ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಬಚ್ಚನ್" is a sweet example!

ವಿನಯ್ ಭಾರದ್ವಾಜ್

ಬಹುಶಃ “ಸ್ವಾತಿಮುತ್ತು” ಚಿತ್ರದ ನಂತರ ಇಷ್ಟ ಪಟ್ಟು ಥಿಯೇಟರ್ಲಿ ಕುಳಿತು ನೋಡಿದ ಸುದೀಪ್ ನ ಚಿತ್ರವೆಂದರೆ “ಬಚ್ಚನ್”. ಇದಕ್ಕೆ ಈ ಚಿತ್ರದ ಶೀರ್ಷಿಕೆಯೂ ಕಾರಣವಿರಬಹುದು. ಈ ಚಿತ್ರ ನೋಡಲು ನಾವು ಸುದೀಪ್ ಫ್ಯಾನ್ ಅಲ್ಲದಿದ್ದರೂ, ಅಮಿತಾಬ್ ಬಚ್ಚನ್ ರ ಅಭಿಮಾನಿಯಲ್ಲದಿದ್ದರೂ, ಅಪ್ಪಟ ಚಿತ್ರ ಪ್ರೇಮಿಯಾಗಿದ್ದರೂ ಸಾಕು…! ಒಂದಿಡೀ ಚಿತ್ರವನ್ನು ಸರಾಗವಾಗಿ ನೋಡಿಸಿಕೊಳ್ಳುತ್ತಾ, ತನ್ನೊಳಗೆ ಸೆಳೆದುಕೊಳ್ಳುತ್ತಾ, ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಒಂದು ಪ್ರಾಮಿಸಿಂಗ್ ಎಫ಼ರ್ಟ್…! ಹಾಗೆ ನೋಡಿದರೆ ಈ ಚಿತ್ರದ ಮೊದಲ ಸೆಳೆತ ಶುರುವಾದದ್ದೇ, ಇದರ “ಬಚ್ಚನ್” ಎಂಬ ಶೀರ್ಷಿಕೆಯಲ್ಲಿ. ಅಮಿತಾಬ್ ರ ಅಂಗ್ರಿ ಯಂಗ್ ಮ್ಯಾನ್ ನ ಚಿತ್ರಗಳು ನೋಡಿದವರಿಗೆ, ಸುದೀಪ್ ನ ಅಭಿನಯದಲ್ಲಿ ಸಲೀಸಾಗಿ ಅಮಿತಾಬ್ರ ಅಭಿನಯದ ಶೇಡ್ ಕಂಡರೆ, Sudeep should be glad for that.
ಪ್ರತಿಯೊಬ್ಬ ನಿರ್ದೇಶಕನೂ ತನ್ನ ಕಥೆಯೇ ಹೀರೋ ಎಂದರೆ, ಇಲ್ಲಿ ಹೀರೋ ಎನಿಸುವುದು ಅದರ ಚಿತ್ರಕಥೆ ಹಾಗು ನಿರೂಪಣಾ ವಿಧಾನ ಅಂಡ್ ದಿ ಡೈರೆಕ್ಟರ್ ಹಿಮ್ಸೆಲ್ಫ್! ಒಬ್ಬ ಡೈರೆಕ್ಟರ್ – ಪ್ರೇಕ್ಷಕರಿಗೆ ಬುಧ್ಹಿವಂತ ಎನಿಸುವುದು ಬಹುಶಃ ಆತ ಕಥೆ ನಿರೂಪಿಸಲು ಉಪಯೋಗಿಸುವ ವಿಧಾನ, ತಂತ್ರ ಹಾಗು ಅವುಗಳಲ್ಲೊಳಗಿನ ಮನೋರಂಜಕ ಗುಣಗಳಿಂದ. ಇಲ್ಲಿ ಡೈರೆಕ್ಟರ್ ಶಶಾಂಕ್ ಈ ಮೂರನ್ನೂ ಬಲು ಅಚ್ಚುಕಟ್ಟಾಗಿ ಉಪಯೊಗಿಸಿದ್ದಾರೆ And viewers should be glad for that!

ಚಿತ್ರದ ಮೊದಲ ದೃಶ್ಯ unveil ಆಗುತ್ತಲೇ ಇದೊಂದು ಔಟ್ ಎಂಡ್ ಔಟ್ ಆಕ್ಷನ್ ಚಿತ್ರ ಎಂದು ತಿಳಿದುಹೋಗುತ್ತದೆ. ಹಾಗು ಸುದೀಪ್ ತನ್ನೆಲ್ಲಾ ಅಡ್ರಿಲೀನ್ ನನ್ನು ಇಂತಹ ಸನ್ನಿವೇಶಗಳಿಗೆ ಮೈಹೊಕ್ಕಿಕೊಂಡಂತೆ ತನ್ಮಯತೆಯಿಂದ ಅಭಿನಯಿಸತೊಡಗುತ್ತಾರೆ. ಇದೊಂದು ರೀತಿ ಕಥೆಯ ಹೀರೋ ಮೂಲದಲ್ಲಿ ‘ಬಚ್ಚನ್’ ಅಲ್ಲದಿದ್ದರೂ ಆತನ ನಿಲುವು ಹಾಗು ಆತನ ಸುತ್ತಲಿನ ಪಾತ್ರಗಳು ಆತನನ್ನು ‘ಬಚ್ಚನ್’ ಎಂದೇ ಬಿಂಬಿಸತೊಡಗುತ್ತದೆ. ಹಾಗು ಅದಕ್ಕೊಂದು ಸೂಕ್ತತೆ ಅದರ ಕಥೆಯಲ್ಲಿ ದೊರಕತೊಡಗುತ್ತದೆ. ಸುದೀಪ್ ನ ಪಾತ್ರದಲ್ಲಿ ಮೂರು ಡಿಫರೆಂಟ್ ಶೆಡ್ ಗಳಿದೆ. ಹಾಗು ಅವೆಲ್ಲವನ್ನೂ ಸಿಂಗಲ್ ಹ್ಯಾಂಡ್ಡೆಡ್ ಆಗಿ ನಿರ್ವಹಿಸುತ್ತಾರೆ. ಚಿತ್ರದ ಮೊದಲಾರ್ಧದಲ್ಲಿ ಪ್ರೀತಿಯಿದೆ, ಹಾಸ್ಯವಿದೆ, ಹಿತವೆನಿಸುವ ಆಕ್ಷನ್, ದಿವ್ಯ ರೋಚಕತೆ ಹಾಗು ಒಂದು ಚಿತ್ರದ ಮೊದಲಾರ್ಧ ಹೀಗೂ ಇರಬಹುದು ಎಂಬ ಅಚ್ಚರಿಯಿದೆ. ಬಿಕಾಸ್ ಕಥೆಯ ಮೂಲ ಅರಿವಾಗುವುದೇ ಕ್ಲೈಮಾಕ್ಸ್ ನ ಕೆಲವೇ ಕೆಲವು ನಿಮಿಷಗಳ ಮೊದಲು ಮಾತ್ರ! Till then, we are kept tied to the seats!
ಒಂದು ಕಮರ್ಷಿಯಲ್ ಚಿತ್ರದಲ್ಲೂ ಸಹ ಒಂದು ಸಾಮಾಜಿಕ ಸಂದೇಶ ನೀಡಬಹುದಾದ ಚಿತ್ರಗಳಿಗೆ, “ಬಚ್ಚನ್” is a sweet example!
ಪ್ರಾಬೆಬ್ಲಿ ಈ ಚಿತ್ರಕ್ಕೆ ನೈಜ್ಯ ಸೌಂದರ್ಯ ಹಾಗು ಸಿನಿಮೀಯತೆ ತಂದುಕೊಡೋದು ಪಾತ್ರಗಳ ಕಾಸ್ಟ್ಯೂಮ್ಸ್. ಹಾಡುಗಳು ಸಾಂಧರ್ಭಿಕ ಅನಿಸದಿದ್ದರೂ ಕಥೆಯ ಕಟೋರ ರೋಚಕತೆಗೆ ಒಂದು ಸಣ್ಣ ನಿಟ್ಟುಸಿರಿಗಾದರೂ ಒಂದು ಹಾಡಿರಬೇಕು ಅನಿಸುತ್ತದೆ. ಶೇಕರ್ ಚಂದ್ರರ ಸಿನೆಮಾಟೋಗ್ರಫಿ, ‘ ಬಹೂತ್ ಖೂಬ್’ ಎನಿಸುತ್ತದೆ. ಕಾಯ್ಕಿಣಿ ಯವರ ” ಸದಾ ನಿನ್ನ ಕಣ್ಣಲೆ…” ಹಾಡಿನಲ್ಲಿ ಮತ್ತಷ್ಟು ಸಿನಿಮೀ ಸಾಹಿತ್ಯಕ್ಕೆ ಹೊಸ ಪದದ ಪ್ರಯೋಗಗಳಾಗಿಸಿ ಆಪ್ತರೆನಿಸುತ್ತಾರೆ. ಬಹುಶಃ ಸುದೀಪ್ ರ ಬೆಳೆಯುತ್ತಿರುವ ಗ್ಲೋಬಲ್ ಮಾರ್ಕೆಟ್ ನ ಗಮನಿಸಿ ಅನೇಕ ತಮಿಳು ತೆಲಗು ಹಾಗು ಹಿಂದಿ ನಟರನ್ನು ಆ ಪಾತ್ರಗಳಿಗೆ ಆಯ್ದಿರಬಹುದು. But at no point, you feel, they are foreign.
ಇತ್ತೀಚಿಗೆ ಕನ್ನಡದಲ್ಲಿ ಹೊಸಬರ ಚಿತ್ರಗಳು ಗೆಲ್ಲುತ್ತಿವೆ. ಹೊಸ ಕುದುರೆಗಳೊಡನೆ ಹಳೆಯ ಕುದುರೆಗಳೂ ಜಿದ್ದಿಗೆ ಬಿದ್ದು ಗೆಲ್ಲಲಿ. ಒಂದು ಚಿತ್ರವನ್ನು ನೋಡದಿರಲಿಕ್ಕೆ ಅನೇಕ ಕಾರಣಗಳು ಬೇಕು, ನೋಡೇ ನೋಡಲು ಕೇವಲ ಒಂದು ಕಾರಣವಷ್ಟೇ ಸಾಕು ಹಾಗು ಅದರ ಕಥೆ ಮನೋರಂಜಕವಾಗಿರಲು, ಆಪ್ತವೆನಿಸಲು ಅದು ಕೇವಲ “ಬಚ್ಚನ್” ಅಲ್ಲದೆ ಬೇರಾವ ಹೆಸರಿದ್ದರೂ ನಡೆದೀತು!!

ಎಸ್ ಸಿ ದಿನೇಶ್ ಕುಮಾರ್

ಇನ್ನೇನು ತೆರೆ ಕಾಣಲು ಸಜ್ಜುಗೊಂಡಿರುವ “ಬಚ್ಚನ್” ಚಿತ್ರದ ತಾರಾಗಣವನ್ನೊಮ್ಮೆ ನೋಡಿ ಗಾಬರಿಯಾಯಿತು. ಚಿತ್ರದ ನಾಯಕ ಸುದೀಪ್ ರನ್ನು ಹೊರತುಪಡಿಸಿದರೆ ಇಡೀ ಚಿತ್ರದಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳಾರೂ ಕನ್ನಡದವರಾಗಿರದೆ ಪರಭಾಷೆಯವರು.
ನಾಯಕಿಯರಾಗಿ ಮಲಯಾಳಂನ ಭಾವನಾ, ಬಾಲಿವುಡ್ಡಿನ ಟುಲಿಪ್ ಜೋಷಿ ಮತ್ತು ಪಾರುಲ್, ಪ್ರಮುಖ ಪಾತ್ರದಲ್ಲಿ ತೆಲುಗು ನಾಯಕನಟ ಜಗಪತಿಬಾಬು, ತೆಲುಗುಭಾಷೆಯ ಡಬ್ಬಿಂಗ್ ಕಲಾವಿದ ಮತ್ತು ಖಳನಟ ರವಿಶಂಕರ್, ಹಿಂದಿಯ ಖಳನಟ ಪ್ರದೀಪ್ ರಾವತ್, ಆಶಿಷ್ ವಿದ್ಯಾರ್ಥಿ, ತಮಿಳಿನ ಪೋಷಕನಟ ನಾಜರ್.. ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಉತ್ತರದವರು.

ಒಂದೇ ಸಮಯದಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ “ಬಚ್ಚನ್” ಚಿತ್ರವನ್ನು ಡಬ್ ಮಾಡಲು ಆಯಾ ಭಾಷೆಗಳಿಂದ ನಟನಟಿಯರನ್ನು ಜಾಣತನದಿಂದ ತಾರಾಗಣದೊಳಗೆ ಸಂಯೋಜಿಸಲಾಗಿದೆ. ಡಬ್ಬಿಂಗ್ ಎನ್ನುತ್ತಿದ್ದಂತೆ “ಇದು ಪರಬಾಷಾ ವ್ಯಾಮೋಹಿಗಳ ಕೂಗು” ಎಂದು ಸಿಡಿದೇಳುವ ಕನ್ನಡದ ಚಿತ್ರೋದ್ಯಮಿಗಳು ಇಷ್ಟೊಂದು ಪರಭಾಷಾ ಕಲಾವಿದರನ್ನು ತುಂಬಿಕೊಂಡಿರುವ.. ಕನ್ನಡ ಚಿತ್ರರಂಗದಲ್ಲೇ ಇರುವ ಬಚ್ಚನ್ ಚಿತ್ರತಂಡದ್ದು ಪರಭಾಷಾ ವ್ಯಾಮೋಹವೋ ಅಥವ ಸ್ವಭಾಷಾ ನಿರ್ಲಕ್ಷ್ಯವೋ ಎಂಬುದನ್ನು ಮೊದಲು ಕನ್ನಡ ಚಿತ್ರ ನೋಡುಗರಿಗೆ ಸ್ಪಷ್ಟಪಡಿಸಬೇಕಿದೆ.

‍ಲೇಖಕರು G

13 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading