ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ನಲ್ಲಿ ಸಿಕ್ಕ ಹಳೆಯ ಗೆಳೆಯ

ಗೆಳೆಯ

ಶರಣಪ್ಪ ಬಾಚಲಾಪೂರ

ಎಂದಿನಂತೆ ಮೊನ್ನೆ ಫೇಸ್ ಬುಕ್ ಒಪನ್ ಮಾಡಿದೆ. ಅದರಲ್ಲಿ ಮಂಜುನಾಥಗೌಡ ಎಂಬ ಗೆಳಯನಿಂದ ಫ್ರೇಂಡ್ ರಿಕ್ವೇಸ್ಟ ಬಂದಿತ್ತು. ಸಾಮಾನ್ಯವಾಗಿ ಫ್ರೇಂಡ್ಸ ರಿಕ್ವೇಸ್ಟ ಬಂದಾಗ ಅವರ ಪ್ರೋಪೈಲ್, ಅವರೊಂದಿಗೆ ನನ್ನ ಸ್ನೇಹಿತರ್ಯಾರು ಇದ್ದಾರೆ ಎಂಬುವುದನ್ನು ನೋಡಿ ಅವರ ರಿಕ್ವೇಸ್ಟ ಕನ್ ಫರ್ಮ ಮಾಡುವದು ನನ್ನ ಜಾಯಮಾನ. ಅದರಂತೆ ಬಂದಿದ್ದ ಮಂಜುನಾಥಗೌಡ ರಿಕ್ವೇಸ್ಟಿಯ ಪ್ರೋಫೈಲ್ ನೋಡಿದೆ ಮೇಘಾಲಯದ ಎಸಿಸಿ ಕಂಪನಿಯಲ್ಲಿ ಇಂಜಿನೀಯರ. ಆತನ್ನೊಂದಿಗೆ ನನ್ನ ಕೆಲವು ಗೆಳಯರು ಸ್ನೇಹಿತರಾಗಿದ್ದರಿಂದ ನೀನು ನನ್ನ ಫ್ರೇಂಡ ಎಂಬುವದನ್ನು ಕನ್ ಫರ್ಮ ಮಾಡಿದೆ. ಅದರ ಮರುದಿನ ನನಗಾಗಿ ಮಂಜುನಾಥಗೌಡನಿಂದ ಒಂದು ಮೇಸೆಜ್ ಇತ್ತು. ನಾನು ನಿನ್ನ ಬಳ್ಳಾರಿ ಪಾಲಿಟೆಕ್ನಿಕ್ನ ಕ್ಲಾಸ್ಮೇಟ್, ಬಹಳ ದಿನಗಳ ನಂತರ ಮತ್ತೆ ಸಂಪರ್ಕಕ್ಕೆ ಸಿಕ್ಕಿರುವದಕ್ಕೆ ತುಂಬಾ ಖುಷಿಯಾಗಿದೆ ಎಂದು.
ಇದೇ ರೀತಿ ಕಳೆದ ಆರು ತಿಂಗಳ ಹಿಂದೆ ಪಾಲಿಟೆಕ್ನಿಕ್ನಲ್ಲಿ ಓದುವಾಗ ನನ್ನ ರೂಮೇಟ್ ಆಗಿರುವ ತುಕರಾಂ ಮತಾಡೆ ನನ್ನ ಫೇಸ್ ಬುಕ್ ಫ್ರೇಂಡಾಗಿದ್ದ. ಆತನು ನನ್ನ ಫ್ರೇಂಡಾಗಿ ಫೇಸ್ ಬುಕ್ನಲ್ಲಿ ಸಿಕ್ಕ ತಕ್ಷಣವೇ ನಾನು ಸ್ಟನ್ ಆಗಿದ್ದೆ. ಇಬ್ಬರು ಫ್ರೇಂಡ್ಸ ಸಿಕ್ಕ ತಕ್ಷಣ ನನ್ನ ನೆನಪಿನ ಬುತ್ತಿ ನನ್ನ ಕಾಲೇಜುಗಳ ಹತ್ತಿರ ಹೋಯಿತು, ಕಾರಣ 23 ವರ್ಷಗಳ ನಂತರ ಹಳೇಯ ಗೆಳಯರ ಮೊದಲು ಸಂಪರ್ಕ. ಅದಕ್ಕೆ ಹೇಳುವುದು ಜಗತ್ತು ದುಂಡಗೆ ಇದೆ. ಬದುಕಿದ್ದರೆ ಒಂದಿಲ್ಲಾ ಒಂದು ದಿನ ಎಲ್ಲರು ಮತ್ತೆ ಮತ್ತೆ ಸಿಗುತ್ತಾರೆ ಎನ್ನುವುದು.
ಸ್ನೇಹವೇ ಹಾಗೆಯೇ ಅದು ನಿಂತ ನೀರಲ್ಲ. ಅದು ಪ್ರವಹಿಸುವ ನೀರು. ಸಂದರ್ಭಕ್ಕೆ ತಕ್ಕಂತೆ ಅಲ್ಲಿ ಸ್ನೇಹ ಬೆಳೆಸಿಕೊಂಡು ಮತ್ತೆ ಮುಂದೆ ಹೋಗಿ ಅಲ್ಲಿಯೂ ಸ್ನೇಹವನ್ನು ಮುಂದುವರಿಸುವುದು. ನಮ್ಮ ಜೀವನದಲ್ಲಿ ಬಾಲ್ಯದಲ್ಲಿದ್ದ ಸ್ನೇಹಿತರ ಶಾಲಾ ದಿನಗಳ ಸ್ನೇಹಿತರು ನಂತರದಲ್ಲಿ ಉದ್ಯೋಗದಲ್ಲಿಯ ಸ್ನೇಹಿತರು ಸೇರಿದಂತೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಾವಿರಾರು ಸ್ನೇಹಿತರು ಬಂದು ಹೋಗುತ್ತಾರೆ. ಎಲ್ಲ ಸ್ನೇಹಿತರ ನೆನಪುಗಳು ಉಳಿಯುವಂತೆ ಮಾಡುತ್ತವೆ, ಇದು ನಿತ್ಯ ನೂತನ. ಆದರೂ ಎಲ್ಲರಿಗೂ ತಮ್ಮ ಹಿಂದಿನ ದಿನಗಳಲ್ಲಿಯ ಸ್ನೇಹಿತರ ಒಡನಾಟ, ಚೆಲ್ಲಾಟ, ಚೇಷ್ಠೆ, ತಮಾಷೆ, ಜಗಳ ಎಲ್ಲವೂ ಜೀವನ ಪರ್ಯಂತ ಆಗಾಗ ನೆನಪಿಗೆ ಬಂದು ಅಂದಿನ ದಿನಗಳ ಎಷ್ಟು ಚೆಂದ ಇದ್ದವಲ್ಲ ಎನ್ನುವಂತೆ ಮಾಡುತ್ತದೆ.
ಪ್ರತಿ ಘಟನೆಯು ಆ ಘಟನೆ ನಡೆಯುವಾಗ ಅಂತಹ ಯಾವದೇ ವಿಶಿಷ್ಠ ಅನುಭವವನ್ನು ನೀಡುವುದಿಲ್ಲ. ಆದರೆ ಅದೇ ಘಟನೆಗಳು ಸ್ವಲ್ಪ ದಿನಗಳ ನಂತರ ನೆನೆಪಿನಾಳದಲ್ಲಿ ಮರುಕಳಿಸಿ ಅಂದಿನ ವಿಶಿಷ್ಠ ಅನುಭವಗಳು ಸುಂದರವಾಗಿದ್ದರೆ ಮನಸ್ಸಿಗೆ ಮುದು ನೀಡುತ್ತವೆ. ಇಂತಹ ನೆನಪುಗಳು ಮನುಷ್ಯನ ಜೀವನಕ್ಕೆ ಉತ್ಸಾಹಗಳು ತುಂಬುತ್ತವೆ. ಇದೆ ನೆನಪುಗಳು ಜೀವನ ಸೆಲೆಯಗುತ್ತದೆ.
ಈಗ ಸಿಕ್ಕಿರುವ ಹಳೇಯ ಗೆಳೆಯರ ನೆನಪುಗಳು ನನ್ನಲ್ಲಿ ಹೆಚ್ಚು ಆಪ್ತವಾಗುವುದು, ಏಕೆಂದರೆ ನಾವು ಕಳೆದ 2010ರಲ್ಲಿ ನನ್ನ ಮೇಟ್ರಿಕ್ನವರಿಗೆ ಓದಿದ ಗೆಳೆಯರನ್ನೇಲ್ಲಾ ಒಂದು ಕಡೆ ಸೇರಿಸಿ ನಮ್ಮ ಹಳೇಯ ನೆನಪುಗಳನ್ನು ಮತ್ತೆ ಸ್ಕ್ರಿನ್ ಮೇಲೆ ಬರುವಂತೆ ಮಾಡಿದ್ದೇವು. ಇದರಿಂದ ಹಳೇಯ ಗೆಳೆಯರು ಎಲ್ಲಿಯೇ ಸಿಗಲಿ ಅವರೊಂದಿಗೆ ಒಂದಿಷ್ಟು ಮಾತು, ಹರಟೆ, ಎಸ್ಎಂಎಸ್ ವಿನಿಯೋಗ, ಅವಕಾಶ ಸಿಕ್ಕರೆ ಫೇಸ್ ಬುಕ್ ಮತ್ತು ಮೇಲ್ ನಲ್ಲಿ ಚಾಟಿಂಗ್ ಹೀಗೆ ಸ್ನೇಹಿತರ ಒಡನಾಟವನ್ನು ಸದಾ ಹಸಿರಾಗಿರುವಂತೆ ಮಾಡುತ್ತಿರುತ್ತೇನೆ. ಇದು ನನ್ನ ಹಳೇಯ ಗೆಳೆಯರಿಗೂ ಆಪ್ತತೆಯಾಗಿದೆ.
ವಿದ್ಯಾಥರ್ಿ ಜೀವನದ ಮಹತ್ತರ ಘಟ್ಟದವಾದ ಎಸ್ಎಸ್ಎಲ್ಸಿ ಎಲ್ಲರಿಗೂ ಬಾಲ್ಯ ಮತ್ತು ಯೌವನದ ಸಂಧೀಕಾಲ. ಈ ಸಂದರ್ಭದಲ್ಲಿ ಎಲ್ಲರು ಬಾಲ್ಯವನ್ನು ಕಳೆದುಕೊಂಡು ಯೌವನದ ಕನಸು ಹೊತ್ತು ಅನೇಕ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡು ಹೋಗುವ ಕಾಲ. ಆ ಸಂದರ್ಭದಲ್ಲಿ ಯಾರಿಗೂ ಜೀವನದ ಸ್ಪಷ್ಠವಾದ ಗುರಿ ಇರುವುದಿಲ್ಲ. ಆದರೆ ಎಸ್ಎಸ್ಎಲ್ಸಿ ನಂತರ ಜೀವನ ಗುರಿಯನ್ನು ರೂಪಿಸುವ ದಿನಗಳು. ಅದಕ್ಕಾಗಿ ಹೈಸ್ಕೂಲ ನಂತರ ಬಹುತೇಕ ಗೆಳೆಯ/ ಗೆಳೆತಿಯರು ಹೊಸ ಗುರಿ ಹೊಂದಿಗೆ ಹೊಸ ಗೆಳೆಯ/ ಗೆಳೆತಿಯರ ಹುಡುಕಿಕೊಳ್ಳುವದು ಸ್ವಾಭಾವಿಕ. ಅದರಂತೆ ನಾವು 1984ರಲ್ಲಿ ಎಸ್ಎಸ್ಎಲ್ಸಿಯವರಿಗೂ ಓದಿದ ಗೆಳೆಯರಲ್ಲಿ ಬಹುತೇಕ ಗೆಳೆಯರು ಸಂಪರ್ಕಕ್ಕೆ ಸಿಗದಂತೆ ದೂರವಿದ್ದರು. ಈ ಎಲ್ಲಾ ಗೆಳೆಯರಲ್ಲಿಯೂ ಹಿಂದಿನ ಗೆಳೆಯರ ನೆನೆಪು ಸದಾ ಬಂದು ಹೋಗುತ್ತಿತ್ತು.

ನನ್ನಂತಹವರು ನಮ್ಮ ಗ್ರಾಮಕ್ಕೆ ಹೋದಾಗ ಗ್ರಾಮದಲ್ಲಿಯೇ ಇದ್ದ ಗೆಳೆಯರಲ್ಲಿ ನಾಲ್ಕಾರು ಜನ ಸಿಕ್ಕರೆ ಹೈಸ್ಕೂಲ ಗೆಳೆಯರ ಬಗ್ಗೆ ಪ್ರಸ್ತಾಪಿಸುತ್ತಾ ಯಾರ್ಯಾರು ಎಲ್ಲಿದ್ದಾರೆ ಎನ್ನುವ ಬಗ್ಗೆ ತಲಾಶ ಮಾಡುವ ಪ್ರಯತ್ನ ಮಾಡುತ್ತಿದ್ದೇವು ಆದರೆ ಅದು ಆಗಿನ ಮಾತಿನ ಸನ್ನಿವೇಶಕ್ಕೆ ಮಾತ್ರ ಸಿಮೀತವಾಗುತ್ತಿತ್ತು. ಇದು ಹೀಗೆ ಮುಂದುವರಿದಾಗ ಯಾಕೆ ಎಲ್ಲರನ್ನು ಒಂದಡೆ ಸೇರಿಸುವ ಪ್ರಯತ್ನ ಮಾಡಬಾರದು ಎಂಬ ಚಿಂತನೆ ಪ್ರಾರಂಭವಾಗಿದ್ದೆ ಕೆಲವು ಗೆಳೆಯರು ಹಳೇಯ ಗೆಳೆಯರ ಪತ್ತೆಗೆ ಮುಂದಾದರು.
ಆರಂಭದಲ್ಲಿ ಎಲ್ಲರೂ ಸಿಗುತ್ತಾರೆ ಎಂದುಕೊಂಡಿದ್ದ ನಮಗೆ ಶಾಲೆಯಲ್ಲಿ ಇದ್ದ 90 ಜನ ವಿದ್ಯಾಥರ್ಿಗಳಲ್ಲಿ ಅರ್ಧದಷ್ಟು ಜನ ಮಾತ್ರ ಅಲ್ಲಿದ್ದ ಗೆಳೆಯರ ಸಂಪರ್ಕದಲ್ಲಿದ್ದರು, ಉಳಿದ ಅರ್ಧದಷ್ಟು ಜನ ಎಲ್ಲಿದ್ದಾರೆ, ಹೇಗೆದ್ದಾರೆ, ಏನು ಮಾಡುತ್ತಿದ್ದಾರೆ. ಅವರಿಗೆ ನಮ್ಮ ನೆನಪು ಇದೆಯೇ? ನಾವು ಯಾರು, ನಾವು ಹಿಂದೆ ನಿನ್ನ ಇಂತಹ ಗೆಳೆಯರೊಂದಿಗೆ ಇರುತ್ತಿದ್ದೆ, ನನ್ನ ನೆನಪು ಮಾಡಿಕೊಳ್ಳಲು ನಮ್ಮ ಗೆಳೆಯರಲ್ಲಿಯ ಕೆಲವು ಘಟನೆಗಳು ಹೀಗೆ ನಡೆದವು ಎಂಬುವುದನ್ನು ನೆನಪಿಸಬೇಕು ಹೀಗೆ ಹಲವಾರು ಚಚರ್ೆಗಳು ನಡೆದವು.
ದೂರದಲ್ಲಿರುವ ಸ್ನೇಹಿತರನ್ನು ಸಂಪರ್ಕ ಕೊಂಡಿಗೆ ತರುವ ಸಲುವಾಗಿ ನಮ್ಮಲ್ಲಿ ನಾಲ್ಕೈದು ಜನ ಪ್ರಯತ್ನ ಪ್ರಾರಂಭಿಸಿದವು. ನಾವು ಹೈಸ್ಕೂಲನಲ್ಲಿದ್ದ ಕಾಲದಲ್ಲಿ ನಮ್ಮದು ಕೋ ಏಜುಕೇಷನ್ ಇತ್ತು. ಈ ಸಂದರ್ಭದಲ್ಲಿ ನಮ್ಮ ವಿದ್ಯಾಥರ್ಿನಿಯರು ಸಹಪಾಠೀಯಾಗಿದ್ದರು. ಬಹುತೇಕರು ಮದುವೆಯಾಗಿ ತಮ್ಮ ಗಂಡನ ಮನೆ ಸೇರಿದ್ದರು. ಅದರಲ್ಲಿ ತವರ ಮನೆ ನಮ್ಮದೆ ಗ್ರಾಮವಾಗಿದವರ ಸಂಪರ್ಕ ಸರಳವಾಗಿತ್ತು ಅವರ ತವರ ಮನೆಗೆ ಹೋಗಿ ಅವರಿಂದ ಫೋನು ನಂಬರ ತಂದು ಅವರನ್ನು ಸಂಪಕರ್ಿಸಿದವು. ಆದರೆ ಕಷ್ಟವಾಗಿದ್ದು ನಮ್ಮ ಗ್ರಾಮಕ್ಕೆ ನೌಕರಿ ಮಾಡಲು ಬಂದವರ ಮಕ್ಕಳಾಗಿದ್ದರೆ ಅವರನ್ನು ಹುಡುಕುವದು ಸಾಹಸ ಕೆಲಸವಾಗಿತ್ತು. ಆದರೂ ಛಲ ಬಿಡದ ಮಲ್ಲರಂತೆ ಸುಮಾರು ಒಂದು ತಿಂಗಳು ಒಬ್ಬರಿಂದ ಇನ್ನೊಬ್ಬರ ಫೋನು ತೆಗೆದುಕೊಂಡು ಶೇ 99 ರಷ್ಟು ಜನರನ್ನು ಸಂಪಕರ್ಿಸಿದವು.
ಹಳೇಯ ಗೆಳೆಯ/ಗೆಳೆತಿಯರು ಸಿಕ್ಕ ತಕ್ಷಣವೇ ಎಲ್ಲರಿಗೂ ನಿಧಿ ಸಿಕ್ಕಷ್ಟು ಸಂತೋಷ. ಫೋನಿನಲ್ಲಿ ಗಂಟೆಗಟ್ಟಳೆ ನಮ್ಮ ಹಿಂದಿನ ನೆನಪುಗಳನ್ನು ಬಿಚ್ಚಿಕೊಂಡು. ಸದ್ಯದ ಜೀವನದ ಬಗ್ಗೆ ಮಾತನಾಡಿದವು. ಈ ಸಮಯದಲ್ಲಿ ಎಲ್ಲರು ಹೇಳಿದ್ದೆ ಒಂದೆ ಮಾತು ಆ ದಿನಗಳು ಚೆನ್ನಾಗಿದ್ದವು, ನಮ್ಮ ಓಡಾಟ, ಆಟೋಟ, ಓದು, ನಲಿವು, ಗುಂಪುಗಾರಿಕೆ ಎಲ್ಲವನ್ನು ನೆನೆಪಸಿಕೊಂಡಿವು.
ಈ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಗ್ರಾಮದಲ್ಲಿ ಗುರುವಂದನೆ ಎಂಬ ನೆಪ ಇಟ್ಟುಕೊಂಡು ಹಳೇಯ ಗೆಳೆಯರು ಒಂದೆಡೆ ಸೇರಿಸುವದಾಗಿತ್ತು. ಸಾಮಾನ್ಯವಾಗಿ ಸರಪಳಿಗೆ ಕೊಂಡಿಗಳನ್ನು ಜೋಡಿಸುತ್ತಾ ಹೋದರೆ ಹಿಂದಿನ ಕೊಂಡಿಗಳು ದೂರವಾಗುತ್ತಾ ಹೋಗುತ್ತವೆ. ಹೊಸ ಕೊಂಡಿಗಳು ಸೇರ್ಪಡೆಯಿಂದ ಹಿಂದಿನ ಕೊಂಡಿಗಳು ನಮ್ಮ ಸಂಪರ್ಕದಲ್ಲಿ ಇಲ್ಲವೇನು ಎನ್ನುವಂತೆ ಕಂಡರು ಸ್ನೇಹದ ಕೊಂಡಿ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಈ ಕೊಂಡಿಗಳನ್ನು ಮತ್ತೆ ಹಿಂದಿನ ಕೊಂಡಿನ ಬೆಸೆಯುವ ಕೆಲಸ ಮಾಡಿದವು. ಈ ಕಾರ್ಯಕ್ರಮಕ್ಕೆ ನಮ್ಮಲ್ಲಿಯ 90 ವಿದ್ಯಾಥರ್ಿಗಳಲ್ಲಿ 80 ಜನ ಸ್ನೇಹಿತರು ಬಂದಿದ್ದು ವಿಶಿಷ್ಠವಾಗಿತ್ತು.
ನಮ್ಮ ಹಳೇಯ ಶಾಲೆಯಲ್ಲಿ ಸೇರಿರುವ ನಾವು, ಎಲ್ಲರೂ ನೀನು.. ಅವನಲ್ಲ. ನೀನು ಅವಳಲ್ಲ. ಏನ ದಪ್ಪಾಗಿ ಅಲ್ಲ. ಅಲ್ಲವೊ ಮೊದಲಿದ್ದಂಗ ಇದೀ ಅಲ್ಲ ಒಟ್ಟ್ ಬದಲಾಗಿಲ್ಲ. ಮಕ್ಕಳೇಷ್ಟು, ಮನೆಯವರು ಏನು ಮಾಡುತ್ತಾರೆ. ಮಕ್ಕಳು ಏನು ಮಾಡತಾರೆ. ಏನ್ ಮಾಡುತ್ತಿ ಈಗ, ಹೆಂಗೈತಿ ಜೀವನ ಹೀಗೆ ಎಲ್ಲರಲ್ಲಿಯೂ ಒಂದೆ ಪ್ರಶ್ನೆಗಳು. ನಮ್ಮ ಹಳೇಯ ಗೆಳೆಯ ಇಂತಹವರು ಅಂದು ಸಿಕ್ಕಿದ್ದರೂ ಈಗ ಏನು ಮಾಡುತ್ತಾರೆ ಅಂತೆ, ಹೀಗೆ ಕುಶಲೋಪರಿಗಳು. ಇದರಿಂದಾಗಿ ಶಾಲೆಯ ಆವರಣದಲ್ಲಿ ಸರಿಸುಮಾರ 44 ವರ್ಷದ ಮಧ್ಯವಯಸ್ಕರು ಹೊಸದಾಗಿ ಶಾಲೆಗೆ ಸೇರಿದವರಂತೆ ಲವಲವಿಕೆಯಲ್ಲಿ ಇದ್ದ ಕ್ಷಣಗಳು, ಇಂತಹರನ್ನು ಇನ್ನಷ್ಟು ಮಾತನಾಡಿಸಬೇಕು. ಅವರೊಂದಿಗೆ ಕಷ್ಟ ಸುಖ ಹಂಚಿಕೊಳ್ಳಬೇಕು ಎನ್ನುವ ತವಕ ಇದ್ದರು ಇದ್ದದ್ದು ಕೇವಲ ತಾಸು. ಅದರಲ್ಲಿ ನಮ್ಮ ಕಾರ್ಯಕ್ರಮ ಊಟ, ಫೋಟೊ ತೆಗೆಸಿಕೊಳ್ಳುವದು. ಅವರಿವರ ಮನೆಗೆ ಹೋಗಿ ಬರುವುದು ಹೀಗೆ ದಿನ ಕಳೆದಿದ್ದು ಗೊತ್ತಾಗಲಿಲ್ಲ. ಒಂದೆ ದಿನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನೆಡೆದಿದ್ದರಿಂದ ಕೆಲವರಲ್ಲಿ ಹಂಚಿಕೊಳ್ಳುವ ಭಾವನೆಗಳು ಇನ್ನು ಬಹಳಷ್ಟು ಬನಹುತೇಕರ ಎದೆಯಲ್ಲಿ ಉಳಿದವು.
ಅದೇ ರೀತಿ ಈಗ ವಿದ್ಯಾಥರ್ಿ ಜೀವನದ ಮುಂದಿನ ಘಟ್ಟವಾದ ನಾನು ಡಿಪ್ಲೋಮಾ ಓದುವಾಗ ಅಂದಿನ ನನ್ನ ಗೆಳೆಯರಲ್ಲಿ ಇಬ್ಬಿಬ್ಬರ ಬಿಟ್ಟರೆ ಬಹುತೇಕರು ದೂರವಿದ್ದಾರೆ. ಎಲ್ಲರೂ ತಮ್ಮದೆ ಆದ ಜೀವನ ರೂಪಸಿಕೊಂಡಿದ್ದಾರೆ. ಇಲ್ಲಿಯವರಿಗೂ ಜೀವನವನ್ನು ಭದ್ರವಾಗಿ ಕಟ್ಟುವ ಹಿನ್ನಲೆಯಲ್ಲಿ ಹಳೇಯ ಗೆಳೆಯರ ನೆನೆಪಿದ್ದರು ಅವರನ್ನು ಸಂಪಕರ್ಿಸಲು ಆಗಿರಲಿಲ್ಲ. ಆದರೆ ಈಗ ಜೀವನ ಒಂದು ಮಟ್ಟಕ್ಕೆ ಬಂದಿದೆ. ಈಗ ಮತ್ತೆ ಹಳೇಯ ಗೆಳೆಯರ ನೆನೆಪು ಸದಾ ಕಾಡುತ್ತದೆ.
ಇದೇ ನೆನೆಪು ಕಾಡುವಾಗ ಹಳೇಯ ಗೆಳೆಯರು ಇಂಟರ್ ನೇಟ್ನಲ್ಲಾದರೂ ಸಿಕ್ಕರೂ ಸಾಕು ಮನಸ್ಸಿಗೆ ಏನೊ ಸಂತೋಷ, ಉಲ್ಲಾಸ, ಈ ಉಲ್ಲಾಸವನ್ನು ಮುಂದುವರಿಸಿಕೊಂಡು ಹೋಗಲು ಈಗಿರುವ ಸಾಧನಗಳು ಬಳಕೆಯಗುತ್ತವೆ. ತಂತ್ರಜ್ಞಾನ ಸ್ನೇಹಕ್ಕೆ ಕೊಂಡಿಯಾಗಿರುವದು ಸ್ನೇಹ ನಿರಂತರವಾಗಿರುವದಕ್ಕೆ ಸಾಕ್ಷಿಯಾಗಿದೆ.
 

‍ಲೇಖಕರು avadhi

3 July, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading