ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಡವರ ಕೈಗೆಟುಕದ ಉದ್ಯೋಗಗಳು

ಜಗದೀಶ ಡಿ

ಭಾರತದಲ್ಲಿ ಅಸಮಾನತೆಯೆಂಬುದು ತುಂಬಿ ತುಳುಕಾಡುತ್ತಿದೆ. ಶ್ರೀಮಂತರು ಇನ್ನೂ ಶ್ರೀಮಂತರಾಗಿದ್ದಾರೆ. ಬಡವರು ಇನ್ನೂ ಬಡವರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿರುವವರ ಅಭಿವೃದ್ದಿಗೆ ಉದ್ಯೋಗ ಎಂಬುದು ತುಂಬಾ ಅವಶ್ಯಕವಾಗಿದೆ. ಆದರಿಂದ ಉದ್ಯೋಗವಕಾಶಗಳು ಬಡವರ ಕೈಗೆ ಸಿಗುವಂತಿರಬೇಕು. ಈ ಕಾರಣಕ್ಕಾಗಿಯೇ ಆರ್ಥಿಕವಾಗಿ ಹಿಂದುಳಿದಂತಹ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ನೀಡಿದ್ದಾರೆ. ಜೊತೆಗೆ ಉದ್ಯೋಗ ಅರ್ಜಿ ಶುಲ್ಕವನ್ನು ಕಡಿಮೆಗೊಳಿಸಿದ್ದಾರೆ. ನನ್ನ ಮೂಲ ಪ್ರಶ್ನೆ ಇರುವುದು ದಿನೇ ದಿನೇ ಹೆಚ್ಚಾಗುತ್ತಿರುವ ಅರ್ಜಿ ಶುಲ್ಕದ ಬಗ್ಗೆ. ಭಾರತದ ಪ್ರಮುಖ ಹುದ್ದೆಯಾದ ಭಾರತೀಯ ಆಡಳಿತ ಸೇವೆಯಂತವುಗಳಿಗೆ ಕೇವಲ 100 ರೂಗಳ ಶುಲ್ಕ ಮತ್ತು ಉಚಿತ ಶುಲ್ಕಗಳಿವೆ.
ಆದರೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಯಂತಹ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಹೆಚ್ಚು ಮಾಡುತ್ತಿವೆ. ಇದರಿಂದಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಬಹುಸಂಖ್ಯಾತ ಬಡವರು ಅರ್ಜಿ ಶುಲ್ಕವನ್ನು ಪಾವತಿಸಲಾಗದೇ ಉದ್ಯೋಗ ಸ್ಪರ್ಧೆಗೆ ಇಳಿಯದಂತಾಗಿದೆ. ಆದರಿಂದಾಗಿ ಸರ್ಕಾರ ಅರ್ಜಿ ಶುಲ್ಕವನ್ನು ಇಲಾಖೆಯ ಆದಾಯ ಮೂಲ ಎಂಬಂತೆ ಭಾವಿಸಬಾರದು. ಎಲ್ಲರೂ ಮುಕ್ತವಾಗಿ ಪಾಲ್ಗೋಳ್ಳುವಂತಿರಬೇಕು.
 

‍ಲೇಖಕರು G

16 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading