ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ
ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.
ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.
ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.
‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ
ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ
ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.
ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು
ಅಲುಗಾಡಿಸಬಹುದು.
ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ
ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.
ಕರ್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ
ಇನ್ನು ಮುಂದೆ ಪರಿಚಯಿಸಲಾಗುವುದು.
15
ಓಡಿಯಾ
ಓಡಿಯಾ ದೇಶದ ಅನುಸೂಚಿತ ಬಾಶೆಗಳಲ್ಲಿ ಒಂದು. ದೇಶದಲ್ಲಿ ಓಡಿಯಾ ಮಾತಾಡುವವರ ಸಂಕೆ ೩,೭೫,೨೧,೩೨೪. ಇದರಲ್ಲಿ ಕರ‍್ನಾಟಕದಲ್ಲಿ ದಾಕಲಾದ ಮಂದಿ ೬೪,೧೧೯. ಕರ‍್ನಾಟಕದ ೦.೧೦೪% ಪ್ರತಿಶತ ಮಂದಿ ಓಡಿಯಾ ಮಾತುಗರಾಗಿದ್ದಾರೆ. ಇದು ಕರ‍್ನಾಟಕದ ಹದಿನಯ್ದನೆ ಅತಿದೊಡ್ಡ ಬಾಶೆಯಾಗಿದೆ. ಇದು ಒಟ್ಟು ದೇಶದ ಓಡಿಯಾಗಳ ೦.೧೭೦% ಆಗುತ್ತದೆ. ಓಡಿಯಾದಲ್ಲಿ ಒಟ್ಟು ಎಂಟು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದೇಶದಲ್ಲಿ ದಾಕಲಾಗಿವೆ. ಕರ‍್ನಾಟಕದಲ್ಲಿ ದಾಕಲಾದ ಓಡಿಯಾ ತಾಯ್ಮಾತುಗಳು ನಾಲ್ಕು. ಅವುಗಳೆಂದರೆ ಬಾಟ್ರಿ (2), ಬುಇಯ/ಬುಯನ್ (ಓರಿ) (1), ಓಡಿಯಾ (63,917), ಸಂಬಲ್ಪುರಿ (22) ಮತ್ತು ಇತರ (177) ಎಂಬ ಇನ್ನೊಂದು ಗುಂಪು ದಾಕಲಾಗಿದೆ. ಇದರಲ್ಲಿ ಬಹುತೇಕರು ಅಂದರೆ ೬೩,೯೧೭ ಮಂದಿ ಓಡಿಯಾ ತಾಯ್ಮಾತನ್ನು ಆಡುವವರಾಗಿದ್ದಾರೆ.
ಕರ‍್ನಾಟಕದ ಓಡಿಯಾ ಮಾತುಗರಲ್ಲಿ ಹೆಚ್ಚಿನ ಸಂಕೆಯವರು ಬೆಂಗಳೂರು ನಗರ ಜಿಲ್ಲೆಯಲ್ಲಿ ಬದುಕಿದ್ದಾರೆ. ಬೆಂಗಳೂರು ನಗರದಲ್ಲಿ ದಾಕಲಾಗಿರುವ ಓಡಿಯಾಗಳ ಸಂಕೆ ೫೦,೧೮೮ ಮಂದಿ. ಇದು ಒಟ್ಟು ಕರ‍್ನಾಟಕದ ಓಡಿಯಾಗಳ ೭೮.೫೨೦% ಆಗುತ್ತದೆ. ಇನ್ನುಳಿದಂತೆ ಕೋಲಾರ (೨,೮೭೬), ಬೆಂಗಳೂರು ಗ್ರಾಮಾಂತರ (೧,೯೩೬), ಬಳ್ಳಾರಿ (೧,೧೯೮), ಮಂಗಳೂರು (೧,೧೪೨) ಮತ್ತು ಬೆಳಗಾವಿ (೧,೦೦೮) ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಓಡಿಯಾಗಳು ದಾಕಲಾಗಿದ್ದಾರೆ. ಆನಂತರ ಹದಿನೇಳು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಇದ್ದಾರೆ ಮತ್ತು ಏಳು ಜಿಲ್ಲೆಗಳಲ್ಲಿ ನೂರಕ್ಕೂ ಕಡಿಮೆ ಮಂದಿ ದಾಕಲಾಗಿದ್ದಾರೆ.
ಇಲ್ಲಿ ಕೆಳಗೆ ಕರ‍್ನಾಟಕ ಓಡಿಯಾ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.
ಪ್ರದೇಶ | ಜಿಲ್ಲೆಯ ಜನಸಂಕೆ | ಮಾತುಗರು | ಆ ಜಿಲ್ಲೆಯ % | ಆ ಬಾಶೆಯ % |
ಕರ‍್ನಾಟಕ | 6,10,95,297 | 63,917 | 0.104% | 100% |
ಬೆಂಗಳೂರು ನಗರ | 96,21,551 | 50,125 | 0.520% | 78.422% |
ಕೋಲಾರ | 15,36,401 | 2,876 | 0.187% | 4.499% |
ಬೆಂಗಳೂರು ಗ್ರಾಮಂತರ | 9,90,923 | 1,936 | 0.195% | 3.028% |
ಬಳ್ಳಾರಿ | 24,52,595 | 1,194 | 0.048% | 1.868% |
ದಕ್ಶಿಣ ಕನ್ನಡ | 20,89,649 | 1,134 | 0.054% | 1.774% |
ಬೆಳಗಾವಿ | 47,79,661 | 995 | 0.020% | 1.556% |
ಮಯ್ಸೂರು | 30,01,127 | 792 | 0.026% | 1.239% |
ಉಡುಪಿ | 11,77,361 | 476 | 0.040% | 0.744% |
ಯಾದಗಿರಿ | 11,74,271 | 383 | 0.032% | 0.599% |
ದಾರವಾಡ | 18,47,023 | 381 | 0.020% | 0.596% |
ಕೊಪ್ಪಳ | 11,77,361 | 352 | 0.029% | 0.550% |
ಉತ್ತರ ಕನ್ನಡ | 14,37,169 | 347 | 0.024% | 0.542% |
ರಾಮನಗರ | 10,82,636 | 338 | 0.031% | 0.528% |
ಕಲಬುರಗಿ | 25,66,326 | 313 | 0.012% | 0.489% |
ಹಾಸನ | 17,76,421 | 298 | 0.016% | 0.466% |
ಬೀದರ | 17,03,300 | 297 | 0.017% | 0.464% |
ತುಮಕೂರು | 26,78,980 | 280 | 0.010% | 0.438% |
ಚಿಕ್ಕಬಳ್ಳಾಪುರ | 12,55,104 | 258 | 0.020% | 0.403% |
ವಿಜಯಪುರ | 21,77,331 | 222 | 0.010% | 0.347% |
ಚಿಕ್ಕಮಗಳೂರು | 11,37,961 | 197 | 0.017% | 0.308% |
ಶಿವಮೊಗ್ಗ | 17,52,753 | 146 | 0.008% | 0.228% |
ರಾಯಚೂರು | 19,28,812 | 136 | 0.007% | 0.212% |
ಕೊಡಗು | 5,54,519 | 105 | 0.018% | 0.164% |
ದಾವಣಗೆರೆ | 19,45,497 | 90 | 0.004% | 0.140% |
ಬಾಗಲಕೋಟೆ | 18,89,752 | 86 | 0.004% | 0.134% |
ಮಂಡ್ಯ | 18,05,769 | 80 | 0.004% | 0.125% |
ಗದಗ | 10,20,791 | 35 | 0.003% | 0.054% |
ಚಿತ್ರದುರ‍್ಗ | 16,59,456 | 24 | 0.001% | 0.037% |
ಹಾವೇರಿ | 15,97,668 | 19 | 0.001% | 0.029% |
ಚಾಮರಾಜನಗರ | 10,20,791 | 2 | 1.959% | 0.003% |
ಓಡಿಯಾ ಮಾತುಗರ ಹಂಚಿಕೆ
0 Comments