ಡಿ ಎಂ ಘನಶ್ಯಾಮ್ಡಿ ಎಂ ಘನಶ್ಯಾಮ್ ವೃತ್ತಿಯಿಂದ ಪತ್ರಕರ್ತರು. ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರಜಾವಾಣಿಯ ಚಿಕ್ಕಮಗಳೂರು ವರದಿಗಾರರಾಗಿ ಕೆಲಸ ಮಾಡುತ್ತಿದ್ದಾಗ ಮನ ತುಂಬಿದವರ ಪರಿಚಯ ಇಲ್ಲಿದೆ
ಚಿಕ್ಕಮಗಳೂರಿನಲ್ಲಿದ್ದಾಗ ನಮಗೆ ಹಲವು ರೀತಿ ನೆರವಾದವರು ಸೋದರಿ ಅಮ್ರಿನ್ ಮತ್ತು ಅವರ ಕುಟುಂಬ. ಅವರ ದೊಡ್ಡ ಮಗಳು ಅಫ್ಷಿನ್ ನಮ್ಮ ಮನೆಯ ಮಗಳಂತೆ ಬೆಳೆದಳು.
5 ವರ್ಷದ ನಂತರ ಇಂದು ಮತ್ತೆ ಅವರ ಮನೆ ಹುಡುಕಿ ಹೋಗಿದ್ದೆ. ಬಾಯಿತುಂಬಾ ಅಣ್ಣಾ ಎಂದು ಮಾತಾಡಿಸಿ, ಅದೇ ವಿಶ್ವಾಸದಿಂದ ಕಂಡರು. ನಾವು ಒಂದು ಊರಿನಲ್ಲಿ ಕೆಲಸ ಮಾಡುವ ಸಂದರ್ಭ ನೂರಾರು ಮಂದಿ ಪರಿಚಯವಾಗುತ್ತಾರೆ. ಅಲ್ಲಿಂದ ಬೇರೆಡೆಗೆ ಹೋದ ಮೇಲೆ ಕೆಲವರು ಮಾತ್ರ ಮನದಲ್ಲಿ ಉಳಿಯುತ್ತಾರೆ.
ಅಂಥವರನ್ನು ಹುಡುಕಿಯಾದರೂ ನೋಡಿ ಮಾತನಾಡಿಸೋಣ ಎನಿಸುತ್ತೆ.




We prema vaatshalya jeevanaduddkkuu Iraql ..