಾನೆಲ್ಗಳು ಕನ್ನಡವನ್ನು ಬೆಳೆಸುವ ಕಾರ್ಯವನ್ನು ಮಾಡದೆ ಕನ್ನಡವನ್ನು ಮರೆಸುವ ಕಾರ್ಯದಲ್ಲಿ ನಿರತವಾಗಿವೆ. ರಿಯಾಲಿಟಿ ಷೋ ‘ಬಿಗ್ಬಾಸ್’ನಲ್ಲಿರುವ ಬಹುತೇಕರು ಬೆಂಗಳೂರು ಮೂಲದವರಾಗಿದ್ದು ಅವರ ಕಾನ್ವೆಂಟ್ ಶಿಕ್ಷಣವೂ ತೆರೆಯಮೇಲೆ ಪಡಿಮೂಡುತ್ತಿದೆ. ಸಹಜ ಬಳಕೆಯ ಊಟ, ತಿಂಡಿ, ತರಕಾರಿ, ಕೊಡು, ತಗೋ, ದಂಥ ಪದಗಳು ಇಂಗ್ಲೀಷ್ ಮಯವಾಗಿದ್ದು, ‘ಹೊಟ್ಟೆಕಿಚ್ಚು’ ಎಂಬ ಪದವನ್ನು ಬಳಸಲಾಗದೆ ‘ಹೊಟ್ಟೆಹುಚ್ಚು’ ಎನ್ನುವ ಪದ ಮುಂತಾಗಿ ಸ್ಪರ್ಧಿಗಳ ಕನ್ನಡ ನಗೆಪಾಟಲಿಗೀಡಾಗಿದೆ. ಅಲ್ಲಿ ಕನ್ನಡಪದಗಳನ್ನು ಕಷ್ಟಪಟ್ಟು ಹುಡುಕಬೇಕಾಗಿದೆ. ಕನಿಷ್ಠ ಹಿಂದಿನ ರಿಯಾಲಿಟಿಷೋಗಳ ವಿಜೇತ ಹಳ್ಳಿಹೈದ ಕೋಟೆ ಕಿಟ್ಟಿಯಂಥವರಾದರೂ ಒಬ್ಬಿಬ್ಬರಿದ್ದರೂ ಕಾರ್ಯಕ್ರಮದ ಆಕರ್ಷಣೆ ಹೆಚ್ಚುತ್ತಿತ್ತು.
ಇನ್ನೂ ‘ಬಿಗ್ಬಾಸ್’ನ ವಿಜೇತರು ಯಾರಾಗಬಹುದು ? ಬಹುತೇಕ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಕಳೆದ ಬಾರಿ ವಿಜಯರಾಘವೇಂದ್ರ ವಿಜೇತರಾದಂತೆ ಈ ಬಾರಿ ಸೃಜನ್ ಲೋಕೇಶ್ ವಿಜೇತರಾಗಬಹುದೆಂದು ನಿರೀಕ್ಷೆಯಿದೆ. ಆದರೆ ತನ್ನ ಹುಚ್ಚಾಟಗಳು, ಆ ಕ್ಷಣಕ್ಕೆ ಪ್ರತಿಕ್ರಿಯಿಸುವಿಕೆ, ಹೆಚ್ಚಿನ ವಿವಾದಗಳು ಜಗಳಗಳು ಮುಂತಾಗಿ ಕಾರ್ಯಕ್ರಮದ ಬಹಳ ಸಮಯ ಕಾಣಿಸಿಕೊಳ್ಳುತ್ತಿರುವ ಅಕುಲ್ ಬಾಲಾಜಿ ಗೆದ್ದರೆ ಆಶ್ಚರ್ಯವೇನಿಲ್ಲ.
'ಬಿಗ್ ಬಾಸ್'ನ ಮನೆಯಲಿ ಎಲ್ಲರದೂ ಅಭಿನಯವೇ…
ನಿಮಗೆ ಇವೂ ಇಷ್ಟವಾಗಬಹುದು…





ಲೇಖನ ತುಂಬಾ ಚೆನ್ನಾಗಿದೆ. ನೀವು ಹೇಳಿದ ಹಾಗೆ ಆ ದೀಪಿಕ ಅವರ ಆ ಇಂಗ್ಲೀಶ್ ಕೇಳಿ ತಲೆ ಚಿಟ್ಟುಹಿಡಿದಿದೆ. ಅವರೇನು ಹಾಲಿವುಡ್ ನಟಿಯೋ ಅಂತ ನಗೆ ಬರುತ್ತಾ ಇದೆ. ಅವರನ್ನು ಇಷ್ಟು ವಾರಗಳವರೆಗೆ ಬಿಗ್ ಬಾಸ್ ನಲ್ಲಿ ಇಟ್ಟುಕೊಂಡಿದ್ದಾರಲ್ಲ ಅಂತ ಖೇದವಾಗುತ್ತದೆ. ಹಾಗೆಯೇ ಅಕುಲ್ ಬಾಲಾಜಿ ಅವರ ಬಗ್ಗೆ ಹೇಳಬೇಕೆಂದರೆ ಅವರು ಕೊಬ್ಬರಿ ಮಿಠಾಯಿ ಮುಚ್ಚಿಟ್ಟುಕೊಂಡು ತಿನ್ನುತ್ತಿರಬೇಕಾದರೆ ಇವರು ಬಿಗ್ ಬಾಸ್ ಪಟ್ಟಕ್ಕೆ ಅರ್ಹರಾ ಅನಿಸಿತು.
it’s only sudeep’s & his group’s show, scripted and presented infront of us
ನಿಜ. ಒಮ್ಮೆ ಇದು ಕೂಡ ಒಂದು ಶೋ ಅಂದುಕೊಂಡರೆ ಇವರೆಲ್ಲಾ ಪ್ರಾತ್ರಧಾರಿಗಳು. ಅಷ್ಟೆ.
Ya your right sir….in Hindi reality shows participants use to talk in Hindi but in Kannada reality shows participants doesn’t like to talk in their own mother tongue… Its really embarrassing for real kannadigas
ಈ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಾಗು ಇನ್ನಿತರ ಟಿವಿ ಕಾರ್ಯಕ್ರಮಗಳಲ್ಲಿ ಇಂಗ್ಲಿಶ್ ಮಾತಾಡೋ ಕನ್ನಡ ನಟ/ನಟಿಯರನ್ನು ಕೆಲವು ಪ್ರಶ್ನೆ ಕೆಳಬೇಕೆನಿಸಿತ್ತದೆ…
ನಿಮಗೆ ಸುಲಲಿತ ಕನ್ನಡ ಮಾತಾಡಲು ಬರುವದಿಲ್ಲವಾ ಅಥವಾ ಮಾತನಾಡಲು ಅಸಹ್ಯಪಟ್ಟು ಕೊಳ್ಳುತ್ತಿರಾ?..
೧.ಮಾತಾಡಲು ಬರುವದಿಲ್ಲ ಅಂದಾದರೆ,,, ಅದನ್ನು ಕಲಿತುಕೊಳ್ಳಬೇಕು ಎಂದೆನಿಸುವದಿಲ್ಲವಾ?ಯಾಕೆಂದರೆ ಭಾಷೆ ಬರದಇದ್ದರೆ ಹೇಗೆ ನಟನೆ ಮಾಡುತ್ತಿರಿ? ಹೇಗೆ ನಿಮ್ಮ ಭಾವನೆಗಳನ್ನು ಅಭಿವ್ಯಕ್ತಪದಿಸುತ್ತಿರಿ..? ನಿಮ್ಮ ನಟನೆಗೆ ಬೇರೆ ಯಾರದೋ ದ್ವನಿ ಉಪಯೋಗಿಸುವದು ನಿಮ್ಮಲ್ಲಿಯ ಕುಂದು ಎಂದೆನಿಸುವದಿಲ್ಲವೇ?ನೀವು ನಿಮ್ಮ ವೃತ್ತಿಗೆ ಗೌರವ ಕೊಡಬೇಕು ಎಂದೆನಿಸುವದಿಲ್ಲವೇ? ಸೌಂದರ್ಯ, ದೇಹ ದಾಡ್ಯತೆಗೆ ಗಮನ ಕೊಡುವಂತೆ ನಿಮ್ಮ ವೃತ್ತಿಯ ಒಂದು ಭಾಗವಾದ ಭಾಷೆಯ ಮೇಲಿನ ಪ್ರಭುದ್ಯತೆ ಪಡೆದುಕೊಳ್ಳಬೇಕೆನಿಸುವದಿಲ್ಲವೇ?
೨. ನಿಮಗೆ ಕನ್ನಡ ಮಾತನಾಡಲು ಅಸಹ್ಯ ಎಂದಾದರೆ, ದಯವಿಟ್ಟು ಕನ್ನಡ ಸಿನಿಮಾ/ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ…ಯಾವದೋ ಪರದೇಶಕ್ಕೆ ಹೋಗಿ ಇಂಗ್ಲಿಷ ಕಾರ್ಯಕ್ರಮದಲ್ಲಿಯೇ ನಿಮ್ಮ ಹೊಟ್ಟೆ ಹೊರೆಯೂ ಕೆಲಸ ಮಾಡಿ.. (: ನಿಮಗೆ ಅದು ಸಾದ್ಯವೇ ಇಲ್ಲ ಅನ್ನುವದು ಎಲ್ಲರಿಗು ಗೊತ್ತಿದೆ..ಆದರಿಂದ ನಿಮಗೆ ಈ ಎರಡನೇ ಆಯ್ಕೆ ಇಲ್ಲವಾದ್ದರಿಂದ ಕನ್ನಡವನ್ನು ಸರಿಯಾಗಿ ಕಲಿತು ನಿಮ್ಮ ವೃತ್ತಿ ಘನತೆ ಯೊಂದಿಗೆ ನಿಮ್ಮ ಗೌರವವನ್ನು ಹೆಚ್ಸಿಸಿಕೊಲ್ಲುವದು ಒಳ್ಳೆಯದು..