ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಇಂಗ್ಲೀಶು ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

47

ಇಂಗ್ಲೀಶು

ಇಂಗ್ಲೀಶು ಬಾರತದಲ್ಲಿ ಸಂಪರ‍್ಕ ಬಾಶೆಯಾಗಿ ಹೆಚ್ಚು ವ್ಯಾಪಕವಾಗಿದೆ. ಇಂಗ್ಲೀಶಿಗೆ ಬಾರತದಲ್ಲಿ ಪರಿಗಣಿಸುವಶ್ಟು ಮಂದಿ ದಾಕಲಾಗಿದ್ದಾರೆ. ಒಟ್ಟು ದೇಶದಲ್ಲಿ ಇಂಗ್ಲೀಶಿಗೆ ದಾಕಲಾದ ಮಂದಿ ೨,೫೯,೬೭೮. ಇಂಗ್ಲೀಶಿನಲ್ಲಿ ಇಂಗ್ಲೀಶು ಮಾತ್ರ ತಾಯ್ಮಾತಾಗಿ ದಾಕಲಾಗಿದೆ. ಕರ‍್ನಾಟಕದಲ್ಲಿ ದಾಕಲಾದ ಇಂಗ್ಲೀಶು ಬಾಶೆಯ ಮಾತುಗರು ೨೩,೨೨೭ ಆಗಿದ್ದಾರೆ. ಇದು ದೇಶದ ಒಟ್ಟು ಇಂಗ್ಲೀಶು ಮಾತುಗರ ೮.೯೪೪% ಪ್ರತಿಶತತೆಯನ್ನೂ ಕರ‍್ನಾಟಕದ ಜನತೆಯ ೦.೦೩೮% ಪ್ರತಿಶತತೆಯನ್ನೂ ರೂಪಿಸುತ್ತದೆ. 

ಸಾಮಾನ್ಯವಾಗಿ ಇಂಗ್ಲೀಶು ನಗರ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಕರ‍್ನಾಟಕದ ಹೆಚ್ಚಿನ ಇಂಗ್ಲೀಶು ಮಾತುಗರು ದಾಕಲಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಇಂಗ್ಲೀಶು ಮಾತುಗರ ಸಂಕೆ 17,144  ಆಗಿದ್ದು ಇದು ಒಟ್ಟು ಕರ‍್ನಾಟಕದ ಇಂಗ್ಲೀಶು ಮಾತುಗರು 73.681% ಪ್ರತಿಶತ ಆಗುತ್ತದೆ. ಇದರ ನಂತರ ಬೆಳಗಾವಿ ಜಿಲ್ಲೆಯಲ್ಲಿ ೧,೦೫೭ ಮಂದಿ ಇಂಗ್ಲೀಶು ಮಾತಾಡುವ ಮಂದಿ ದಾಕಲಾಗಿದ್ದಾರೆ. ಮಯ್ಸೂರಿನಲ್ಲಿ ಸಾವಿರಕ್ಕೆ ಹತ್ತಿರ ಅಂದರೆ ೯೮೫ ಮಂದಿ ದಾಕಲಾಗಿದ್ದಾರೆ. ಉಳಿದಂತೆ ಹನ್ನೊಂದು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಹದಿನಾರು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ.

ಇಲ್ಲಿ ಕೆಳಗೆ ಇಂಗ್ಲೀಶು ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29723,227  0.038%100%
ಬೆಂಗಳೂರು ನಗರ  96,21,55117,144  0.178%73.681%
ಬೆಳಗಾವಿ 47,79,6611,057  0.022%4.550 %
ಮಯ್ಸೂರು  30,01,127 9850.032%4.240%
ದಾರವಾಡ  18,47,023 8130.027%3.500%
ಕೋಲಾರ 15,36,401518  0.033%2.230  %
ದಕ್ಶಿಣ ಕನ್ನಡ  20,89,6494800.022%2.066%
ಬಳ್ಳಾರಿ 24,52,595269  0.010%1.158  %
ಚಿಕ್ಕಬಳ್ಳಾಪುರ 19,28,8122070.010%0.891%
ಉಡುಪಿ  11,77,3611920.016%0.826%
ಕಲಬುರಗಿ  25,66,3261790.006%0.770%
ರಾಯಚೂರು  19,28,8121470.007%0.632%
ಶಿವಮೊಗ್ಗ 17,52,753130  0.007%0.559  %
ತುಮಕೂರು 26,78,9801130.004%0.486 %
ಉತ್ತರ ಕನ್ನಡ 14,37,169103  0.007%0.443  %
ದಾವಣಗೆರೆ 19,45,497940,004%0.404%
ಬೀದರ  17,03,300890.005%0.383%
ಮಂಡ್ಯ 18,05,769840.004%0.361%
ಕೊಡಗು 5,54,51961  0.011%0.262  %
ಚಿಕ್ಕಮಗಳೂರು 11,37,96159  0.005%0.254  %
ಹಾಸನ 17,76,42159  0.003%0.254  %
ಬೆಂಗಳೂರು ಗ್ರಾಮಂತರ 9,90,92359  0.005%0.254  %
ಚಿತ್ರದುರ‍್ಗ 16,59,45655  0.003%0.236  %
 ಹಾವೇರಿ 15,97,668540.003% 0.232%
ವಿಜಯಪುರ 21,77,33151  0.002%0.219  %
ಬಾಗಲಕೋಟೆ  18,89,752500.002%0.215%
ಗದಗ  10,20,791450.004%0.193%
ರಾಮನಗರ  10,82,636410.003%0.176%
ಕೊಪ್ಪಳ 13,89,92133  0.002%0.142  %
ಚಾಮರಾಜನಗರ 10,20,79128  0.002%0.120  %
ಯಾದಗಿರಿ  11,74,271280.002%0.120%

ಇಂಗ್ಲೀಶು ಮಾತುಗರ ಹಂಚಿಕೆ 

C:\Users\DELL\Downloads\Distribution of English.jpg

‍ಲೇಖಕರು avadhi

23 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading