ಚಿತ್ರೋತ್ಸವ ನಡೆಯುತ್ತಿರುವ ಫನ್ ಸಿನಿಮಾದಲ್ಲೂ ಸಹ ಇವತ್ತು ‘ಚಿತ್ರ ಮಂದಿರ ತುಂಬಿದೆ’!

ಅಲ್ಲಿ ನಮ್ಮ ಪ್ರತಿನಿಧಿ ದಿವ್ಯಾ ನಟ ನಿರ್ದೇಶಕ ನಾಗಾಭರಣ ಅವರನ್ನು ಈ ಚಿತ್ರೋತ್ಸವದಲ್ಲಿ ಅವರು ನೋಡಲು ಇಚ್ಛಿಸುವ ಚಿತ್ರಗಳು ಯಾವುವು
ಎಂದು ಕೇಳಿದಾಗ ನಾಗಾಭರಣ ಉತ್ತರಿಸಿದ್ದು ಹೀಗೆ :

‘ಸ್ವೀಡನ್ ದೇಶದ ಚಿತ್ರಗಳು ಅಂದರೆ ನನಗೆ ಅಚ್ಚು ಮೆಚ್ಚು. ಅದರಲ್ಲೂ ನಿರ್ದೇಶಕ Ingmar Bergman ಅವರ ಚಿತ್ರಗಳು ಅಂದರೆ ತುಂಬಾನೇ ಇಷ್ಟ… ಈ ಸಲದ ಚಿತ್ರೋತ್ಸವದ ಮಹತ್ವ ಅಂದರೆ ಕನ್ನಡದ ೧೦ ಪ್ರಶಸ್ತಿ ಪಡೆದ ಚಿತ್ರಗಳು ಚಿತ್ರೋತ್ಸವಕ್ಕೆ ಆಯ್ಕೆ ಆಗಿರುವುದು. ಇದು ನಮಗೆ ಹೆಮ್ಮೆಯ ವಿಷಯ.. ‘

ಅಲ್ಲಿ ವಿಜಯಮ್ಮ ಮತ್ತು ಹಲವಾರು ಕಿರುತೆರೆಯ ಕಲಾವಿದರು ಚಿತ್ರ ನೋಡುವ ಖುಷಿಯಿಂದ ಸೇರಿರುವುದು ಸಂಭ್ರಮದ ವಾತಾವರಣವನ್ನು ಕಟ್ಟಿಕೊಟ್ಟಿತ್ತು.








0 Comments