ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಧಿ ನಾನೀಗ..

-ಚೈತ್ರ ಆರ್

ನಾನೀಗ ವಿಚಿತ್ರ ಪರಿಸ್ಥಿತಿಗಳಲ್ಲಿ ಬಂಧಿ
ಇಲ್ಲಿ ಎಲ್ಲವೂ ಸ್ಪಷ್ಟವಾಗಿ ಅನುಭವಕ್ಕೆ ಬರುವ ಹೊರತಾಗಿಯೂ
ನನ್ನನ್ನು ಯಾವುದೂ ತಾಕುವುದಿಲ್ಲ

ನನ್ನ ಒಂದು ಭಾಗ
ಎಲ್ಲವುಗಳಿಂದಲೂ ದೂರ ಓಡಬೇಕೆನ್ನುತ್ತದೆ
ಶಬ್ದಗಳಿಂದ ದೂರ
ನಿರೀಕ್ಷೆಗಳಿಂದ ದೂರ
ಕಲ್ಪನೆಯ ನನ್ನ ಚಿತ್ರಗಳಿಂದಲೂ ದೂರ…

ಇದು ಪಲಾಯನವೇ ಇರಬಹುದು
ಅಥವಾ ಸಣ್ಣ ಎಚ್ಚರಿಕೆಯನ್ನೂ ನೀಡದೇ
ನನ್ನಲ್ಲಿ ನಿಶ್ಯಬ್ದವಾಗಿ ದಾಖಲಾದ ದುಃಖ
ಹೊರ ಹಾಕುವ ಇನ್ನೊಂದು ರೂಪ

ನಿಟ್ಟುಸಿರ ಮೆಲುದನಿಯಲ್ಲಿ
ನನಗೆ ನಾನು ಹೇಳಿಕೊಳ್ಳುತ್ತೇನೆ
ಎಲ್ಲವುಗಳಂತೆ ಇದೂ ಕೂಡಾ ಕಳೆದುಹೋಗಬೇಕಿದೆ

ಆದರೆ ತಪ್ಪಿಸಿಕೊಂಡು ಓಡುವುದು
ಈಗ ನನ್ನ ಆಯ್ಕೆಯಾಗಿ ಉಳಿದಿಲ್ಲ
ಆದ್ದರಿಂದ ನಾನು ಇಲ್ಲೇ ಉಳಿಯುತ್ತೇನೆ
ನಿಧಾನವಾಗಿ ಎಲ್ಲ ತಳ ಸೇರುವವರೆಗೆ.

‍ಲೇಖಕರು Admin

29 November, 2025

1 Comment

  1. ವೆಂಕಟ ರೆಡ್ಡಿ

    ಬಹಳ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading