ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಆರೆ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

16

ಆರೆ

ಆರೆ ಮರಾಟಿ ಬಾಶೆಯ ಒಳಗೆ ತಾಯ್ಮಾತು ಎಂದು ದಾಕಲಾಗಿದೆ. ಕರ‍್ನಾಟಕದಲ್ಲಿ ಆರೆಗೆ ಪರಿಗಣಿಸುವಶ್ಟು ಮಂದಿ ಮಾತುಗರು ದಾಕಲಾಗಿದ್ದಾರೆ. ಅಯ್ವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆರೆ ಮಾತುಗರು ಕರ‍್ನಾಟಕದಲ್ಲಿ ಇದ್ದು ಇದು ರಾಜ್ಯದ ಹದಿನಾರನೆ ದೊಡ್ಡ ಬಾಶೆಯಾಗಿದೆ. ಒಟ್ಟು ಬಾರತದಾಗ ಆರೆ ಮಾತುಗರು ೫೩,೮೭೯ ಮಂದಿ ಇದ್ದಾರೆ. ಇದರಲ್ಲಿ ಬಹುತೇಕರು ಕರ‍್ನಾಟಕದಲ್ಲಿಯೆ ದಾಕಲಾಗಿದ್ದಾರೆ. ಕರ‍್ನಾಟಕದಲ್ಲಿ ದಾಕಲಾದ ಆರೆಗಳ ಸಂಕೆ ೫೦,೩೩೯ ಅಂದರೆ ಒಟ್ಟು ಬಾರತದ ಆರೆಗಳ ೯೩.೪೨೯% ಆಗುತ್ತದೆ. ಇದು ಕರ‍್ನಾಟಕದ 0.082% ಮಂದಿಯನ್ನು ರೂಪಿಸುತ್ತದೆ. 

ಇದರಲ್ಲಿ ಅತಿ ಹೆಚ್ಚು ಮಂದಿ ಕರ‍್ನಾಟಕದ ಎರಡು ಜಿಲ್ಲೆಗಳಲ್ಲಿ ದಾಕಲಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ೩೨,೨೨೬ ಮಂದಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ೧೭,೨೨೭ ಮಂದಿ ಇದ್ದಾರೆ. ಇದು ಆಯಾ ಜಿಲ್ಲೆಯಲ್ಲಿ ಕ್ರಮವಾಗಿ ೬೪.೦೧೭% ಮತ್ತು 34.221% ಆಗುತ್ತದೆ. ಎರಡು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮತ್ತು ಹತ್ತು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ದಾಕಲಾಗಿದ್ದಾರೆ. ಉಳಿದ ಹದಿನಾರು ಜಿಲ್ಲೆಗಳಲ್ಲಿ ಆರೆ ಮಾತುಗರು ದಾಕಲಾಗಿಲ್ಲ.

ಇಲ್ಲಿ ಕೆಳಗೆ ಕರ‍್ನಾಟಕದ ಆರೆ ಮಾತುಗರ ಜಿಲ್ಲಾವಾರು ಪಟ್ಟಿಯನ್ನು ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,29750,3390.082%100%
ಕೊಡಗು 5,54,51932,2265.811%64.017%
ದಕ್ಶಿಣ ಕನ್ನಡ  20,89,64917,2270.824%34.221%
ಮಯ್ಸೂರು  30,01,1274380.014%0.870%
ಬೀದರ  17,03,3003380.019%0.671%
ಬೆಂಗಳೂರು ನಗರ  96,21,551727.483%0.143%
ಹಾಸನ 17,76,42111`6.192%0.021%
ಚಾಮರಾಜನಗರ 10,20,79198.816%0.017%
ಉತ್ತರ ಕನ್ನಡ 14,37,16974.870%0.013%
ಉಡುಪಿ  11,77,36165.096%0.011%
ಕಲಬುರಗಿ  25,66,32651,948%0.009%
ದಾವಣಗೆರೆ 19,45,49721.028%0.003%
ವಿಜಯಪುರ 21,77,33114.592%0.001%
 ಹಾವೇರಿ 15,97,66816.259%0.001%
ಶಿವಮೊಗ್ಗ 17,52,75315.705%0.001%

ಆರೆ ಮಾತುಗರ ಹಂಚಿಕೆ

‍ಲೇಖಕರು avadhi

27 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading