ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಶೀರ್ ಬರೆದ ಹನಿ ಕಥೆಗಳು

ಪೇಂಟಿಂಗ್ ಮತ್ತು ಇತರ ಕತೆಗಳು

ಬಿ ಎಂ ಬಶೀರ್

ಗುಜರಿ ಅಂಗಡಿ

ಪೇಂಟಿಂಗ್

ಒಬ್ಬ ಚಿತ್ರ ಕಲಾವಿದನ ಮನೆಯ ಗೋಡೆಗಳು ಹಲವು ವರ್ಷಗಳಿಂದ ಬಣ್ಣವಿಲ್ಲದೆ ಮಾಸಿ ಹೋಗಿತ್ತು. ಮಳೆಗಾಲದ ನೀರು ಸೋರಿ, ಪಾಚಿಗಟ್ಟಿ ಗೋಡೆ ತುಂಬ ಹರಡಿಕೊಂಡಿತ್ತು. ಕಲಾವಿದನ ಅಭಿಮಾನಿಯೊಬ್ಬ ಆ ಮನೆಗೆ ಬಂದ. ಗೋಡೆಯನ್ನು ನೋಡಿದ್ದೇ ಕಣ್ಣರಳಿಸಿ ಹೇಳಿದ ‘‘ಓಹ್, ಎಂತಹ ಅದ್ಭುತ ಪೇಂಟಿಂಗ್!’’ ರಾಜಕಾರಣ ‘‘ಜಾತಿ ರಾಜಕಾರಣ ಈ ನಾಡಿಗೆ ಅಂಟಿದ ಶಾಪ’’ ಸ್ವಾಮೀಜಿ ಹೀಗೆಂದು ಕರೆಕೊಟ್ಟರು. ಊಟದ ಸಮಯದಲ್ಲಿ ಮೆಲ್ಲನೆ ತಮ್ಮ ಜಾತಿಯ ಪಂಕ್ತಿಯನ್ನು ಸೇರಿಕೊಂಡರು. ಸರಕಾರಿ ಬಸ್ಸು ಭಾರತ ಒಂದು ಸರಕಾರಿ ಬಸ್ ಇದ್ದ ಹಾಗೆ. ನೀವು ಅದರೊಳಗೆ ಪ್ರವೇಶಿಸಿ ನೋಡಿ. ಮಹಿಳೆಯರ ಮೀಸಲು ಆಸನದಲ್ಲಿ ತರುಣರು ಕೂತಿದ್ದಾರೆ. ಸ್ವಾತಂತ್ರ ಹೋರಾಟಗಾರರ ಆಸನದಲ್ಲಿ ಇಬ್ಬರು ಠಕ್ಕರು ಮೀಸೆ ತಿರುವುತ್ತಿದ್ದಾರೆ.ವೃದ್ಧರ ಆಸನದಲ್ಲಿ ತರುಣಿಯರು ಲಲ್ಲೆ ಹೊಡೆಯುತ್ತಿದ್ದಾರೆ. ಅಂಗವಿಕಲರ ಆಸನದಲ್ಲಿ ಇಬ್ಬರು ಗೂಂಡಾಗಳು… ಉಳಿದ ಒಂದೆರಡು ಸಾಮಾನ್ಯ ಆಸನಗಳಲ್ಲಿ ಯಾರದೋ ಸರಕುಗಳು… ವೃದ್ಧರು, ಮಹಿಳೆಯರು, ಅಂಗವಿಕಲರು, ಸ್ವಾತಂತ್ರ ಹೋರಾಟಗಾರರು ನಿಂತು, ಬಸವಳಿದು, ಹಣೆಯ ಬೆವರು ಒರೆಸಿಕೊಳ್ಳುತ್ತಾ ಬಸ್ಸಿನೊಳಗೆ ಬರೆದಿದ್ದ ಘೋಷಣೆಯನ್ನು ಓದುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ… ‘‘ಮೇರಾ ಭಾರತ್ ಮಹಾನ್’’ ಕೆಸರು ಛೀ…ಕೆಸರು ದೂರ ನಿಲ್ಲು…ಅವನೆಂದ. ಕೆಸರು ತುಳಿಯುವುದಕ್ಕೆ ಎಲ್ಲರೂ ಹಿಂಜರಿಯುತ್ತಿದ್ದರು. ಆ ಕೆಸರನ್ನು ರೈತನೊಬ್ಬ ತುಳಿದ. ಕೈಯಲ್ಲಿದ್ದ ಬೀಜವನ್ನು ಬಿತ್ತಿದ. ಈಗ ದಾರಿ ಹೋಕರೆಲ್ಲ ಹೇಳುತ್ತಾರೆ ‘‘ಆಹಾ ಎಷ್ಟು ಸುಂದರವಾದ ಗದ್ದೆ’’ ಮನೆ ಒಂದು ದೊಡ್ಡ ಬಂಗಲೆ. ಅದಕ್ಕೆ ಹತ್ತು ವಿಶಾಲ ಕೋಣೆಗಳು. ಅಲ್ಲಿ ಬದುಕುತ್ತಿರುವವರು ಮಾತ್ರ ಮೂವರು. ಗಂಡ-ಹೆಂಡತಿ ಮತ್ತು ಒಬ್ಬ ಮಗ. ಆ ಮನೆಯಲ್ಲಿ ಗಂಡನನ್ನು ಹುಡುಕುತ್ತಾ ಹೆಂಡತಿ, ತಂದೆ ತಾಯಿಯನ್ನು ಹುಡುಕುತ್ತಾ ಮಗ ಕಾಲ ಕಳೆಯುತ್ತಿದ್ದಾರೆ. ಅಷ್ಟು ದೊಡ್ಡ ಮನೆಯಲ್ಲಿ ಅವರು ಅಪರೂಪಕ್ಕೆ ಒಮ್ಮೆಮ್ಮೆ ಸಂಧಿಸುತ್ತಿರುತ್ತಾರೆ. ಅಂದು ಅವರಿಗೆ ವಿಶೇಷ ದಿನ. ಅಸ್ಪೃಶ್ಯತೆ ಗುಬ್ಬಚ್ಚಿಗಳು ಮಹಾ ಜಾತೀಯವಾದಿಗಳು, ಮನುಷ್ಯ ಮುಟ್ಟಿದ ಗುಬ್ಬಚ್ಚಿಯನ್ನು ಹಕ್ಕಿಗಳೆಲ್ಲ ಸೇರಿ ತಮ್ಮ ಜಾತಿಯಿಂದ ಹೊರ ಹಾಕಿದವು]]>

‍ಲೇಖಕರು G

10 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading