
ಮಕಾಳಿ ಬರೆದ ಚಿತ್ರಗಳಿಗೆ ತನ್ನದೇ ಆದ ಮಾಂತ್ರಿಕತೆ ಇದೆ. ಇತ್ತೀಚೆಗೆ ನಮ್ಮ ಫೋಟೋ ಗ್ಯಾಲರಿ ಯಲ್ಲಿ ಅವರ ಚಿತ್ತಾರಗಳ ಮೇಲೆ ಒಂದು ಪುಟ್ಟ ನೋಟ ಹರಿಸಿದ್ದೆವು. ಇದನ್ನು ಕಂಡ ಅನೇಕ ಮಿತ್ರರು ಅವರ ಮನೆ ಚಿತ್ತಾರದ ಬಗ್ಗೆ ಗಮನ ಸೆಳೆದರು. ಸಿ ಎಸ್ ದ್ವಾರಕಾನಾಥ್ ಅವರ ಮನೆಯ ಹೆಸರು “ಚೊಕ್ಕ ಮನೆ’ ಎಲ್ಲಾ ಅರ್ಥದಲ್ಲೂ ಇದು ಚೊಕ್ಕ ಮನೆ.
ಇದಕ್ಕೆ ಇನ್ನೂ ಚೊಕ್ಕ ರೂಪು ಕೊಟ್ಟವರು ಮಕಾಳಿ. ಇದು ಒಂದು ರೀತಿಯಲ್ಲಿ ಮಕಾಳಿ ಮನೆಯೇ ಆಗಿ ಹೋಗಿದೆ. ಮನೆಗೆ ವಿನ್ಯಾಸಕಾರರು ಎಷ್ಟು ದುಡಿದಿದ್ದಾರೋ ಅಷ್ಟೆ ಶ್ರದ್ದೆಯಿಂದ ಮಕಾಳಿ ಚಿತ್ತಾರ ಬರೆದಿದ್ದಾರೆ. ಈ ಮನೆಯಲ್ಲಿ ಗರಿಗೆದರಿರುವ ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಮಕಾಳಿಯ ರೇಖೆಗಳಲ್ಲಿರುವ ಶಕ್ತಿ ಹಾಗೂ ಜನಪದ ಸೊಗಡು ಪರಿಚಯಿಸಲು ದ್ವಾರಕಾನಾಥ್ ಸಂಪರ್ಕ: chokka_d@rediffmail.com









ಅವಧಿ ಬ್ಲಾಗ್ ಒಂದು ಒಳ್ಫ಼ೆಯ ಅನುಭವವನ್ನು ನನಗೆ ತೋರಿಸಿ ಕೊಟ್ಟಿದೆ.
ಕಲೆ ಎಲ್ಲರಿಗಾಗಿ ಎಂಬುದನ್ನು ತೋರಿಸಿದ ಸಿ.ಎಸ್.ದ್ವಾರಕನಾಥರವರಿಗೆ
ಧನ್ಯವಾದಗಳು.
ಇಂದಿನ ಜೀವನದ ಜೆಂಜಾಟದಲ್ಲಿ ಕಲೆ ಎಂಬುದು ನೆಮ್ಮದಿಯನ್ನು ನೀಡುವುದು.