-ಶ್ಯಾಮಸುಂದರ ಬಿದರಕುಂದಿ
(ಪುನರವಲೋಕನ ಗ್ರಂಧದಿಂದ)

ಉನ್ನತ ಮೌಲ್ಯಗಳನ್ನು ಹೊಂದಿರುವುದು ಈ ಕನ್ನಡ ನಾಡಿನ ಮತ್ತೊಂದು ವೈಶಿಷ್ಚ್ಯತೆ. ಅಂತೆಯೇ ಇಲ್ಲಿನ ಜನರಲ್ಲಿ
ಉನ್ನತ ಕಲ್ಪನೆ ಇದೆ. ಇಲ್ಲಿ ಯಾವ ವ್ಯಕ್ತಿಯನ್ನೇ ತೆಗೆದುಕೊಂಡರೂ ಉನ್ನತ ಮೌಲ್ಯದ ವ್ಯಕ್ತಿ ಅದರ
ಆರಾಧಕರಾಗಿದ್ದಾರೆ. ಶರಣ-ಶರಣಿಯರು ಜಾತಿ ಮೀರಿ ನಡೆದದ್ದು ಉನ್ನತ ಮೌಲ್ಯವೇ ಆಗಿದೆ. ಭೂಲೋಕದ
ಪುರುಷರನ್ನು ಮದುವೆಯಾಗಲಿಚ್ಚಿಸದೇ ದೇವರನ್ನು ಮದುವೆಯಾಗಲು ಹಂಬಲಿಸುವ (ಲೌಕಿಕ- ಅಲೌಕಿಕತೆ
ಬಗ್ಗೆ ಪ್ರಶ್ನೆಗಳು ಇರುವುದು ಮತ್ತೊಂದು ವಿಚಾರ) ಅಕ್ಕಮಹಾದೇವಿಯದು ಅದ್ಭುತ ಕಲ್ಪನೆ. ಸೂಳೆ ಸಂಕವ್ವ
ಸೂಳೆ ವೃತ್ತಿಯಿಂದ ಶರಣೆಯಾದ ಅವಳ ಮನೋಭಾವವೂ ಉನ್ನತ ಮೌಲ್ಯಕ್ಕೊಂದು ಉದಾಹರಣೆಯಾಗಿದೆ.
ಕರ್ನಾಟಕ ಅಥವಾ ಕನ್ನಡ ನಾಡು ಭಾಷಿಕ ಶ್ರೀಮಂತ ನಾಡು. ಜಗತ್ತಿನ ಯಾವುದೇ ಭಾಷೆಯ ಜನರ ಮಧ್ಯೆ
ನಡೆಯುವ ಮಾತು-ಸಂಭಾಷಣಯೇ ಈ ಕನ್ನಡ ಭಾಷೆಯಾಗಿದೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಉನ್ನತ
ಮೌಲ್ಯಯುಳ್ಳದ್ದಾದ ಕನ್ನಡ ಶಇಚಿಂಷಂಔ ಕೃತಿ ಕವಿರಾಜ ಮಾರ್ಗ ಹಾಗು ಅದರ ರಚನಾಕಾರರನ್ನು ಇಲ್ಲಿ ಉಲ್ಲೇಖಿಸಬಹುದು.
ಸಾಹಿತ್ಯ ಮತ್ತು ಜೀವನ ಒಂದೇ ಎಂದು ಅಥವಾ ಜೀವನ ವಿಧಾನ ಹಾಗು ಮೌಲ್ಯಗಳೇ ಈ ಸಾಹಿತ್ಯ ಎಂದು 8 ನೇ
ಶತಮಾನದಲ್ಲೇ ಕವಿರಾಜಮಾರ್ಗಕಾರ ತಿಳಿಸುವುದು ಅರ್ಥಪೂರ್ಣವಾದುದು. ಶೂನ್ಯ ಸಂಪಾದನೆಯೂ ಈ ತಾಕತ್ತನ್ನು ಹೊಂದಿದೆ. ಆ ಕಾಲದ ಬರಹಗಾರರಿಂದ ಹಿಡಿದು
ಇವತ್ತಿನವರೆಗೂ ಬೆಳೆಯುತ್ತಲೇ ಬಂದ ಸಾಹಿತ್ಯ ಕನ್ನಡ ಭಾಷೆ ಅದರ ಆಳ- ಅಗಲ ಎಷ್ಟಿದೆ ಎಂಬುದರ ಸೂಚನೆಯಂತಿದೆ.
ಕನ್ನಡ ಎಂಬುದು ಸ್ವಭಾವವೇ ಹೊರತು, ಅಭಿಮಾನದ ಪ್ರಶ್ನೆಯಲ್ಲ. ಆದರೆ, ಇವತ್ತು ಕನ್ನಡ ಕನ್ನಡವಾಗಿ ಉಳಿದಿಲ್ಲ. ಶುದ್ಧ ಕನ್ನಡ ಮಾತಾಡುತ್ತಿಲ್ಲ. ನುಡಿಗಟ್ಟಿನ ಕನ್ನಡ ಉಳಿದಿಲ್ಲ.
ಭಾವನಾತ್ಮಕ ಸಂಬಂಧಗಳು ಹೋದಂತೆ ನುಡಿಗಟ್ಟು ಸಾಹಿತ್ಯವೂ ಹೋಯಿತು. ಮರಾಠಿ-ಬಂಗಾಳಿ ಇವತ್ತಿಗೂ ಶುದ್ಧಭಾಷೆಗಂಳಾಗಿ ಉಳಿದಿವೆ. ಆದರೆ ಕನ್ನಡಕ್ಕೆ ಈ ಸ್ಥಿತಿಯಿಲ್ಲ.
ಇದಕ್ಕೆ ಕಾರಣ ಭಾಷೆ ಬಗೆಗಿನ ತಪ್ಪು ತಿಳುವಳಿಕೆ. ಇಂಗ್ಲಿಷ್ ಕನ್ನಡಕ್ಕೆ ಮಾರಕ ಎನ್ನುವ ವಾದ ಸರಿಯಲ್ಲ. ನಮಗೆ ಕನ್ನಡದ ಬಗ್ಗೆ ಪ್ರೀತಿ ಮಾಡಲು ಕಲಿಸಿದವರು ಹಾಗೂ
ಕನ್ನಡ ಸಾಹಿತ್ಯ-ಭಾಷೆ ಶ್ರೀಮಂತವಾಗಿದೆ ಎಂಬುದನ್ನು ತಿಳಿಸಿದವರೇ ಇಂಗಿಜಷಂರಂಂ. ಕಿಟೆಲ್ ಮತ್ತು ಇತರೇ ಇಂಗ್ಲಿಷ್ ಲೇಖಕರು ನೀಡಿದ ಕನ್ನಡ ಪಾರಿಭಾಷಿಕ ಗ್ರಂಥಗಳು
ಇಂದಿಗೂ ಉಪಯುಕ್ತವಾಗಿವೆ. ನಾವು ಎಷ್ಟು ಎಷ್ಟು ಇಂಗ್ಲಿಷ್ ಕಲಿಯುತ್ತೇವೆಯೋ ಅಷ್ಟು ಕನ್ನಡದ ಬಗ್ಗೆ ನಮಗೆ ಪ್ರೀತಿ ಹುಟ್ಟುತ್ತದೆ. ಆದರೆ ಈಗ ನಾವು ಕಲಿಯುತ್ತಿರುವುದು ಇಂಗ್ಲಿಷ್ ಅಲ್ಲ. ಬರೀ
ಆ ಪದಗಳನಂಷ್ಟೇ ಕಲಿಯುತ್ತಿದ್ದೇವೆ. ನಮ್ಮ ವ್ಯವಹಾರಕ್ಕೆ ಉದ್ಯೋಗಕ್ಕೆ ಅನುಕೂಲವಾಗಲು ಎಷ್ಟು ಬೇಕೋ ಅಷಂಔ’್ನು ಕಲಿಯುತ್ತಿದ್ದೇವೆ. ಈ ರೀತಿ ಬೆಳವಣಿಗೆಯಿಂದ ಕನ್ನಡಕ್ಕೆ ಖಂಡಿತ ಧಕ್ಕೆ ಬರುವುದಿಲ್ಲ. ಇಂಗ್ಲಿಷ್ನ’ಲ್ಲಿ ಪ್ರಬುದ್ದರಾದರೆ ಮಾತ್ರ ನಮಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ. ಕುವೆಂಪು, ಬಿಎಂಶ್ರೀ, ಗೋಕಾಕ, ಲಂಕೇಶ ಮುಂತಾದವರು ಇಂಗ್ಲಿಷಿನಲ್ಲಿ ಪ್ರಬುದ್ಧರಾಗಿದ್ದರಿಂದಲೇ ಅವರಿಗೆ ಕನ್ನಡ
ಬಗ್ಗೆ ತಾತ್ವಿಕ ರೀತಿಯ ಪ್ರೀತಿ-ಅಭಿಮಾನವಿತ್ತು ಎಂಬುದನ್ನು ತಿಳಿಯಬೇಕು. ಈ ಕನ್ನಡವನ್ನು ಉಳಿಸಿ-ಬೆಳೆಸುವ ಬಹುದೊಡ್ಡ ಹೊಣೆ ನಾಡಿನ ಕನ್ನಡ ಕಲಿಸುವ ಶಿಕ್ಷಕರು – ಉಪನ್ಯಾಸಕರಿಗಿದೆ. ಇವರು ಕನ್ನಡವನ್ನು ಕೇವಲ ಒಂದು ವಿಷಯವಾಗಿ ನೋಡದೇ ಭಾಷೆ ಅಂತ ನೋಡಿ ಕಲಿಸಿದಲ್ಲಿ ಕನ್ನಡ ಬೆಳವಣಿಗೆ ಸಾಧ್ಯ. ಒಂದು ಭಾಷೆಯ’ನ್ನು ಉಳಿಸಿಕೊಳ್ಳಲು ಬರೀ ಪ್ರಜ್ಞೆ ಅಷ್ಟೇ ಅಲ್ಲ ಅಂತಃಕರಣವೂ ಬೇಕು. ಈ ಅಂತಃಕರಣವನ್ನು ಈ ನಾಡಿನ ಶಿಕ್ಷಕ – ಉಪನ್ಯಾಸಕ ವರ್ಗದಲ್ಲಿರಬೇಕಿದೆ. ಕನ್ನಡ ನಮಗೆ ಜೀವ ಕೊಟ್ಟಿದೆ ಎಂದು ತಿಳಿದು ಇದರ ಬಗ್ಗೆ ಪ್ರೀತಿ ಹೊಂದಬೇಕು. ಅಂತರಾಷ್ಟ್ರೀಯ ಮಟ್ಟದಲ್ಲೂ ನಾವೂ ಹೆಸರಾಗುತ್ತೀವಿ ಎಂದರೂ ಅದು ಕನ್ನಡದಿಂದಲೇ ಎಂದು ನಾವು ತಿಳಿದಿರಬೇಕು. ಕನ್ನಡ ಭಾಷೆಗಇ ಕೊನೆಯಿಲ್ಲ. ಯಾವ ಭಾಷೆ ಬಂದರೂ ಕನ್ನಡ ಕನ್ನಡವಾಗಿಯೇ ಉಳಿದಿರುತ್ತದೆ. ಆದರೆ ದೌರ್ಬಲ್ಯ ಇರುವುದು ಮಾತನಾಡುವುದರಲ್ಲಿ ಇದೆ. ಇದು
ವ್ಯಕ್ತಿಶಃ ಎಂಬುದನ್ನೂ ನಾವು ತಿಳಿದಿರಬೇಕು. ಸಾಹಿತ್ಯ ಎನ್ನುವುದು ಕನ್ನಡಿಗರ ಅಗ್ಗಳಿಕೆಯೇ ಆಗಿದೆ. ಏನನ್ನು ಬರೆಯುತ್ತಾರೋ ಏನನ್ನು ಓದುತ್ತಾರೋ ಅದು ಅವರೊಳಗೆ ಇಳಿಯದಿದ್ದರೆ ಕನ್ನಡ ಅಗ್ಗಳಿಕೆ ಬರಲು
ಸಾಧ್ಯವಿಲ್ಲ. ಕನ್ನಡಿಗರಾದವರು ಎಲ್ಲವನ್ನೂ ಓದಬೇಕು. ಅಂದಾಗ ಅವನಲ್ಲಿ ಗುಣಾತ್ಮಕ ಬದಲಾವಣೆ ಬರಲು ಸಾಧ್ಯವಾಗುತ್ತದೆ. ಜಾತಿ, ಲಿಂಗತಾರತಮ್ಯದಂತಹ ಸಮಸ್ಯೆಗಳನ್ನು ಮೀರಿ ಯೋಚಿಸಲು ಸಾಧ್ಯವಾಗುತ್ತದೆ.
ಏಕಕಾಲಕ್ಕೆ ಎಲ್ಲ ಧರ್ಮಗಳ- ಎಲ್ಲ ವಿಷಂಂಂಂಗಂಳನ್ನು ಅರಿಯಲು ಸಾಧ್ಯವಾಗುತ್ತದೆ. ಕನ್ನಡ ಉಳಿವು ಅದನ್ನು ಅರಿಯುವುದರಿಂದಲೇ ನಿರ್ಧರಿಸಲ್ಪಡುತ್ತದೆ. ಕನ್ನಡ ಉಳಿಸಲು ಬೆಳೆಸಲು ಕನ್ನಡ ಸಾಹಿತ್ಯ ಪಂರಿಷಂತ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳೇ ಬೇಕೆಂದಿಲ್ಲ. ಕನ್ನಡ ಸಾಹಿತ್ಯವನ್ನು ಇಲ್ಲಿನ ಸತ್ವವನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಯಾವ ಪ್ರಶ್ನೆಗಳೂ ಎದುರಾಗುದಿಲ್ಲ. ಸರಿಯಾದ ಕನ್ನಡ ತಿಳಿವಳಿಕೆ ಇದ್ದಲ್ಲಿ
ಜಾತಿ ಪೆಡಂಬೂತ ಎದುರಾಗುವುದಿಲ್ಲ. ಸಮಷ್ಠಿಯ ಜತೆಗೆ ಸೇರಿ ಅಲ್ಲಿಂದ ಪಡೆದು ಶಕ್ತಿಯುತವಾದವರು ಕನ್ನಡಿಗರು. ಇಂತಹ ಕನ್ನಡಿಗರ ನಿಸ್ವಾರ್ಥ ಸೇವೆ ಹಾಗು ಅರಿವಿನಿಂದಲೇ ಕನ್ನಡ ವಂಂತಂಗಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಪ್ರಸ್ತುತ ಇವತ್ತಿನ ಸಂದರ್ಭದಲ್ಲಿ `ಕನ್ನಡ ಅಗ್ಗಳಿಕೆ’ ಎಂಬುದು ಅದು ಬರೀ ಪ್ರಶಂಸೆಯ ಮಾತು ಎನ್ನುವಂಷ್ಟು ಇವತ್ತಿನ ರಾಜಕೀಯ-ಸಾಮಾಜಿಕ ವ್ಯವಸ್ಥೆ ಕಲುಷಿತವಾಗಿದೆ. ಕೆಲವೇ ಕೆಲ ಮನಸುಗಳನ್ನು ಬಿಟ್ಟರೆ ಕನ್ನಡ ಉಸಿರಾಡುವ ಇವತ್ತಿನ ಮನಸುಗಳು ರೋಗಗ್ರಸ್ಥವುಳ್ಳವು. ಇದಕ್ಕೆ ಕಾರಣ ಇವತ್ತಿನ ಮೌಲ್ಯಹೀನ ರಾಜಕೀಯವೇ. ಕನ್ನಡ ಮನಸುಗಳ ಪ್ರಾತಿನಿಧಿಕ ಸಂಸ್ಥೆಯಾದ `ವಿಧಾನಸೌಧ’ ಅದಾಗಿ ಉಳಿದಿಲ್ಲ.
ಜನರಿಂದ ಆಯ್ಕೆಗೊಂಡ ಜನಪ್ರತಿನಿದಿಗಳ ಸವರ್ಾನುಮತ ದಿಂದ ಕನ್ನಡ ಉಳಿವು-ಬೆಳೆವಣಿಗೆಗೆ ಗಂಭೀರವಾಗಿ ನಡೆಯಲೇಬೇಕಾದ ತೀಮರ್ಾನಗಳು ಒಬ್ಬಿಬ್ಬರಿಂದ ಯಾವದೋ ಒಂದು ಕೋಣೆಯಲ್ಲಿ ತೀಮರ್ಾನಗೊಳ್ಳುತ್ತಿರುವುದು ಆತಂಕಕಾರಿ ವಿಚಾರ. ಜನತೆ ಸಂಸ್ಕೃತಿಯಿಂದ ವಿಮುಖರಾಗಬಾರದು. ಕನ್ನಡಿಗರಿಗೆ ಇರುವ ಬಹುದೊಡ್ಡ ಕೊಡುಗೆ `ವ್ಯಕ್ತಿ ಸ್ವಾತಂತ್ರ್ಯ’ ಎಂಬುದು ಮೌಲ್ಯಗಳನ್ನು ಬೆಳಸಿಕೊಳ್ಳಲಿಕ್ಕೆ ಹಾಗೂ ಪರಿಣಾಮಕಾರಿಯಾದುದನ್ನು ಕೊಡಲಿಕ್ಕೆ ಇದೇ ಹೊರತು ಅಭಿಪ್ರಾಯಗಳನ್ನು ತಿರುಚಲಿಕ್ಕಾಗಲಿ, ಅವಕಾಶವಾದಿಗಳಾಗಿ ಉಳಿಯಲಿಕ್ಕಾಗಿ ಅಲ್ಲ ಎಂಬುದನ್ನು ತಿಳಿಯಬೇಕು. ನಾವು ಕನ್ನಡ ಉಳಿಸಬೇಕೆಂದರೆ ಅದರ ಅಗ್ಗಳಿಕೆಯನ್ನು ಇನಂಷ್ಟು ಹೆಚ್ಚಿಸಬೇಕೆಂದರೆ ಜನರನ್ನೂ ಅದಕ್ಕೆ ಸಜ್ಜುಗೊಳಿಸಬೇಕು. ಜನರಲ್ಲಿ ನಾವು ಧಾರ್ಮಿಕ ನಂಬಿಕೆ ತೆಗೆದುಹಾಕಿದಂತೆಯೇ ವೈಚಾರಿಕತೆಯನ್ನು ತುಂಬುವ ಕೆಲಸವೂ ಹೇಗೆ ಆಗಬೇಕೋ
ಹಾಗೆಯೇ ಈ ನೆಲದ ವಿಷಯದಲ್ಲು ಆಗಬೇಕು. ನಮ್ಮಲ್ಲಿ ಏನೇ ನಡೆದರು ಬದಲಾದರೂ ಜನ ಸಾಂಸ್ಕೃತಿಕ ಸಂಪನ್ನತೆಯಿಂದ ವಿಮುಖರಾಗಿಲ್ಲ. ಆಗಲುಬಾರದು. ಕನ್ನಡ ನೆಲ, ಸಂಸ್ಕೃತಿ, ಭಾಷೆ ಉಳಿವಿಗೆ ಈ ಹಾದಿ
ಯಲ್ಲಿ ಕೆಲಸ ಮಾಡುವವರಿಗೆ ಜವಬ್ದಾರಿ ಇದೆ ಅನ್ನುವದ ಕ್ಕಿಂತ ಅವರಿಗೊಂದು ಅವಕಾಶವಿದೆ. ಹೀಗಾಗಿ ಈ ದಿಶೆಯಲ್ಲಿ ಹೊರಟವರು ಭಾರತೀಯ ಸಮಾಜವಾದವನ್ನು ಲೇಖಕರು ಪುನರ್ಭವಿಸುವಂತೆ ಪುನರ್ರಚಿಸುವ ಕೆಲಸ ಅಂತಃಕರಣ /ತ್ರಿಕರಣ ಪೂರ್ವಕವಾಗಿಯೇ ಮಾಡಬೇಕು. ಹಣ, ಕೀರ್ತಿ, ಪ್ರಶಸ್ತಿ ಈ ತಾತ್ಕಾಲಿಕ ಸಂತೋಷದಿಂದ ಹೊರಬರಬೇಕು. ಇವುಗಳಿಂದ ದೂರ ನಿಂತು ಕಾರ್ಯ ಕೈಗೊಂಡಲ್ಲಿ ಪರಿಸರ ಸ್ನೇಹಿ ಬದಲಾವಣೆ ಬರಲು ಸಾಧ್ಯ. ಕನ್ನಡದ ಅಗ್ಗಳಿಕೆ ಉಳಿಯಲು ಸಾಧ್ಯ






0 Comments