ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಮಾರ‍್ವಾರಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

43

ಹಿಂದಿಯ ಒಳಗೆ ದಾಕಲಾಗಿರುವ ಹಲವಾರು ದೊಡ್ಡ ದೊಡ್ಡ ಬಾಶೆಗಳಲ್ಲಿ ಮಾರ‍್ವಾರಿ ಕೂಡ ಒಂದಾಗಿದೆ. ಮಾರ‍್ವಾರಿ ಬಾರತದ ರಾಜಸ್ತಾನ ರಾಜ್ಯ ಮತ್ತು ಬಾರತದ ಹಲವಾರು ಇತರ ರಾಜ್ಯಗಳಲ್ಲಿ ಹರಡಿಕೊಂಡಿದೆ. ಆದರೆ ಬಾಶೆ ಎಂಬ ಮರ‍್ಯಾದೆಯನ್ನು ಇದಕ್ಕೆ ಇದುವರೆಗೆ ಕೊಟ್ಟಿಲ್ಲ. ಹಾಗಾಗಿ ದೇಶದಲ್ಲಿ ದೊಡ್ಡ ಸಂಕೆಯ ಮಂದಿ ಮಾತನಾಡುವ ಬಾಶೆಯಾಗಿದ್ದರೂ ಇದನ್ನು ಹಿಂದಿಯ ಒಳಗೆ ಸೇರಿಸಿದೆ. ದೇಶದಲ್ಲಿ ಒಟ್ಟು ಮಾರ‍್ವಾರಿ ಮಾತಾಡುವವರ ಸಂಕೆ ೭೮,೩೧,೭೪೯. ಕರ‍್ನಾಟಕದಲ್ಲಿ ಮಾರ‍್ವಾರಿಗಳ ಸಂಕೆ ೧,೦೦,೨೧೪. ಇದು ದೇಶದ ಒಟ್ಟು ಮಾರ‍್ವಾರಿಗಳ ೧.೨೭೯% ಮಂದಿಯನ್ನು ಒಳಗೊಳ್ಳುತ್ತದೆ. ಅದರಂತೆಯೆ ಕರ‍್ನಾಟಕದ ೦.೧೬೪% ಪ್ರತಿಶತ ಮಂದಿಯನ್ನು ಇದು ರೂಪಿಸುತ್ತದೆ. ಕರ‍್ನಾಟಕದಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರನ್ನು ಹೊಂದಿರುವ ಬಾಶೆಗಳು ಕೇವಲ ಹದಿಮೂರು ಮಾತ್ರ. ಮಾರ‍್ವಾರಿ ಈ ಪಟ್ಟಿಯಲ್ಲಿ ಬರುತ್ತದೆ. ಇದು ಕರ‍್ನಾಟಕದ ಹದಿಮೂರನೆ ಅತಿ ದೊಡ್ಡ ಬಾಶೆ. 

ಮಾರ‍್ವಾರಿ ಬಾಶೆಯು ಕರ‍್ನಾಟಕದ ಹಲವೆಡೆ ಹರಡಿಕೊಂಡಿದೆ. ಸಹಜವಾಗಿ ಬೆಂಗಳೂರಿನಲ್ಲಿ ಹೆಚ್ಚು ಮಂದಿ ಕಾಣಿಸುತ್ತಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಕಲಾಗಿರುವ ಮಾರ‍್ವಾರಿ ಮಾತುಗರ ಸಂಕೆ ಕರ‍್ನಾಟಕದ ಒಟ್ಟು ಮಾರ‍್ವಾರಿಗಳ ಅರ‍್ದದಶ್ಟು, ಅಂದರೆ ೫೧,೭೨೫. ಇದು ಒಟ್ಟು ರಾಜ್ಯದ ಮಾರ‍್ವಾರಿಗಳ ೫೧.೬೧೪% ಆಗುತ್ತದೆ. ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಒಟ್ಟು ಹದಿಮೂರು ಜಿಲ್ಲೆಗಳಲ್ಲಿ ಮಾರ‍್ವಾರಿ ಮಾತಾಡುವ ಮಂದಿ ಸಾವಿರಕ್ಕೂ ಹೆಚ್ಚು ಇದ್ದಾರೆ. ಆನಂತರ ಹದಿನಾಲ್ಕು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಆದರೆ ನೂರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಉಳಿದ ಎರಡು ಜಿಲ್ಲೆಗಳಲ್ಲಿ ನೂರಕ್ಕೂ ಕಡಿಮೆ ಮಂದಿ ಕಾಣಿಸುತ್ತಾರೆ. 

ಇಲ್ಲಿ ಕೆಳಗೆ ಕರ‍್ನಾಟಕದ ಮಾರ‍್ವಾರಿ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,2971,00,2140.164%100%
ಬೆಂಗಳೂರು ನಗರ  96,21,55151,7250.537%51.614%
ದಾರವಾಡ  18,47,0237,5850.410%7.568%
ಬಳ್ಳಾರಿ 24,52,5955,5820.227%5.570%
ಬೆಳಗಾವಿ 47,79,6615,1010.106%5.090%
ಮಯ್ಸೂರು  30,01,1274,7600.158%4.749%
ವಿಜಯಪುರ 21,77,3313,0640.140%3.057%
ರಾಯಚೂರು  19,28,8122,7950.144%2.789%
ಬಾಗಲಕೋಟೆ  18,89,7522,7350.144%2.729%
ಕೊಪ್ಪಳ 13,89,9212,3540.169%2.348%
ದಾವಣಗೆರೆ 19,45,4971,8700.096%1.866%
ಕಲಬುರಗಿ  25,66,3261,6560.064%1.652%
ಶಿವಮೊಗ್ಗ 17,52,7531,3920.079%1.389%
ಗದಗ  10,20,7911,3280.130%1.325%
ಯಾದಗಿರಿ  11,74,2711,3130.111%1.310%
ತುಮಕೂರು 26,78,9809860.036%0.983%
ಚಿತ್ರದುರ‍್ಗ 16,59,4568870.053%0.885%
ಉತ್ತರ ಕನ್ನಡ 14,37,1697890.054%0.787%
ಹಾವೇರಿ 15,97,6687140.044%0.712%
ಕೋಲಾರ 15,36,4016470.040%0.645%
ಮಂಡ್ಯ 18,05,7696170.034%0.615%
ದಕ್ಶಿಣ ಕನ್ನಡ  20,89,6495490.026%0.547%
ಬೆಂಗಳೂರು ಗ್ರಾಮಂತರ 9,90,9235480.055%0.546%
ಹಾಸನ 17,76,4215050.028%0.503%
ಬೀದರ  17,03,3004920.028%0.490%
ಚಿಕ್ಕಮಗಳೂರು 11,37,9613740.032%0.373%
ಚಿಕ್ಕಬಳ್ಳಾಪುರ 12,55,1043140.025%0.313%
ರಾಮನಗರ  10,82,6362010.018%0.200%
ಕೊಡಗು 5,54,5191580.028%0.157%
ಚಾಮರಾಜನಗರ 10,20,791980.009%0.097%
ಉಡುಪಿ  11,77,361750.006%0.074%

ಮಾರ‍್ವಾರಿ ಮಾತುಗರ ಹಂಚಿಕೆ

C:\Users\DELL\Downloads\Distribution of Marwari (M).jpg

‍ಲೇಖಕರು Admin

5 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading