ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
34
ಕರ್ನಾಟಕದಲ್ಲಿ ಬಳಕೆಯಲ್ಲಿರುವ ಮೂರನೆ ಅತಿದೊಡ್ಡ ಬಾಶೆ ತೆಲುಗು ಆಗಿದೆ. ತೆಲುಗು ಮಾತಾಡುವ 35,69,400 ಮಂದಿ ದಾಕಲಾಗಿದ್ದಾರೆ. ಇದು ಒಟ್ಟು ದೇಶದ ತೆಲುಗಿನ 4.399% ಆಗುತ್ತದೆ ಮತ್ತು ಕರ್ನಾಟಕದ 2.275% ಆಗುತ್ತದೆ. ಇದು ಕರ್ನಾಟಕದ ಮೂರನೆ ಅತಿದೊಡ್ಡ ಬಾಶೆಯಾಗಿದೆ. ತೆಲುಗಿನಲ್ಲಿ ಎರಡು ತಾಯ್ಮಾತುಗಳು ದಾಕಲಾಗಿವೆ. ತೆಲುಗು (35,65,618) ಮತ್ತು ವಡರಿ (204). ಇದರಲ್ಲಿ ಬಹುತೇಕರು ತೆಲುಗು ಮಾತಾಡುವವರು ಆಗಿದ್ದಾರೆ. ಇವುಗಳ ಜೊತೆಗೆ ಇತರ (3,578) ಎಂಬ ಗುಂಪು ಕೂಡ ದಾಕಲಾಗಿದೆ.
ಕರ್ನಾಟಕದಲ್ಲಿ ದಾಕಲಾದ ತೆಲುಗರಲ್ಲಿ ಅಂದಾಜು 38% ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೆ ದಾಕಲಾಗಿದ್ದಾರೆ. ಬೆಂಗಳೂರಿನ ತೆಲುಗರ ಸಂಕೆ 13,46,047 ಆಗಿದ್ದು ಇದು ಕರ್ನಾಟಕದ ಒಟ್ಟು ತೆಲುಗರ ಸುಮಾರು 14% ಆಗಿದೆ. ಆನಂತರ ಕೋಲಾರ (3,48,253) ಮತ್ತು ಚಿಕ್ಕಬಳ್ಳಾಪುರ (3,39,761) ಜಿಲ್ಲೆಗಳಲ್ಲಿ ತಲಾ ಸುಮಾರು 10% ಮಂದಿ ದಾಕಲಾಗಿದ್ದಾರೆ. ಬಳ್ಳಾರಿಯಲ್ಲಿ (2,37,403) ಸುಮಾರು 7% ಮತ್ತು ರಾಯಚೂರಿನಲ್ಲಿ (1,56,421) 4% ಪ್ರತಿಶತಕ್ಕೂ ಹೆಚ್ಚು ಮಂದಿ ಇದ್ದಾರೆ. ಆನಂತರ ಬೆಂಗಳೂರು ಗ್ರಾಮಾಂತರ (1,27,243), ಕಲಬುರಗಿ (1,04,643) ಜಿಲ್ಲೆಗಳಲ್ಲಿ ಒಂದು ಲಕ್ಶಕ್ಕಿಂತ ಹೆಚ್ಚು ತೆಲುಗರು ದಾಕಲಾಗಿದ್ದಾರೆ. ಆನಂತರ ಒಟ್ಟು ಹತ್ತೊಂಬತ್ತು ಜಿಲ್ಲೆಗಳಲ್ಲಿ ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಉಳಿದ ನಾಲ್ಕು ಜಿಲ್ಲೆಗಳಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮಂದಿ ಇದ್ದಾರೆ.
ಇಲ್ಲಿ ಕೆಳಗೆ ತೆಲುಗು ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ.
| ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
| ಕರ್ನಾಟಕ | 6,10,95,297 | 35,65,618 | 2.275% | 100% |
| ಬೆಂಗಳೂರು | 96,21,551 | 13,46,047 | 13.989% | 37.750% |
| ಕೋಲಾರ | 15,36,401 | 3,48,253 | 22.666% | 9.766% |
| ಚಿಕ್ಕಬಳ್ಳಾಪುರ | 12,55,104 | 3,39,761 | 2.707% | 9.528% |
| ಬಳ್ಳಾರಿ | 24,52,595 | 2,37,403 | 9.679% | 6.658% |
| ರಾಯಚೂರು | 19,28,812 | 1,56,421 | 8.109% | 4.386% |
| ಬೆಂಗಳೂರು ಗ್ರಾಮಾಂತರ | 9,90,923 | 1,27,243 | 12.840% | 3.568% |
| ಕಲಬುರಗಿ | 25,66,326 | 1,04,643 | 4.077% | 2.934% |
| ತುಮಕೂರು | 26,78,980 | 90,627 | 3.382% | 2.541% |
| ಚಿತ್ರದುರ್ಗ | 16,59,456 | 89,374 | 5.385% | 2.506% |
| ಮಯ್ಸೂರು | 30,01,127 | 87,211 | 2.905% | 2.445% |
| ಬೀದರ | 17,03,300 | 72,438 | 4.252% | 2.031% |
| ಶಿವಮೊಗ್ಗ | 17,52,753 | 71,229 | 4.063% | 1.997% |
| ಯಾದಗಿರಿ | 11,74,271 | 61,027 | 5.197% | 1.711% |
| ಕೊಪ್ಪಳ | 13,89,921 | 57,895 | 4.165% | 1.623% |
| ದಾವಣಗೆರೆ | 19,45,497 | 54,899 | 2.821% | 1.539% |
| ದಾರವಾಡ | 18,47,023 | 43,547 | 2.357% | 1.221% |
| ಬೆಳಗಾವಿ | 47,79,661 | 38,417 | 0.803% | 1.007% |
| ಹಾಸನ | 17,76,421 | 34,765 | 1.957% | 0.975% |
| ಚಾಮರಾಜನಗರ | 10,20,791 | 33,545 | 3.286% | 0.940% |
| ಚಿಕ್ಕಮಗಳೂರು | 11,37,961 | 31,698 | 2.785% | 0.888% |
| ರಾಮನಗರ | 10,82,636 | 23,955 | 0.211% | 0.671% |
| ಮಂಡ್ಯ | 18,05,769 | 23,457 | 1.299% | 0.657% |
| ಉತ್ತರ ಕನ್ನಡ | 14,37,169 | 19,530 | 1.358% | `0.547% |
| ಹಾವೇರಿ | 15,97,668 | 15,321 | 0.958% | 0.429% |
| ವಿಜಯಪುರ | 21,77,331 | 14,788 | 0.079% | 0.414% |
| ಬಾಗಲಕೋಟೆ | 18,89,752 | 12,347 | 0.653% | 0.346% |
| ಗದಗ | 10,20,791 | 8,888 | 0.870% | 0.249% |
| ಕೊಡಗು | 5,54,519 | 8,586 | 1.548% | 0.240% |
| ದಕ್ಶಿಣ ಕನ್ನಡ | 20,89,649 | 7,931 | 0.379% | 0.222% |
| ಉಡುಪಿ | 11,77,361 | 4,395 | 0.373% | 0.123% |
ತೆಲುಗು ಮಾತುಗರ ಹಂಚಿಕೆ






0 Comments