ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ತುಮಕೂರು ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ತುಮಕೂರುಜಿಲ್ಲೆಯ ಬಗ್ಗೆ ಬೆಳಕು

ಚೆಲ್ಲಲಾಗಿದೆ.

13

 ತುಮಕೂರು

ತುಮಕೂರು ಜಿಲ್ಲೆಯಲ್ಲಿ ಕನಿಶ್ಟ ಮೂವತ್ಮೂರು ಬಾಶೆಗಳು ಬಳಕೆಯಲ್ಲಿವೆ ಮತ್ತು ಅರ‍್ವತ್ತೊಂದು ತಾಯ್ಮಾತುಗಳು ಬಳಕೆಯಲ್ಲಿವೆ. ತುಮಕೂರಿನಲ್ಲಿ ಹೆಚ್ಚು ಮಂದಿ ಕನ್ನಡ ಮಾತಾಡುವವರಿದ್ದು ಸುಮಾರು 85% ಕನ್ನಡ ಇದೆ. ಉರ‍್ದು  ಸುಮಾರು ಎರಡೂವರೆ ಲಕ್ಶದಶ್ಟು ಮಂದಿಯನ್ನು ಹೊಂದಿ ಜಿಲ್ಲೆಯ ಎರಡನೆ ದೊಡ್ಡ ಬಾಶೆಯಾಗಿದೆ. ತೆಲುಗು ಕೂಡ ಜಿಲ್ಲೆಯ ಇನ್ನೊಂದು ಪ್ರದಾನ ಬಾಶೆಯಾಗಿದೆ. ಲಂಬಾಣಿ ಮತ್ತು ಮರಾಟಿಯ ಮಾತುಗರ ಸಂಕೆ ಜಿಲ್ಲೆಯಲ್ಲಿ ಗಮನ ಸೆಳೆಯುತ್ತದೆ.

***

ಜನಗಣತಿ ಒದಗಿಸಿರುವ ತುಮಕೂರು ಜಿಲ್ಲೆಯ ಬಾಶೆಗಳ ಮಾಹಿತಿಯನ್ನು ಇಲ್ಲಿ ಪಟ್ಟಿ ಮಾಡಿ ಕೊಟ್ಟಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ917912
ಆಸ್ಸಾಮಿ917912
ಬೆಂಗಾಲಿ377260117
ಬೆಂಗಾಲಿ377260117
ಗುಜರಾತಿ706367339
ಗುಜರಾತಿ652341311
ಸವರಾಶ್ಟ್ರ/ಸವರಾಶ್ಟ್ರಿ514
ಇತರ492524
ಹಿಂದಿ391192112917990
ಬಂಜಾರಿ251312
ಬರ‍್ಮವುರಿ110
ಬೋಜ್ಪುರಿ29254
ಚತ್ತೀಸ್‍ಗರಿ312
ಗೊಜ್ರಿ/ಗುಜ್ಜಾರಿ/ಗುಜರ್1183
ಹರಿಯಾಣ್ವಿ862
ಹಿಂದಿ 865555813074
ಲಮಾಣಿ/ಲಂಬಾಡಿ285981448414114
ಮಾರ‍್ವಾರಿ986551435
ರಾಜಸ್ತಾನಿ592338254
ಸುಗಾಲಿ1055
ಇತರ20111685
ಕನ್ನಡ227610511480961128009
ಕನ್ನಡ227579611479221127874
ಕುರುಬ/ಕುರುಂಬ101
ಪ್ರಾಕ್ರುತ/ಪ್ರಾಕ್ರುತ ಬಾಶಾ331518
ಇತರ275159116
ಕಾಶ್ಮೀರಿ361323
ಕಾಶ್ಮೀರಿ351322
ದಾರ‍್ದಿ101
ಕೊಂಕಣಿ643332311
ಕೊಂಕಣಿ619316303
ಕುಡುಬಿ/ಕುಡುಂಬಿ21147
ನವಾಯಿತಿ321
ಮಯ್ತಿಲಿ1293
ಮಯ್ತಿಲಿ1293
ಮಲಯಾಳಂ23739411432
ಮಲಯಾಳಂ23729411431
ಯರವ101
ಮಣಿಪುರಿ552827
ಮಣಿಪುರಿ532726
ಇತರ211
ಮರಾಟಿ1329867196579
ಮರಾಟಿ1326567056560
ಇತರ331419
ನೇಪಾಲಿ1458659
ನೇಪಾಲಿ1458659
ಓಡಿಯಾ288174114
ಓಡಿಯಾ280171109
ಇತರ835
ಪಂಜಾಬಿ1036043
ಪಂಜಾಬಿ1036043
ಸಂಸ್ಕ್ರುತ835
ಸಂಸ್ಕ್ರುತ835
ಸಂತಾಲಿ404
ಸಂತಾಲಿ404
ಸಿಂದಿ874641
ಕಚ್ಚಿ954
ಸಿಂದಿ784137
ತಮಿಳು1211261465966
ತಮಿಳು1211261465966
ತೆಲುಗು906394390746732
ತೆಲುಗು906274390146726
ಇತರ1266
ಉರ‍್ದು241943121781120162
ಉರ‍್ದು241940121778120162
ಇತರ330
ಅರಾಬಿಕ್/ಅರ‍್ಬಿ110
ಅರಾಬಿಕ್/ಅರ‍್ಬಿ110
ಬಿಲಿ/ಬಿಲೊಡಿ330
ಇತರ330
ಬೊಟಿಯ1798
ಇತರ1798
ಕೂರ‍್ಗಿ/ಕೊಡಗು421626
ಕೂರ‍್ಗಿ/ಕೊಡಗು271017
ಕೊಡವ1569
ಇಂಗ್ಲೀಶು1136350
ಇಂಗ್ಲೀಶು1136350
ಕಾಸಿ19172
ಕಾಸಿ12111
ಮ್ನಾರ್/ಸಿಂಟೆಂಗ್761
ಲುಶಾಯಿ/ಮಿಜೊ514
ಲುಶಾಯಿ/ಮಿಜೊ514
ನಿಸ್ಸಿ/ದಪ್ಲ101
ಅಪ್ತಾನಿ101
ಸವರ211
ಸವರ211
ಟಿಬೆಟನ್330
ಟಿಬೆಟನ್330
ತ್ರಿಪುರಿ440
ತ್ರಿಪುರಿ440
ತುಳು558263295
ತುಳು558263295
ಇತರ683731

ಜನಗಣತಿ ಒದಗಿಸಿರುವ ಮಾಹಿತಿಯಂತೆ ತುಮಕೂರು ಜಿಲ್ಲೆಯಲ್ಲಿ ಒಟ್ಟು ಮೂವತ್ತೆರಡು ಬಾಶೆಗಳು ಬಳಕೆಯಲ್ಲಿವೆ.  ಅದರೊಟ್ಟಿಗೆ ಇತರ ಎಂಬ ಒಂದು ಗುಂಪು ದಾಕಲಾಗಿದೆ. ಇದರಲ್ಲಿ ಕೇವಲ ಅರವತ್ತೆಂಟು ಮಂದಿ ಇದ್ದು ಇದು ಒಂದು ಬಾಶೆ ಎಂದು ಲೆಕ್ಕಿಸಿದರೆ ತುಮಕೂರಿನಲ್ಲಿ ಜನಗಣತಿ ದಾಕಲೆಯಂತೆ ಒಟ್ಟು ಮೂವತ್ಮೂರು ಬಾಶೆಗಳು ಎಂದಾಗುತ್ತದೆ. ಹಾಗೆಯೆ ಅರವತ್ತು ತಾಯ್ಮಾತುಗಳನ್ನು ಇದರಲ್ಲಿ ಕಾಣಬಹುದು. ಇದರಲ್ಲಿ ಇತರ ಎಂಬ ಬಾಶೆಯ ಗುಂಪಿನಲ್ಲಿ ಕಡಿಮೆ ಮಾತುಗರು ಇರುವುದರಿಂದ ಇದು ಒಂದು ತಾಯ್ಮಾತು ಎಂದು ತೆಗೆದುಕೊಂಡರೆ ಒಟ್ಟು ಅರ್ವತ್ತೊಂದು ತಾಯ್ಮಾತುಗಳು ಎಂದಾಗುತ್ತದೆ. ಇವುಗಳಲ್ಲಿ ಹತ್ತು ಬಾಶೆಗಳಲ್ಲಿ ಇತರ ಎಂಬ ಗುಂಪು ಕಾಣಿಸುತ್ತದೆ. ಇತರ ಗುಂಪುಗಳನ್ನು ಒಳಗೊಂಡಿರುವ ಬಾಶೆಗಳು ಹೀಗಿವೆ, ಗುಜರಾತಿ, ಹಿಂದಿ, ಕನ್ನಡ, ಮಣಿಪುರಿ, ಮರಾಟಿ, ಓಡಿಯಾ, ತೆಲುಗು, ಉರ‍್ದು, ಬಿಲಿ/ಬಿಲೊಡಿ ಮತ್ತು ಬೊಟಿಯ. ಇವುಗಳ ಹೊರತಾಗಿ ಒಟ್ಟು ಅಯ್ವತ್ತು ತಾಯ್ಮಾತುಗಳನ್ನು ಹೆಸರಿಸಿದೆ.

ತುಮಕೂರು ಜಿಲ್ಲೆಯ ಜನಸಂಕೆ 26,78,980. ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡ. ಕನ್ನಡ ಮಾತಾಡುವವರು 22,76,105 ಆಗಿದ್ದಾರೆ. ಇದು ಜಿಲ್ಲೆಯ 84.961% ಆಗುತ್ತದೆ. ಇಲ್ಲಿ ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡವಾಗಿದೆ. ಉರ‍್ದು ಬಾಶೆಗೆ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಉರ‍್ದು ಮಾತುಗರ ಸಂಕೆ 2,41,943 (9.031%). ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ನಾಲ್ಕು ಬಾಶೆಗಳು ಇವೆ. ತೆಲುಗು – 90,639 (3.383%), ಹಿಂದಿ – 39,119 (1.460%), ಮರಾಟಿ – 13,298 (0.496%) ಮತ್ತು ತಮಿಳು – 12,112 (0.452%). ಮಲಯಾಳಂ – 2,373 (0.088%) ಬಾಶೆಗೆ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಇನ್ನು ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಎಂಟು ಬಾಶೆಗಳು ಇವೆ. ಅವುಗಳೆಂದರೆ, ಗುಜರಾತಿ, ಕೊಂಕಣಿ, ತುಳು, ಬೆಂಗಾಲಿ, ಓಡಿಯಾ, ನೇಪಾಲಿ, ಇಂಗ್ಲೀಶು ಮತ್ತು ಪಂಜಾಬಿ. ನೂರಕ್ಕಿಂತ ಕಡಿಮೆ ಮಾತುಗರನ್ನು ಹೊಂದಿರುವ ಹತ್ತೊಂಬತ್ತು ಬಾಶೆಗಳು ಇವೆ. ಈ ಬಾಶೆಗಳನ್ನು ಕೆಳಗಿನಂತೆ ಚಿತ್ರಿಸಿ ತೋರಿಸಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ22,76,105 84.961%
ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚು ಉರ‍್ದು2,41,9439.031%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು90,6393.383%
’’ಹಿಂದಿ39,1191.460%
’’ಮರಾಟಿ13,2980.496%
’’ತಮಿಳು12,112 0.452%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮಲಯಾಳಂ2,3730.088%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚುಗುಜರಾತಿ, ಕೊಂಕಣಿ, ತುಳು, ಬೆಂಗಾಲಿ, ಓಡಿಯಾ, ನೇಪಾಲಿ, ಇಂಗ್ಲೀಶು, ಪಂಜಾಬಿ2,9330.109%
ನೂರಕ್ಕಿಂತ ಕಡಿಮೆಹತ್ತೊಂಬತ್ತು ಬಾಶೆಗಳು4600.017%
ಒಟ್ಟು ಮಾತುಗರು26,78,980100%

ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಿ ಈ ಚರ್ಚೆಯನ್ನು ಬೆಳೆಸಿದಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ತುಸು ಬದಲಾವಣೆ ಆಗುತ್ತದೆ. ಹಿಂದಿಯೊಳಗೆ ಕರ‍್ನಾಟಕದ ಸಂದರ‍್ಬದಲ್ಲಿ ಮುಕ್ಯವೆನಿಸುವ ಬಾಶೆಗಳನ್ನು ಕೆಳಗೆ ಪಟ್ಟಿ ಮಾಡಿದೆ.

ಹಿಂದಿ 39,119

ಬಂಜಾರಿ 25

ಬೋಜ್ಪುರಿ 29

ಹಿಂದಿ 8,655

ಲಮಾಣಿ/ಲಂಬಾಡಿ 28,598

ಮಾರ‍್ವಾರಿ 986

ರಾಜಸ್ತಾನಿ 592

ಸುಗಾಲಿ 10

ಹಿಂದಿ ಬಾಶೆಯ ತುಮಕೂರು ಜಿಲ್ಲೆಯಲ್ಲಿ ಒಟ್ಟು ದಾಕಲಾದ ಮಾತುಗರ ಸಂಕೆ 39,119. ಇದರಲ್ಲಿ ಹಿಂದಿಯನ್ನಾಡುವವರು 8,655 ಆಗಿದ್ದಾರೆ. ಇದು ಒಟ್ಟು ಹಿಂದಿಯ 22.124% ಮತ್ತು ಜಿಲ್ಲೆಯ 0.323% ಆಗುತ್ತದೆ. ಲಮಾಣಿ ಹೆಸರಿನಲ್ಲಿ 28,598, ಬಂಜಾರಿ ಹೆಸರಿನಲ್ಲಿ 25 ಮತ್ತು ಸುಗಾಲಿ ಹೆಸರಿನಲ್ಲಿ 10 ಮಂದಿ ದಾಕಲಾಗಿದ್ದು ಇವು ಸೇರಿ ಲಂಬಾಣಿಯ ಮಾತುಗರ ಸಂಕೆ 28,633 ಆಗುತ್ತದೆ. ಇದು ಜಿಲ್ಲೆಯ ಹಿಂದಿಯ 73.194% ಮತ್ತು ಜಿಲ್ಲೆಯ 1.068% ಆಗುತ್ತದೆ. ಈಗ ಹತ್ತು ಸಾವಿರಕ್ಕಿಂತ ಹೆಚ್ಚು ಮಾತುಗರ ಬಾಶೆಗಳ ಪಟ್ಟಿಯಲ್ಲಿದ್ದ ಹಿಂದಿಯ ಬದಲಿ ಲಂಬಾಣಿ ಈ ಪಟ್ಟಿಗೆ ಬರುತ್ತದೆ ಮತ್ತು ಹಿಂದಿ ಹತ್ತು ಸಾವಿರಕಿಂತ ಕಡಿಮೆ ಮಾತುಗರ ಬಾಶೆಗಳ ಪಟ್ಟಿಗೆ ಇಳಿಯುತ್ತದೆ. ಈ ಚರ‍್ಚೆಯನ್ನು ಮತ್ತು ಜಿಲ್ಲೆಯ ತಾಯ್ಮಾತುಗಳ ಸಂಕೆಗಳನ್ನು ಬಳಸಿಕೊಂಡು ಮೇಲೆ ತೋರಿಸಿದ ತುಮಕೂರಿನ ಬಾಶೆಗಳ ಪಟ್ಟಿಯನ್ನು ಇನ್ನೊಮ್ಮೆ ಮರುಚಿತ್ರಿಸಿ ಕೊಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚುಕನ್ನಡ22,75,79684.950%
ಹತ್ತು ಲಕ್ಶಕ್ಕಿಂತ ಕಡಿಮೆ ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು2,41,9409.031%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುತೆಲುಗು90,6273.382%
’’ಲಂಬಾಣಿ28,6231.068%
’’ಮರಾಟಿ13,2650.495%
’’ತಮಿಳು12,1120.452%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಹಿಂದಿ8,6550.323%
’’ಮಲಯಾಳಂ2,3720.088%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ತುಮಕೂರು26,78,980ಕನ್ನಡ22,75,79684.950%1
ಉರ‍್ದು2,41,9409.031%2
ತೆಲುಗು90,6273.382%3
ಲಂಬಾಣಿ28,6231.068%4
ಮರಾಟಿ13,2650.495%5
ತಮಿಳು12,1120.452%6
ಹಿಂದಿ8,6550.323%7
ಮಲಯಾಳಂ2,3720.088%8
ಮಾರ‍್ವಾರಿ9860.036%9
ಗುಜರಾತಿ7060.026%10

‍ಲೇಖಕರು Admin

19 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading